• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಂಗಾಳಿಗೆ ಮೈಯೊಡ್ಡಿದ ಗಗನಸಖಿ

By Staff
|

ಈ ಶುಕ್ರವಾರ ಎಂದಿನಂತಿಲ್ಲ. ಹಿತವಾದ ನೋವೆಂದರೆ ಇದೇನಾ? ಹೆಸರಿಲ್ಲದ ಸಂಬಂಧವೆಂದರೆ ಇದೇನಾ? ನೀವ್ಯಾರೋ? ಅವರ್ಯಾರೋ?, ಅವರ ಮಾತುಗಳನ್ನು ನೀವು ಕೇಳಿಸಿಕೊಂಡಿರಿ.ನಿಮ್ಮ ಮಾತುಗಳಿಗಾಗಿ ಅವರು ಮೈಯೆಲ್ಲ ಕಿವಿಯಾಗಿಸಿಕೊಂಡರು. ಭಾವನೆಗಳು ಜೀವ ಪಡೆದು ಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಿದ ಘಳಿಗೆಗೆ ನಾವೆಲ್ಲ ಸಾಕ್ಷಿಯಾದೆವು. ಹೇಳಲಾಗದ ಖುಷಿ,ಬಣ್ಣಿಸಲಾಗದ ಬೇಸರ, ಅಕ್ಷರಗಳಲ್ಲಿ ಹಿಡಿದಿಡಲಾಗದ ಪ್ರೀತಿ ಇನ್ನು ಎಷ್ಟಿದೆಯೋ ? ಎಲ್ಲೆಲ್ಲಿದೆಯೋ? ಗಗನಸಖಿ ಸಾಗಿ ಬಂದ ಪಯಣ ಚಿಕ್ಕದು. ಆದರೆ ಮಿಡಿಯುವ ಹೃದಯಕ್ಕೆ ಆಗಿರುವ ಆಯಾಸ ಮಾತ್ರ ಅಳೆಯಲಾರದ್ದು. ಯಾಕೋ?

ರಾಕ್ಷಸ ಯಂತ್ರಗಳ ಅಬ್ಬರದ ಸದ್ದಿನ ಮಧ್ಯೆಯೂ ಹೃದಯದ ಬಡಿತ ಕೇಳುವ, ಆ ಲಯವನ್ನು ಆಸ್ವಾದಿಸುವ ಮನಸ್ಥಿತಿ ಕನ್ನಡ ವಾಚಕವರ್ಗಕ್ಕೆ ಇನ್ನೂ ಇದೆ.ಆ ಮಿಡಿತ ಸದಾ ಇರಲಿ. ಇರುತ್ತದೆ. ತನ್ನನ್ನು ತಾನೆ ಬಸಿದುಕೊಂಡ ಒಂದು ಆದ್ರ ಹೃದಯ, ಶುಕ್ರವಾರದ ಶುಭವೇಳೆ ತಂಗಾಳಿಯನ್ನು ಅರಸಿ ಹೊರಟಿದೆ. -ಸಂಪಾದಕ

____________________________________________________________________

ಈ ಶುಕ್ರವಾರ ಎಂದಿನಂತಿಲ್ಲ..ಅಯ್ಯಯ್ಯೋ !!

