ಮೇಲುಕೋಟೆ ಕ್ಷೇತ್ರ : ರೈತರ ಪಾಲಿನ ಏಕೈಕ ಆಶಾಕಿರಣ
ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ ಗೆಲುವು ಸಾಧಿಸಿದ್ದು ಸರ್ವೋದಯ ಪಕ್ಷದ ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ. ಜೆಡಿಎಸ್ ನ ಪ್ರಾಬಲ್ಯ ಹಾಗೂ ಕಾಂಗ್ರೆಸ್ ಅಲೆ ಈ ಎರಡನ್ನೂ ಮೀರಿ ಗೆಲುವು ಸಾಧಿಸಿದವರು ಅವರು, ಈ ಮೂಲಕ ರೈತರ ಪಾಲಿನ ಏಕೈಕ ಆಶಾಕಿರಣವಾದರು. ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದಿಂದ ಕ್ಷೇತ್ರದ ಜನತೆ ಕಂಗಾಲಾಗಿದ್ದು, ಈಗ ಅವರ ಸ್ಥಾನ ತುಂಬಲು ಅವರ ಪುತ್ರ ದರ್ಶನ್ ಸಿದ್ದರಾಗಿ ಕಣಕ್ಕಿಳಿದಿದ್ದಾರೆ.
ಕೆ ಎಸ್ ಪುಟ್ಟಣ್ಣಯ್ಯ ಹಾಗೂ ಜೆಡಿಎಸ್ ನ ಸಿ.ಎಸ್ ಪುಟ್ಟರಾಜು ನಡುವೆ ಕಳೆದೆರಡು ಚುನಾವಣೆಯಲ್ಲಿ ಭಾರಿ ಪೈಪೋಟಿ ಇತ್ತು. ಈಗ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಅಲೆ ಜೋರಾಗಿದ್ದು, ಇಲ್ಲಿ ಜೆಡಿಎಸ್ ಮತ್ತೆ ಇಲ್ಲಿ ತನ್ನ ನೆಲೆ ಕಂಡುಕೊಳ್ಳಲು ಸಜ್ಜಾಗುತ್ತಿದೆ. ಆದರೆ, ಈ ಬಾರಿ ಪುಟ್ಟಣ್ಣಯ್ಯ ಅವರ ಅಭಿಮಾನಿಗಳು, ರೈತ ಸಮೂಹದ ಬೆಂಬಲ ದರ್ಶನ್ ಅವರ ಬೆನ್ನ ಹಿಂದಿದೆ. ಸ್ವರಾಜ್ ಇಂಡಿಯಾ ಪಕ್ಷದಿಂದ ದರ್ಶನ್ ಸ್ಪರ್ಧಿಸುತ್ತಿದ್ದಾರೆ.

ಮತದಾರರು:
ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಮೇಲುಕೋಟೆಯಲ್ಲಿ ಮೇಲುಕೋಟೆ 1,92,963 (96,813 ಪುರುಷ, 96,150 ಮಹಿಳೆ) ಮತದಾರರಿದ್ದಾರೆ.
2013ರ ಫಲಿತಾಂಶ:
2013ರಲ್ಲಿ ಒಟ್ಟು 15 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಇಬ್ಬರು ನಾಮಪತ್ರ ಹಿಂಪಡೆದರು. 13 ಮಂದಿ ಸ್ಪರ್ಧಿಗಳ ಪೈಕಿ 11 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು ಶೇ 84.12 ರಷ್ಟು ಮತದಾನವಾಗಿತ್ತು. 160892 ಮತಗಳ ಪೈಕಿ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್ ಪುಟ್ಟಣ್ಣಯ್ಯ ಅವರು 80041 ಮತಗಳನ್ನು ಗಳಿಸಿ ಜಯ ದಾಖಲಿಸಿದ್ದರು.ಜೆಡಿಎಸ್ ನ ಸಿ.ಎಸ್ ಪುಟ್ಟರಾಜು ಅವರು 70193 ಮತಗಳಿಸಿ ಸೋಲು ಕಂಡಿದ್ದರು. 9848 ಮತಗಳ (ಶೇ 6.12) ಅಂತರದಿಂದ ಗೆದ್ದು ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದರು.












Click it and Unblock the Notifications