ಇವರಿಬ್ಬರ ಬಗ್ಗೆ ನಿಮಗೆ ಹಾಗೇ ಸುಮ್ಮನೇ ಗೊತ್ತಿರಲಿ ಅಂತ!


ಕ್ಷಮಿಸಿ..ಕ್ಷಮಿಸಿ..ಕ್ಷಮಿಸೀ...ಆ exotic ಪರ್ಸನ್‌ ಯಾರೂಂತ ನೀವೇ ಹೇಳಿ..!

ಕ್ಷಮಿಸಿ. . . .ಕ್ಷಮಿಸಿ. . . ಕ್ಷಮಿಸಿ. . ! ಮೂರು ಬಾರಿ ಯಾಕೆ ಕ್ಷಮಿಸಬೇಕು ಅಂತ ಅಂದ್ಕೋತಿದ್ದೀರಾ?! ಅಲ್ಲಾರೀ, ಆ intensityಯಲ್ಲಿ ಕ್ಷಮಿಸಿ ಅಂದೆ. ಯಾಕೆ ಗೊತ್ತಾ? ದೊಡ್ಡದಾಗಿ ನಿಮಗೆಲ್ಲಾ ಯಾರನ್ನೋ ಪರಿಚಯ ಮಾಡಿಕೊಡುತ್ತೇನೆ ಅಂತ ಅಂದಿದ್ದ್ನಲ್ಲಾ, ಈಗ ಅವರು ಯಾರು ಅಂತಾನೇ ಗೊತ್ತಾಗ್ತಿಲ್ಲಾ. . . . ನಿಮಗೆ ಯಾರನ್ನು ಪರಿಚಯಿಸಲಿ?! ತುಂಬಾ confusion. ಅದಕ್ಕೆ ಅವರಿಬ್ಬರ ಪ್ರವರಾನೂ ಹೇಳಿಬಿಡ್ತೇನೆ ನೀವೇ decide ಮಾಡಿ ಅವರು ಯಾರು ಅಂತ!

Exactly Exotic!ಅವಳು : ನ್ಯೂಕ್ಲಿಯರ್‌ ಕುಟುಂಬದ ಒಡತಿ. ಎಲ್ಲದರಲ್ಲೂ ತಕ್ಕಂತ ಗಂಡ ಮಕ್ಕಳು. ಬರೀ ವಿದ್ಯಾವಂತೆ ಅಲ್ಲ ತುಂಬಾ smart ಕೂಡ. ತಾಯಿಮನೆಯನ್ನು ಆರಕ್ಕೇರಿಸಿಲ್ಲ; ಅತ್ತೆ ಮನೆಯನ್ನು ಮೂರಕ್ಕಿಳಿಸಿಲ್ಲ! ಯಾವತ್ತೂ ಸೀರೆ, ಒಡವೆ, ಸಿನೆಮಾಕ್ಕೆ demand ಮಾಡಿದವಳೇಅಲ್ಲ. ಮನೆಯವರಿಗೆ ಹೋಟೆಲ್‌ನ temptation ಇರದಹಾಗೆ ಅಡುಗೆ ಮಾಡ್ತಾಳೆ. ಮನೆಯಲ್ಲಿ ಯಾವ ಸಾಮಾನೂ ಬೇಕೆಂದಾಗ ದೊರಕಿಸುತ್ತಾಳೆ.

ಸೋಮವಾರ ನೋಡಿದ್ರೆ ತಲೆಗ್ಪೂರ್ತಿ ಎಣ್ಣೆ ಮೆತ್ತ್ಕೂಂಡು ಮನೆ ಸುತ್ತಾ ಇಲ್ಲಣ ತೆಗೀತಿರ್ತಾಳೆ. ಆಗಲೇ ಶುಕ್ರವಾರ ಸಂಜೆ ಆಕಾಶನೀಲಿ ಬಣ್ಣದ ಸೀರೆ ಉಟ್ಕೊಂಡು ಸಂಸಾರದ ಜೊತೆ ಪಾರ್ಟೀಗ್ಹೊಗಕ್ಕೆ ತಯಾರಾಗ್ನಿಂತಿರ್ತಾಳೆ. ಮಧ್ಯೆ ಮಧ್ಯೆ ಸಿಗೋ ಸಮಯದಲ್ಲಿ ತನ್ನ ಆಸಕ್ತಿ ಹವ್ಯಾಸಾನೂ ಕೈಬಿಡದೆ ಜತನದಿಂದ ಕಾಪಾಡಿಕೊಂಡಿದ್ದಾಳೆ. ಆಗೊಮ್ಮೆ ಈಗೊಮ್ಮೆ ಬ್ಯೂಟಿ ಪಾರ್ಲರ್ನಲ್ಲೂ ಸಿಕ್ಕ್ತಿರ್ತಾಳೆ. ಆ ಮನೆಯ ಹೆಂಡತಿ, ತಾಯಿಯಂತೆ, ಟೀಚರ್‌, ನರ್ಸ್‌, ಅಕೌಂಟೆಂಟ್‌, ಅಟೆಂಡರ್‌ ಹೀಗೇ ಇನ್ನೂ ಏನೇನೋ ಎಲ್ಲವೂ ಅವಳೇ.

