• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಬಂದ ನಂತರ ಬಿಜೆಪಿ ಸ್ಟೈಲೇ ಬೇರೆ: ಸತೀಶ್ ರೆಡ್ಡಿ ಸಂದರ್ಶನ

By ಬಾಲರಾಜ್ ತಂತ್ರಿ
|
   ಅಮಿತ್ ಶಾ ಬಂದ ನಂತರ ಬಿಜೆಪಿ ಸ್ಟೈಲೇ ಬೇರೆ: ಸತೀಶ್ ರೆಡ್ಡಿ ಸಂದರ್ಶನ | Oneindia Kannada

   ಹತ್ತು ವರ್ಷಗಳ ಹಿಂದೆ ಕ್ಷೇತ್ರ ವಿಂಗಡಣೆಯಾದ ನಂತರ ಅಸ್ತಿತ್ವಕ್ಕೆ ಬಂದ ಬೆಂಗಳೂರು ನಗರದ ಬೊಮ್ಮನಹಳ್ಳಿ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸುತ್ತಿರುವವರು ಬಿಜೆಪಿಯ ಶಾಸಕ ಎಂ ಸತೀಶ್ ರೆಡ್ಡಿ.

   ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿರುವ ಸತೀಶ್ ರೆಡ್ಡಿಗೆ, ಕಾಂಗ್ರೆಸ್ಸಿನ ಸುಷ್ಮಾ ರಾಜಗೋಪಾಲ ರೆಡ್ಡಿ ಪ್ರತಿಸ್ಪರ್ಧಿ. ನಾನು ಮಾಡಿದ ಅಭಿವೃದ್ದಿ ಕೆಲಸವೇ ನನಗೆ ಶ್ರೀರಕ್ಷೆ ಎಂದು ಗೆಲ್ಲುವ ಖಚಿತ ಭರವಸೆಯಲ್ಲಿರುವ ಸತೀಶ್ ರೆಡ್ಡಿ, ಚುನಾವಣೆಯ ಈ ಸಂದರ್ಭದಲ್ಲಿ 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ..

   ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ

   ಪ್ರ: 2008ರಲ್ಲಿ ಕ್ಷೇತ್ರ ವಿಂಗಡಣೆಯಾದ ನಂತರ ಬೊಮ್ಮನಹಳ್ಳಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಕಳೆದ ಎರಡು ಚುನಾವಣೆಗೂ ಈ ಚುನಾವಣೆಗೂ ಏನು ವ್ಯತ್ಯಾಸ?

   ಸತೀಶ್ ರೆಡ್ಡಿ: ಕಳೆದ ಹತ್ತು ವರ್ಷದ ಅಭಿವೃದ್ದಿ, ಜನರ ಜೊತೆ ನಿಕಟವಾದ ಸಂಪರ್ಕವನ್ನು ನಾನು ಹೊಂದಿದ್ದೇನೆ. ಈಗ ಇನ್ನೂ ಹೆಚ್ಚಿನ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯುತ್ತಿದ್ದೇನೆ. ಖಂಡಿತವಾಗಿಯೂ ಈ ಚುನಾವಣೆಯಲ್ಲೂ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ.

   ನಾನು ಚುನಾವಣೆಗೋಸ್ಕರ ತಯಾರಿ ಮಾಡಿಕೊಳ್ಳುವವನಲ್ಲ. ಪ್ರತೀದಿನ ಜನಸಾಮಾನ್ಯರ ಜೊತೆ ಕೆಲಸ ಮಾಡಿಕೊಂಡು, ಅವರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬಂದಿದ್ದೇನೆ. ಹಾಗಾಗಿ ಚುನಾವಣೆಗಾಗಿ ವಿಶೇಷವಾಗಿ ತಯಾರಿ ಆಗಬೇಕು ಎಂದು ನನಗನಿಸುವುದಿಲ್ಲ. ಸಂದರ್ಶನದ ಮುಂದುವರಿದ ಭಾಗ, ಮುಂದೆ ಓದಿ..

    ರಾಜ್ಯ ಸರಕಾರದಿಂದ ಅನುದಾನ ಸರಿಯಾಗಿ ಬರುತ್ತಿದೆಯಾ?

   ರಾಜ್ಯ ಸರಕಾರದಿಂದ ಅನುದಾನ ಸರಿಯಾಗಿ ಬರುತ್ತಿದೆಯಾ?

   ಪ್ರ: ಸಿದ್ದರಾಮಯ್ಯನವರ ಸರಕಾರದಲ್ಲಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿದೆಯಾ?

