ಬೆಂಗಳೂರಿನಲ್ಲಿ ದೇಶದ ಮೊದಲ B28 ಬುಲೆಟ್ ರೈಲು ನಿರ್ಮಾಣ, ಹೊಸ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್
ಭಾರತದ ಮೊದಲ ಬುಲೆಟ್ ರೈಲು ಬೆಂಗಳೂರಿನಲ್ಲಿ ತಯಾರಾಗಲಿದೆ. ಅತೀ ವೇಗದ ರೈಲು ನಿರ್ಮಾಣದ ತಂತ್ರಜ್ಞಾನ ಹೊಂದಿರುವ 'ಆದಿತ್ಯಾ' ಹೆಸರಿನ ಘಟಕವನ್ನು ಹೊಸದಾಗಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸ್ಥಾಪಿಸಲಾಗಿದೆ. ಈ ಘಟಕವನ್ನು ಶನಿವಾರ ಬೆಂಗಳೂರಿಗೆ ಭೇಟಿ ನೀಡಿದ್ದ ರೈಲವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು. ಇಡೀ ಘಟಕವನ್ನು ವೀಕ್ಷಿಸಿ ಬಳಿಕ ಮಾತಣಾಡಿದರು.
ಬೆಂಗಳೂರಿಗೆ ಬಂದ ಅಶ್ವಿನಿ ವೈಷ್ಣವ್ ಅವರು ಬಿಇಎಂಎಲ್ ಗೆ ಭೇಟಿ ನೀಡಿದರು. ಭಾರತದ ಮೊದಲ ಬುಲೆಟ್ ರೈಲು 'B28' ಬೆಂಗಳೂರಿನ ಬಿಇಎಂಎಲ್ (BEML) ನ ಆದಿತ್ಯ ಘಟಕದಲ್ಲಿ ನಿರ್ಮಾಣಗೊಳ್ಳಲಿದೆ. ಇಲ್ಲಿರುವುದು ಅತಿವೇಗದ ರೈಲು ತಂತ್ರಜ್ಞಾನ ಸಂಕೀರ್ಣವಾಗಿದೆ. ದೇಶೀಯವಾಗಿ ವೇಗದ ರೈಲು ತಯಾರಾಗಲಿದೆ. ದೇಶದಲ್ಲೇ ಅಭಿವೃದ್ಧಿಪಡಿಸುವುದು ಸ್ವದೇಶಿ ಎಂಜಿನಿಯರಿಂಗ್‌ಗೆ ಪ್ರಮುಖ ಮೈಲಿಗಲ್ಲು ಸಾಧನೆ ಇದು ಎಂದು ಅವರು ಬಣ್ಣಿಸಿದ್ದಾರೆ.

ಇನ್ನು ಹೊಸದಾಗಿ ಉದ್ಘಾಟನೆಗೊಂಡ ಆದಿತ್ಯ ಸಂಕೀರ್ಣವನ್ನು ಬಿ-28 ಬೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅತಿವೇಗದ ರೈಲು ಸಾರಿಗೆಯ ಪರಿವರ್ತನಾ ಶಕ್ತಿಯಾಗಿದೆ. ಭವಿಷ್ಯದಲ್ಲಿ ಸಾಕಷ್ಟು ರೈಲುಗಳಲ್ಲಿ ಇಲ್ಲಿ ತಯಾರಾಗಲಿವೆ. ಇಲ್ಲಿ ತಯಾರಾಗುವ ರೈಲುಗಳು ಪ್ರಮುಖ ನಗರಗಳನ್ನು ಬೆಸೆಯುತ್ತವೆ. ಅದಕ್ಕೆ ಅವರು ಚೆನ್ನೈ-ಬೆಂಗಳೂರು ಅತಿವೇಗದ ರೈಲು (HSR) ಮಾರ್ಗವನ್ನು ಉದಾಹರಣೆಯಾಗಿ ಬಳಸಿದರು. ಬುಲೆಟ್ ರೈಲಿನ ಕಾರ್ಯಾಚರಣೆಯ ನಂತರ ಪ್ರಯಾಣದ ಸಮಯ ಕೇವಲ 73 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಮಾಹಿತಿ ಕೊಟ್ಟರು.
2027ರ ವೇಳೆಗೆ ಬುಲೆಟ್ ರೈಲು ಉತ್ಪಾದನೆ ಗುರಿ
ದೇಶದಲ್ಲಿ ಮೊದಲ ಬುಲೆಟ್ ರೈಲು 'B28' ಅನ್ನು 2027ರ ಮಾರ್ಚ್ ವೇಳೆಗೆ ಉತ್ಪಾದಿಸುವ ಗುರಿಯನ್ನು ರೈಲ್ವೆ ಸಚಿವಾಲಯ ನಿಗದಿಪಡಿಸಿದೆ. ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) 2024ರ ಅಕ್ಟೋಬರ್‌ನಲ್ಲಿ ಬಿಇಎಂಎಲ್‌ಗೆ ಎರಡು ಅತಿವೇಗದ ರೈಲು ಸೆಟ್‌ಗಳನ್ನು ವಿನ್ಯಾಸಗೊಳಿಸಿ, ತಯಾರಿಸಿ ಮತ್ತು ಕಾರ್ಯಾರಂಭ ಮಾಡಲು ಗುತ್ತಿಗೆ ನೀಡಿತ್ತು.
"B28 ಉತ್ಪಾದನೆಯು ಪ್ರಸ್ತುತ ಬಿಇಎಂಎಲ್‌ನಲ್ಲಿ ನಡೆಯುತ್ತಿದೆ. ಒಂದು ಗಂಟೆಗೆ ಗರಿಷ್ಠ 280 ಕಿ.ಮೀ.ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿರುವ ರೈಲ ಇದಾಗಿದೆ. ಎರಡು ದೇಶೀಯ ರೋಲಿಂಗ್ ಸ್ಟಾಕ್ ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಗೊಳಿಸಲಾಗುವುದು. ಮೊದಲ ರೈಲು 2027ರ ಮೊದಲ ತ್ರೈಮಾಸಿಕದೊಳಗೆ ಸಿದ್ಧವಾಗುವ ಸಾಧ್ಯತೆಯಿದೆ. ಭಾರತ ನಿರ್ಮಿತ ಬುಲೆಟ್ ರೈಲು ಸೆಟ್‌ಗಳು ಮೇಲೆ ಹಲವಾರು ಪರೀಕ್ಷೆ, ಪ್ರಯೋಗಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
2027ರ ದ್ವಿತೀಯಾರ್ಧದಲ್ಲಿ ರೈಲು ಕಾರ್ಯಾಚರಣೆ
ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯ ಭಾಗವಾಗಿ ಆರಂಭದಲ್ಲಿ 97 ಕಿ.ಮೀ. ಉದ್ದದ ಸೂರತ್-ವಾಪಿ ನಡುವೆ B28 ಬುಲೆಟ್ ರೈಲನ್ನು ಕಾರ್ಯಾಚರಣೆಗೆ ಇಳಿಸಲಾಗುವುದು. ಈ ಮಾರ್ಗವು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಭಾಗವಾಗಿದೆ. ಇಲ್ಲಿ 2027ರ ಆಗಸ್ಟ್ ವೇಳೆಗೆ ಕಾರ್ಯಾಚರಣೆಗೆ ನಡೆಸುವ ಗುರಿ ರೈಲ್ವೆ ಇಲಾಖೆ ಹಾಕಿಕೊಂಡಿದೆ. ಎಲ್ಲವು ಅಂದುಕೊಂಡಂತಾದರೆ ಇನ್ನೊಂದು ವರ್ಷದಲ್ಲಿ ಬುಲೆಟ್ ರೈಲು ಬೆಂಗಳೂರಿನಲ್ಲಿ ಸಿದ್ಧವಾಗಲಿವೆ ಎಂದರು.
Sri Ashwini Vaishnaw, Hon’ble Union Minister for Railways, Information & Broadcasting, and Electronics & Information Technology, visited the BEML Tippasandra Campus in Bengaluru today to inaugurate Aditya , a specialized complex dedicated to the manufacturing of high-speed rail.… pic.twitter.com/beZCYuXgNf
— PIB in Karnataka (@PIBBengaluru) April 25, 2026
ಕರ್ನಾಟಕಕ್ಕೂ ಗುಡ್‌ನ್ಯೂಸ್
ಇದಕ್ಕು ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಕರಾವಳಿಯ ಮಂಗಳೂರು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು, ಬೆಂಗಳೂರು-ಮುಂಬೈಗೆ ಸೂಪರ್ ಫಾಸ್ಟ್ ಹಾಗೂ ಸ್ಲೀಪರ್ ವಂದೇ ಭಾರತ್ ರೈಲು ಸೇರಿ ಎರಡು ಹೊಸ ರೈಲುಗಳ ಕಾರ್ಯಾಚರಣೆ ಶೀಘ್ರವೇ ಆರಂಭಿಸುವುದಾಗಿ ಅವರು ಘೋಷಿಸಿದರು. ಇದರಿಂದ ಕರ್ನಾಟಕದ ವಿವಿಧ ಜಿಲ್ಲೆಗಳ ಜನರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ. ಶೀಘ್ರವೇ ರೈಲು ಕಾರ್ಯಾಚರಣೆಗಳ ಅಧಿಕೃತ ವೇಳಾಪಟ್ಟಿ ಬಿಡುಗಡೆ ನಿರೀಕ್ಷಿಸಬಹುದಾಗಿದೆ..














Click it and Unblock the Notifications