ಇಷ್ಟಾದರೂ ಒಂದು ದಿನಾನೂ ಅವಳ ಮೂಗಿನ ತುದಿ ಕೆಂಪಗಾಗಿದ್ದೇ ನಾನು ನೋಡಿಲ್ಲ. ಅವಳ ಕಣ್ಣು ಬತ್ತಿಹೋಗಿದ್ದನ್ನು ನಾನು ಕಂಡಿಲ್ಲ. ಅವಳ ಗೊಣಗಾಟವನ್ನು ನಾನು ಕೇಳಿಲ್ಲ. ಸಂತೋಷ ಅವಳ ಮುಖದ ಮೇಲಿರೋದಕ್ಕೆ ಇರೋದಾ?!

ಅಬ್ಬಬ್ಬ, ನನಗಂತೂ ತಡೆಯಕ್ಕೇ ಆಗ್ಲಿಲ್ಲ. ಸೀದಾ ಹೋಗಿ ಕಾಲಿಂಗ್‌ ಬೆಲ್‌ ಒತ್ತಿ ಕೇಳಿಯೇ ಬಿಟ್ಟೆ ‘ಏನಮ್ಮಾ ಮಾರಾಯ್ತಿ ನೀನು ಹೀಗಿರಲು ಹೇಗೇ ಸಾಧ್ಯ?’ ಅಂತ. ನನ್ನ ಕೈಗೆ ಒಂದ್ಲೋಟ ನೀರು ಕೊಡುತ್ತಿದ್ದ ಅವಳ ಮುಖ ನೋಡಿದಾಗ . . . .. ನನಗೇನು ಅನುಮಾನ ಗೊತ್ತಾ ಅವಳೆಲ್ಲೋ ಆ ಎರಿಕ್‌ ಫ್ರಾಂನ ರಕ್ತಕ್ಕೇ ಮೆತ್ತುಕೊಂಡ್ಬಿಟ್ಟಿದ್ದಾಳಾ ಅಂತಾ! ಅದೇ ಅವನು ಹೇಳ್ತಾನಲ್ಲ ‘ನೀಡುವುದೇ ಅದ್ಭುತವಾದ ಸಂತೋಷವನ್ನು ನೀಡುತ್ತದೆ’ ಅಂತ! ಆ ಕ್ಷಣದಲ್ಲಿ ನನಗೆ ತಲೆ ಬುಡ ಅರ್ಥ ಆಗ್ಲಿಲ್ಲ!

ಅವನು : ಅವನಿಗೆ ಗೊತ್ತಿರೋದು ಆಫೀಸು. ಅದು ಬಿಟ್ಟರೆ ಆಫೀಸು ಅದೂ ಬಿಟ್ಟರೆ ಆಫೀಸು! ತುಂಬಾ ಶ್ರಮ ಜೀವಿ, ನಿಯತ್ತುಗಾರ ಅಷ್ಟೇ ambitious. ಫ್ರೆಂಡ್ಸ್‌ ಜೊತೆ ಢಾಬ, ಕ್ಲಬ್ಬು ಅಂತ ಇಣುಕಿಯೂ ನೋಡಲ್ಲ. ನೇರವಾಗಿ ಮನೆಗ್ಬರ್ತಾನೆ, ಅಪರೂಪಕ್ಕೆ ಎರಡು ಸಿನೆಮಾ ಟಿಕ್ಕೆಟ್ಟುಗಳ್ಜೊತೆ! ಅವನ ಎಂಟ್ರಿ ಎಷ್ಟ್ಹೊತ್ತಿಗೇ ಆದರೂ ಅವಳು ಹಸನ್ಮುಖಿ.

