ಟಿ. ನರಸೀಪುರ ಕ್ಷೇತ್ರ : ಕಾಂಗ್ರೆಸ್ಸಿಗೆ ಗೆಲುವು ಕಷ್ಟ ಕಷ್ಟ?
Recommended Video

ಕಾವೇರಿ ಕಪಿಲೆ ಸಂಗಮ ಸ್ಥಳ, ಪುಣ್ಯಕ್ಷೇತ್ರ ತಿರುಮ ಕೂಡಲು ನರಸೀಪುರದಲ್ಲಿ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ.ಸಿ. ಮಹದೇವಪ್ಪ ಅವರ ಮತ್ತೆ ಕಣಕ್ಕಿಯುವುದು ಅನುಮಾನ. ಈ ಚುನಾವಣೆಗೆ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
ಮೀಸಲು ಕ್ಷೇತ್ರವಾಗಿರುವ ಇಲ್ಲಿ ಸಚಿವ ಮಹದೇವಪ್ಪ ಅವರಿಗಿಂತ ಅವರ ಪುತ್ರನ ಪ್ರಭಾವವೇ ಹೆಚ್ಚು. ಈಗಾಗಲೇ ಅವರ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಕೆಲವಾರು ಆರೋಪಗಳಲ್ಲಿ ಅಕ್ರಮ ಮರಳು ದಂಧೆಯ ಆರೋಪ ಪ್ರಮುಖವಾದದ್ದು. ನ್ಯಾಯಾಲಯದ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಶಿಕ್ಷೆಯೂ ಆಗಬಹುದು ಎಂಬ ಭೀತಿಯಿಂದಲೆ ಕಣಕ್ಕಿಳಿಯಬೇಕಿದೆ.
ಈ ವಿಚಾರವೇ, ಈ ಕ್ಷೇತ್ರದ ಜನತೆಯು ಎಂ.ಸಿ. ಮಹದೇವಪ್ಪ ಹಾಗೂ ಅವರ ಪುತ್ರನ ವಿರುದ್ಧ ಅಸಮಾಧಾನಗೊಳ್ಳಲು ಕಾರಣ. ಅಲ್ಲದೆ, ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ಯತ್ನಿಸಿದ್ದು ಈ ಕ್ಷೇತ್ರದ ದಲಿತರು ಅಪ್ಪ-ಮಗನ ವಿರುದ್ಧ ಕಿಡಿ ಕಾರುವಂತಾಗಿದೆ.
ಇದರ ಲಾಭವಾಗಿರುವುದು ಜೆಡಿಎಸ್ ಗೆ. ಆ ಪಕ್ಷದ ಸುಂದರೇಶನ್ ಅಥವಾ ಅವರ ಪುತ್ರ ಸಾಮ್ರಾಟ್ ಗೆ ಅವಕಾಶ ಹೆಚ್ಚಿದೆ. ಇನ್ನು ಬಿಜೆಪಿಯ ಭಾರತೀ ಶಂಕರ್ ಅವರು ಅದೇ ಪಕ್ಷದಿಂದ ಟಿಕೆಟ್ ಪಡೆಯುವುದು ಅನುಮಾನವಾಗಿರುವುದರಿಂದ ಅವರು ಅದೇ ಪಕ್ಷದಲ್ಲಿರುತ್ತಾರೋ ಅಥವಾ ಬೇರೆ ಪಕ್ಷ ಸೇರುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ. ಈ ಎಲ್ಲವನ್ನೂ ಗಮನಿಸಿ ನೋಡುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಈ ಬಾರಿ ಗೆಲುವು ಕಷ್ಟ.
2013ರ ಫಲಿತಾಂಶ: 2013ರಲ್ಲಿ ಶೇ 75.23ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಡಾ. ಎಚ್. ಸಿ ಮಹದೇವಪ್ಪ್ ಅವರು 53,219 ಮತಗಳನ್ನು ಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಎಂ.ಸಿ ಸುಂದರೇಶನ್ 52896 ಮತಗಳನ್ನು ಗಳಿಸಿ 323(ಶೇ0.24) ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.












Click it and Unblock the Notifications