ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಲಗುಂದ ಕ್ಷೇತ್ರ: ಗೆಲ್ಲುವವರು ಯಾರೆಂದು ಊಹಿಸುವುದೂ ಕಷ್ಟ!

|
Google Oneindia Kannada News

ನವಿಲುಗಳ ಗುಡ್ಡವೇ ನವಿಲುಗುಂದವಾಗಿ ಇದೀಗ ನವಲಗುಂದವಾಗಿ ಬದಲಾಗಿದೆ. ಇಲ್ಲಿನ ಜಮಖಾನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಜಮಖಾನಗಳ ಮೂಲಕ ಭಾರತದ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಕೀರ್ತಿ ನವಲಗುಂದದ್ದು. ಇಲ್ಲಿ ಆಚರಿಸುವ ಹೋಳಿ ಹಬ್ಬವೂ ಪ್ರಸಿದ್ಧಿ ಪಡೆದಿದೆ.

ರಾಜಕೀಯದ ಬಗ್ಗೆ ಮಾತನಾಡುವುದಾದರೆ ನವಲಗುಂದ ಅತ್ಯಂತ ಪ್ರಮುಖ ಕ್ಷೇತ್ರವೆಂದರೆ ತಪ್ಪಿಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಕಳಸಾಬಂಡೂರಿ ಹೋರಾಟ ರಾಷ್ಟ್ರದಾದ್ಯಂತ ಸುದ್ದಿ ಮಾಡಿದೆ. ಇಲ್ಲಿನ ರೈತರು ರಾಜಕಾರಣಿಗಳಿಗೆ ಪಾಠ ಕಲಿಸಲು ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ!

ಕಲಘಟಗಿ ಕ್ಷೇತ್ರ: ಸಂತೋಷ್ ಲಾಡ್ ಗೆ ಸೆಡ್ಡು ಹೊಡೆಯಬಲ್ಲವರ್ಯಾರು? ಕಲಘಟಗಿ ಕ್ಷೇತ್ರ: ಸಂತೋಷ್ ಲಾಡ್ ಗೆ ಸೆಡ್ಡು ಹೊಡೆಯಬಲ್ಲವರ್ಯಾರು?

ಕಳಸಾಬಂಡೂರಿ ಹೋರಾಟದಿಂದಾಗಿ ಅಗ್ನಿಕುಂಡವಾಗಿರುವ ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಸುಲಭವಲ್ಲ. ಇಲ್ಲಿನ ಜನರ ಮೊದಲ ಆದ್ಯತೆ ನೀರು, ಕುಡಿಯುವ ನೀರು. ಈ ಸಮಸ್ಯೆಯನ್ನು ಪರಿಹರಿಸಬಲ್ಲ ನಾಯಕನಿಗಷ್ಟೇ ಇವರ ವೋಟು!

Karnataka Assembly Election 2018: Navalgund Constituency Profile

2018 ರ ವಿಧಾನ ಸಭೆ ಚುನಾವಣೆಯಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ಸದ್ಯಕ್ಕೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಬಗ್ಗೆಯೂ ಇಲ್ಲಿನ ಜನರಿಗೆ ಭ್ರಮನಿರಸನವಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾದರೆ ಅಚ್ಚರಿಯಿಲ್ಲ.

ರೈತಪರವಾದ ಅಭ್ಯರ್ಥಿ ಗೆಲುವು ಸಾಧ್ಯವಾಗಬಹುದು. ಇದ್ದುದರಲ್ಲಿ ಹಾಲಿ ಶಾಸಕ ಜೆಡಿಎಸ್ ನ ಎನ್.ಎಚ್.ಕೋನರೆಡ್ಡಿ ಹೋರಾಟಗಾರರೊಂದಿಗೆ ಕಣ್ಣೀರು ಸುರಿಸುತ್ತ ನಿಂತಿದ್ದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಸದಾ ಜನರ ಮಧ್ಯೆ ಜನಸಾಮಾನ್ಯನಂತೆ ಇದ್ದು, ತಮ್ಮ ಸರಳತೆಯ ಮೂಲಕ ಜನರ ವಿಶ್ವಾಸ ಗಳಿಸಿರುವ ಅವರಿಗೆ ಗೆಲುವುವ ಒಲಿದರೆ ಅಚ್ಚರಿಯಿಲ್ಲ.

