Get Updates
Get notified of breaking news, exclusive insights, and must-see stories!

ಕ್ಷೇತ್ರ ಪರಿಚಯ : ಎಂ.ಪಿ.ಪ್ರಕಾಶ್ ತವರಲ್ಲಿ ಯಾರಿಗೆ ಜಯ?

ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ 1999ರಲ್ಲಿ ದಾವಣಗೆರೆ ಜಿಲ್ಲೆಗೆ ಸೇರಿತು. ಜಿಲ್ಲೆ ಬದಲಾವಣೆಯಾದರೂ ಮೂಲ ಸೌಕರ್ಯಗಳು ಇನ್ನೂ ಅಭಿವೃದ್ಧಿಯಾಗಬೇಕಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ 'ದುಗ್ಗಾವತಿ' ಕೈಗಾರಿಕಾ ಗ್ರಾಮ. ರಾಜ್ಯದ 2ನೇ ಖಾಸಗಿ ವಿದ್ಯುತ್ ಉತ್ಪಾದನಾ ಘಟಕವೂ ಕ್ಷೇತ್ರದಲ್ಲಿದೆ. ಶಾಮನೂರು ಶುಗರ್ ಕಾರ್ಖನೆ ಹಲವು ಜನರಿಗೆ ಉದ್ಯೋಗ ನೀಡಿದೆ.

ಹರಪನಹಳ್ಳಿಯನ್ನು ಬಳ್ಳಾರಿಗೆ ಮರಳಿ ಸೇರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ತುಂಗಭದ್ರಾ ನದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿದು ಹೋಗುತ್ತದೆ. ಆದರೆ, ಬೇಸಿಗೆಯಲ್ಲಿ ಹರಪನಹಳ್ಳಿ ಪಟ್ಟಣ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತದೆ.

ಕರ್ನಾಟಕ ರಾಜಕಾರಣದ ಸಜ್ಜನ ರಾಜಕಾರಣಿ ಎಂ.ಪಿ.ಪ್ರಕಾಶ್ ತವರು ಕ್ಷೇತ್ರ ಹರಪನಹಳ್ಳಿ. ಬಳ್ಳಾರಿಯ ಗಣಿಧಣಿಗಳ ಪೈಕಿ ಒಬ್ಬರಾದ ಕರುಣಾಕರ ರೆಡ್ಡಿ ಅವರ ಕ್ಷೇತ್ರವೂ ಹೌದು. ಅವರ ಪ್ರಭಾವವೂ ಇಲ್ಲಿನ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ.

Karnataka Assembly Election 2018 : Harapanahalli constituency profile

2013ರ ಚುನಾವಣೆಯಲ್ಲಿ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. 2008ರಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಗೆಲವು ಸಾಧಿಸಿ, ಸಚಿವರಾಗಿದ್ದರು.

ಕ್ಷೇತ್ರ ದಾವಣಗೆರೆ ಜಿಲ್ಲೆಯಲ್ಲಿದ್ದರೂ ಬಳ್ಳಾರಿ ರಾಜಕಾರಣದ ನೆರಳು ಇದರ ಮೇಲಿದೆ. ಎಂ.ಪಿ.ರವೀಂದ್ರ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದ್ದರು, ಬಳಿಕ ತಮ್ಮ ನಿರ್ಧಾರವನ್ನು ವಾಪಸ್ ಪಡೆದರು.

ಎಂ.ಪಿ.ರವೀಂದ್ರ ಅವರ ವಿರೋಧಿ ಅಲೆ ಕ್ಷೇತ್ರದಲ್ಲಿದೆ ಎಂಬುದು ಸದ್ಯದ ಸುದ್ದಿ. ಕರುಣಾಕರ ರೆಡ್ಡಿ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಜೆಡಿಎಸ್‌ನಿಂದ ಎ.ಜಿ.ವಿಶ್ವನಾಥ್ ಕಳೆದ ಬಾರಿ ಸ್ಪರ್ಧಿಸಿದ್ದರು. ಈ ಬಾರಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

2013ರ ಚುನಾವಣೆಯಲ್ಲಿ ಎಂ.ಪಿ.ರವೀಂದ್ರ 56,954 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಕರುಣಾಕರ ರೆಡ್ಡಿ ಅವರು 48,548 ಮತ, ಜೆಡಿಎಸ್‌ನ ಎ.ಜಿ.ವಿಶ್ವನಾಥ್ 2,294 ಮತಗಳನ್ನು ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+