ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ | Oneindia Kannada

ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಒಂದು ವಿಶೇಷತೆಯಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿದ್ದವರು, ಈ ಬಾರಿಯ ಚುನಾವಣೆಯಲ್ಲಿ ಅದಲು ಬದಲಾಗಿದ್ದಾರೆ.

ಏಳು ಜೆಡಿಎಸ್ ಬಂಡಾಯ ನಾಯಕರಲ್ಲಿ ಒಬ್ಬರಾದ ಎನ್ ಚೆಲುವರಾಯಸ್ವಾಮಿ ನಾಲ್ಕು ಬಾರಿ 'ತೆನೆಹೊತ್ತ ಮಹಿಳೆಯ' ಚಿಹ್ನೆಯಡಿ ಸ್ಪರ್ಧಿಸಿ ಅದರಲ್ಲಿ ಮೂರು ಬಾರಿ ಗೆದ್ದಿದ್ದರು. ಕುಮಾರಸ್ವಾಮಿಯವರ ಜೊತೆಗಿನ ಭಿನ್ನಮತದಿಂದ ಪಕ್ಷದಿಂದ ಹೊರನಡೆದ ಚೆಲುವರಾಯಸ್ವಾಮಿಗೆ, ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಈ ಬಾರಿ ಪ್ರತಿಸ್ಪರ್ಧಿ.

ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಸುರೇಶ್ ಗೌಡ್ರಿಗೆ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಜನಸ್ಪಂದನೆ ವ್ಯಕ್ತವಾಗುತ್ತಿರುವುದು ವಿಶೇಷ. ಜೆಡಿಎಸ್ ಆಶ್ರಯವಿಲ್ಲದೆ, ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸುವುದು ಚೆಲುವರಾಯಸ್ವಾಮಿಗೆ ಸಾಧ್ಯವಿಲ್ಲ ಎಂದು ದೇವೇಗೌಡ್ರು ಹೇಳಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಾವು ಪಾಂಡವರು, ನಮ್ಮಲ್ಲಿ ಹಣವಿಲ್ಲ. ಆದರೆ, ಶ್ರೀಕೃಷ್ಣನ ರೀತಿ ದೇವೇಗೌಡರಿದ್ದಾರೆ. ಬಾ ಗೆಲುವು ನನ್ನದೋ-ನಿನ್ನದೋ ನೋಡೋಣ. ರಾಜಕೀಯದಲ್ಲಿ ನಾನು ಐಶ್ವರ್ಯ, ಅಂತಸ್ತು ಕಳೆದುಕೊಂಡಿರಬಹುದು. ಜನರ ಪ್ರೀತಿ-ವಿಶ್ವಾಸ ಸಂಪಾದಿಸಿದ್ದೇನೆ ಎಂದು ಸುರೇಶ್ ಗೌಡ್ರು, ಚೆಲುವರಾಯಸ್ವಾಮಿ ವಿರುದ್ದ ತೊಡೆತಟ್ಟಿದ್ದಾಗಿದೆ.

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸಂದರ್ಶನಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸಂದರ್ಶನ

ನನ್ನ ಆರ್ಥಿಕ ಮೂಲವನ್ನೆಲ್ಲಾ ಮುಚ್ಚಿಸಿರುವ ನಿನ್ನನ್ನು ಈ ಕ್ಷೇತ್ರದಿಂದ ಖಾಲಿ ಮಾಡಿಸುವುದೇ ನನ್ನ ಗುರಿ ಎಂದು ಚೆಲುವರಾಯಸ್ವಾಮಿ ವಿರುದ್ದ ಗುಡುಗಿರುವ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡರ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಹೈಲೆಟ್ಸ್.. ಮುಂದೆ ಓದಿ..

ಅಭೂತಪೂರ್ವವಾದಂತಹ ಸ್ಪಂದನೆ ಜನರಿಂದ ಸಿಗುತ್ತಿದೆ

ಅಭೂತಪೂರ್ವವಾದಂತಹ ಸ್ಪಂದನೆ ಜನರಿಂದ ಸಿಗುತ್ತಿದೆ

ಪ್ರ: 2008ರ ಚುನಾವಣೆಗೂ 2018ರ ಚುನಾವಣೆಗೂ ಏನು ವ್ಯತ್ಯಾಸ?
ಸು.ಗೌಡ: 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಪ್ರಥಮ ಬಾರಿಗೆ ಮತದಾರರಿಂದ ಸಿಕ್ಕಂತಹ ಸ್ಪಂದನೆಗಿಂತ ಈ ಬಾರಿ ಸಿಗುತ್ತಿರುವ ಸ್ಪಂದನೆ ನನ್ನ ರಾಜಕೀಯ ಇತಿಹಾಸದಲ್ಲಿ ನನಗೆ ಸಿಕ್ಕಿರಲಿಲ್ಲ. ಬಹಳ ಅಭೂತಪೂರ್ವವಾದಂತಹ ಪ್ರೀತಿ ಜನರಿಂದ ಸಿಗುತ್ತಿದೆ.