   ಸತೀಶ್ ರೆಡ್ಡಿ: ಪ್ರತೀ ವರ್ಷ ಬೊಮ್ಮನಹಳ್ಳಿ ಕ್ಷೇತ್ರದಿಂದ ಆರು ನೂರು ಕೋಟಿ ರೂಪಾಯಿ ತೆರಿಗೆ ಕಟ್ಟಲಾಗುತ್ತಿದೆ. ಐದು ವರ್ಷಕ್ಕೆ ಮೂರು ಸಾವಿರ ಕೋಟಿ ತೆರಿಗೆಯನ್ನು ಬಿಬಿಎಂಪಿಗೆ ಕಟ್ಟಿದ್ದೇವೆ. ಇದರಲ್ಲಿ ನೆಟ್ಟಗೆ ಆರ್ನೂರು ಕೋಟಿ ರೂಪಾಯಿ ಕೂಡಾ ಕೊಟ್ಟಿಲ್ಲ.

   ರಾಜ್ಯ ಸರಕಾರ ನಮ್ಮ ಮೇಲೆ ಮಲತಾಯಿ ಧೋರಣೆ ತೋರಿದೆ. ಇಷ್ಟು ತೆರಿಗೆ ಹಣ ಕೊಟ್ಟಿದ್ದ ನಮ್ಮ ಕ್ಷೇತ್ರಕ್ಕೆ ಅರ್ಧ ಹಣವನ್ನಾದರೂ ಕೊಡಬೇಕಾಗಿತ್ತು. ತುಂಬಾ ನೋವಾಗುತ್ತದೆ, ಆದರೂ ಬಂದಂತಹ ಅನುದಾನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

    ಬೊಮ್ಮನಹಳ್ಳಿ ಬಿಜೆಪಿ ಶಾಸಕರ ಜೊತೆ ಸಂದರ್ಶನ

   ಬೊಮ್ಮನಹಳ್ಳಿ ಬಿಜೆಪಿ ಶಾಸಕರ ಜೊತೆ ಸಂದರ್ಶನ

   ಪ್ರ: ಮೊದಲ ಬಾರಿಗೆ ಸತೀಶ್ ರೆಡ್ಡಿಯವರು ಶಾಸಕರಾಗಿ ಆಯ್ಕೆಯಾದಾಗ ಆಗಿದ್ದ ಅಭಿವೃದ್ದಿ ಕೆಲಸ ಎರಡನೇ ಅವಧಿಯಲ್ಲೂ ಆಗಿತ್ತಾ?

   ಸತೀಶ್ ರೆಡ್ಡಿ: ಅಭಿವೃದ್ದಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ನಾನು ಕಾಂಪ್ರಮೈಸ್ ಆಗುವುದಿಲ್ಲ. ಆದರೆ, ಅಭಿವೃದ್ದಿ ಮಾಡುವುದನ್ನು ತಡೆಯಲು ಕಾಂಗ್ರೆಸ್ಸಿನ ಸ್ನೇಹಿತರು ಬಹಳ ಪ್ರಯತ್ನ ಮಾಡಿದ್ದರು ಎನ್ನುವುದು ಸತ್ಯ. ಆದರೆ ಅವರಿಗೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಇಲ್ಲಿನ ಜನತೆ ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ.

    ಶಾ ಬರುವ ಮೊದಲಿನ ಬಿಜೆಪಿ ಮತ್ತು ಈಗಿನ ಬಿಜೆಪಿ ನಡುವೆ ಏನು ವ್ಯತ್ಯಾಸ?

   ಶಾ ಬರುವ ಮೊದಲಿನ ಬಿಜೆಪಿ ಮತ್ತು ಈಗಿನ ಬಿಜೆಪಿ ನಡುವೆ ಏನು ವ್ಯತ್ಯಾಸ?

   ಪ್ರ: ನೀವು ನೋಡಿದಂತೆ, ಅಮಿತ್ ಶಾ ಬರುವ ಮೊದಲಿನ ಬಿಜೆಪಿ ಮತ್ತು ಈಗಿನ ಬಿಜೆಪಿ ನಡುವೆ ಏನಿದೆ ವ್ಯತ್ಯಾಸ?

   ಸತೀಶ್: ಖಂಡಿತವಾಗಿಯೂ ಅಮಿತ್ ಶಾ ಕಾರ್ಯವೈಖರಿಯಲ್ಲಿ ಡಿಫರೆನ್ಸ್ ಇದೆ. ಆ ಚೇಂಜಸ್ ನಿಂದಲೇ ದೇಶದಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚಿನ ರಾಜ್ಯದಲ್ಲಿ ಬಿಜೆಪಿ ಸರಕಾರವಿರುವುದು. ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ತುಂಬುವಂತಹ ಕೆಲಸವನ್ನು ಅಮಿತ್ ಶಾ ಮಾಡಿದ್ದಾರೆ.

