• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿದರೆ ನಾರಿ, ಮುನಿಯದಿದ್ದರೂ ಮಾರಿ ಐ ಆ್ಯಮ್‌ ವೆರಿವೆರಿ ಸಾರಿ

By Staff
|

ಸಮಾನತೆ, ಶೋಷಣೆ ವಿರುದ್ಧ ಧ್ವನಿ ಅನ್ನುವ ಹೆಸರಿನಲ್ಲಿ ಮಾನವೀಯ ಸಂಬಂಧಗಳನ್ನು ದಾರುಣ ಪಳಿಯುಳಿಕೆಯನ್ನಾಗಿ ಮಾಡುವುದರಲ್ಲಿ ಅವಳ ಪಾತ್ರವೇ ಹಿರಿದಾಗಿದೆಯಾ ಅನ್ನುವ ಅನುಮಾನ ಕಾಡುತ್ತಿದೆ!

Make or Marಕೂಡದು, ಕೂಡದು! ಖಂಡಿತಾ ಯಾವತ್ತೂ ಹೀಗಾಗಬಾರದು ಅಲ್ಲವಾ? ಅಲ್ಲ ಈ ವಿಷಯನಾ ನಿಮಗೆ ಹೇಳಿದ್ದೀನಿ ಅಂತ ಅಂದ್ಕೊಂಡು ಸುಮ್ಮನಿದ್ದುಬಿಟ್ಟಿದ್ದೆ. ನನಗೆ ಯಾವ ಸಂಬಂಧಾನೂ ಈ ರೀತಿ taken for granted ಆಗಿಬಿಡುವುದು ಸುತರಾಂ ಇಷ್ಟವಿಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ! ಎಷ್ಟ್ಮಾತಾಡ್ತೀನಿ, ನೇರವಾಗಿ ವಿಷ್ಯಕ್ಕೆ ಬರಬಾರದಾ ಅಂತೀರಾ? ಸರಿ ಸರಿ ಹೇಳೇಬಿಡ್ತೀನಿ. .

ಆ ದಿನ ಕೈಗೊಂದಿಷ್ಟು ದುಡ್ಡು ಸಿಕ್ಕಿತು. ನನಗೆ ಸಮಯಕ್ಕೇನು ಕೊರತೆ ಹೇಳಿ? ನಿಮ್ಮ್ಹತ್ರ ಇದೆಯಲ್ಲ ಆ ತರಹದ್ದೇ ಒಂದೆರಡು ಸೀರೆ ತೊಗೊಳಣಾ ಅಂತ ಹೊರಟೆ. ಆ mall ಪಕ್ಕದಲ್ಲೇ ತಾನೇ ನಮ್ಮ ಲಾಯರಮ್ಮ ಕನಕೇಶ್ವರಿ ಯವರ ಆಫೀಸ್‌ ಇರೋದು, ಅಲ್ಲಿಗೆ ಹೋದಾಗಲೆಲ್ಲಾ ನಾನಂತೂ ಅವರ ಆಫೀಸಿಗೆ ಹೋಗಿ ಒಂದೆರಡು ತಾಸು ಕೂತೇ ಬರುವುದು. ನೀವೂ ಯಾವಾಗ್ಲಾದ್ರು ಹೋಗಿ ಬನ್ನಿ. ಜೀವನ ಅನ್ನೋದಕ್ಕೆ ಎಲ್ಲಾ ಆಯಾಮಗಳಲ್ಲಿ interpretation ಸಿಕ್ಕಿಬಿಡುತ್ತೆ.

