ಕ್ಷೇತ್ರ ಪರಿಚಯ : ಐತಿಹಾಸಿಕ ಮಹತ್ವ ಪಡೆದಿರುವ ರಾಜಾಜಿನಗರ

Posted By: Gururaj
Subscribe to Oneindia Kannada

ಬೆಂಗಳೂರು ನಗರದಲ್ಲಿ ಐತಿಹಾಸಿಕ ಮಹತ್ವ ಪಡೆದಿರುವ ಕ್ಷೇತ್ರ ರಾಜಾಜಿನಗರ. ನಗರದ ಪಶ್ಚಿಮ ಭಾಗದಲ್ಲಿ ಬರುವ ಈ ಬಡಾವಣೆ, ಬೆಂಗಳೂರು ನಗರದ ಹೆಬ್ಬಾಗಿಲು. ಉತ್ತರ ಕರ್ನಾಟಕ ಭಾಗದ ಬಹಳಷ್ಟು ಜನರು ರಾಜಾಜಿನಗರದಲ್ಲಿ ನೆಲೆಸಿದ್ದಾರೆ.

ಸಾಲು-ಸಾಲು ದೇವಾಲಯಗಳನ್ನು ರಾಜಾಜಿನಗರ ಕ್ಷೇತ್ರ ಒಳಗೊಂಡಿದೆ. ರಾಮಮಂದಿರ, ಶನೀಶ್ವರ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ರಾಘವೇಂದ್ರ ಸ್ವಾಮಿ ದೇವಾಲಯ ಹೀಗೆ ಅನೇಕ ದೇವಾಲಯಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಣಬಹುದಾಗಿದೆ.

ಅತಿ ದೊಡ್ಡ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಜಯ ಯಾರಿಗೆ?

ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಉತ್ತರ ಕರ್ನಾಟಕದ ಖಾನಾವಳಿಗಳು, ನವರಂಗ್ ಚಿತ್ರಮಂದಿರ ಮುಂತಾದವರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಮೆಜೆಸ್ಟಿಕ್‌ಗೆ ಸಮೀಪದಲ್ಲಿರುವ ಕ್ಷೇತ್ರವಿದು. ನಮ್ಮ ಮೆಟ್ರೋ ಕ್ಷೇತ್ರದ ಸಂಚಾರ ಸಮಸ್ಯೆಯನ್ನು ಒಂದಷ್ಟು ಕಡಿಮೆ ಮಾಡಿದೆ.

Karnataka assembly election 2018 : Rajajinagar constituency profile

ವಾರ್ಡ್‌ಗಳು : ರಾಜಾಜಿನಗರ ವಿಧಾನಸಭಾ ಕ್ಷೇತ್ರ ದಯಾನಂದ ಸಾಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಶಿವನಗರ ಮತ್ತು ಶ್ರೀ ರಾಮಮಂದಿರ ವಾರ್ಡ್‌ಗಳನ್ನು ಒಳಗೊಂಡಿದೆ.

ರಾಜಕೀಯವಾಗಿ ಬಿಜೆಪಿಯ ವಶದಲ್ಲಿರುವ ಕ್ಷೇತ್ರ ರಾಜಾಜಿನಗರ. 2008, 2013ರ ಚುನಾವಣೆಯಲ್ಲಿ ಜಯಗಳಿಸಿರುವ ಎಸ್.ಸುರೇಶ್ ಕುಮಾರ್ ಅವರು ಈ ಬಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಸುರೇಶ್ ಕುಮಾರ್ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿಯ ಮಾಜಿ ಮೇಯರ್ ಪದ್ಮಾವತಿ ಅವರು ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಜೇಡರಹಳ್ಳಿ ಕೃಷ್ಣಪ್ಪ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

2013ರ ಫಲಿತಾಂಶ : ಬಿಜೆಪಿಯ ಎಸ್.ಸುರೇಶ್ ಕುಮಾರ್ 39,291ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್.ಮಂಜುಳಾ ನಾಯ್ಡು 24,524 ಮತ, ಜೆಡಿಎಸ್‌ನ ಎಸ್‌.ಟಿ.ಆನಂದ್ 16,794 ಮತಗಳನ್ನು ಪಡೆದಿದ್ದರು.

ಕಳೆದ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕರ್ನಾಟಕ ಜನತಾ ಪಕ್ಷದಿಂದ ರಾಜಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. 20,909 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Rajajinagar constituency of Bengaluru. Get election news from Rajajinagar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