Lizard: ಮಳೆಗಾಲದಲ್ಲಿ ಹಲ್ಲಿಗಳ ಕಾಟ ಹೆಚ್ಚಾಗುತ್ತಿದೆಯೇ? ಈ ಒಂದು ವಸ್ತು ಬಳಸಿದರೆ ಮತ್ತೆ ಮನೆಗೆ ಸುಳಿಯುವುದಿಲ್ಲ

Lizard: ಮಳೆಗಾಲ ಆರಂಭವಾದಾಗ, ಮನೆಯಲ್ಲಿ ಹಲ್ಲಿಗಳ ಸಮಸ್ಯೆ ಕೂಡಾ ಹೆಚ್ಚಾಗಿ ಕಾಡುತ್ತದೆ. ಅಡುಗೆಮನೆ, ಮಲಗುವ ಕೋಣೆ ಮತ್ತು ಲಿವಿಂಗ್‌ ರೂಮ್‌ನ ಗೋಡೆಗಳ ಮೇಲೆ ಹಲ್ಲಿಗಳು ತೆವಳುತ್ತಿರುತ್ತವೆ. ಮಳೆ ಬಂದಾಗ ಹಲ್ಲಿಗಳು ಇದ್ದಕ್ಕಿದ್ದಂತೆ ಮನೆಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತವೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ತಜ್ಞರಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮಳೆಗಾಲದಲ್ಲಿ, ಗಾಳಿಯಲ್ಲಿ ತೇವಾಂಶ ಹೆಚ್ಚಾಗುವುದರ ಜೊತೆಗೆ, ಸೊಳ್ಳೆಗಳು, ನೊಣಗಳು, ಪತಂಗಗಳು ಮತ್ತು ಸಣ್ಣ ಕೀಟಗಳ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತವೆ. ಇವು ಹಲ್ಲಿಗಳಿಗೆ ಮುಖ್ಯ ಆಹಾರವಾಗಿರುವುದರಿಂದ, ಅವು ಆಹಾರಕ್ಕಾಗಿ ಮನೆಗಳತ್ತ ಹೆಚ್ಚು ಆಕರ್ಷಿತವಾಗುತ್ತವೆ.

ಮನೆಯಲ್ಲಿನ ಕತ್ತಲೆ ಮೂಲೆಗಳು, ಸ್ಟೋರ್‌ ರೂಂ ಕೊಠಡಿಗಳು, ಛಾವಣಿಯ ಮೂಲೆಗಳು, ಪೀಠೋಪಕರಣಗಳ ಕೆಳಗೆ ಮತ್ತು ಪರದೆಗಳ ಹಿಂದೆ ಹಲ್ಲಿಗಳು ಓಡಾಡುತ್ತಿರುತ್ತವೆ. ಅಲ್ಲದೆ, ಹವಾನಿಯಂತ್ರಣದ ಹೊರಾಂಗಣ ಘಟಕದಂತಹ ಬೆಚ್ಚಗಿನ, ಕತ್ತಲೆಯಾದ ಸ್ಥಳಗಳು ಕೂಡಾ ಹಲ್ಲಿಗಳಿಗೆ ಅಡಗಿ ಕೂರಲು ಸೂಕ್ತ ಜಾಗವಾಗಿದೆ. ಎಸಿ ಪೈಪ್‌ಗಳ ಸುತ್ತಲಿನ ಸಣ್ಣ ರಂಧ್ರಗಳು, ಗೋಡೆಗಳಲ್ಲಿನ ಬಿರುಕುಗಳು ಮತ್ತು ಕಿಟಕಿಗಳು ಅಥವಾ ಬಾಗಿಲುಗಳಲ್ಲಿನ ಬಿರುಕುಗಳ ಮೂಲಕ ಅವು ಸುಲಭವಾಗಿ ಮನೆಯೊಳಗೆ ಪ್ರವೇಶಿಸಬಹುದು.

