ಯೋಗ ಪ್ರದರ್ಶನ ಕಲೆಯಲ್ಲ,ಜೀವನ ದರ್ಶಕ: ಅನುಷ್ಕಾ ಶೆಟ್ಟಿ
ಮಂಗಳೂರಿನ ಬಾಲೆ ಅನುಷ್ಕಾ ಶೆಟ್ಟಿ ಎಂಬ ಬಂಟರ ಕುಲದ ಕನ್ಯೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದಾರೆ. ಸ್ವೀಟಿ ಶೆಟ್ಟಿಯಾಗಿದ್ದ ಬೆಳ್ಳಿಪಾಡಿ ಗುತ್ತು ಕುಟುಂಬದ ಪ್ರಫುಲ್ಲಾ ಹಾಗೂ ಎ.ಎನ್ ವಿಠಲ್ ಶೆಟ್ಟಿ ಪುತ್ರಿ ಬೆಳೆದಿದ್ದೆಲ್ಲ ನಮ್ಮ ಬೆಂಗಳೂರಿನಲ್ಲಿ. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬಿಸಿಎ ಪದವಿ ಪಡೆದುಕೊಂಡ ಅನುಷ್ಕಾ ಜೀವನದಲ್ಲಿ ಬದಲಾವಣೆ ತಂದಿದ್ದು ಯೋಗಾಭ್ಯಾಸ.
ಯೋಗ ಗುರು ಭರತ್ ಠಾಕೂರ್(ನಟಿ ಭೂಮಿಕಾ ಚಾವ್ಲಾ ಪತಿ) ಅವರಿಂದ ಯೋಗ ಪಾಠಗಳನ್ನು ಕಲಿತ ಅನುಷ್ಕಾ ಕೂಡಾ ಎಲ್ಲರಂತೆ ಜೂ.21ರ ವಿಶ್ವ ಯೋಗ ದಿನಾಚರಣೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಮ್ಮ ಜೀವನದಲ್ಲಿ ಯೋಗಾಭ್ಯಾಸ ತಂದ ಬದಲಾವಣೆಯನ್ನು ಸ್ಮರಿಸಿದ್ದಾರೆ. ಅದರೆ, ಯೋಗ ಪ್ರದರ್ಶನ ಕಲೆಯಲ್ಲ, ಅದನ್ನು ನಿತ್ಯ ಪೂಜೆ, ಆರಾಧನೆಯಂತೆ ಅಥವಾ ಶಿಸ್ತಿನಿಂದ ಆಚರಿಸುವುದು ಮುಖ್ಯ ಎಂದಿದ್ದಾರೆ. [ಯೋಗಾಭ್ಯಾಸ ಆರಂಭಿಸುವವರಿಗೆ ಉಪಯುಕ್ತ ಟಿಪ್ಸ್]

ಯೋಗ ಕಲಿತ ಮೇಲೆ ಯೋಗ ಟೀಚರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನುಷ್ಕಾ ಶಾಲೆಗೆ ಬಂದ ನಿರ್ದೇಶಕ ಪೂರಿ ಜಗನ್ನಾಥ್ ಇವರ ಹೈಟ್, ಪರ್ಸನಾಲಿಟಿ ಕಂಡು ಸಿನಿಮಾದಲ್ಲಿ ನಟಿಸಲು ಚಾನ್ಸ್ ನೀಡುತ್ತಾರೆ.
