ಗೋವಿಂದರಾಜನಗರದಲ್ಲಿ ಬಿಜೆಪಿ ಗೆಲುವಿನ ಕನಸು

ಪ್ರಿಯಾ ಕೃಷ್ಣ ಅವರು ಹಾಲಿ ವಿಧಾನಸಭೆಯಲ್ಲಿ ಅತಿ ಕಿರಿಯ ಶಾಸಕ, ಅತ್ಯಂತ ಶ್ರೀಮಂತ ರಾಜಕಾರಣಿ. ಕಾಂಗ್ರೆಸ್ಸಿನಿಂದ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸೋಮಣ್ಣ, ಬಿಜೆಪಿ ಸೇರ್ಪಡೆಯಾಗಿ ಸಚಿವರಾದರು. ಉಪಚುನಾವಣೆಯನ್ನು ಪ್ರಿಯಾಕೃಷ್ಣ ಗೆದ್ದುಕೊಂಡರು. ಸಮುದಾಯ ಭವನ, ಅಂಗನವಾಡಿ ಕಟ್ಟಡಗಳ ಜತೆಗೆ ಅಗ್ರಹಾರ ದಾಸರಹಳ್ಳಿ ಶಾಲೆಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದಾರೆ. ಕುಡಿಯುವ ನೀರು ಪೂರೈಕೆ ಸುಧಾರಣೆಯಾಗಿದೆ.

767 ಕೋಟಿ ರೂ. ನಷ್ಟು ಘೋಷಿತ ಆಸ್ತಿಯ ಶ್ರೀಮಂತ ಕುಳ. ಹಾಲಿ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಶಾಸಕ. ಆರಂಭದಲ್ಲಿ ಸೋಮಣ್ಣ ಹಿಡಿತದಲ್ಲಿದ್ದ ಕ್ಷೇತ್ರ. ಅವರಿಂದಲೂ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದವು. ಹಾಲಿ ಶಾಸಕ ಜನರಿಗೆ ಪ್ರಿಯ ಎನ್ನುವುದಕ್ಕಿಂತ ತಮ್ಮ ಪಟಾಲಂಗೆ ಬೇಕಾದವರು. ಚುನಾವಣೆಯಲ್ಲಿ ಇವರದೇ ಕಾರುಬಾರು. ಈ ಬಾರಿ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿ, ಸೋಮಣ್ಣ ಅವರು ಕಣಕ್ಕಿಳಿದಿದ್ದಾರೆ.

 Karnataka Assembly Election 2018: Bengaluru- Govindaraja Nagar constituency profile

* ಸಮಸ್ಯೆಗಳು: ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಭದ್ರತೆ, ಉದ್ಯೋಗ, ಕಾನೂನು ವ್ಯವಸ್ಥೆಯಲ್ಲಿ ಗಮನಾರ್ಹ ಸಾಧನೆ ಇಲ್ಲವಾಗಿದೆ.

* ವಿಧಾನಸಭಾ ಕ್ಷೇತ್ರ ಸಂಖ್ಯೆ 166:
ಹಾಲಿ ಶಾಸಕ- ಪ್ರಿಯಾ ಕೃಷ್ಣ ಕಾಂಗ್ರೆಸ್.
ಸೋತ ಅಭ್ಯರ್ಥಿ ಆರ್ ರವೀಂದ್ರ- ಬಿಜೆಪಿ
* ವಾರ್ಡ್: ಕಾವೇರಿಪುರ, ಗೋವಿಂದರಾಜ ನಗರ, ಅಗ್ರಹಾರ ದಾಸರಹಳ್ಳಿ, ಡಾ. ರಾಜ್ ಕುಮಾರ್ ವಾರ್ಡ್, ಮಾರೇನಹಳ್ಳಿ, ಮಾರುತಿ ಮಂದಿರ, ಮೂಡಲಪಾಳ್ಯ, ನಾಗರಭಾವಿ, ನಾಯಂಡಹಳ್ಳಿ

* ಮತದಾರರ ಸಂಖ್ಯೆ: 2,46,476. ಕಳೆದ ಬಾರಿ ವೋಟ್ ಮಾಡಿದವರು ಶೇ. 54.82ರಷ್ಟು ಮಂದಿ. 131237 ಮತಗಳ ಪೈಕಿ ಪ್ರಿಯಾಕೃಷ್ಣ ಅವರು 72654 ಮತಗಳನ್ನು ಪಡೆದು ಜಯ ಗಳಿಸಿದರು. ಬಿಜೆಪಿಯ ರವೀಂದ್ರ ಅವರಿಗೆ 30194 ಮತಗಳು ಮಾತ್ರ ಲಭಿಸಿತು. 42460 ಮತಗಳ (ಶೇ 32.35) ಅಂತರದಿಂದ ಪ್ರಿಯಾಕೃಷ್ಣ ಗೆಲುವು ದಾಖಲಿಸಿದ್ದರು. ಜೆಡಿಎಸ್ ನ ಟಿ.ಎಂ ರಂಗೇಗೌಡ ಅವರು 20600 ಮತಗಳನ್ನು ಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+