Lizard

ಮನೆಯಿಂದ ಹಲ್ಲಿಗಳನ್ನು ದೂರವಿಡಲು ಕೆಲವು ಸರಳ ಸಲಹೆಗಳನ್ನು ಅನುಸರಿಸಬಹುದು.

ಬೆಳ್ಳಿಳ್ಳಿ - ಈರುಳ್ಳಿ

ಬಾಗಿಲು, ಕಿಟಕಿಗಳು ಅಥವಾ ಹಲ್ಲಿಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳ ಬಳಿ ಬೆಳ್ಳುಳ್ಳಿ ಎಸಳು ಅಥವಾ ಈರುಳ್ಳಿ ಚೂರುಗಳನ್ನು ಇಟ್ಟರೆ, ಹಲ್ಲಿಗಳು ಅವುಗಳ ಕಟುವಾದ ವಾಸನೆಯಿಂದಾಗಿ ಆ ಪ್ರದೇಶಕ್ಕೆ ಬರಲು ಇಷ್ಟಪಡುವುದಿಲ್ಲ. ಹಲ್ಲಿಗಳು ಬರುವ ಮೂಲೆಗಳು, ಗೋಡೆಗಳ ಅಂಚುಗಳು ಮತ್ತು ಹಲ್ಲಿಗಳು ನಡೆದಾಡುವ ದಾರಿಯಲ್ಲಿ ನೀರಿನಲ್ಲಿ ಕರಿಮೆಣಸಿನ ಪುಡಿಯನ್ನು ಬೆರೆಸಿ ಸಿಂಪಡಿಸುವುದರಿಂದಲೂ ಹಲ್ಲಿಗಳು ಮತ್ತೆ ಆ ಸ್ಥಳದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಮನೆಯ ಸ್ವಚ್ಛತೆ ಬಹಳ ಮುಖ್ಯ

ಇದಲ್ಲದೆ, ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವುದು ಹಲ್ಲಿಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಡುಗೆಮನೆಯಿಂದ ಆಹಾರದ ಅವಶೇಷಗಳನ್ನು ಹೊರಗಿಡುವುದು, ಸಮಯಕ್ಕೆ ಸರಿಯಾಗಿ ಕಸ ತೆಗೆಯುವುದು, ಧೂಳು ಮತ್ತು ಜೇಡರ ಬಲೆಗಳು ಸಂಗ್ರಹವಾಗದಂತೆ ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ. ಕೀಟಗಳು ಕಡಿಮೆಯಾದರೆ, ಹಲ್ಲಿಗಳಿಗೆ ಆಹಾರ ಸಿಗುವುದಿಲ್ಲ. ಹಾಗಾಗಿ ಹಲ್ಲಿಗಳು ಮನೆಯ ಒಳಗೆ ಬರುವುದೂ ಇಲ್ಲ.

ಬಿರುಕುಗಳನ್ನು ಮುಚ್ಚುವುದು

ಅದೇ ರೀತಿ, ಎಸಿ ಹೋಲ್, ಎಕ್ಸಾಸ್ಟ್ ಫ್ಯಾನ್‌ಗಳು ಸಂದುಗಳಲ್ಲಿ ತೆಳುವಾದ ಪರದೆಗಳನ್ನು ಅಳವಡಿಸುವುದರಿಂದ ಹಲ್ಲಿಗಳು ಒಳಗೆ ಬರುವುದನ್ನು ತಡೆಯಬಹುದು. ಗೋಡೆಗಳಲ್ಲಿನ ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚುವುದು ಮತ್ತು ವಾರಕ್ಕೊಮ್ಮೆಯಾದರೂ ಮನೆಯ ಬಳಕೆಯಾಗದ ಮೂಲೆಗಳನ್ನು ಸ್ವಚ್ಛಗೊಳಿಸುವಂತಹ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಮಳೆಗಾಲದಲ್ಲಿ ಹಲ್ಲಿಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ನೈಸರ್ಗಿಕ ಟ್ರಿಕ್ ಆಗಿ ಮೊಟ್ಟೆಯ ಚಿಪ್ಪುಗಳನ್ನು ಪ್ರಯತ್ನಿಸಿ

