ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಫೋನ್‌ನ ಬಳಕೆದಾರರಿಗಾಗಿ 'ಸ್ಮಾರ್ಟ್' ಯೋಗ!

By Prasad
|
Google Oneindia Kannada News

ಎಲ್ಲ ಸರಿಯಾಗಿರುತ್ತದೆ, ಆದರೆ ಇದ್ದಕ್ಕಿದ್ದಂತೆ ಕತ್ತಿನಲ್ಲಿ, ಭುಜಗಳಲ್ಲಿ ಅಥವಾ ತಲೆಯ ಭಾಗದಲ್ಲಿ ನೋವಾಗಲು ಪ್ರಾರಂಭಿಸುತ್ತದೆ. ಮಲಗುವಾಗ ಏನೋ ಹೆಚ್ಚೂಕಮ್ಮಿಯಾಗಿರಬಹುದು ಅಂತ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಹಿಡಿಯಲು ಆರಂಭಿಸುತ್ತೇವೆ. ಆದರೆ, ನೋವು ಶಮನವಾಗುವುದೇ ಇಲ್ಲ!

ಇದು ಮೊಬೈಲ್ ಜಮಾನಾ ಸಾರ್, ಮೊಬೈಲ್ ಜಮಾನಾ! ಮೊಬೈಲ್ ಬಳಸದವನು ಈ ಆಧುನಿಕ ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಶಿಕ್ಷಣದಿಂದ ಆರೋಗ್ಯದವರೆಗೆ, ವೈಯಕ್ತಿಕ ಸಂಬಂಧಗಳಿಂದ ವ್ಯಾಪಾರದವರೆಗೆ, ಮೊಬೈಲ್ ಫೋನ್‌ಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ತಲೆನೋವಿಗೆ, ಕತ್ತು, ಭುಜಗಳ ನೋವಿಗೆ ಮೊಬೈಲ್‌ನ ಅತಿಯಾದ ಬಳಕೆಯೂ ಕಾರಣವಿರಬಹುದು, ಎಚ್ಚರ.

ಇವುಗಳ ವ್ಯಾಪಕವಾದ ಬಳಕೆಯಿಂದಾಗಿ ಅಥವಾ ದುರ್ಬಳಕೆಯಿಂದಾಗಿ ನಮ್ಮ ಜೀವನಶೈಲಿಯಲ್ಲಿ ಕೆಲವು ಸಮಸ್ಯೆಗಳನ್ನೂ ತಂದಿವೆ ಎಂದರೆ ನೀವು ನಂಬಲೇಬೇಕು. ಉದಾಹರಣೆಗೆ, ನೀವು ಈ ಲೇಖನವನ್ನು ನಿಮ್ಮ ಮೊಬೈಲ್‌ನಿಂದ ಓದುತ್ತಿದ್ದರೆ ನಿಮ್ಮ ತೋಳುಗಳು ನಿಮ್ಮ ಬದಿಯಲ್ಲಿರುತ್ತದೆ, ನಿಮ್ಮ ಬೆನ್ನು ಬಗ್ಗಿರುತ್ತದೆ, ಕತ್ತು ಮುಂದಕ್ಕೆ ಬಗ್ಗಿರುತ್ತದೆ. ಅಲ್ಲವೆ? [ಸೂರ್ಯ ನಮಸ್ಕಾರ ಮಾಡುವ ಕ್ರಮಬದ್ಧ ವಿಧಾನ]

Neck pain, spine damage : Smart yoga for smartphone users

ಈ ಭಂಗಿಯಿಂದ ನಿಮಗೆ ನೋವಾಗುತ್ತಿರಬಹುದು ಮತ್ತು ಇದರ ಬಗ್ಗೆ ನಿಮಗೆ ಅರಿವಿರಬಹುದು ಅಥವಾ ಅರಿವಿಲ್ಲದೆಯೂ ಇರಬಹುದು. ಚಿಕಿತ್ಸಕರು ಟೆಕ್ಸ್ಟ್ ನೆಕ್ ಎಂದು ಈ ಸ್ಥಿತಿಯನ್ನು ಕರೆಯುತ್ತಾರೆ ಮತ್ತು ನಿಮ್ಮಲ್ಲಿ ಈ ಸ್ಥಿತಿಯು ಆರಂಭವಾಗುತ್ತಿರಬಹುದು.

