Prakash Raj Vs Raghav Chadha: ಪೊಲೀಸ್ ಸರಿ ಇಲ್ಲ ಎಂದು ದಾವೂದ್ ಗ್ಯಾಂಗ್ ಸೇರುತ್ತೀರಾ; ರಾಘವ್ ಚಡ್ಡಾ ಕಾಲೆಳೆದ ನಟ ಪ್ರಕಾಶ್
Prakash Raj Vs Raghav Chadha: ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವ ನಟ ಪ್ರಕಾಶ್ ರಾಜ್ ಅವರು ಇದೀಗ ಎಎಪಿಯಿಂದ ಬಿಜೆಪಿಗೆ ಸೇರ್ಪಡೆ ಆಗಿರುವ ರಾಘವ್ ಚಡ್ಡಾ ಅವರ ಕಾಲೆಳೆದಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾ ಅವರು ಸೇರಿದಂತೆ ಏಳು ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ವಿಚಾರವು ಭಾರತದಾದ್ಯಂತ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ನಟ ಪ್ರಕಾಶ್ ರಾಜ್ ಅವರು ರಾಘವ್ ಚಡ್ಡಾ ಅವರ ಕಾಲೆಳೆದಿದ್ದಾರೆ.
ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ನಿರ್ಧಾರದ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ರಾಘವ್ ಚಡ್ಡಾ ಅವರ ನಿರ್ಧಾರವನ್ನು ಪ್ರಕಾಶ್ ರಾಜ್ ಅವರು ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂನೊಂದಿಗೆ ಕೈಜೋಡಿಸುವುದಕ್ಕೆ ಸಮಾನವಾಗಿ ಹೋಲಿಕೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿ ರಾಘವ್ ಚಡ್ಡಾ ಅವರ ಬಗ್ಗೆ ನಟ ಪ್ರಕಾಶರ್ ರಾಜ್ ಅವರು ಪ್ರತಿಕ್ರಿಯಿಸಿರುವುದು ಇದೀಗ ವೈರಲ್ ಆಗುತ್ತಿದೆ.

ಎಎಪಿಯಿಂದ ಬಿಜೆಪಿಗೆ ಸೇರ್ಪಡೆ ಆಗಿರುವ ರಾಘವ್ ಚಡ್ಡಾ ಬಗ್ಗೆ ನಟ ಪ್ರಕಾಶ್ ರಾಜ್ ಅವರು, ಪೊಲೀಸ್ ವ್ಯವಸ್ಥೆಯು ತನ್ನ ಕರ್ತವ್ಯದಿಂದ ದೂರವಾಗಿದೆ. ಹೀಗಾಗಿ, ನಾನು ರಾಜೀನಾಮೆ ನೀಡಿ ದಾವೂದ್ ಇಬ್ರಾಹಿಂ ಜೊತೆ ಸೇರುತ್ತಿದ್ದೇನೆ ಇಂತಿ ರಾಘವ್ ಚಡ್ಡಿ ಎಂದು ವ್ಯಂಗ್ಯವಾಗಿ ಪ್ರಕಾಶ್ ರಾಜ್ ಅವರು ಬರೆದುಕೊಂಡಿದ್ದಾರೆ.
ಪಕ್ಷಾಂತರವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಘವ್ ಚಡ್ಡಾ ಅವರ ಬಗ್ಗೆ ನೀಡಿರುವ ಕಾರಣಗಳನ್ನು ಲೇವಡಿ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಮೌಲ್ಯಗಳಿಂದ ದೂರವಾಗಿದೆ ಎನ್ನುವ ಕಾರಣಕ್ಕೆ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಘವ್ ಚಡ್ಡಾ ಅವರು ಹೇಳಿಕೊಂಡಿದ್ದರು.
ಬಿಜೆಪಿ ಸೇರ್ಪಡೆಯಾಗಿರುವ ರಾಘವ್ ಚಡ್ಡಾ
ಇನ್ನು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಸೇರಿದಂತೆ ಏಳು ಜನ ಸಂಸದರು ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯವೇ ತಮ್ಮ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ರಾಜ್ಯಸಭೆಯ ಉಪನಾಯಕ ಹುದ್ದೆಯಿಂದ ಅವರನ್ನು ತೆಗೆದುಹಾಕಿದ ಬಳಿಕ ಈ ಅಸಮಾಧಾನ ಮತ್ತಷ್ಟು ಹೆಚ್ಚಾಗಿತ್ತು.
ರಾಘವ್ ಚಡ್ಡಾ ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ನಾಯಕರು ಆರೋಪಿಸಿದ್ದರು. ಇದರ ಬೆನ್ನಲ್ಲೇ ರಾಘವ್ ಚಡ್ಡಾ ಅವರು ಬಿಜೆಪಿ ವಿರುದ್ಧದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರು.
ಮುಂದುವರಿದು ನಾನು ನನ್ನ ಯೌವ್ವನದ 15 ವರ್ಷಗಳನ್ನು ಅರ್ಪಿಸಿದ್ದೇನೆ. ಆಮ್ ಆದ್ಮಿ ಪಕ್ಷವು ತನ್ನ ಮೂಲ ಮೌಲ್ಯಗಳಿಂದ ದೂರವಾಗಿದೆ. ಅದು ದೇಶದ ಹಿತಾಸಕ್ತಿಗಿಂತ ಸ್ವಾರ್ಥಪರ ರಾಜಕೀಯದತ್ತ ಹೋಗುತ್ತಿದೆ. ಇಷ್ಟು ದಿನ ನಾನು ನನ್ನ ಆಲೋಚನೆಗಳಿಗೆ ಹೊಂದಿಕೆಯಾಗದ ಪಕ್ಷದಲ್ಲಿ ಇದ್ದೆನೇ ಎನ್ನುವ ಭಾವನೆ ಮೂಡಿತ್ತು. ಹೀಗಾಗಿ, ಆಮ್ ಆದ್ಮಿ ಪಕ್ಷವನ್ನು ತೊರೆದು, ಸಾರ್ವಜನಿಕರ ಹತ್ತಿರವಾಗುತ್ತಿದ್ದೇನೆ. ಇಷ್ಟು ದಿನಗಳ ಕಾಲ ಒಳ್ಳೆಯ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದೇನೇ Good Man in Wrong Party ಎನ್ನುವ ವಾಕ್ಯವನ್ನೂ ರಾಘವ್ ಚಡ್ಡಾ ಅವರು ಉಲ್ಲೇಖಿಸಿದ್ದಾರೆ.
😂😂😂. #justasking pic.twitter.com/FF80jIgPqS
— Prakash Raj (@prakashraaj) April 25, 2026












Click it and Unblock the Notifications