ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ತ್ರಿಕೋನ ಸ್ಪರ್ಧೆಗೆ ಅಣಿಯಾಗುತ್ತಿರುವ ಜಯನಗರ ವಿಧಾನಸಭಾ ಕ್ಷೇತ್ರ

By ಕಿಕು
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಅಂತಹ ಯಾವುದೇ ದೊಡ್ಡ ಸಮಸ್ಯೆಗಳಿಲ್ಲದ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರೇ ಇರುವ, ಕೆಲವು ಭಾಗದ ಜನರಿಗೆ, ಸರ್ಕಾರ, ಶಾಸಕ, ಸಂಸದ, ಕಾರ್ಪೊರೇಟರ್ ಗಳ ಇರುವಿಕೆಯನ್ನೇ ಅರಿಯದ ಶ್ರೀಮಂತ ವರ್ಗ, ಕಣ್ಣಿಗೆ ಕಾಣುವಂತಹ ನ್ಯೂನತೆಗಳಿಲ್ಲದ ಸುಶಿಕ್ಷಿತರ, ಸುಭಿಕ್ಷ ಕ್ಷೇತ್ರ - ಜಯನಗರ!

  ಕಳೆದ ಕೆಲವು ಚುನಾವಣೆಗಳಲ್ಲಿ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿಲ್ಲ ಹಾಗು ಹೆಚ್ಚಿನ ಮತವನ್ನೂ ಗಳಿಸಿಲ್ಲ. ಹಾಗಿದ್ದರೂ ತ್ರಿಕೋನ ಸ್ಪರ್ಧೆಯ ಲಕ್ಷಣಗಳು ಚುನಾವಣೆಗೆ ಇನ್ನು 4 -5 ತಿಂಗಳಿರುವಾಗಲೇ ಗೋಚರಿಸುತ್ತಿವೆ.

  ಜೆ.ಡಿ.ಎಸ್. ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಲಿ ಶಾಸಕ ಬಿಜೆಪಿಯ ಬಿ.ಎನ್. ವಿಜಯ್ ಕುಮಾರ್ ಅವರಿಗೆ ಈ ಬಾರಿಯ ಗೆಲುವು ಅನಾಯಾಸದ್ದಲ್ಲ. ಕಾರಣ, ರಾಜ್ಯ ಸರ್ಕಾರದ ಪ್ರಭಾವಿ ಹಾಗು ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ಸುಪುತ್ರಿ ಸೌಮ್ಯ ರೆಡ್ಡಿಯವರ ಸ್ಪರ್ಧೆಯ ಇಂಗಿತ ಹಾಗು ಸಾಮಾಜಿಕ ಹೋರಾಟಗಾರ ಹಾಗು ಲಂಚ ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು.

  ಸ್ಪರ್ಧಿಗಳ ಪರಿಚಯ ಹಾಗು ಅವರ ಬಲ:

  Karnataka assembly election : Jayanagar Ac poised for triangular fight

  ಬಿ.ಎನ್. ವಿಜಯ್ ಕುಮಾರ್ : ಎರಡು ಬಾರಿ ಜಯನಗರದಿಂದ ಶಾಸಕರಾಗಿ ಆಯ್ಕೆ, ಹಾಲಿ ಶಾಸಕರು ಕೂಡ ಹೌದು. ಬಿಜೆಪಿಯ ಭದ್ರಕೋಟೆ, ಕಾರ್ಯಕರ್ತರ ಉತ್ತಮ ಪಡೆ, ಶಿಕ್ಷಿತ ಕ್ಷೇತ್ರ, ಗೆಲ್ಲುವ ಫಾರ್ಮುಲಾ ತಿಳಿದಿರುವ ಶಾಸಕ, ಕಳೆದ 10 ವರ್ಷಗಳಲ್ಲಿ ವಿಧಾನಸಭೆಯಲ್ಲಿ ಕ್ಷೇತ್ರದ ಬಗ್ಗೆಯಾಗಲೀ, ಜನರ ಸಮಸ್ಯೆಗಳ ಬಗ್ಗೆಯಾಗಲೀ ಹೆಚ್ಚೇನು ಮಾತೂ ಆಡದ, ಕ್ಷೇತ್ರದಲ್ಲೂ ಹೆಚ್ಚೇನು ಹೆಸರು ಕೆಡಿಸಿಕೊಳ್ಳದ ಶಾಸಕ.

  2014ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ, 61 ವರ್ಷದ ಬಿಎನ್ ವಿಜಯ್ ಕುಮಾರ್ ಅವರು ಕಾಂಗ್ರೆಸ್ ಸ್ಪರ್ಧಿ ಎಂ.ಸಿ. ವೇಣುಗೋಪಾಲ್ ಅವರನ್ನು 31,678 ಮತಗಳ ಅಂತರದಿಂದ ಸೋಲಿಸಿದ್ದರು. 2008ರಲ್ಲಿ ಕೂಡ ಕಾಂಗ್ರೆಸ್ ನ ಎಂ ಸುರೇಶ್ ಅವರ ವಿರುದ್ಧ ಜಯಶಾಲಿಯಾಗಿದ್ದರು.

