ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಸೇವೆ ಶೀಘ್ರ, ಬೆಂಗಳೂರು-ಮುಂಬೈಗೆ 2 ಹೊಸ ರೈಲು: ಅಶ್ವಿನಿ ವೈಷ್ಣವ್
Railways Big Update: ಬೆಂಗಳೂರಿನಿಂದ ಮುಂಬೈಗೆ ಸ್ಲೀಪರ್ ವಂದೇ ಭಾರತ್ ರೈಲು (Bengaluru-Mumbai sleeper vande Bharat) ಸೇರಿ ಎರಡು ಹೊಸ ರೈಲುಗಳ ಸೇವೆ ಆರಂಭಿಸಲಿದ್ದೇವೆ. ಹಾಸನ ಮತ್ತು ಮಂಗಳೂರು ನಡುವಿನ ವಿದ್ಯುದ್ದೀಕರಣ ಈಗ ಪೂರ್ಣಗೊಂಡಿದೆ. ಮಂಗಳೂರು ಮತ್ತು ಮಡಗಾಂವ್ ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಶನಿವಾರ ತಿಳಿಸಿದರು.
ಇಂದು ಅವರು ಬೆಂಗಳೂರಿನ ಬಿಇಎಂಎಲ್ ಕ್ಯಾಂಪಸ್‌ಗೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಬೆಂಗಳುರು, ಕರಾವಳಿ, ಹುಬ್ಬಳ್ಳಿ, ಧಾರವಾಡ ಮತ್ತು ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

"ಕೆಲವು ತಿಂಗಳಲ್ಲಿ ಮುಂಬೈಗೆ ಎರಡು ಹೊಸ ಸೇವೆಗಳು ಪ್ರಾರಂಭವಾಗಲಿವೆ. ಈಗಾಗಲೇ ಘೋಷಿಸಿದಂತೆ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಒಂದು ಸೂಪರ್‌ಫಾಸ್ಟ್ ಸೇವೆ ಮತ್ತು ಬೆಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ಸ್ಲೀಪರ್ ಸೇವೆಗಳು ಶುರುವಾಗಿ ದೀರ್ಘ ಪ್ರಯಾಣದ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಲಿವೆ ಎಂದರು.
ಎರಡು ರೈಲುಗಳ ಸಂಭಾವ್ಯ ಮಾರ್ಗ
ಸಚಿವರೇ ಘೋಷಿಸಿದಂತೆ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಮುಂಬೈಗೆ ಒಂದು ಸೂಪರ್‌ಫಾಸ್ಟ್ ಸೇವೆ ಲಭ್ಯವಾಗಲಿದೆ. ಮತ್ತೊಂದು ರೈಲಾದ ವಂದೇ ಭಾರತ್ ಸ್ಲೀಪರ್ ರೈಲನ್ನು ಬೆಂಗಳೂರಿನಿಂದ ಯಾದಗಿರಿ, ಕಲಬುರಗಿ ಮಾರ್ಗವಾಗಿ ಆರಂಭಿಸುವುದು ಬಹುತೇಕ ನಿಕ್ಕಿ ಆಗಿದೆ. ಈ ಬಗ್ಗೆ ಅಧಿಕೃತ ವೇಳಾಪಟ್ಟಿ, ಸಮಯ, ಟಿಕೆಟ್ ದರ ಬಿಡುಗಡೆ ಆಗಬೇಕಿದೆ. ಸುಮಾರು 18 ಗಂಟೆಗಳ ಒಳಗೆ ತಲುಪುವ ನಿರೀಕ್ಷೆ ಇದೆ.
ಕರಾವಳಿ ಕರ್ನಾಟಕ ಭಾಗಕ್ಕೆ 'ವಂದೇ ಭಾರತ್' ಸೇವೆ
ಇತ್ತೀಚೆಗೆ ಹಾಸನ ಮತ್ತು ಮಂಗಳೂರು ನಡುವಿನ ರೈಲು ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ರೈಲ್ವೆ ಇಲಾಖೆ ವತಿಯಿಂದ ಬೆಂಗಳೂರು, ಮಂಗಳೂರು ಮತ್ತು ಮಡಗಾಂವ್ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಸೇವೆಯನ್ನು ನೀಡಲಾಗುವುದು. ಈ ಮೂಕ ಇಡೀ ಕರಾವಳಿ ಕರ್ನಾಟಕಕ್ಕೆ ಅತೀ ಶೀಘ್ರದಲ್ಲಿ ವಂದೇ ಭಾರತ್ ಸೇವೆ ದೊರೆಯಲಿದೆ.
ವಂದೇ ಭಾರತ್: ನೈಋತ್ಯ ರೈಲ್ವೆ ನಿರ್ವಹಣೆ
ಈ ಹೊಸ ವಂದೇ ಭಾರತ್ ರೈಲನ್ನು ನೈಋತ್ಯ ರೈಲ್ವೆ (SWR) ವಲಯದಿಂದ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ. ಪ್ರಸ್ತುತ, ದೇಶದ ವಿವಿಧ ಮಾರ್ಗಗಳಲ್ಲಿ ಒಟ್ಟು 162 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುತ್ತಿವೆ.
ಕರಾವಳಿಗೆ ಹೋಗುವ ಹೊಸ ವಂದೇ ಭಾರತ್ ರೈಲು ಬೆಂಗಳೂರಿನಿಂದ ತುಮಕೂರು, ಹಾಸನ, ಸಕಲೇಶಪುರ ಮಾರ್ಗವಾಗಿ ಮಂಗಳೂರು, ಅಲ್ಲಿಂದ ಮಡಗಾಂವ್‌ಗೆ ಸಂಚಾರ ಮಾಡುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವರು ತಿಳಿಸಿದ್ದು ವಿಶೇಷವಾಗಿದೆ. ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರುವ ದಿನಗಳು ಹತ್ತಿರವಾಗಿವೆ. ಬೆಂಗಳೂರು -ಮಂಗಳೂರು ಮಧ್ಯೆ ಅರೆ-ಹೈಸ್ಪೀಡ್ ರೈಲು ಸೇವೆಯಿಂದ ಎರಡು ಭಾಗದ ನಗರಗಳು, ಜನರು ಮತ್ತಷ್ಟು ಹತ್ತಿರವಾಗಿಸಲಿದೆ.
#WATCH | Bengaluru, Karnataka: Minister of Railways, Ashwini Vaishnaw says, "We are starting two new services to Mumbai in a couple of months from now—a superfast service from Bengaluru via Hubballi-Dharwad and a Vande Bharat Sleeper service from Bengaluru to Mumbai. Moreover,… pic.twitter.com/48WBBYarWU
— ANI (@ANI) April 25, 2026














Click it and Unblock the Notifications