ಕ್ಷೇತ್ರ ಪರಿಚಯ : ರಾಯಚೂರು ಗ್ರಾಮಾಂತರದಲ್ಲಿ ಯಾರಿಗೆ ಜಯ?
ನಕ್ಸಲ್ ಪೀಡಿತ ಗ್ರಾಮಗಳಿರುವ ಕ್ಷೇತ್ರ ರಾಯಚೂರು ಗ್ರಾಮಾಂತರ. ಪಕ್ಷ, ಅಭಿವೃದ್ಧಿ ವಿಚಾರಗಳಿಗಿಂತ ವ್ಯಕ್ತಿಗೆ ಹೆಚ್ಚಿನ ಆದ್ಯತೆ ನೀಡುವ ಕ್ಷೇತ್ರವಿದು. ಹೊರಗಿನಿಂದ ಬಂದು ಚುನಾವಣೆಗೆ ಸ್ಪರ್ಧಿಸಿದರೂ ಅವರನ್ನು ಇಲ್ಲಿನ ಮತದಾರರು ಗೆಲ್ಲಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಎದ್ದಿದೆ. ರಾಯಚೂರು ಗ್ರಾಮಾಂತರ ಕ್ಷೇತ್ರ ಬಿಜೆಪಿಯ ವಶದಲ್ಲಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಷ್ಟ ಪಡಬೇಕು.
ಪ್ರಸ್ತುತ ಕ್ಷೇತ್ರದ ಶಾಸಕರು ಬಿಜೆಪಿಯ ತಿಪ್ಪರಾಜು. ಈ ಬಾರಿಯು ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ, ದೇವದುರ್ಗದ ಬಿಜೆಪಿ ಶಾಸಕ, ಮಾಜಿ ಸಚಿವ ಶಿವನಗೌಡ ನಾಯಕ ಮತ್ತು ತಿಪ್ಪರಾಜು ನಡುವೆ ಅಸಮಾಧಾನವಿದೆ.

ದೇವದುರ್ಗ ಉಪ ಚುನಾವಣೆಯಲ್ಲಿ ತಿಪ್ಪರಾಜು ಅವರು ಸಹಕಾರ ನೀಡಲಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ. ಶಿವನಗೌಡ ನಾಯಕ ಅವರ ಬೆಂಬಲ ಸಿಕ್ಕರೆ ತಿಪ್ಪರಾಜು ಅವರು ಗೆಲುವು ಸಾಧಿಸಬಹುದು.
ಕಾಂಗ್ರೆಸ್ ಪಕ್ಷದಲ್ಲಿ ಕ್ಷೇತ್ರದ ಟಿಕೆಟ್‌ಗೆ ಪೈಪೋಟಿ ಆರಂಭವಾಗಿದೆ. ಜಾರಕಿಹೊಳಿ ಕುಟುಂಬದ ಸಂಬಂಧಿಯಾಗಿರುವ ರವಿ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ, ಎನ್.ಎಸ್.ಬೋಸರಾಜು ಆಪ್ತರಾದ ರಾಯಪ್ಪ ಟಿಕೆಟ್ ಆಕಾಂಕ್ಷಿಗಳು.
2013ರ ಚುನಾವಣೆಯಲ್ಲಿ ತಿಪ್ಪರಾಜು ಅವರು 50,497 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ರಾಜಾ ರಾಯಪ್ಪ ನಾಯಕ್ 47,227 ಮತ, ಜೆಡಿಎಸ್‌ನ ರಾಜಾ ಅಮರೇಶ್ವರ ನಾಯಕ್ 21,584 ಮತಗಳನ್ನು ಪಡೆದಿದ್ದಾರೆ.












Click it and Unblock the Notifications