ಆ ದಿನ ನಾನು ಹೋದಾಗ ಅವರು ಯಾರದ್ದೋ ಜೊತೆ ಫೋನ್‌ನಲ್ಲಿ ಮಾತಾಡ್ತಿದ್ದ್ರು. ಕೈ ಸಂಜ್ಞೆಯಲ್ಲೇ ಕರೆದು ಅವರ ಮುಂದೆಯೇ ಕೂರಿಸ್ಕೊಂಡ್ರು. ಮಾತು, ಧಾಟಿ, ಹಾವಾ-ಭಾವ ಎಲ್ಲಾ ಯಾವುದೋ family matter ಅಂತ ಸ್ಪಷ್ಟವಾಗಿ ಹೇಳುತ್ತಿತ್ತು. ನಿಮಗಿನ್ನೊಂದು ವಿಷಯ ಗೊತ್ತಾ? ಅವರು ಮಹಿಳಾ ಹಕ್ಕು, ಮಹಿಳಾ ಶೋಷಣೆ ವಿರುದ್ಧ ಘೋಷಣೆ, ಅದೂ ಇದೂ ಅಂತೆಲ್ಲಾ ಸ್ಟೇಜ್‌ ಮೇಲೆ ಜೋರಾಗಿ ಮಾತಾಡ್ತಿರ್ತಾರಲ್ಲಾ, ವಿಚಿತ್ರ ಅಂದ್ರೆ ಆಕೆ divorce ಗಳಿಗೆ ವಕಾಲತ್ತೇ ಹಾಕೋದಿಲ್ಲ! ಈ ನ್ಯೂಸ್‌ ಗೊತ್ತಾದಮೇಲೂ ನನ್ನ ಬಾಯಿ ತೆಪ್ಪಗಿರತ್ತಾ ಹೇಳಿ? ಕೇಳಿದ್ದಕ್ಕೆ ಏನಂದ್ರು ಗೊತ್ತಾ? ‘ಹೆಂಗಸರು ಸ್ವಲ್ಪ ಜಾಣ್ಮೆ ತಾಳ್ಮೆಯಿಂದ ತೂಗಿಸಿದರೆ ತೊಂಭತ್ತು ಭಾಗ ಸಂಸಾರ reparable.

ಅದೇ ಅವರು ವೃತ್ತಿಪರವಾಗಿ ಮಾತನಾಡುತ್ತಿದ್ದರೆ ಅರೆ, ಇವರೇನಾ ಅವರು ಅನ್ನಿಸಿಬಿಡುತ್ತೆ! ಆ ಸ್ವಾಮಿಗಳು ಹೇಳುತ್ತಾರಲ್ಲ ‘ಈ ಸಂಸಾರವನ್ನು ವೈಯಕ್ತಿಕ ನೆಲೆಯಿಂದ ಸಹಯೋಗದ ನೆಲೆಗೆ ತೆಗೆದ್ಕೊಂಡು ಹೋಗೋ ಶಕ್ತಿ ಸ್ತ್ರೀಯರಿಗಿದೆ’ ಅಂತ ಅದನ್ನೇ ಇವರು ಹೇಳ್ತಿರ್ತಾರೆ.

ಅಯ್ಯೋ ತುಂಬಾ ಜಾಸ್ತಿಯಾಯ್ತುು. ಇವತ್ತಿನ ಕಥೆ ಕೇಳಿ. ಏನ್ಗೊತ್ತಾ, ಅವಳಿಗೆ ಗಂಡ, ಎರಡು ಮಕ್ಕಳು, ಅತ್ತೆ ಮಾವ. ಅವಳೇ ಹೇಳುವಂತೆ ಸಮವಾಗಿ ಜೀವನ ನಡೆಸಲು ದುಡ್ಡು ಕಾಸಿನ ಕೊರತೆಯೂ ಇಲ್ಲವಂತೆ. ಅವಳ ಪ್ರಕಾರಾನೇ ಎಲ್ಲರೂ ಸುಮಾರಾಗಿ ನಾರ್ಮಲ್ಲೇ ಅಂತೆ. ಡೈವೋರ್ಸ್‌ ತೊಗೋಳಕ್ಕೆ ಕಾರಣ ಏನೂ ಇಲ್ಲವಂತೆ. ದೌರ್ಜನ್ಯ ಮಣ್ಣು ಮಸಿ ಅಂತ ಎಳೆದಾಡೋದು ಅವಳಿಗೆ ಬೇಡವಂತೆ. ಆದರೆ ಸ್ವಲ್ಪ ಒಡ್ಡ ಗಂಡನಿಗೆ ಮನೆಯಲ್ಲೇ ಇದ್ದುಕೊಂಡು ಬುದ್ಧಿ ಕಲಿಸಬಹುದಾದ ಯಾವುದಾರು ಕಾನೂನು ಇದೆಯಾ ಅಂತ ಕೇಳ್ತಿದ್ದ್ಲಂತೆ!

