ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ

ಹೆದ್ದಾರಿಯ ಪಕ್ಕದಲ್ಲಿರುವ ಐಟಿ ಹಬ್ ಗೆ ಹೆಬ್ಬಾಗಿಲು ಎನಿಸಿಕೊಂಡಿರುವ ಬೊಮ್ಮನಹಳ್ಳಿ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರು ಈ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ.

ಕ್ಷೇತ್ರದ ಹಾಲಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ಖಚಿತವಾಗಿದೆ. ಕ್ಷೇತ್ರದ ವ್ಯಾಪ್ತಿಯ 9 ವಾರ್ಡ್‌ಗಳ ಪೈಕಿ 8 ವಾರ್ಡ್‌ನಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಬಲಿಷ್ಠ ಕಾರ್ಯಕರ್ತರ ಪಡೆ, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಸತೀಶ್ ರೆಡ್ಡಿ ಅವರಿಗೆ ಸಹಾಯಕವಾಗಲಿದೆ.

* ವಿಧಾನಸಭಾ ಕ್ಷೇತ್ರ ಸಂಖ್ಯೆ 175:
* ಹಾಲಿ ಶಾಸಕ- ಸತೀಶ್ ರೆಡ್ಡಿ ಬಿಜೆಪಿ.
* ಸೋತ ಅಭ್ಯರ್ಥಿ ನಾಗಭೂಷಣ- ಕಾಂಗ್ರೆಸ್
* ವಾರ್ಡ್: ಎಚ್ಎಸ್ಆರ್ ಲೇ ಔಟ್, ಬೊಮ್ಮನಹಳ್ಳಿ, ಜರಗನಹಳ್ಳಿ, ಪುಟ್ಟೇನಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಸಿಂಗಸಂದ್ರ, ಅರಕೆರೆ

ಸತೀಶ್ ರೆಡ್ಡಿ ಅವರ ಸಾಧನೆ -ಬೇರುಮಟ್ಟದ ಜನಪ್ರತಿನಿಧಿ. ಬೇಗೂರಿನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮುಂದೆ, ಬೊಮ್ಮನಹಳ್ಳಿ ನಗರಸಭೆ ಸದಸ್ಯರಾದರು. ಉದ್ಯಮಿಯೂ ಆಗಿದ್ದು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸಾಕಷ್ಟು ಕೆಲಸ ಮಾಡಿದ್ದಾರೆ.

ಕೆರೆಗಳ ಅಭಿವೃದ್ಧಿ ತಕ್ಕಮಟ್ಟಿಗೆ ಆಗಿದೆ

ಕೆರೆಗಳ ಅಭಿವೃದ್ಧಿ ತಕ್ಕಮಟ್ಟಿಗೆ ಆಗಿದೆ

ರಾಜಾ ಕಾಲುವೆಗಳ ಪುನರುಜ್ಜೀವನ ಕಂಡಿದ್ದು, ಪುಟ್ಟೇನಹಳ್ಳಿಯಲ್ಲಿ 'ನೊರೆ' ಹಾವಳಿ ಮಾಯವಾಗಿದೆ. ಕೆರೆಗಳ ಅಭಿವೃದ್ಧಿಯಾಗಿದೆ. ಒತ್ತುವರಿ ತೆರವುಗೊಳಿಸಿ 500 ಕೋಟಿ ರೂ. ಆಸ್ತಿ ಸರಕಾರದ ವಶಕ್ಕೆ ವಾಪಸ್ ಪಡೆದಿರುವುದು ಮಹತ್ತರ ಸಾಧನೆ.

ಬೆಂಗಳೂರಿನ ಅತಿದೊಡ್ಡ ಬಡಾವಣೆಗಳಲ್ಲಿ ಒಂದೆನಿಸಿಕೊಂಡಿರುವ ಎಚ್ ಎಸ್ ಆರ್ ಲೇ ಔಟಿನಲ್ಲಿ ಅನೇಕ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಿದೆ. ಹೆಚ್ಚೆಚ್ಚು ಜನವಸತಿಗೆ ಆಸ್ಪದ ನೀಡುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ.
ಸಮಸ್ಯೆಗಳು

ಸಮಸ್ಯೆಗಳು

ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಸಿಕ್ಕಿದ್ದರೂ ಸಮರ್ಪಕವಾದ ಅಭಿವೃದ್ಧಿ ತಂದಿಲ್ಲ. ನೀರು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಜನ ದುಡ್ಡು ಕೊಟ್ಟು ಟ್ಯಾಂಕರುಗಳಲ್ಲಿ ನೀರನ್ನು ಖರೀಸುತ್ತಿದ್ದಾರೆ. ಹಲವು ವಾರ್ಡ್ ಗಳಲ್ಲಿ ಹಾಕಿದ್ದ ಸಿಮೆಂಟ್ ರಸ್ತೆ ಮತ್ತೆ ಹಾಳಾಗಿದೆ. ಕಸ ವಿಲೇವಾರಿ ಸಮಸ್ಯೆಯಿದೆ. ಕೆರೆಗಳ ಮಾಲಿನ್ಯ ಹಾಗೂ ರಾಜಕಾಲುವೆ ಸಮಸ್ಯೆ ಇದ್ದೇ ಇದೆ. ಗಾರ್ಮೆಂಟ್ಸ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕಾರ್ಮಿಕರ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ.