ಬಾಲಗಂಗಾಧರನಾಥ ಶ್ರೀಗಳ ವಿಶೇಷ ಪ್ರೋತ್ಸಾಹ

ಬಾಲಗಂಗಾಧರನಾಥ ಶ್ರೀಗಳ ವಿಶೇಷ ಪ್ರೋತ್ಸಾಹ

ಪ್ರ: ನೀವು ಶಾಸಕರಾಗಿದ್ದಾಗ ಮಾಡಿದಂತಹ ಅಭಿವೃದ್ದಿ ಕೆಲಸಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ
ಸು.ಗೌಡ: ನಾನು ಶಾಸಕನಾಗಿ ಆಯ್ಕೆಯಾದಾಗ ಕುಡಿಯುವ ನೀರಿನ ಸಮಸ್ಯೆ ಅಗಾಧವಾಗಿತ್ತು. ಹೇಮಾವತಿ ಡ್ಯಾಂ ನಿಂದ ಬಾಲಗಂಗಾಧರನಾಥ ಶ್ರೀಗಳ ವಿಶೇಷ ಪ್ರೋತ್ಸಾಹದೊಂದಿಗೆ 168 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ವಿ.

ನಾನು ಇದರ ಜೊತೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು ಶೈಕ್ಷಣಿಕ ಕ್ಷೇತ್ರಕ್ಕೆ. ಎಂಬತ್ತು ಎಕರೆ ಜಮೀನನ್ನು ಗುರುತಿಸಿ, ಅಲ್ಲಿ ಎಲ್ಲಾ ಕಾಂಬಿನೇಷನಿನ ಕಾಲೇಜುಗಳನ್ನು ತಂದದ್ದು, ಯುವಕರಿಗೆ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದು, ಕೆರೆಕಟ್ಟೆ ತುಂಬುವಂತಹ ಕೆಲಸಗಳು.. ಇತ್ಯಾದಿ ಬಹಳಷ್ಟು ಉಂಟು.

ಅವರ ಕುಟುಂಬದ ಅಭಿವೃದ್ದಿವೇ ಅವರ ರಾಜಕಾರಣ

ಅವರ ಕುಟುಂಬದ ಅಭಿವೃದ್ದಿವೇ ಅವರ ರಾಜಕಾರಣ

ಪ್ರ: ಚೆಲುವರಾಯಸ್ವಾಮಿಯವರು ಏನೂ ಅಭಿವೃದ್ದಿ ಕೆಲಸವನ್ನು ಮಾಡಿಲ್ವಾ?
ಸು.ಗೌಡ: ಅವರು ಸ್ವಯಂಘೋಷಿತ ಅಭಿವೃದ್ದಿ ಹರಿಕಾರರು. ಬೇರೆ ಕ್ಷೇತ್ರದಲ್ಲಿ ನಡೆಯದೇ ಇರುವಂತಹ ಅಭಿವೃದ್ದಿ ಕೆಲಸಗಳನ್ನು ಚೆಲುವರಾಯರು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳೋಣ. ಅದನ್ನು ಬಿಟ್ಟು ಮಿನಿ ವಿಧಾನಸೌಧ, ಆರ್ಟಿಓ, ಆಸ್ಪತ್ರೆಯ ಬಗ್ಗೆ ಮಾತನಾಡುತ್ತಾರೆ.

ಇವತ್ತು ಎಲ್ಲಾ ತಾಲೂಕಿನಲ್ಲೂ ಇವೆಲ್ಲವೂ ಇವೆ. ಹಳ್ಳಿಗಳಿಗೆ ಹೋಗುವಂತಹ ರಸ್ತೆಗಳ ಬಗ್ಗೆ ಇವರು ಗಮನ ಹರಿಸಿದ್ದಾರಾ? ಸರಕಾರದಿಂದ ಬರುವಂತಹ ಅನುದಾನದಲ್ಲೂ ರಾಜಕಾರಣ ಮಾಡುತ್ತಾರೆ. 25ವರ್ಷದ ಅವರ ಕುಟುಂಬದ ಅಭಿವೃದ್ದಿವೇ ಅವರ ರಾಜಕಾರಣ.