ಅಲ್ಲ ಹೀಗೂ ಇರ್ತಾರೇನು? ಕನಕೇಶ್ವರಿ ತುಂಬಾ balanced. ಎಲ್ಲಾದಕ್ಕೂ ತಾಳ್ಮೆಯಿಂದಾನೇ ಇರ್ತಾರೆ. ನಾನೇನಾದ್ರು ಅವರ ಜಾಗದಲ್ಲಿ ಇದ್ದಿದ್ದ್ರೆ ಅವಳನ್ನು ಕರೆಸಿಕೊಂಡು ಎರಡ್ವದ್ದು ಕಿವಿಹಿಂಡ್ತಿದ್ದೆ! ತುಂಬಾ ಒರಟಾಯ್ತು ಅನ್ನಿಸುತ್ತಿದೆಯಾ? sorry ಅಲ್ಲಾ, ಹೆಂಗಸು ಏನೇ ಮಾಡಿದರೂ ಮಳೆಹನಿಯ ಸ್ಪರ್ಶಕ್ಕೆ ಅರಳಿ ಹೂವಾದ ಮಣ್ಣಿನ ವಾಸನೆಯಂತೆ, ಗಂಡು ಏನೇ ಮಾಡಿದರು ಗೂರಲು ತರೋ ಧೂಳಿನ ವಾಸನೆಯಂತೆ ಅಂತ ಅಂದ್ರೆ ಅದು ನ್ಯಾಯಾನಾ ಹೇಳಿ?!

ಸೀರೇನೂ ಇಲ್ಲ ಗೀರೇನೂ ಇಲ್ಲ. ಹೀಗೇ ಯೋಚಿಸುತ್ತಾ ಮನೆಗ್ಬಂದೆ. ಮುಂಬಾಗಿಲಲ್ಲೇ ಅದೇ mall ನಿಂದ ಆಸೆಯಿಂದ ತಂದಿಟ್ಟುಕೊಂಡಿದ್ದ ಪ್ಲಾಸ್ಟಿಕ್‌ನ ದೊಡ್ಡ ಸೂರ್ಯಕಾಂತಿ ಹೂವು ಈ ದಿನ ತುಂಬಾ artificial ಅನ್ನಿಸಿತು. ಎದುರುಮನೆ ವಾಚ್‌ಮ್ಯಾನ್‌ ಮಗಳು ಅದನ್ನು ತುಂಬಾ ಮೆಚ್ಚಿದ್ದಳು. ಕೂಡಲೇ ಅವಳಿಗೆ ಕೊಟ್ಟು ಅವಳಪ್ಪನಿಗೆ ಹೇಳಿದೆ ‘ನಾಳೆ ಹಿತ್ತಲಲ್ಲಿ ಪಾತಿ ಮಾಡಿ ಒಂದು ಸೂರ್ಯಕಾಂತಿ ಸಸಿ ನೆಡು’ ಅಂತ. ಅದು ಹೂವು ಬಿಟ್ಟ ದಿನ ನಿಮಗ್ಹೇಳ್ತೀನಿ. ಆ ದಿನ lets dine on wine ಓಕೇನಾ?!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more