ಪಿರಿಯಾಪಟ್ಟಣ : ಕಾಂಗ್ರೆಸ್- ಜೆಡಿಎಸ್ ಕುತೂಹಲದ ಹಣಾಹಣಿ

Posted By:
Subscribe to Oneindia Kannada
   Karnataka Elections 2018 : ಪಿರಿಯಾಪಟ್ಟಣ ಕ್ಷೇತ್ರದ ಒಂದು ಹಿನ್ನೋಟ | Oneindia kannada

   ಮೈಸೂರು -ಬಂಟ್ವಾಳ-ಬೆಂಗಳೂರು ಹೆದ್ದಾರಿಯಲ್ಲಿರುವ ಪಿರಿಯಾಪಟ್ಟಣ ಗಡಿಭಾಗದ ಕ್ಷೇತ್ರವಾಗಿದೆ. ಕೇರಳದ ಗಡಿ, ಕೊಡಗಿನ ಗೋಣಿಕೊಪ್ಪಲು, ಸಿದ್ದಾಪುರಕ್ಕೆ ಸಂಪರ್ಕ ಹೊಂದಿದೆ.

   ತಂಬಾಕು ಬೆಳೆ, ಶುಂಠಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವಾತಾವರಣ ಕೂಡಾ ಮೈಸೂರು ನಗರಕ್ಕೆ ಹೋಲಿಸಿದರೆ ಹಿತಕರವಾಗಿದೆ.

   ಪಿರಿಯಾಪಟ್ಟಣ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಪಕ್ಷದ ಕೆ. ವೆಂಕಟೇಶ್ ಅವರು ಇಲ್ಲಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕೆ. ಮಹದೇವು ಅವರು ಸೋಲು ಕಂಡಿದ್ದ ಪ್ರಮುಖ ಅಭ್ಯರ್ಥಿ.

   ಪಿರಿಯಾಪಟ್ಟಣದಲ್ಲಿ ಗೆಲುವಿನ ನಗೆ ಬೀರುವರ್ಯಾರು?

   ಆ ಕ್ಷೇತ್ರದ ಜನರು, ಮಹದೇವು ಬಗ್ಗೆ ಕೊಂಚ ಅಸಮಾಧಾನ ಹೊಂದಿರುವುದರಿಂದ ಈ ಕ್ಷೇತ್ರದಲ್ಲಿ ಮಹದೇವು ಬದಲಿಗೆ ಎಂ.ಕೆ. ಸೋಮಶೇಖರ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದರೆ, ಗೆಲುವು ಸುಲಭ ಎಂದು ಹೇಳಲಾಗುತ್ತಿದೆ.

   ಇಲ್ಲಿ ಸೋಮಶೇಖರ್ ಅವರ ವರ್ಚಸ್ಸು ಉತ್ತಮವಾಗಿದೆ. ಸಾಲದ್ದಕ್ಕೆ ಅವರು ಬುದ್ಧಿಜೀವಿಯೆಂದು ಗುರುತಿಸಲ್ಪಟ್ಟವರು. ಪರಿಸರವಾದಿಯಾಗಿ ಗುರುತಿಸಲ್ಪಟ್ಟವರು. ಹಾಗಾಗಿ, ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ಇಲ್ಲಿ ಜೆಡಿಎಸ್ ಗೆಲವು ಸುಲಭವಾಗಬಹುದು ಎಂದು ಹೇಳಲಾಗುತ್ತಿದೆ.

   Karnataka Assembly Election 2018: Periyapatna constituency profile

   ಆದರೆ, ಇಲ್ಲಿ ಒಕ್ಕಲಿಗರ ಮತಗಳು ಹೆಚ್ಚಿದ್ದು, ಬಿಜೆಪಿಯಿಂದ ವಿಜಯ ಶಂಕರ್ ಅವರನ್ನು ನಿಲ್ಲಿಸುವ ಪ್ರಯತ್ನಗಳು ಸಾಗಿವೆ.