ಅನುದಾನದಿಂದ ಅವರ ಕುಟುಂಬ ಅಭಿವೃದ್ದಿ ಆಗಿದ್ದಾರೆ

ಅನುದಾನದಿಂದ ಅವರ ಕುಟುಂಬ ಅಭಿವೃದ್ದಿ ಆಗಿದ್ದಾರೆ

ಪ್ರ: ಚುನಾವಣೆಗೆ ಘೋಷಣೆಗೆ ಮುನ್ನ ವಿಶೇಷ ಅನುದಾನ ಬಿಡುಗಡೆ ಆಯ್ತಾ?
ಸು.ಗೌಡ: ಹೌದು..ಲ್ಯಾಂಡ್ ಆರ್ಮಿ ಮುಂತಾದ ಕೆಲಸಗಳು ಟೆಂಡರ್ ಇಲ್ಲದೇ ಕೆಲಸಗಳು ನಡೆದಿವೆ. ತಮಗೆ ಬೇಕಾದವರಿಗೆ ಕೆಲಸ ಕೊಡಿಸುವುದು, ಅದರಲ್ಲಿ ಕಮಿಷನ್ ಪಡೆಯುವುದೇ ಚೆಲುವರಾಯಸ್ವಾಮಿಯವರ ಕಾಯಕ. ಸರಕಾರದ ಅನುದಾನದಿಂದ ಅವರ ಕುಟುಂಬ ಅಭಿವೃದ್ದಿ ಆಗಿವೆ. ಅದು ಬಿಟ್ಟು ಶಾಸ್ವತ ಯೋಜನೆ ಯಾವುದನ್ನೂ ಅವರು ತಂದಿಲ್ಲ.

ಮೆಜಾರಿಟಿಗೆ ಬರದಂತಹ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ

ಮೆಜಾರಿಟಿಗೆ ಬರದಂತಹ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ

ಪ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಶಿಕ್ಷಕರು, ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರಾ?
ಸು.ಗೌಡ: ಇಡೀ ಶಿಕ್ಷಕ ಸಮುದಾಯದವರನ್ನು, ಅಧಿಕಾರ ವರ್ಗದವರನ್ನು, ಮೆಜಾರಿಟಿಗೆ ಬರದಂತಹ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಡಾಬಾದಲ್ಲಿ ಪಾರ್ಟಿ ಕೊಡಿಸಿ, ನಿಮ್ಮ ತಂದೆಗೆ, ತಾಯಿಗೆ ನಮ್ಮ ವೋಟ್ ಹಾಕ್ಸಿ ಎನ್ನುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವತದ್ದು ಪ್ರಜಾಪ್ರಭುತ್ವಕ್ಕೆ ಮಾರಕ.

ಕುಮಾರಣ್ಣನವರು ಒಂದು ನಾಯಿ ತೋರ್ಸಿದ್ರೂ, ವೋಟ್ ಹಾಕ್ತೀವಿ

ಕುಮಾರಣ್ಣನವರು ಒಂದು ನಾಯಿ ತೋರ್ಸಿದ್ರೂ, ವೋಟ್ ಹಾಕ್ತೀವಿ

ಪ್ರ: ಗೌಡ್ರ,ಕುಮಾರಣ್ಣನ ಪ್ರಭಾವ ನಾಗಮಂಗಲದಲ್ಲಿ ಯಾವ ರೀತಿಯಿದೆ?
ಸು.ಗೌಡ: ಬಹಳ ಅದ್ಭುತವಾಗಿದೆ. ಗೌಡ್ರು ಮತ್ತು ಕುಮಾರಣ್ಣನವರ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯವಿದೆ. ಹಿಂದೆ, ನನ್ನ ಜೊತೆಗಿದ್ದ ಕಾರ್ಯಕರ್ತರೆಲ್ಲಾ ವಾಪಸ್ ಬಂದಿದ್ದಾರೆ. ಇಲ್ಲಿನ ಜನ ಮೂಲ ಜೆಡಿಎಸ್ ನವರು. ಇವರೆಲ್ಲಾ ಹೇಳೋದೆಲ್ಲಾ ಒಂದೇ ಗೌಡ್ರು, ಕುಮಾರಣ್ಣನವರು ಒಂದು ನಾಯಿ ತೋರ್ಸಿದ್ರೂ, ನಾವು ವೋಟ್ ಹಾಕ್ತೀವಿ ಅಂತ.