ವ್ಯಕ್ತಿ ವ್ಯಕ್ತಿತ್ವವಾಗಿ ರೂಪುಗೊಳ್ಳಲು ಅತ್ಯಂತ ಅವಶ್ಯಕವಾಗಿ ಬೇಕಾದ್ದು 'ಫೀಡ್ ಬ್ಯಾಕ್". ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಫೀಡ್ ಬ್ಯಾಕ್ ಅನ್ನು ಹತ್ತಿರಕ್ಕೆ ಸುಳಿಯಗೊಡದವನಿಗೆ ಹಂಚಿಕೆಯ ಸುಖ ಗೊತ್ತಿಲ್ಲ. ದುಖಃದ ಇಳಿಕೆ ತಿಳಿದಿಲ್ಲ! ಫೀಡ್‍ಬ್ಯಾಕ್ ಅನ್ನು ದೂರವಿಟ್ಟಷ್ಟೂ ವಸ್ತು ಸ್ಥಿತಿ ದೂರವಾಗುತ್ತೆ. ಕೊರತೆಗಳನ್ನು ನೋಡಲು ಕುರುಡು ಆವರಿಸಿಕೊಳ್ಳುತ್ತೆ. ಭ್ರಮೆ ಗಟ್ಟಿಗೊಳ್ಳುತ್ತೆ. ಬೆಳವಣಿಗೆ ಸ್ಥಗಿತವಾಗುತ್ತೆ. ಬದುಕು ನಿಂತ ನೀರಾಗುತ್ತೆ.

  • ಗಗನಸಖಿ

gagana@oneindia.in

ಈ ಶುಕ್ರವಾರ ಎಂದಿನಂತಿಲ್ಲ..ಅಯ್ಯಯ್ಯೋ !!ಏಳು ಹೆಜ್ಜೆ ಜೊತೆಯಲ್ಲಿ ತುಳಿದರೆ ಏಳು ಜನ್ಮದ ಸಂಬಂಧವಾಗುತ್ತೆ ಅಂತಾರೆ. ನಿಮ್ಮ ಐವತ್ತು ಹೆಜ್ಜೆಗಳಲ್ಲಿ ನನ್ನನ್ನು ಹೆಜ್ಜೆಯಾಗಿಸಿಕೊಂಡಿದ್ದೀರ ಅಂದಮೇಲೆ ನಮ್ಮಿಬ್ಬರ ಬಂಧ ಜನ್ಮಜನ್ಮಾಂತರಗಳನ್ನು ಮೀರಿದ್ದುತಾನೆ? ಆ ದಿನ ನಿಮ್ಮೊಡನೆ ಮಾತು ಶುರುಮಾಡಿದಾಗ ಮನಸ್ಸಿನ ಜಾಡಿಯಲ್ಲಿ ಭಾವನೆಗಳ ಕಡಗೋಲು ಕೈಯಾಡಿಸುತ್ತಿತ್ತು. ಇನ್ನೇನು ತಲೆ ಸಿಡಿದೇ ಹೊಗಲಿತ್ತೇನೋ ಅನ್ನುವಷ್ಟರಲ್ಲಿ ನನ್ನ ಹಣೆ ನೇವರಿಸಿ 'ಅಯ್ಯಯ್ಯೋ" ಅಂತ ಸಾಂತ್ವನವಿತ್ತಿರಿ.

ಹೆಜ್ಜೆ ಮೇಲೆ ಹೆಜ್ಜೆ ಹಾಕಿಸುತ್ತಾ ನನ್ನನ್ನು paradox ನಿಂದ ಹೊರತಂದು prejudice ಇಲ್ಲದೆ ಅರ್ಥ ಮಾಡಿಕೊಂಡಿರಿ. ಮನಸ್ಸಿನ ಅಣು ಅಣುವನ್ನೂ ನಿಮ್ಮ ಬಳಿ ಬಿಡಿಸಿಕೊಳ್ಳುತ್ತಾ ಹೋದಂತೆ ನನ್ನೊಳಗಿನ ಪರಮಾಣುವಿನ ಅನುಭವ ಮಾಡಿಸಿಕೊಟ್ಟಿರಿ. ನಾವು ಹೆಂಗಸರು ಮಾತ್ರ ಹೀಗೆ ಎಂದು ಕಣ್ಣು ಪಟ್ಟಿ ಕಟ್ಟಿಕೊಂಡಿದ್ದ ನನ್ನನ್ನು element ಮಾತ್ರ ಎನ್ನುವಷ್ಟು ನಿಜ ಮಾಡಿಬಿಟ್ಟಿರಿ. ಜೀವನ ಒಂದು ಟೀಂವರ್ಕ್ ಅಂತ ಒಪ್ಪಿಯೂ ನನ್ನ identityಏನು ಎನ್ನುತ್ತಿದ್ದವಳಿಗೆ 'ಅಯ್ಯಯ್ಯೋ" opinionate ಆಗಬೇಡ ಅಂತ ಎಚ್ಚರಿಸಿದಿರಿ.