  Karnataka assembly election : Jayanagar Ac poised for triangular fight

  ಸೌಮ್ಯ ರೆಡ್ಡಿ : 7 ಭಾರಿ ಸ್ಪರ್ಧಿಸಿ, 6 ಭಾರಿ ಗೆದ್ದು ಹಾಲಿ ಗೃಹ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿಯವರ ಪುತ್ರಿ. 2008ಕ್ಕೂ ಮೊದಲು ರಾಮಲಿಂಗಾ ರೆಡ್ಡಿಯವರ ಕ್ಷೇತ್ರವೂ ಜಯನಗರವೇ ಆಗಿತ್ತು. ಯುವತಿ, ತಂದೆಯ ಯಶಸ್ಸು, ಹಣಬಲ, ಕಾರ್ಯಕರ್ತರ ಪಡೆ, ತಂದೆಯ ಶ್ರೀರಕ್ಷೆ ಸೌಮ್ಯ ಅವರಿಗಿದೆ. ತಂದೆಯ ಈಗಿನ ಕ್ಷೇತ್ರ ಬಿ.ಟಿ.ಎಂ ಪಕ್ಕದ ಕ್ಷೇತ್ರ.
  ಕಳೆದ 20 ದಿನಗಳಿಂದ ಕ್ಷೇತ್ರದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ ಹಾಗು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  Karnataka assembly election : Jayanagar Ac poised for triangular fight

  ರವಿ ಕೃಷ್ಣಾರೆಡ್ಡಿ : ರವಿ ಕೃಷ್ಣಾರೆಡ್ಡಿ ಬಿಇ, ಎಂಟೆಕ್ ಪದವೀಧರ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕಾದ ಬೇ ಏರಿಯಾದಲ್ಲಿ (ಕ್ಯಾಲಿಫೋರ್ನಿಯಾ) ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ, ಸಾಮಾಜಿಕ ಕಳಕಳಿಯಿಂದ ಬೆಂಗಳೂರಿಗೆ ಮರಳಿ, ಅನೇಕ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜಕೀಯ ಹಾಗು ಹೋರಾಟದ ವಲಯದಲ್ಲಿ ಮನೆಮಾತಾಗಿರುವವರು.

  ಕಳೆದ ಕೆಲವು ವರ್ಷಗಳಲ್ಲಿ ಎಚ್.ಎಸ್.ದೊರೆಸ್ವಾಮಿ ಹಾಗು ಎಸ್.ಆರ್.ಹಿರೇಮಠ್ ಅವರುಗಳನ್ನು ಹೊರತುಪಡಿಸಿದರೆ, ಅತ್ಯಂತ ಪ್ರಾಮಾಣಿಕ, ದಕ್ಷ ಹೋರಾಟಗಾರರಾಗಿ ಗುರುತಿಸಿಕೊಂಡಿರುವವರು ರವಿ. ಅಷ್ಟೇ ಅಲ್ಲದೆ ರವಿಯಲ್ಲೊಬ್ಬ ಸಾಹಿತಿ, ಚಿಂತಕ, ಬರಹಗಾರ, ಅಂಕಣಕಾರನನ್ನು ಜನ ಗುರುತಿಸಿರುವುದು ಪ್ರಸ್ತುತ. ಕಾಲಿಗೆ ಚಕ್ರ ಕಟ್ಟಿಕೊಂಡು ಜಯನಗರದ ಬೀದಿಬೀದಿ ಸುತ್ತುತ್ತಿದ್ದಾರೆ ರವಿ.

  ರಾಜ್ಯದ ಅನೇಕ ಜಿಲ್ಲೆಗಳ ತಾಲೂಕು ಕಚೇರಿಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ, ಆರ್.ಟಿ.ಓ. ಕಚೇರಿಗಳಲ್ಲಿ, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಪಡೆಯದೇ ಸೇವೆ ನೀಡುವಂತೆ ಮಾಡಿರುವ ಹೆಗ್ಗಳಿಕೆ ಇವರದು.

  Karnataka assembly election : Jayanagar Ac poised for triangular fight

  ಇವರ ಬಲ : ಸಾಹಿತಿಗಳು, ಹೋರಾಟಗಾರರು, ಕನ್ನಡ ಚಿಂತಕರು, ಸಾಫ್ಟ್ವೇರ್ ಕ್ಷೇತ್ರದ ಯುವಕ ಯುವತಿಯರು. ಈಗಾಗಲೇ ಕಳೆದ ಒಂದು ತಿಂಗಳಿಂದ ಜಯನಗರದ ಮನೆ ಮನೆಗೆ ಭೇಟಿ ನೀಡಿ ತಮ್ಮ ಪರಿಚಯ ಮಾಡಿಕೊಳ್ಳುವುದು, ಕ್ಷೇತ್ರದ ಆಗುಹೋಗುಗಳ ಬಗ್ಗೆ ಚರ್ಚಿಸುವುದರ ಮುಖೇನ ಸುಮಾರು ಶೇ.70ಕ್ಕೂ ಹೆಚ್ಚು ಮನೆಗಳನ್ನು ತಲುಪಿದ್ದಾರೆ.

  ಜಯನಗರ ಹಿಂದೆಂದಿಗಿಂತಲೂ ರಾಜಕೀಯವಾಗಿ ಬಣ್ಣ ಕಟ್ಟಿಕೊಳ್ಳುತ್ತಿದೆ. ಪ್ರಥಮ ಬಾರಿಗೆ ತುರುಸಿನ ಸ್ಪರ್ಧೆ ಏಳುವ ಸೂಚನೆಗಳನ್ನು ತೋರಿಸುತ್ತಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Jayanagar Assembly Constituency (General) at a glance! A South Bengaluru Assembly Segment poised for a triangular fight between Indian National Congress nominee Sowmya Reddy, Sitting BJP MLA Vijay Kumar and AAP turned Independent candidate Ravi Krishna Reddy.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more