ಅದರರ್ಥ ಅಭ್ಯರ್ಥಿಗಳು ನಾಯಿ ಅಂತಲ್ಲಾ ಗೌಡ್ರ ಮೇಲೆ ಅಭಿಮಾನ ಇಟ್ಟುಕೊಂಡವರು. ಇವತ್ತು ನನ್ನ ಕ್ಷೇತ್ರದಲ್ಲಿ ಏನು ಅಭಿವೃದ್ದಿ ಆಗಿದೆಯೋ ಅದೆಲ್ಲಾ ಕುಮಾರಸ್ವಾಮಿಯವರ ಅಧಿಕಾರದಲ್ಲಿ ಆಗಿರುವಂತದ್ದು ಅಥವಾ ಘೋಷಣೆಯಾಗಿರುವ ಯೋಜನೆಗಳು.

ರೈತರ ಸಾಲಮನ್ನಾ 24ಗಂಟೆಯಲ್ಲಿ ಪ್ರಾಕ್ಟಿಕಲ್ ಆಗಿ ಸಾಧ್ಯನಾ?

ರೈತರ ಸಾಲಮನ್ನಾ 24ಗಂಟೆಯಲ್ಲಿ ಪ್ರಾಕ್ಟಿಕಲ್ ಆಗಿ ಸಾಧ್ಯನಾ?

ಪ್ರ: ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸರಿಯಾಗಿ ಸಿಗ್ತಾ ಇದೆಯಾ?
ಸು.ಗೌಡ: ನಮ್ಮ ಭಾಗದಲ್ಲಿ ತರಕಾರಿ, ತೆಂಗನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದಕ್ಕೆ ಬೆಂಬಲ ಬೆಲೆ ಅನ್ನೋದನ್ನೂ ಯಾವ ಸರಕಾರವೂ ಪ್ರಯತ್ನ ಮಾಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದರೂ ಇದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಬೆಂಬಲ ಬೆಲೆ ಅನ್ನೋದನ್ನು ಯಾರೂ ನಿಗದಿ ಮಾಡಿಲ್ಲ.

ಪ್ರ: ರೈತರ ಸಾಲಮನ್ನಾ 24ಗಂಟೆಯಲ್ಲಿ ಪ್ರಾಕ್ಟಿಕಲ್ ಆಗಿ ಸಾಧ್ಯನಾ?
ಸು.ಗೌಡ: ಯಾಕೆ ಸಾಧ್ಯವಿಲ್ಲ.. ಬೇರೆ ಬೇರೆ ರಾಜ್ಯದಲ್ಲಿ ಈಗಾಗಲೇ ಮಾಡಿ ತೋರಿಸಿದ್ದಾರೆ. ಯಾವ ರೀತಿ ಸಾಲಮನ್ನಾ ಮಾಡಬಹುದು ಅನ್ನೋದನ್ನಾ ಕುಮಾರಸ್ವಾಮಿಯವರು ಅಂಕಿಅಂಶದ ಪ್ರಕಾರ ತೋರಿಸಿದ್ದಾರೆ. ಎರಡು ಲಕ್ಷದ ಮೇಲೆ ನಮ್ಮ ಬಜೆಟ್ ಇರುವುದರಿಂದ ಇದು ಖಂಡಿತ ಸಾಧ್ಯ.

ಕ್ಷೇತ್ರದ ಜನಾದೇಶವನ್ನು ಮಾರಿಕೊಂಡಂತಹ ಚೆಲುವರಾಯಸ್ವಾಮಿ

ಕ್ಷೇತ್ರದ ಜನಾದೇಶವನ್ನು ಮಾರಿಕೊಂಡಂತಹ ಚೆಲುವರಾಯಸ್ವಾಮಿ

ಪ್ರ: ನಾಗಮಂಗಲ ಕ್ಷೇತ್ರದ ಜನತೆಗೆ ನಿಮ್ಮ ಮನವಿ?
ಸು.ಗೌಡ: ಕ್ಷೇತ್ರದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಕ್ಷೇತ್ರದ ಜನಾದೇಶವನ್ನು ಮಾರಿಕೊಂಡಂತಹ ಚೆಲುವರಾಯಸ್ವಾಮಿವರನ್ನು ರಾಜಕೀಯವಾಗಿ ಮನೆಗೆ ಕಳುಹಿಸಬೇಕು ಎಂದು ಜನರು ನಿರ್ಧರಿಸಿದ್ದಾರೆ. ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿ ಎಂದು ಮತದಾರರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಅದಕ್ಕೆ ಜನ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

English summary
An exclusive interview of JDS candidate from Nagamangala (Mandya district), Suresh Gowda. During his interview Suresh Gowda said, Congress candidate Cheluvarayaswamy looted the public money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X