ಕ್ಷೇತ್ರ ಪರಿಚಯ : ಬೆಂಗಳೂರು ನಗರಕ್ಕೆ ಸೇರಿ ಹೋಗಿರುವ ಹೊಸಕೋಟೆ!

ಬೆಂಗಳೂರು ನಗರದಿಂದ ಸುಮಾರು 27 ಕಿ.ಮೀ.ದೂರದಲ್ಲಿದ್ದರೂ ಹೊಸಕೋಟೆ ಬೆಂಗಳೂರು ನಗರಕ್ಕೆ ಸೇರಿ ಹೋಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ಬಸ್ಸುಗಳು ಹೊಸಕೋಟೆ ತನಕ ಸಾಗುತ್ತವೆ.

ಇಲ್ಲಿಯೂ ತುಂಡು ಭೂಮಿಗೆ ಭಾರೀ ಬೆಲೆ ಇದೆ. ವೋಲ್ವೊ ವಾಹನ ತಯಾರಿಕಾ ಘಟಕವನ್ನು ಕ್ಷೇತ್ರ ಹೊಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ರಾಜಕೀಯಕ್ಕೆ ಬಂದು ಕ್ಷೇತ್ರಕ್ಕೆ ಹೊಸ ಖದರ್ ಬಂದಿದೆ.

ಕಾಂಗ್ರೆಸ್‌ನ ಎಂಟಿಬಿ ನಾಗರಾಜ್ ಕ್ಷೇತ್ರದ ಶಾಸಕರು. ಎರಡು ಚುನಾವಣೆಯಲ್ಲಿ ಗೆದ್ದಿರುವ ಅವರು ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಈ ಬಾರಿಯ ಚುನಾವಣೆ ಬಿಜೆಪಿ ಅಭ್ಯರ್ಥಿ.

Karnataka Assembly Election 2018 : Hosakote constituency profile

ಕಾಂಗ್ರೆಸ್ ಪಕ್ಷ ಹಾಲಿ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 1000 ಕೋಟಿ ಆಸ್ತಿ ಘೋಷಣೆ ಮಾಡುವ ಮೂಲಕ ಅವರು ಈಗಾಗಲೇ ಹಲವರ ಹುಬ್ಬೇರಿಸಿದ್ದಾರೆ. ಈ ಚುನಾವಣೆಯಲ್ಲಿಯೂ ಬಿಜೆಪಿ, ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಜೆಡಿಎಸ್ ಕೃಷ್ಣಮೂರ್ತಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

2013ರ ಚುನಾವಣೆಯಲ್ಲಿ ಎಂ.ಟಿ.ಬಿ.ನಾಗರಾಜ್ 85,238 ಮತ, ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು 78,099, ಜೆಡಿಎಸ್‌ನ ಶ್ರೀಧರ್ 1,304 ಮತಗಳನ್ನು ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+