ನೀವು ಹೊರೆಗಲ್ಲಿನ ಮೇಲೆ. ನಾನು ಅಲ್ಲೇ ಪಕ್ಕದಲ್ಲಿ. . . ನಮ್ಮಿಬರ ಸಂಭಾಷಣೆ Virginityಯಿಂದ Menopauceವರೆಗೂ. . .ನಾನು ಹೇಳುತ್ತಲೇ ಇದ್ದೆ. ನೀವು ಅದನ್ನು ಕೇಳುತ್ತ ಕೇಳುತ್ತಲೇ, ಮಾನವೀಯ ನೆಲೆಯಲ್ಲಿ ನನ್ನನ್ನು ನಾನೇ ಹೇಗೆ activate ಮಾಡಿಕೊಳ್ಳುವುದು ಅಂತ ಕಲಿಸಿ ಬಿಟ್ಟಿರಿ. ನಾನು, ಹೆಂಗಸರು ಹೀಗೇ ಇರಬೇಕು ಅಂದಾಗಲೆಲ್ಲ 'ಅಯ್ಯಯ್ಯೋ" ಅಂತ ಮೆಚ್ಚುಗೆಯ ಮಳೆಯಲ್ಲಿ ತೋಯಿಸಿದಿರಿ. ನಾವು ಹೀಗ್ಯಾಕಿರಬೇಕು ಅಂತ ನಾನು ಕೇಳಿದಾಗಲೆಲ್ಲ 'ಅಯ್ಯಯ್ಯೋ" ಅಂತ ಕತ್ತಿ ಝಳಪಿಸಿದಿರಿ!

ನಾನು ಸಮಾಜೋದ್ಧಾರದ ಮಾತನಾಡಿದಾಗಲೆಲ್ಲ ಎದೆಹಾಲುಣಿಸಿ ಅಕ್ಕರೆಯ ಧಾರೆಯೆರೆದಿರಿ. ನನ್ನ ತಪ್ಪನ್ನು ನಾನೇ ಎತ್ತಾಡಿದಾಗ 'ಅಯ್ಯಯ್ಯೋ" ಅನ್ನುತ್ತಲೂ ದೂರತಳ್ಳದೆ ತಾಳಿಕೊಂಡಿರಿ. ಒಮ್ಮೊಮ್ಮೆ ನನಗೆ ನೀವೆಲ್ಲಾ charecterಗಿಂತ imageಗೆ ಜೋತು ಬೀಳುವ hypocrites ಅನ್ನಿಸಿದ್ದು ನಿಜ. ಆದರೆ ನೆಮ್ಮದಿಗೆ ಬೇಕಾಗಿರುವುದು ಪರಿತ್ಯಾಗವಲ್ಲ ಬದಲಾವಣೆ ಅಂತ ನನಗೆ ನಾನೇ ಹೇಳಿಕೊಂಡು 'ಅಯ್ಯಯ್ಯೋ" ಅಂದುಕೊಂಡಿದ್ದೂ ಇದೆ. ಎಳೆಮಗುವಿನಂತೆ ನಿಮ್ಮ ಕಿರುಬೆರಳ್ಹಿಡಿದು ನಾನು ಹೇಳಿದ ಕಾಗಕ್ಕ ಗೂಬಕ್ಕನ ಕತೆಗೂ ನನ್ನೊಡನೆ ಮಿಡಿದ ನೀವು ನನ್ನಲ್ಲಿ compassionate ಆಗಿರುವುದರ ಬೀಜ ಬಿತ್ತಿದಿರಿ. ನನ್ನೊಳಗಿನ ಆಕಾಶವನ್ನು ಗುರುತಿಸಿ ಗಗನಸಖಿಯಾಗಿಸಿಬಿಟ್ಟಿರಿ. ಅಯ್ಯಯ್ಯೋ!