ಹೀಗೆ ಸ್ವೀಟಿ, ಅನುಷ್ಕಾ ಆಗಿ ಬದಲಾಗಿ ಸಿನಿಮಾ ರಂಗದಲ್ಲಿ ಹೆಸರು ಮಾಡುತ್ತಾರೆ. 'ಸೂಪರ್' ಸಿನಿಮಾದ ಪುಟ್ಟ ಪಾತ್ರದಿಂದ ಆರಂಭವಾದ ಸಿನಿಜರ್ನಿ ಈಗ ಅರುಂಧತಿ, ಬಾಹುಬಲಿ, ರುದ್ರಮಾದೇವಿಯಂಥ ಬೃಹತ್ ಚಿತ್ರಗಳ ತನಕ ಬಂದಿದೆ. ['ಓಂ' ಬದಲು 'ಅಲ್ಲಾಹ್' ಎಂದು ಯೋಗಭ್ಯಾಸ ಮಾಡಿ]
ದಿನನಿತ್ಯ ಯೋಗ: ಅದರೆ, ದಿನನಿತ್ಯ ಯೋಗ ಮಾಡುವುದನ್ನು ಮರೆಯುವುದಿಲ್ಲ. 30 ರಿಂದ 40 ನಿಮಿಷ ದೈಹಿಕ ಕಸರತ್ತಿನ ನಂತರ ಸೂರ್ಯ ನಮಸ್ಕಾರ ಸೇರಿದಂತೆ ಯೋಗಾಭ್ಯಾಸ ಸಾಂಗವಾಗಿ ಮಾಡುತ್ತಾರಂತೆ. ಆಹಾರ ಕ್ರಮವೂ ಮುಖ್ಯವಾಗಿದೆ. ನಾನು ಶಾಖಾಹಾರವನ್ನು ಇಷ್ಟಪಡುತ್ತೇನೆ. ಬೆಂಗಳೂರಿಗೆ ಬಂದರೆ ನಮ್ಮ ರೆಸ್ಟೋರೆಂಟಿಗೆ ಓಡಿ ಹೋಗಿ ನನ್ನಿಷ್ಟದ ತಿಂಡಿ ತಿನ್ನುತ್ತೇನೆ ಎನ್ನುತ್ತಾರೆ ಅನುಷ್ಕಾ.
ದೈಹಿಕ ಸೌಂದರ್ಯದ ಜೊತೆ ಮಾನಸಿಕ ನೆಮ್ಮದಿ ಪಡೆಯಲು ಯೋಗವೇ ಸೂಕ್ತ ಮಾರ್ಗ. ಏಕಾಂಗಿಯಾಗಿರಲು ಇಷ್ಟಪಡುವ ನನಗೆ ಸಿನಿಮಾದಂಥ ಮನರಂಜನಾ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಯೋಗ ಸಹಕಾರಿಯಾಗಿದೆ.

ಯೋಗ ಟೀಚರ್ ಆಗಿದ್ದು : ಇದು ನನ್ನ ಜೀವನದ ಅತ್ಯಂತ ಸಂತಸ ಹಾಗೂ ದೊಡ್ಡ ವಿಷಯವಾಗಿದೆ. ನಮ್ಮ ಫ್ಯಾಮಿಲಿಯಲ್ಲಿ ಡಾಕ್ಟರ್ಸ್, ಇಂಜಿನಿಯರ್ಸ್, ಉದ್ಯಮಿಗಳೇ ಇದ್ದಾರೆ.
ಆದರೆ, ನಾನು ಯೋಗ ಟೀಚರ್ ಆಗುತ್ತೇನೆ ಎಂದಾಗ ನನ್ನ ಪೋಷಕರು ನೆರವಾದರು. ನನ್ನ ಜೀವನದ ಪಥವನ್ನೇ ಯೋಗ ಬದಲಾಯಿಸಿತು. ಜೀವನದ ಮೌಲ್ಯ, ಜವಾಬ್ದಾರಿ, ವ್ಯಕ್ತಿತ್ವ ರೂಪಿಸುವಲ್ಲಿ ಯೋಗ ನನಗೆ ನೆರವಾಗಿದೆ ಎಂದು ಅನುಷ್ಕಾ ಹೇಳಿದ್ದಾರೆ.
ಇಷ್ಟಾದರೂ ಇತರೆ ಸ್ಟಾರ್ ಗಳ ರೀತಿಯಲ್ಲಿ ಯೋಗವನ್ನು ವಾಣಿಜ್ಯ ಉದ್ದೇಶಕ್ಕೆ ಅನುಷ್ಕಾ ಬಳಸಿಕೊಂಡಿಲ್ಲ. ಕೆಲ ಸಿನಿಮಾಗಳಲ್ಲಿ ಅಗತ್ಯವಿದ್ದಾಗ ಮಾತ್ರ ಯೋಗಾಭ್ಯಾಸದ ಝಲಕ್ ಬಳಸಿಕೊಳ್ಳಲಾಗಿದೆ. ಯೋಗ ನಿರಂತರ ಕಲಿಕೆ, ಅಭ್ಯಾಸದ ಜೀವನ ಕ್ರಮ, ಒಂದು ದಿನದ ಆಚರಣೆ ನಿರಂತರ ಸಾಧನೆಗೆ ನೆರವಾಗಲಾರದು ಎಂದು ಅನುಷ್ಕಾ ನಂಬಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications