Horoscope April 26: ಈ ರಾಶಿಯವರಿಗೆ ವಿಶೇಷ ಧನ ಲಾಭ: ಮನಸ್ಸಿನ ಆಸೆ ಈಡೇರುವ ದಿನ, 12 ರಾಶಿಗಳ ಸಂಪೂರ್ಣ ಜಾತಕ ಫಲ

Horoscope April 26: ಏಪ್ರಿಲ್ 26ರ ಶನಿವಾರದಂದು ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಏಪ್ರಿಲ್ 26ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ

ಉತ್ಸಾಹ ಮತ್ತು ಶಕ್ತಿಯಿಂದ ತುಂಬಿದ ದಿನವಾಗಿರುತ್ತದೆ. ಮನದ ಆಸೆಗಳು ಈಡೇರುವ ದಿನ. ಉತ್ತಮ ಅವಕಾಶಗಳು ಒಲಿದು ಬರುವುದು. ನಿಯಮಿತ ದಿನಚರಿಯನ್ನು ಕಾಪಾಡಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Horoscope April 26

ವೃಷಭ ರಾಶಿ

ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಪ್ರಯತ್ನಿಸಿ. ಸುತ್ತಮುತ್ತಲಿನವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಕೆಲವು ಅನಿರೀಕ್ಷಿತ ಲಾಭಗಳಾಗುವ ಸಾಧ್ಯತೆಯಿದೆ.

ಮಿಥುನ ರಾಶಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಮತ್ತು ಶಕ್ತಿ ದೊರೆಯುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ.

ಕರ್ಕಾಟಕ ರಾಶಿ

ವೃತ್ತಿ ಬದುಕಿನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗುವುದು. ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಿ.

ಸಿಂಹ ರಾಶಿ

ಹೊಸ ಸವಾಲುಗಳನ್ನು ತೆಗೆದುಕೊಂಡು ಹೊಸ ಗುರಿಗಳತ್ತ ಮುನ್ನಡೆಯುವ ಸಮಯ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇಂದಿನ ದಿನ ನಿಮಗೆ ಶುಭವಾಗಿರುವುದು.

ಕನ್ಯಾ ರಾಶಿ

ಇಂದು ನಿಮಗೆ ಮಹತ್ವದ ದಿನವಾಗಿರುತ್ತದೆ. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ.ಕಠಿಣ ಪರಿಶ್ರಮದ ಫಲ ಸಿಗುವುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

ತುಲಾ ರಾಶಿ

ನೀವು ಮಾಡುವ ಕೆಲಸಕ್ಕೆ ಸಹೋದ್ಯೋಗಿಗಳ ಬೆಂಬಲ ಸಿಗುವುದು. ಆರೋಗ್ಯವು ಸಾಮಾನ್ಯವಾಗಿಯೇ ಇರುತ್ತದೆ. ಆದರೆ ನಿಮ್ಮ ಮಾನಸಿಕ ಆರೋಗ್ಯದ ಕಡೆಗೂ ಗಮನ ಹರಿಸಿ.

ವೃಶ್ಚಿಕ ರಾಶಿ

ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳು ಸ್ಥಿರವಾಗಿರುತ್ತವೆ. ಆದರೆ ಪ್ರಮುಖ ಹೂಡಿಕೆಗಳನ್ನು ಮಾಡುವ ಮೊದಲು ಎಚ್ಚರಿಕೆ ಇರಲಿ.

ಧನು ರಾಶಿ

ಧೈರ್ಯ ಮತ್ತು ಸಕಾರಾತ್ಮಕತೆಯಿಂದ ತುಂಬಿದ ದಿನವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದು ಸಾಧ್ಯವಾಗುವುದು.

ಮಕರ ರಾಶಿ

ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಮಾಡುವ ಕೆಲಸಗಳಿಗೆ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರಕ್ರಮದತ್ತ ವಿಶೇಷ ಗಮನ ಕೊಡಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಹೊಸ ಅವಕಾಶಗಳು ದೊರೆಯುತ್ತವೆ. ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.

ಮೀನ ರಾಶಿ

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಸಹೋದ್ಯೋಗಿಗಳ ಬೆಂಬಲದಿಂದ ಹೆಚ್ಚಿನ ಪ್ರಯೋಜವಾಗಿಲ್ಲ.ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+