ವ್ಯಕ್ತಿ ವ್ಯಕ್ತಿತ್ವವಾಗಿ ರೂಪುಗೊಳ್ಳಲು ಅತ್ಯಂತ ಅವಶ್ಯಕವಾಗಿ ಬೇಕಾದ್ದು 'ಫೀಡ್‍ಬ್ಯಾಕ್". ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಫೀಡ್‍ಬ್ಯಾಕ್ ಅನ್ನು ಹತ್ತಿರಕ್ಕೆ ಸುಳಿಯಗೊಡದವನಿಗೆ ಹಂಚಿಕೆಯ ಸುಖ ಗೊತ್ತಿಲ್ಲ. ದುಖಃದ ಇಳಿಕೆ ತಿಳಿದಿಲ್ಲ! ಫೀಡ್‍ಬ್ಯಾಕ್ ಅನ್ನು ದೂರವಿಟ್ಟಷ್ಟೂ ವಸ್ತು ಸ್ಥಿತಿ ದೂರವಾಗುತ್ತೆ. ಕೊರತೆಗಳನ್ನು ನೋಡಲು ಕುರುಡು ಆವರಿಸಿಕೊಳ್ಳುತ್ತೆ. ಭ್ರಮೆ ಗಟ್ಟಿಗೊಳ್ಳುತ್ತೆ. ಬೆಳವಣಿಗೆ ಸ್ಥಗಿತವಾಗುತ್ತೆ. ಬದುಕು ನಿಂತ ನೀರಾಗುತ್ತೆ. 'ಅಯ್ಯಯ್ಯೋ" ಅನ್ನುವಂತಾಗುತ್ತದೆ ಎನ್ನುವ ಪಾಠ ಹೇಳಿದ್ದೀರಿ ನೀವು.

ನಿಮ್ಮಿಂದ ಫೀಡ್‍ಬ್ಯಾಕ್‍ಅನ್ನು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ ಸಾಗಿ ಬಂದ ಈ ಐವತ್ತು ಹೆಜ್ಜೆಗಳ ದಾರಿಯಲ್ಲಿ ನಲಿವಿದೆ, ನೋವಿದೆ, ಸೋಲಿದೆ, ಗೆಲುವಿದೆ, ಕತ್ತಲಿಗೊಂದು ಬೆಳಕಿನ ಕಿಂಡಿಯಿದೆ, ಪ್ರಶ್ನೆಯಿದೆ, ಉತ್ತರವಿದೆ, ನಾನೇ ಹಾಕಿಕೊಂಡ 60/40 ರೂಲ್ ಇದೆ. ಒಟ್ಟಿನಲ್ಲಿ 'ಅಯ್ಯಯ್ಯೋ" ಅನ್ನುವಂತೆ ನೀವು ರೂಪಿಸಿಕೊಟ್ಟ ನನ್ನ ಬದುಕಿದೆ! ನಾನು ಶತಾಯುಷಿಯೇನೋ ಅನ್ನುವಂತೆ ಮುಂದೂಡಿಕೊಂಡು ಬಂದಿರುವ ಕೆಲಸಗಳು ಚಿರಾಯುವಾದರೂ ಮಾಡಿಮುಗಿಸಲಾರದಷ್ಟಿದೆ ಅಂತ ನೀವು ಕೊಟ್ಟ ಅರಿವಿದೆ.