   ನರೇಂದ್ರ ಮೋದಿಯವರು ಮಾಡಿದಂತಹ ಅಭಿವೃದ್ದಿ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸವನ್ನು ಅಮಿತ್ ಶಾ ಮಾಡುತ್ತಿದ್ದಾರೆ. ಇದರಿಂದ ಪಕ್ಷ ಗಟ್ಟಿಯಾಗಿದೆ.

    ಯಡಿಯೂರಪ್ಪನವರು ಇಲ್ಲದೇ ಬಿಜೆಪಿ ಚುನಾವಣೆಗೆ ಹೋಗಿತ್ತು

   ಯಡಿಯೂರಪ್ಪನವರು ಇಲ್ಲದೇ ಬಿಜೆಪಿ ಚುನಾವಣೆಗೆ ಹೋಗಿತ್ತು

   ಪ್ರ: ಕಳೆದ ಬಾರಿ ಯಡಿಯೂರಪ್ಪನವರು ಇಲ್ಲದೇ ಬಿಜೆಪಿ ಚುನಾವಣೆಗೆ ಹೋಗಿತ್ತು. ಈಗ ಯಡಿಯೂರಪ್ಪ, ಅಮಿತ್ ಶಾ, ನರೇಂದ್ರ ಮೋದಿಯವರ ಬಲವಿದ್ದರೂ, ಸಮೀಕ್ಷೆಗಳು ಅತಂತ್ರ ಅನ್ನುತಿವೆಯಲ್ಲಾ?

   ಸತೀಶ್ ರೆಡ್ಡಿ: ಕಳೆದ ಬಾರಿ ಕಾಂಗ್ರೆಸ್ಸಿಗೂ ಅತಂತ್ರ ಎನ್ನುವ ಫಲಿತಾಂಶ ಬಂದಿತ್ತು. ಉತ್ತರಪ್ರದೇಶದಲ್ಲಿ ಅತಂತ್ರ ಸರಕಾರ ಬರುತ್ತೆ ಎಂದು ಸಮೀಕ್ಷೆ ಹೇಳಿತ್ತು, 325ಕ್ಷೇತ್ರವನ್ನು ನಾವು ಗೆದ್ದಿದ್ದೆವು. ಗುಜರಾತ್ ನಲ್ಲಿ ಬಿಜೆಪಿ ಸೋಲುತ್ತೆ ಎನ್ನುವ ಸಮೀಕ್ಷಾ ವರದಿ ಬಂದಿದ್ದವು.

   ಮಾಧ್ಯಮವರ ಫಲಿತಾಂಶ ಎರಡ್ಮೂರು ಪರ್ಸೆಂಟ್ ಆಕಡೆ ಈಕಡೆ ಇರುತ್ತೆ, ಇದರಿಂದ 20-25 ಸೀಟ್ variation ಆಗುತ್ತದೆ. ಅದನ್ನು ಯಾರೂ ಅನಲೈಸ್ ಮಾಡಲು ಆಗುವುದಿಲ್ಲ. ಈಗ ನಾವೆಲ್ಲಾ ಒಟ್ಟಾಗಿದ್ದೇವೆ. ನೂರಕ್ಕೆ ನೂರು ನಾವು ಮೆಜಾರಿಟಿ ತೆಗೆದುಕೊಂಡು ಅಧಿಕಾರಕ್ಕೆ ಬರುತ್ತೇವೆ.

    ಅನಧಿಕೃತವಾಗಿ ನಾನೇ ಅಭ್ಯರ್ಥಿ ಎಂದು ಡಿಕೆಶಿ ಹೇಳಿದ್ದಾರಲ್ಲಾ?

   ಅನಧಿಕೃತವಾಗಿ ನಾನೇ ಅಭ್ಯರ್ಥಿ ಎಂದು ಡಿಕೆಶಿ ಹೇಳಿದ್ದಾರಲ್ಲಾ?

   ಪ್ರ: ಸುಷ್ಮಾ ರಾಜಗೋಪಾಲ ರೆಡ್ಡಿ ನಿಮ್ಮ ಪ್ರತಿಸ್ಪರ್ಧಿಯಾಗಿದ್ದರೂ. ಅನಧಿಕೃತವಾಗಿ ನಾನೇ ಅಭ್ಯರ್ಥಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರಲ್ಲಾ?