ಇದರಿಂದಾಗಿ ಕತ್ತಿನಲ್ಲಿ ಮತ್ತು ಬೆನ್ನಿನಲ್ಲಿ ನೋವುಂಟಾಗುತ್ತದೆ ಮತ್ತು ಅನಾರೋಗ್ಯಕರವಾಗಿ ಬಗ್ಗಿರುವ ಭಂಗಿಯಲ್ಲಿ ಬಹಳ ಹೊತ್ತು ಇರುವುದರಿಂದ ಈ ಸ್ಥಿತಿ ಉಂಟಾಗುತ್ತದೆ. ವಿಪರೀತ ಮೊಬೈಲ್ ಫೋನ್‌ಗಳ ಬಳಕೆಯಿಂದ, ಟ್ಯಾಬ್ಲೆಟ್‌ಗಳ, ಈ -ಬುಕ್ ರೀಡರ್‌ಗಳ ಬಳಕೆಯಿಂದ ಈ ಸ್ಥಿತಿ ಉಂಟಾಗುತ್ತದೆ. [ಯೋಗಾಸನ ಮಾಡುವವರು ಸೇವಿಸಬೇಕಾದ ಆಹಾರಗಳು]

Neck pain, spine damage : Smart yoga for smartphone users

ಮಧ್ಯ ಸ್ಥಿತಿಯಲ್ಲಿದ್ದಾಗ, ಕಿವಿಗಳು ಭುಜಗಳ ಮೇಲಿದ್ದಾಗ ಸಾಮಾನ್ಯವಾಗಿ ಮಾನವರ ತಲೆಯು 4.5 ಕೆಜಿಗಳಷ್ಟು ತೂಕವನ್ನು ಹೊಂದಿರುತ್ತದೆ. ನಿಮ್ಮ ತಲೆಯನ್ನು ನೀವು ಒಂದು ಇಂಚಿನಷ್ಟು ಮುಂದೆ ಬಗ್ಗಿಸಿದರೂ ನಿಮ್ಮ ಬೆನ್ನುಮೂಳೆಯ ಮೇಲಿನ ಒತ್ತಡ ದ್ವಿಗುಣವಾಗುತ್ತದೆ. ಆದ್ದರಿಂದ, ನಿಮ್ಮ ತೊಡೆಯ ಮೇಲಿಟ್ಟುಕೊಂಡು ನಿಮ್ಮ ಸ್ಮಾರ್ಟ್‌ಫೋನನ್ನು ನೋಡುತ್ತಿದ್ದರೆ, ನಿಮ್ಮ ಕತ್ತು 10 ಅಥವಾ 14 ಕೆಜಿ ತೂಕವನ್ನು ಎತ್ತಿಕೊಂಡಿರುವುದಕ್ಕೆ ಸರಿಸಮಾನವಾಗುತ್ತದೆ. ಈ ಎಲ್ಲಾ ಹೆಚ್ಚಿನ ಒತ್ತಡದಿಂದ ನಿಮ್ಮ ಬೆನ್ನುಮೂಳೆಯ ಮೇಲೆ ಒತ್ತಡವು ಹೆಚ್ಚಿ, ಕ್ರಮವಾದ ಜೋಡಣೆಯಿಂದ ಹೊರಬಂದಂತಾಗುತ್ತದೆ.

ಸ್ವಲ್ಪ ತಾಳಿ! ಈ ಯಾವ ಸಾಧನಗಳನ್ನೂ ಬಳಸಬಾರದೆಂದು ನಾವು ಈ ಲೇಖನದಲ್ಲಿ ಪ್ರತಿಪಾದಿಸುತ್ತಿಲ್ಲ. ಈ ಸಣ್ಣ ಸಾಧನಗಳಿಂದಾಗಿ ಎಲ್ಲರ ಜೀವನವೂ ಸುಗಮವಾಗಿದೆ. ಆದ್ದರಿಂದ, ಕೆಲವು ಉಪಯುಕ್ತವಾದ ಯೋಗ ಸೂಚಿಗಳನ್ನು ಪಾಲಿಸಿ, ಅವುಗಳ ಅಡ್ಡಪರಿಣಾಮದಿಂದ ದೂರ ಉಳಿಯುವುದೇ ಲೇಸು.

ಮುಂದಿನ ಲೇಖನದಲ್ಲಿ : ಪರಿಣಾಮಕಾರಕವಾದ ಯೋಗದ ಸೂಚಿಗಳು

English summary
Is smartphone causing neck, shoulder, spine or head pain? Smartphone is integral part of our life and using it wrongly can cause many problems. So, don't worry. There are many asanas to overcome problems caused by smartphone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X