Liquor Price Hike: ಮುಂದಿನ ತಿಂಗಳು ಈ ದಿನದಿಂದ ಮದ್ಯದ ಬೆಲೆ ಹೆಚ್ಚಳ, ಯಾವಾಗ - ಎಷ್ಟು ಎನ್ನುವ ವಿವರ ಇಲ್ಲಿದೆ

Liquor Price Hike: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಮದ್ಯ ಪ್ರಿಯರಿಗೆ ಶಾಕ್ ಕೊಡುವುದು ಮುಂದುವರಿದಿದೆ. ಇದೀಗ ಒಟ್ಟಾರೆ ನಾಲ್ಕು ಬಾರಿ ನೇರ ಹಾಗೂ ಪರೋಕ್ಷವಾಗಿ ಮದ್ಯ ಹಾಗೂ ಬಿಯರ್ ಬೆಲೆ ಹೆಚ್ಚಳವಾಗಿದ್ದು, ಇದೀಗ ಐದನೇ ಬಾರಿ ಮದ್ಯದ ಬೆಲೆ ಹೆಚ್ಚಳವಾಗುತ್ತಿದೆ. ಹೊಸ ಮದ್ಯ ದರಗಳ ಬೆಲೆಯು ಮೇ 1ರಿಂದಲೇ ಜಾರಿಗೆ ಬರಲಿವೆ. ಈ ಮೂಲಕ ಮದ್ಯ ಪ್ರಿಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಶಾಕ್ ಕೊಟ್ಟಿದೆ. ಮೇ 1 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಯಾವ ಮದ್ಯದ ಬೆಲೆಯು ಎಷ್ಟು ಹೆಚ್ಚಳವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಈ ಮೂಲಕ ಸತತ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಎಐಬಿ (AIB) ನೀತಿಗೆ ಮದ್ಯ ಕಂಪನಿಗಳು ಸಹ ಸಹಮತ ವ್ಯಕ್ತಪಡಿಸಿವೆ. ಈ ಹಿಂದೆ ಕರ್ನಾಟಕದಲ್ಲಿ ಮದ್ಯ ಹಾಗೂ ಬಿಯರ್ ಬೆಲೆ ಹೆಚ್ಚಳವಾದಾಗ ಬಿಯರ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

Liquor Price Hike

ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಮದ್ಯ ಹಾಗೂ ಬಿಯರ್ ಬೆಲೆ ಹೆಚ್ಚಾಗಲಿದೆ ಎಂದು ಹೇಳಲಾಗಿತ್ತು. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಮದ್ಯದ ಬೆಲೆ ಕಡಿಮೆ ಇದೆ ಎಂದು ಕರ್ನಾಟಕ ಸರ್ಕಾರವು ಸಮರ್ಥನೆ ಮಾಡಿಕೊಂಡಿತ್ತು. ಇದೀಗ ಎಐಬಿ ನೀತಿ ಜಾರಿ ಮಾಡುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಏನಿದು ಹಾಗೂ ಇದರಿಂದ ಎಷ್ಟು ಬೆಲೆ ಏರಿಕೆ ಆಗಲಿದೆ ಎನ್ನುವ ವಿವರ ಮುಂದೆ ನೋಡೋಣ..

ಕರ್ನಾಟಕ ಸರ್ಕಾರವು ಹೊರಡಿಸಿರುವ ಹೊಸ ಕರಡು ಅಧಿಸೂಚನೆಯಂತೆ ಮುಂದಿನ ದಿನಗಳಲ್ಲಿ ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಮದ್ಯದಲ್ಲಿ ಆಲ್ಕೋಹಾಲ್ ಅಂಶ ಅಥವಾ ಪ್ರಮಾಣವು ಹೆಚ್ಚಾದಂತೆ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಲಿದೆಯಾದರೂ, ಸಾಮಾನ್ಯ ಜನರು ಬಳಸುತ್ತಿರುವ ಮದ್ಯದ ಬೆಲೆಯಲ್ಲಿ ಶೇ 20ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಮದ್ಯ ಬೆಲೆ ಹೆಚ್ಚಳ: ಯಾವ ಸ್ಲ್ಯಾಬ್‌ಗಳಿಗೆ ಎಷ್ಟು ಹೆಚ್ಚಳ

ಹೊಸ ಕರಡು ಅಧಿಸೂಚನೆಯ ಪ್ರಕಾರ ಮೊದಲ 4 ಪ್ರಮುಖ ಸ್ಲ್ಯಾಬ್‌ಗಳ ಮದ್ಯದ ಬೆಲೆಯು ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಹಾಗೂ ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸ್ಲ್ಯಾಬ್ ದರ ಹೆಚ್ಚಳ ವಿವರ

ಸ್ಲ್ಯಾಬ್-1: 80 ರಿಂದ 95 ರೂಪಾಯಿ (15 ಹೆಚ್ಚಳ)

ಸ್ಲ್ಯಾಬ್-2: 95 ರಿಂದ 110 ರೂಪಾಯಿ (15 ಹೆಚ್ಚಳ)

ಸ್ಲ್ಯಾಬ್-3: 120 ರಿಂದ 135 ರೂಪಾಯಿ (15 ಹೆಚ್ಚಳ)

ಸ್ಲ್ಯಾಬ್-4: 150 ರಿಂದ 170 ರೂಪಾಯಿ (20 ಹೆಚ್ಚಳ)

ಹೆಚ್ಚಳ ಪ್ರಮಾಣ: 15 ರಿಂದ 20 ರೂಪಾಯಿ

ಫುಲ್ ಬಾಟಲ್ ಮದ್ಯದ ಬೆಲೆ ಎಷ್ಟು ಹೆಚ್ಚಳವಾಗಲಿದೆ

ಇನ್ನು ಒಂದು ಫುಲ್ ಬಾಟಲ್ ಮದ್ಯದ ಬೆಲೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಸಂಪೂರ್ಣ ವಿವರ ನೋಡೋಣ. ಒಂದು ಫುಲ್ ಬಾಟಲ್ ಮದ್ಯದ ಮೇಲೆ ಬ ಎಂಆರ್‌ಪಿ ಬೆಲೆಯಲ್ಲಿ ಸುಮಾರು 50 ರೂಪಾಯಿಯಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+