ಸರ್ಕಾರಿ ಸೌಲಭ್ಯಗಳು ಜನರನ್ನು ತಲುಪುತ್ತಿಲ್ಲ

ಸರ್ಕಾರಿ ಸೌಲಭ್ಯಗಳು ಜನರನ್ನು ತಲುಪುತ್ತಿಲ್ಲ

ಆಧಾರ್ ಕಾರ್ಡ್, ಕುಡಿಯುವ ನೀರು ಮತ್ತು ರೇಶನ್ ಕಾರ್ಡ್ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿದ್ದರೂ ಬೇಗೂರು ರಸ್ತೆ ಕಿರಿದಾಗಿದೆ ಎಂಬ ಅಳಲು ಇದೆ. ಎಚ್ ಎಸ್ ಆರ್ ಲೇ ಔಟಿನ ಟ್ರಾಫಿಕ್ ಸಮಸ್ಯೆ, ಸರಿಯಾದ ಆರೋಗ್ಯ ಕೇಂದ್ರ ಇಲ್ಲದಿರುವುದು, ಮಡಿವಾಳ ಮಾರುಕಟ್ಟೆಯಂತೆ ಸರಿಯಾದ ತರಕಾರಿ ಮಾರುಕಟ್ಟೆಯ ಬೇಡಿಕೆ ಇದೆ. ಹೊಸ ಪಾರ್ಕ್ ಗಳು ತಲೆ ಎತ್ತಿದ್ದರೂ ಸಮರ್ಪಕ ಸುರಕ್ಷತೆ, ಭದ್ರತೆ ಇಲ್ಲದ್ದಂತಾಗಿದೆ.

ಶೇಕಡಾವಾರು ಮತದಾನವೇ ನಿರ್ಣಾಯಕ

ಶೇಕಡಾವಾರು ಮತದಾನವೇ ನಿರ್ಣಾಯಕ

ಮತದಾರರ ಸಂಖ್ಯೆ: 323128, ಕಳೆದ ಬಾರಿ ವೋಟ್ ಮಾಡಿದವರು ಶೇ. 54.09ರಷ್ಟು ಮಂದಿ. 174734 ಮತಗಳ ಪೈಕಿ ಸತೀಶ್ ರೆಡ್ಡಿ ಮತ ಗಳಿಕೆ 86552 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ಸಿನ ನಾಗಭೂಷಣ ಸಿ ಅವರು 60700 ಗಳಿಸಿ ಸೋಲು ಕಂಡರು. ಶೇ 14.80(25852 ಮತಗಳು) ಅಂತರದಿಂದ ಸತೀಶ್ ರೆಡ್ಡಿ ಗೆಲುವು ಸಾಧಿಸಿದರು. ಕಳೆದ ಬಾರಿಗಿಂತ ಹೆಚ್ಚಿನ ಶೇಕಡಾವಾರು ಮತದಾನ ನಿರೀಕ್ಷಿಸಲಾಗಿದೆ.

ಯಾರ ವೋಟು ನಿರ್ಣಾಯಕ?

ಯಾರ ವೋಟು ನಿರ್ಣಾಯಕ?

ಗಾರ್ಮೆಂಟ್ಸ್, ಸಣ್ಣಕೈಗಾರಿಕೆಗಳು ಹೆಚ್ಚಿದ್ದು, ಸ್ಥಳೀಯರೇ ಉದ್ಯೋಗಿಗಳಾಗಿರುವುದು ವಿಶೇಷ. ರೆಡ್ಡಿ, ಒಕ್ಕಲಿಗ, ಬ್ರಾಹ್ಮಣ, ಲಿಂಗಾಯತ ಮತಗಳು ನಿರ್ಣಾಯಕ. ಸ್ಥಳೀಯ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸುವ ಆಶ್ವಾಸನೆ ಮೇಲೆ ಮತದಾರರು ಮತ ಚಲಾಯಿಸಲಿದ್ದಾರೆ. ಸದ್ಯದ ಮಟ್ಟಿಗೆ ಬಿಜೆಪಿಯ ಸತೀಶ್ ರೆಡ್ಡಿ ಅವರ ಗೆಲುವಿನ ನಿರೀಕ್ಷೆ ಮಿಕ್ಕವರಿಗಿಂತ ಹೆಚ್ಚಿದೆ. ಎಲ್ಲಾ ಸ್ತರದ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮುಖ್ಯವಾಗಲಿದೆ.

ಸತೀಶ್ ರೆಡ್ಡಿಗೆ ಯಾರು ಎದುರಾಳಿ?

ಸತೀಶ್ ರೆಡ್ಡಿಗೆ ಯಾರು ಎದುರಾಳಿ?

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ನಾಗಭೂಷಣ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ. ಕವಿತಾ ರೆಡ್ಡಿ ಅವರು ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದರು.ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಆಪ್ತ ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರು ಸಹ ಟಿಕೆಟ್ ಆಕಾಂಕ್ಷಿ. ಆದರೆ, ಪುಷ್ಪ ರಾಜಗೋಪಾಲ ರೆಡ್ಡಿ ಅವರಿಗೆ ಟಿಕೆಟ್ ಸಿಕ್ಕಿದೆ. ಆದರೆ, ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ.

ಲೋಕಸತ್ತಾ ಪಕ್ಷದ ಡಾ.ಅಶ್ವಿನ್ ಮಹೇಶ್, ಜೆಡಿಎಸ್ ನಿಂದ ಶರತ್ ಚಂದ್ರ ಬಾಬು ಸ್ಪರ್ಧಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+