• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಂತೆ ಬಿಸಾಕಿ... ದೇಹಕ್ಕಷ್ಟೇ ನಲವತ್ತು; ನಮಗಿನ್ನೂ ಇಪ್ಪತ್ತು!

By Staff
|

ಒಂದು ಸ್ವಚ್ಛ ದೇಹದಲ್ಲಿ ಸ್ವಚ್ಛಂದವಾಗಿ ಬಾಳುತ್ತಿರುವ ಆತ್ಮವನ್ನು ಬದುಕಿರುವಾಗಲೇ ಹೇಗೆ ಪ್ರೇತಾತ್ಮ ಮಾಡುವುದು ಅನ್ನುವುದನ್ನು, ಈ ಗಂಡು ಸಮಾಜದಿಂದಲೇ ಕಲಿಯಬೇಕು...!

Metamorphosis_Sheನರ್ಸ್‌ ಮಗು ತಂದು ನನ್ನ ಕೈಗಿತ್ತಳು. ಪ್ರಕೃತಿಯ ಕೌಶಲ್ಯದ epitome ಅನ್ನಿಸಿತು! ಫೋನ್‌ ಮಾಡಿ ‘ಪ್ರಸಾದಿ, ಮುದ್ದಾದ ಹೆಣ್ಣು ಮಗು ಕಣೋ’ ಅಂದೆ. ‘ನೋ ಪ್ರಾಬ್ಲಂ, ನನಗೆ ಹೆಣ್ಣು ಗಂಡು ಎಲ್ಲಾ ಒಂದೇ. . . . .ಸಂಜೆ ಬರುತ್ತೇನೆ. ಬೈ’ ಎಂದ. ಸಂಭಾಷಣೆ ಮುಗಿಯಿತು. ಆ ರಿಯಾಕ್ಷನ್‌ನಲ್ಲೇ ಅನ್ನಿಸಿತು ‘ಅವನಿಗೆ ಏನೋ ಬೇಕಿತ್ತು, ಮತ್ತೆನೋ ಸಿಕ್ಕಿದೆ’ ಅಂತ! ಸುಶೃತ ಅನ್ನುವ ಹೆಸರನ್ನು ಹೆಣ್ಣು ಮಗುವಿಗೆ ಇಟ್ಟಾಗಲೇ ನವಜಾತ ಅಪ್ಪ-ಅಮ್ಮನ ಮನದಿಂಗಿತ ನನಗಂತೂ ಸ್ಪಷ್ಟವಾಯ್ತು!

ಸುಶೃತಾಳಿಗೆ ಈಗ ಐದನೇ ಹುಟ್ಟುಹಬ್ಬ. ನಿಮಗೂ ಪಾರ್ಟಿಗೆ invitation ಬಂದಿದೆಯಲ್ಲ? ಮೊನ್ನೆ ಅವರುಗಳು ಕರೆಯೋಲೆ ಕೊಟ್ಟುಹೋದಾಗಿನಿಂದ ‘ಇದೇ ಸಂಭ್ರಮ-ಸಮಾರಂಭ ಅವಳಿಗೆ ನಲವತ್ತಾದಾಗಲೂ ಇರುತ್ತಾ?’ ಅಂತ ಯೋಚಿಸುತ್ತಾ, ಹೈ ಸ್ಪೀಡ್‌ನಲ್ಲಿ treadmill ಮೇಲಿದ್ದೆ. ಎದುರುಗಿದ್ದ ನಿಲುವುಗನ್ನಡಿಯಲ್ಲಿ ವಾಣಿಯ ಸಪ್ಪೆ ಮೋರೆ ಕಂಡಿತು.

ನಾನು ಗಮನಿಸಿದಂತೆ ಯಾಕೋ ಈ ನಡುವೆ ಆಕೆಗೆ workoutನಲ್ಲಿ ಆಸಕ್ತಿಯಿಲ್ಲ. ‘ಅಯ್ಯೋ ಊರವರ ಉಸಾಬರಿ ನನಗ್ಯಾಕೆ? ಅಂತ ಸುಮ್ಮನಿರೊ ಜಾಯಮಾನ ಇದ್ದಿದ್ದರೆ. . . . . ಓಹ್‌! ಆದರೆ ನಾನು ಹಾಗಲ್ಲವಲ್ಲ! ಕಡೆಗೂ ಆಕೆ ನನ್ನ ಬಳಿ ಬಾಯಿಬಿಟ್ಟರು. "on wednesday I will turn 40. ಎಲ್ಲಿ ಸ್ವೀಟು? ನನ್ನ usual ಪ್ರಶ್ನೆ. ‘ಅಯ್ಯೋ ಸ್ವೀಟು ಇಲ್ಲ ಮಣ್ಣು ಇಲ್ಲ. ಇನ್ನೇನಪ್ಪ. . . .ನಲವತ್ತಾಯ್ತು ಎಲ್ಲಾ ಮುಗೀತು. ಹೋದ್ವಾರಾ ಡಾಕ್ಟ್‌ರೂ ಹೇಳಿದ್ರು, ಇನ್ನು ನೀನು ಎಷ್ಟೇ ವಾಕಿಂಗೂ ಜಾಗಿಂಗೂ ಏನೇ ಮಾಡಿದ್ರೂ ಇಷ್ಟೇ ಅಂತ. . .’ ಯಾರಪ್ಪ ಆ ಡಾಕ್ಟರ್‌ ಅಂತ ಯೋಚಿಸ್ತಿದ್ದೀರಾ? ಅವರು ವಾಣಿಯ ಪತಿದೇವರು!