   ಸತೀಶ್ ರೆಡ್ಡಿ: ಸಂತೋಷ, ನನಗೆ ಇದರಿಂದ ಏನೂ ತೊಂದರೆಯಿಲ್ಲ. ಯಾರು ಎಷ್ಟು ಕ್ಷೇತ್ರದಲ್ಲಾದರೂ ನಿಂತುಕೊಳ್ಳಬಹುದು. ಕಾಂಗ್ರೆಸ್ ನನ್ನ ಎದುರಾಳಿ ಅಷ್ಟೇ.. ನಾನು ಅಭ್ಯರ್ಥಿ ಯಾರೆಂದು ನೋಡಲು ಹೋಗುವುದಿಲ್ಲ. ಜನ ನನ್ನ ಪರವಾಗಿದ್ದಾರೆ. ಹೊರಗಿಂದ ಬಂದಂತವರಿಗೆ ಇಲ್ಲಿನ ಜನ ಯಾವತ್ತೂ ಮಣೆಹಾಕಲ್ಲ. ಚುನಾವಣೆ ಆದ ನಂತರ ಅವರಿಗೇ ಗೊತ್ತಾಗುತ್ತದೆ, ಇದಕ್ಕೆಲ್ಲಾ ಉತ್ತರ ಸಿಗುತ್ತದೆ.

    ಬಹುತೇಕ ಬಾಡಿಗೆದಾರರು ಹೆಚ್ಚಾಗಿ ಇರುವಂತಹ ಕ್ಷೇತ್ರ

   ಬಹುತೇಕ ಬಾಡಿಗೆದಾರರು ಹೆಚ್ಚಾಗಿ ಇರುವಂತಹ ಕ್ಷೇತ್ರ

   ಪ್ರ: ಬೊಮ್ಮನಹಳ್ಳಿ ಕ್ಷೇತ್ರ ಎನ್ನುವುದು ಬಹುತೇಕ ಬಾಡಿಗೆದಾರರು ಹೆಚ್ಚಾಗಿ ಇರುವಂತಹ ಕ್ಷೇತ್ರ, ಅಂದರೆ ಬೇರೆ ಊರಿನವರು. ಮತದಾನ, ಶನಿವಾರ ಬಿದ್ದಿರುವುದರಿಂದ ಇವರಿಗೆಲ್ಲಾ ಮತದಾನದ ಪ್ರಾಮುಖ್ಯಯತೆಯ ಅರಿವು ಮೂಡಿಸುವ ಕೆಲಸ ನಡೆದಿದೆಯೇ?

   ಸತೀಶ್ ರೆಡ್ಡಿ: ಹಂಡ್ರೆಡ್ ಪರ್ಸೆಂಟ್ ನಡೀತಾ ಇದೆ. ಯಾವುದೇ ಪಕ್ಷಕ್ಕೆ ಸಂಬಂಧವಿಲ್ಲದ ಸಂಸ್ಥೆಯ ಅಧಿಕಾರಿಗಳು ಮತದಾರರನ್ನು ಜಾಗೃತಿಗೊಳಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ನಾವೂ ಈ ಬಗ್ಗೆ ಜನರಿಗೆ ಮತದಾನದ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಪಕ್ಷ ವೋಟ್ awareness ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬರುವ ವಾರ ವಾಕಥಾನ್ ಇಟ್ಟುಕೊಂಡಿದ್ದೇವೆ. ಮತದಾನ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ.

    ಬೊಮ್ಮನಹಳ್ಳಿ ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ

   ಬೊಮ್ಮನಹಳ್ಳಿ ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ

   ಪ್ರ: ಕೊನೆಯದಾಗಿ, ಬೊಮ್ಮನಹಳ್ಳಿ ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ?

   ಸತೀಶ್ ರೆಡ್ಡಿ: ಬೊಮ್ಮನಹಳ್ಳಿ ಕ್ಷೇತ್ರದ ಜನ ಯಾವತ್ತೂ ನನ್ನ ಕೈಬಿಟ್ಟಿಲ್ಲ. ಈ ಕ್ಷೇತ್ರದ ಜನತೆಯ ಜೊತೆ ಸಾಮಾನ್ಯ ಮನುಷ್ಯನ ಹಾಗೇ ಬೆರೆತಿದ್ದೇನೆ, ಹಗಲುರಾತ್ರಿ ಕೆಲಸ ಮಾಡಿದ್ದೇನೆ. ಪ್ರೀತಿ ವಿಶ್ವಾಸದಿಂದ ಅವರ ಜೊತೆಗಿದ್ದೇನೆ.

   ಅಭಿವೃದ್ದಿಯ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡು ಹೋಗುವಂತಹ ಪ್ರಾಮಾಣಿಕ ಕೆಲಸನ್ನು ನಾನು ಮಾಡುತ್ತೇನೆ. ಜನರ ಆಶೀರ್ವಾದ ನಾನು ಬೇಡುತ್ತೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with Bommanahalli (Bengaluru urban) BJP MLA, M Sathish Reddy. MLA Reddy briefing about Siddaramaiah government, Amit Shah working style and parties confident in winning the upcoming Karnataka assembly election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more