ಕೋಣೆಯ ಕತ್ತಲಲ್ಲೂ ಅವಳ genuine ನಗು ಅವನಿಗೂ ಗೊತ್ತಾಗುತ್ತೆ! ಅವನಿಗೋ ಅನುಮಾನವೆಂಬ ಕ್ಯಾನ್ಸರ್‌! ತವರು ಮನೆಗೆಗ್ಹೋತೀನಿ ಅಂತ ಹಠ ಹಿಡಿಯದ, ಅತ್ತಿಗೆ ನಾದಿನಿಯರ ಬಗ್ಗೆ ತನ್ನ ಕಿವಿ ತೂತು ಮಾಡದ ತನ್ನ ಹೆಂಡತಿಯಲ್ಲಿ ಇರುವ ಸಮಸ್ಯೆ ಏನು? ಗೌರಿ ಹಬ್ಬಕ್ಕೂ ಸೀರೆ ಕೇಳದ ಇವಳೆಂತವಳು? ಡಬ್ಬಲ್‌ ಗ್ರಾಜುಯೇಟ್‌ ಆಗಿ ನನ್ನ ಷೂ ಪಾಲಿಶ್‌ ಮಾಡ್ತಾಳಲ್ಲ ಇವಳ ತಲೆ ಕೆಟ್ಟಿದೆಯಾ? ಫೋನ್‌ನಲ್ಲೇ ಆಗಲಿ ಗಂಟೆಗಟ್ಟಲೆ ಹರಟೆಹೊಡೆಯೋಲ್ಲ, ನನ್ನ ಕಣ್ಣ್ತಪ್ಪಿಸಿ ಹೊರಕ್ಕೇ ಹೋಗದ ಇವಳಿಗೆ ಬೇರೆಯಾವ್ದಾರ್ರೂ ಅಫೇರ್‌ ಇದ್ಯಾ? ಪಾಪ, ಹೀಗಂದ್ಕೊಳ್ಳೋಷ್ಟು ಪಾಪಿ ಅಲ್ಲ ಅವನು. ಒಡವೆ, ವಸ್ತ್ರ ಇರಲಿ ಜಗಳವೂ ಬೇಡದ ಹೆಂಡತಿ. . . .ಆದರೂ ಹಸನ್ಮುಖಿ! ನಗುತ್ತಾಳೆ ನಗಿಸುತ್ತಾಳೆ.. . . . .ಅವನ ತಲೆಯಿಂದ ಉಂಗುಷ್ಟದ ಎಲ್ಲಾ ವಿಷಯಗಳಲ್ಲೂ participate ಮಾಡುತ್ತಾಳೆ ಅದು ಹೇಗೆ? ಇಷ್ಟೇರೀ ಅವನ ಸಮಸ್ಯೆ.

ಅವಳನ್ನು ಕೇಳಿದಂತೆ ಇವನನ್ನೂ ಕೇಳಿಬಿಡೋನ ಅಂತಾನೇ ಇದ್ದೆ. ಆದರೆ ತಕ್ಷಣ ಅವನು ಸಂತೆಯಲ್ಲಿ ಕಳೆದುಹೋಗಿರುವ ಒಂದು ಮಗು ತರಹ ಅನ್ನಿಸಿಬಿಡ್ತು! ‘ಕೈ ಕಾಲು ತೊಳೆದ್ಕೊಂಡ್ಬಾರೋ ಊಟ ಮಾಡ್ತೀಯಂತೆ’ ಅನ್ನೋಣ ಅನ್ನಿಸಿತು. . . . .

ಈಗ ಹೇಳಿ, ಅವಳು, ಅವನು ಅಥವಾ ಅವರಿಬ್ಬರ ಬಗ್ಗೆ ಪೆದ್ದು ಪೆದ್ದಾದ ಅಧ್ಯಯನ ಕೈಗೊಂಡ ನಾನು or ಅವರಿಬ್ಬರ ಬಗ್ಗೆ ಕೇಳಿ ‘ಹೂಂ’ ಅಂತ ಉಸಿರುಬಿಟ್ಟು ಗಲ್ಲಕ್ಕೆ ಕೈಕೊಟ್ಟು ಕುಳಿತ್ತಿದ್ದೀರಲ್ಲ ನೀವು. . . . ಯಾರು exotic ಅಂತ!

ಅಂದಹಾಗೆ, ನನಗೊಂದು ಪ್ರೇಮ ಪತ್ರ ಸಿಕ್ಕಿದೆ. ಸಾಕಾಯ್ತ್ರೀ ಈ heavy ವಿಚಾರ ವಿಮರ್ಶೆ. ಮುಂದಿನಸಲಿ ನೀವು ಸಿಕ್ಕಾಗ ಸ್ವಲ್ಪ ಗಾಸಿಪ್‌ ಮಾಡೋಣ ಏನಂತೀರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+