ನನ್ನ ಬೆವರು ಹರಿಸುವಿಕೆ ಮುಂದುವರೆದಿತ್ತು. ಕಾಲೇಜಿನಲ್ಲಿ ಯಾವುದೋ ತರ್ಲೆ ಹುಡುಗನ ನೋಟ್‌ ಬುಕ್ನಲ್ಲಿ ಓದಿದ್ದ ಸಾಲುಗಳು ನೆನಪಿಗೆ ಬಂದವು! "……at 40 she is like Europe; all of ruin and at 50 she is like Siberia; everybody knows where is it, but nobody wants to go…"

ಛೇ, ಏನಿದು ಹಾಳು ಅಭಿರುಚಿ, ಯೋಚನೆ, ಆಲೋಚನೆ?! ಗಂಡಸಿಗೆ 60 ಆದಾಗ ಷಷ್ಟ್ಯಬ್ದ ಹೋಮ, 80ಆದರೆ ಅಷ್ಟಾಬ್ದಿ ಹವನ! ಅದೇ ಅವಳಿಗೆ ಮೂವತ್ತಾದರೆ ಮುಗೀತು, ನಲವತ್ತಾದರಂತೂ ಅವಳೊಂದು ಪಳೆಯುಳಿಕೆ ಅನ್ನುವ ಹಾಗೆ ನಮ್ಮ ದೃಷ್ಟಿ. ತಕ್ಷಣ ಏನನ್ನಿಸಿತು ಗೊತ್ತಾ? ಒಂದು ಸ್ವಚ್ಛ ದೇಹದಲ್ಲಿ ಸ್ವಚ್ಛಂದವಾಗಿ ಬಾಳುತ್ತಿರುವ ಆತ್ಮವನ್ನು ಬದುಕಿರುವಾಗಲೇ ಹೇಗೆ ಪ್ರೇತಾತ್ಮ ಮಾಡುವುದು ಅನ್ನುವುದನ್ನು ಈ ಗಂಡು ಸಮಾಜದಿಂದಲೇ ಕಲಿಯಬೇಕು ಅಂತ!

ಹೌದು, ಹದಿನಾರರಲ್ಲಿ ಜೀವನದ ಬಗೆಗಿರುವ ಅದಮ್ಯ curiosity ಮೂವತ್ತರಲ್ಲಿರೋಲ್ಲ. ಇಪ್ಪತ್ತೆರಡರಲ್ಲಿರುವ ಕಾಮದಮಲು ನಲವತ್ತೈದಕ್ಕೂ ಬದಲಾಗಬಾರದೆ? ಅವಳಿಗೀಗ ತೊಗಲಿನ ಸ್ಪರ್ಶಕ್ಕಿಂತ ಬೌದ್ಧಿಕ ಸಾಂಗತ್ಯ ಬೇಕು. ಇಷ್ಟಕ್ಕೂ ಬದುಕು ಬರೀ ಹಸಿವಿನಿಂದಾದದ್ದಲ್ಲ. ನಾನಂತೂ ಬದುಕನ್ನು ಒಂದು ಸುಂದರ metamorphosis ಅಂದುಕೊಂಡಿದ್ದೇನೆ. ಅವರ್ಯಾಕೆ ಹೀಗಂದುಕೊಳ್ಳೋಲ್ಲಾ? ಬೇರೆಯವರ ಬಗ್ಗೆ ದೂರುವುದಕ್ಕೆ ಮುಂಚೆ ಒಮ್ಮೆ ನಾವೇ ಕೇಳಿಕೊಳ್ಳೋಣ; ‘ನಮಗಾದರೂ ನಮ್ಮ ದೇಹದಿಂದ ಆಚೆಯದ್ದೇನಾದರು ಯೋಚಿಸಲು ಸಾಧ್ಯವಾಗಿದೆಯಾ?’

ಅಂದಹಾಗೆ ಮೊನ್ನೆ ಸಿನೆಮಾ ನಟನೊಬ್ಬನ interview ಓದಿದೆ. ಅವನು ಹೇಳಿರುವ "today’s 40 is 20!" ಮಾತನ್ನು ಒಪ್ಪವಾಗಿ ಕತ್ತರಿಸಿಕೊಂಡು ನನ್ನ ಕನ್ನಡಿಗೆ ಅಂಟಿಸಿಕೊಂಡಿದ್ದೇನೆ! ಇಂದೋ, ಮುಂದೆಯೋ ಒಟ್ಟಿನಲ್ಲಿ ಇಂತಹ ಉತ್ಕಟ ಪ್ರಚೋದನೆಯ ಅವಶ್ಯಕತೆ ಯಾರಿಗೂ ಇರಬಹುದಲ್ಲಾ?!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X