ಕುಂದಗೋಳ: ಕೆಜೆಪಿ-ಬಿಜೆಪಿ ವಿಲೀನ ಕಾಂಗ್ರೆಸ್ ಗೆ ಏಟು ಕೊಟ್ಟೀತಾ!? ಕುಂದಗೋಳ: ಕೆಜೆಪಿ-ಬಿಜೆಪಿ ವಿಲೀನ ಕಾಂಗ್ರೆಸ್ ಗೆ ಏಟು ಕೊಟ್ಟೀತಾ!?

ತಮ್ಮ ಕ್ಷೇತ್ರದಲ್ಲಿ ಅವರು ಕೃಷಿ, ರಸ್ತೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯ ಹಲವು ಕೆಲಸಗಳನ್ನು ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಇದೂ ನೆರವಾಗಬಹುದೇ ಹೊರತು, ಗೆಲ್ಲುವುದಕ್ಕೆ ಇವಷ್ಟೆ ಸಾಕು ಎಂದು ಅವರು ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ.

ಕಳೆದ ಬಾರಿ ಬಿಜೆಪಿ, ಕೆಜೆಪಿ ಜಗಳದ ಲಾಭ ಇವರಿಗಿತ್ತು. ಆದರೆ ಈ ಬಾರಿ ಹಾಗಾಗುವುದಿಲ್ಲ. ರೈತ ಸಮುದಾಯದಲ್ಲಿಬಿಎಸ್ ವೈ ಬಗ್ಗೆ ಭರವಸೆ ಇದೆ. ಹೀಗಾಗಿ ಇಲ್ಲಿ ಕಮಲ ಅರಳಬಹುದು. ಪಂಚಮಸಾಲಿ ಸಮುದಾಯದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಮೋಹನ್ ಲಿಂಬಿಕಾಯಿ ಇಲ್ಲಿ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ.

ಆದರೆ ಕಳಸಾ ಬಂಡೂರಿ ಹೋರಾಟಕ್ಕೆ ಸಂಬಂಧಿಸಿದಂತೆ, ಮಹಾದಾಯಿ ನೀರು ಹಂಚಿಕೆಯ ಸಮಸ್ಯೆಯನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದ ಬಿಜೆಪಿಯ ಗೋವಾ ಸರ್ಕಾರದೊಂದಿಗಿನ ಮಾತುಕತೆ ನಿರೀಕ್ಷಿಸಿದಷ್ಟು ಯಶಸ್ಸು ತಲುಪಿಲ್ಲ. ಇದೂ ಚುನಾವಣೆಯ ಮೇಲೆ ಪ್ರಭಾವ ಬೀರಿದರೆ ತಪ್ಪಿಲ್ಲ. ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಊಹಿಸಿದಂತೆ ಈ ಕ್ಷೇತ್ರಗಳಲ್ಲಿ ಗೆಲ್ಲುವವರು ಯಾರಿರಬಹುದು ಎಂಬುದನ್ನು ಊಹಿಸುವುದೂ ಕಷ್ಟವೇ.

2013 ರ ಚುನಾವಣೆಯಲ್ಲಿ ಗೆದ್ದ ಎನ್.ಎಚ್.ಕೋನರೆಡ್ಡಿ 44448 ಮತ ಪಡೆದು ಗೆದ್ದಿದ್ದರೆ, ಬಿಜೆಪಿಯ ಶಂಕರ ಪಾಟೀಲ್ 41779 ಮತ ಪಡೆದಿದ್ದರು.

English summary
Karnataka Assembly Election 2018: Read all about Navalgund assembly constituency of Dharwad district. Get election news from Navalgund. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X