ಎಬಿಪಿ ನ್ಯೂಸ್ ಸಮೀಕ್ಷೆ: ಸಿದ್ದರಾಮಯ್ಯ ಅವರೇ ಮೆಚ್ಚಿನ ಮುಖ್ಯಮಂತ್ರಿ
Recommended Video

ಎಬಿಪಿ ನ್ಯೂಸ್, ಸಿಎಸ್, ಡಿಎಸ್ ಒಟ್ಟಾಗಿ ನಡೆಸಿರುವ ಕರ್ನಾಟಕ ಚುನಾವಣೆ ಬಗೆಗಿನ ಸಮೀಕ್ಷಾ ವಿವರ ಹೊರಬಂದಿದ್ದು, ಅತಿ ಹೆಚ್ಚಿನ ಜನ ಮುಂದಿನ ಮುಖ್ಯಮಂತ್ರಿ ಮತ್ತೆ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಬಿಪಿ ನ್ಯೂಸ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಈ ಮೂವರಲ್ಲಿ ಯಾರು ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲೆಂಬುದು ಹೆಚ್ಚಿನ ಜನಗಳ ಅಭಿಪ್ರಾಯವಾಗಿದೆ.
ಸಿದ್ದರಾಮಯ್ಯ ಅವರಿಗೆ 30% ಮತ ದೊರೆತಿದ್ದರೆ, ಯಡಿಯೂರಪ್ಪ ಅವರಿಗೆ 25% ಮತ ದೊರಕಿದ್ದರೆ, ಕುಮಾರಸ್ವಾಮಿ ಅವರಿಗೆ 20% ಮತ ಬಂದಿದೆ. ಆ ಮೂಲಕ ಹೆಚ್ಚಿನ ಜನಗಳ ಮೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ಇಂಡಿಯಾ ಟುಡೆ ಮತ್ತು ಕಾರ್ವಿ ಜಂಟಿಯಾಗಿ ಮಾಡಿದ್ದ ಸರ್ವೆಯಲ್ಲಿಯೂ ಸಿದ್ದರಾಮಯ್ಯ ಅವರೇ ಮುಕ್ಯಮಂತ್ರಿ ಆಗಲಿ ಎಂದು ಹೆಚ್ಚಿನ ಜನ ಅಭಿಪ್ರಾಯ ಪಟ್ಟಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಲಿಂಗಾಯತರ ಹೆಚ್ಚಿನ ಓಟುಗಳು ಬಿಜೆಪಿಗೆ ಹೋಗುತ್ತದೆ ಎಂದು ಸಮೀಕ್ಷ ಹೇಳಿದ್ದು, ಶೇ 65% ಲೀಂಗಾಯತ ಮತ ಬಿಜೆಪಿಗೆ ಹಾಗೂ ಶೇ 25% ಮತಗಳು ಕಾಂಗ್ರೆಸ್ ಪಾಲಾಗುತ್ತದೆ ಎಂದೂ ಸಮೀಕ್ಷ ಹೇಳಿದೆ.












Click it and Unblock the Notifications