   ಈ ಕ್ಷೇತ್ರದ ಜಾತಿ ಲೆಕ್ಕಚಾರದಲ್ಲಿ ಒಕ್ಕಲಿಗರು ಸುಮಾರು 45 ಸಾವಿರ ಇದ್ದು, 40 ಸಾವಿರ ಕುರುಬ ಸಮುದಾಯದ ಮತದಾರರಿದ್ದಾರೆ. 35 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರಿದ್ದು, 15,000 ಲಿಂಗಾಯತರು, 15,000 ಮುಸ್ಲಿಂ ಮತದಾರರಿದ್ದರೆ ಇತರೆ ಸಮುದಾಯದ 30 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

   2013ರ ಫಲಿತಾಂಶ:

   * ಒಟ್ಟು 9 ಮಂದಿ ನಾಮಪತ್ರ ಸಲ್ಲಿಸಿದ್ದರು. ಒಂದು ನಾಮಪತ್ರ ತಿರಸ್ಕೃತಗೊಂಡರೆ, 8 ಮಂದಿ ಸ್ಪರ್ಧಿಸಿದ್ದರು. 6 ಮಂದಿ ಠೇವಣಿ ಕಳೆದುಕೊಂಡರು.
   * ಶೇ 83.89ರಷ್ಟು ಮತದಾನವಾಗಿತ್ತು. ಒಟ್ಟು 136307 ಮತಗಳ ಪೈಕಿ ಕಾಂಗ್ರೆಸ್ಸಿನ್ ಅಭ್ಯರ್ಥಿ ಕೆ ವೆಂಕಟೇಶ್ ಅವರು 62045 ಮತಗಲನ್ನು ಗಳಿಸಿ ಜಯ ಗಳಿಸಿದರೆ, ಜೆಡಿಎಸ್ ನ ಕೆ ಮಹದೇವ್ ಅವರು 59957 ಮತಗಳಿಸಿ ಸೋಲು ಕಂಡರು. 2088 ಮತಗಳ (ಶೇ 1.53) ಅಂತರದಿಂದ ವೆಂಕಟೇಶ್ ಜಯ ದಾಖಲಿಸಿದರು.

   ಟಿಕೆಟ್ ಆಕಾಂಕ್ಷಿಗಳು :

   ಕ್ಷೇತದಲ್ಲಿ ಕಾಂಗ್ರೆಸ್ 7 ಬಾರಿ ಜಯಗಳಿಸಿದ್ದರೆ, 4 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಒಟ್ಟಾರೆಯಾಗಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವೆ ಹೆಚ್ಚು ಪೈಪೋಟಿ ಕಂಡುಬಂದಿದೆ.

   ಹಾಲಿ ಶಾಸಕ ಮತ್ತು ಬಿಡಿಎ ಅಧ್ಯಕ್ಷರಾಗಿರುವ, ಮುಖ್ಯಮಂತ್ರಿಯವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ.ವೆಂಕಟೇಶ್ ಈ ಬಾರಿಯೂ ಕಾಂಗ್ರೆಸ್ ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸಹ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿ.

   ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಚ್.ಡಿ.ಗಣೇಶ್, ಉದ್ಯಮಿ ಎಸ್.ಮಂಜುನಾಥ್, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಪ್ರಕಾಶ್ ಬಾಬುರಾವ್, ಎನ್.ಎನ್.ಶಂಭುಲಿಂಗಪ್ಪ, ಕೆ.ಎಸ್.ಶಶಿಕುಮಾರ್ ಬಿಜೆಪಿಯಿಂದ ಟಿಕೆಟ್ ಪಡೆಯಲು ತೀವ ಪೈಪೋಟಿ ನಡೆಸುತ್ತಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Assembly Election 2018: Read all about Mysore district Periyapatna assembly constituency of Mysuru. Get election news from Periyapatna, Mysuru district. Know about candidates list, election results during Karnataka elections.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