ಖಾಲಿ ಮೊಟ್ಟೆಯ ಚಿಪ್ಪುಗಳನ್ನು ಕಂಡರೆ ಹಲ್ಲಿಗಳು ಹೆದರಿ ಓಡುತ್ತವೆ ಎಂದು ಹೇಳಲಾಗುತ್ತದೆ. ಹಲ್ಲಿಗಳು ಮೊಟ್ಟೆಯ ಚಿಪ್ಪನ್ನು ಕಂಡರೆ ಪರಭಕ್ಷಕ ಅಥವಾ ಅಸುರಕ್ಷಿತ ಪರಿಸರದ ಚಿಹ್ನೆಗಳಾಗಿ ಗ್ರಹಿಸಬಹುದು.ಈ ಮೂಲಕ ಹಲ್ಲಿಗಳು ಮತ್ತೆ ಆ ಜಾಗಕ್ಕೆ ಬರುವುದಿಲ್ಲ. ಹಾಗಾಗಿ ಹಲ್ಲಿಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಟಕಿಗಳು, ಕಪಾಟುಗಳು ಅಥವಾ ಮೂಲೆಗಳ ಬಳಿ ಮೊಟ್ಟೆಯ ಚಿಪ್ಪಿನ್ನು ಸ್ವಚ್ಛಗೊಳಿಸಿ ಅದರ ಅರ್ಧಭಾಗವನ್ನು ಇರಿಸಿ.

ನೆಫ್ಥಲೀನ್ ಬಾಲ್‌ಗಳನ್ನು ಎಚ್ಚರಿಕೆಯಿಂದ ಬಳಸಿ

ಕೀಟಗಳು ಮತ್ತು ಸರೀಸೃಪಗಳನ್ನು ಹಿಮ್ಮೆಟ್ಟಿಸಲು ನೆಫ್ಥಲೀನ್ ಬಾಲ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹಲ್ಲಿಗಳನ್ನು ದೂರವಿಡಲು ಅವುಗಳನ್ನು ಕಪಾಟುಗಳಲ್ಲಿ, ಸಿಂಕ್‌ಗಳ ಕೆಳಗೆ ಮತ್ತು ಪೀಠೋಪಕರಣಗಳ ಹಿಂದೆ ಇರಿಸಿದರೆ ಉಪಯುಕ್ತವಾಗುವುದು.ಆದರೆ ಮನೆಯಲ್ಲಿ ಮಕ್ಕಳು, ಸಾಕುಪ್ರಾಣಿಗಳು ಇದ್ದರೆ ಈ ಬಾಲ್‌ಗಳನ್ನು ಬಳಸುವಾಗ ಎಚ್ಚರಿಕೆ ಇರಲಿ.

ದೀಪಗಳ ಆಯ್ಕೆ ಸರಿಯಾಗಿರಲಿ

ಪ್ರಕಾಶಮಾನವಾದ ಬಿಳಿ ಬೆಳಕುಗಳು ಕೀಟಗಳನ್ನು ಆಕರ್ಷಿಸುತ್ತವೆ. ಇದು ಹಲ್ಲಿಗಳನ್ನು ಕೂಡಾ ಆಕರ್ಷಿಸುತ್ತದೆ. ಹೊರಾಂಗಣದಲ್ಲಿ ಬೆಚ್ಚಗಿನ ದೀಪಗಳನ್ನು ಬಳಸುವುದು ಮತ್ತು ಕಿಟಕಿಗಳ ಬಳಿ ಅನಗತ್ಯ ಬೆಳಕನ್ನು ಕಡಿಮೆ ಮಾಡುವುದು ನಿಮ್ಮ ಮನೆಯ ಸುತ್ತಲೂ ಕೀಟಗಳ ಚಟುವಟಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+