ಇಪ್ಪತ್ತ್ನಾಲ್ಕು ಗಂಟೆಯೂ ಒಟ್ಟಿಗೆ ಇರುವ ಈ ದೇಹ ಮತ್ತು ಮನಸ್ಸುಗಳ ಜೊತೆ ನಿಮ್ಮ ನೆನಪು ಕಾಡು ಹಾದಿಯಲ್ಲಿ ಕೈಮರವಾಗಿ, ಬೀಡು ಬಿಸಿಲಿನಲ್ಲಿ ಹೊಂಗೆ ನೆರಳಾಗಿ, ಮರುಭೂಮಿಯಲ್ಲಿ ನೀರನೆಲೆಯಾಗಿ, ನಡು ನೀರಿನಲ್ಲಿ ನಾವೆಯಾಗಿ ಇರುವಾಗ ಹೋದೋಟದಲ್ಲಿನ ಚಿಟ್ಟೆ ನಾನಾಗಿ ಮತ್ತೆ ಮತ್ತೆ ಮಕರಂದದ ಜೋಳಿಗೆಯನ್ನು ತುಂಬಿಸಿಕೊಂಡು ಮತ್ತೆಲ್ಲಿಗೂ ಹಾರಲಾಗದೆ ನಿಮ್ಮೆದುರೇ ಬಂದು ನಿಲ್ಲುತ್ತೇನೆ. ನಿಮ್ಮ ಸಾಮಿಪ್ಯದಿಂದ ಬಾಳನ್ನು ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆಗಳ ಸಮಾಸಮ ಸಮಾಗಮ ಮಾಡಿಕೊಂಡಿದ್ದೇನೆ. ಸಮಯದ ಯಾವುದೋ ತಿರುವಿನಲ್ಲಿ, ಬೆಳ್ಳಗಿನ ಬೆಳಗಿನಲ್ಲಿ, ಕೆಂಪಿನ ಸಂಜೆಯಲ್ಲಿ ಮತ್ತೆ ನನಗೆ ನೀವು ಸಿಗಲಿದ್ದೀರ ಅನ್ನುವ ಭರವಸೆಯಲ್ಲಿ 'ಅಯ್ಯಯ್ಯೋ" ಎನ್ನುತ್ತಲೇ ನಿಡಿದಾದ ಉಸಿರಿಟ್ಟುಕೊಂಡು ವಿರಮಿಸುತ್ತೇನೆ.

ಅಂದಹಾಗೆ, “ಇದೇನೇ ಸಖಿ ಹೀಗ್ಯಾಕೆ 'ಅಯ್ಯಯ್ಯೋ" ಅಂತ ನಮ್ಮ ಪ್ರಾಣ ಹಿಂಡ್ತಿದ್ದೀ" ಅಂತ ಕೇಳ್ತಿದ್ದೀರೇನು? ಹೂಂ, ತವರಿನ ಭಾಷೆಯಲ್ಲಿ 'ಅಯ್ಯಯ್ಯೋ" ಒಂದು ಉದ್ಗಾರ. ಆದರೆ, ಚೀನಿ ಭಾಷೆಯಲ್ಲಿ, 'ಅಯ್ಯಯ್ಯೋ" ಅಂದರೆ 'ಅತಿ ಅದ್ಭುತ ಅತಿ ಸುಂದರ" ಅನ್ನುವ ಅರ್ಥ ನಿಮಗೆ ಗೊತ್ತಿಲ್ಲವೇನು?!ಹೀಗೇ ನಗುತ್ತಿರಿ. ನಿಮ್ಮ ಕೆನ್ನೆಯ ಮೇಲೆ ಆ ನಗುವಿನ ಗುಳಿ ಮರೆಯಾಗದಿರಲಿ ಎಂದು ಆಶಿಸುವ ನನಗೆ ಮತ್ತೆ ಮತ್ತೆ ನಿಮ್ಮ ಭೇಟಿಯ ಅವಕಾಶ ಕೊಡಿ. ನಾನು ಒಲ್ಲೆ ಎನ್ನುವ ಉದ್ಧಟತನ ತೋರದೆ ಬರುತ್ತೇನೆ. ನನ್ನದೆಲ್ಲವನ್ನೂ ನಿಮ್ಮೊಡನೆ ಅಕರಾಸ್ತೆಯಿಂದ ಹಂಚಿಕೊಳ್ಳುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X