ಬೆಂಗಳೂರು ರೈಲು ತಯಾರಿಕೆ ಕೇಂದ್ರ; ಬುಲೆಟ್ ರೈಲು ಉತ್ಪಾದನಾ ಘಟಕ ಓಪನ್: ತೇಜಸ್ವಿ ಸೂರ್ಯ
ಕರ್ನಾಟಕ ರಾಜ್ಯ ರಾಜಧಾನಿ, ಐಟಿ ಕೇಂದ್ರ, ಉದ್ಯಾನ ನಗರಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಇದೀಗ ಬುಲೆಟ್ ರೈಲು ಹಬ್ ಆಗಿ ಬದಲಾಗಿದೆ. ಬುಲೆಟ್ ರೈಲು ತಯಾರಿಸುವ ದೇಶ ವಿವಿಧ ನಗರ ಬೆಂಗಳೂರು ಕೇಂದ್ರ ಬಿಂದುವಾಗಲಿದೆ. ಏಕೆಂದರೆ ದೇಶದ ಮೊದಲು ಬುಲೆಟ್ ರೈಲು ಬೆಂಗಳೂರಿನಲ್ಲಿ ತಯಾರಾಗುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದರಿಂದಾಗುವ ಪ್ರಯೋಜನ ಕುರಿತು ಅವರ ತಿಳಿಸಿದ್ದಾರೆ.
ಬೆಂಗಳೂರಿಗೆ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಭೇಟಿ ನೀಡಿದರು. ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್‌ನಲ್ಲಿ (BEML) ನಲ್ಲಿ ನಿರ್ಮಿಸಲಾದ B28 ಬುಲೆಟ್ ರೈಲು ಘಟಕ 'ಆದಿತ್ಯಾ' ವನ್ನು ಅವರು ಉದ್ಘಾಟಿಸಿ ಬೆಂಗಳೂರು, ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶದ ಜನರಿಗೆ ಶುಭ ಸುದ್ದಿ ನೀಡಿದ್ದಾರೆ. ಅದರ ಬೆನ್ನಲ್ಲೆ 'ಎಕ್ಸ್' ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಅವರು ದೇಶಿಯವಾಗಿ ಅದರಲ್ಲಿ ನಮ್ಮ ರಾಜ್ಯದ ಬೆಂಗಳೂರಿನಲ್ಲಿ ಬುಲೆಟ್ ರೈಲು ತಯಾರಾಗುತ್ತಿರುವುದನ್ನು ಅವರು ಶ್ಲಾಘಿಸಿದ್ದಾರೆ.

ರೈಲ್ವೆ ಸಚಿವರು ಇಂದು ಬಿಇಎಂಎಲ್‌ನಲ್ಲಿ ಬುಲೆಟ್ ರೈಲು ನಿರ್ಮಾಣ ಘಟಕವನ್ನು ಉದ್ಘಾಟಿಸಿದ್ದಾರೆ. ಇಲ್ಲವೇ ಹಲವು ತಿಂಗಳಲ್ಲಿ 'B28 ಬುಲೆಟ್ ರೈಲು' ಸಿದ್ಧವಾಗಲಿದೆ. ಈ ಮೂಲಕ ರಾಜಧಾನಿ ಬೆಂಗಳೂರು 'ಬುಲೆಟ್ ರೈಲು ಉತ್ಪಾದನಾ ಕೇಂದ್ರ' ಆಗಿ ಬದಲಾಗಲಿದೆ ಎಂದರು.
ಸಾವಿರಾರು ಉದ್ಯೋಗ ಸೃಷ್ಟಿ
ದೇಶಿಯವಾಗಿ ಬುಲೆಟ್ ರೈಲು ತಯಾರಿಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ 'ಮೆಕ್ ಇನ್ ಇಂಡಿಯಾ'ಗೆ ಉತ್ತೇಜನ ಸಿಗಲಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಬುಲೆಟ್ ರೈಲು ನಿರ್ಮಾಣವಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಆರ್ಥಿಕತೆಗೆ ಬೆಂಗಳೂರು ಮತ್ತಷ್ಟು ಕೊಡುಗೆ ನೀಡಲಿದೆ. ಬೆಂಗಳೂರು ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣರಾದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಅಶ್ವಿನಿ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
2027ರ ಹೊತ್ತಿಗೆ ಬುಲೆಟ್ ರೈಲು ತಯಾರು
ಬೆಂಗಳೂರಿನ ಬಿಇಎಂಎಲ್‌ನಲ್ಲಿ ಎರಡು ಬುಲೆಟ್ ರೈಲು ತಯಾರಿಸಲಾಗುತ್ತದೆ. ಈ ರೈಲಿ ರೇಕ್‌ಗಳು 2027ರ ಹೊತ್ತಿಗೆ ತಯಾರಾಗಲಿವೆ. ಅವುಗಳ ಹಲವು ಪರೀಕ್ಷೆ ಪೂರ್ಣಗೊಳಿಸಿ ಅದೇ ವರ್ಷ ಆಗಸ್ಟ್‌ನಲ್ಲಿ ಕಾರ್ಯಾಚರಣೆಗೆ ಇಳಿಸುವ ಚಿಂತನೆ ಇದೆ. ಈ ಮೂಲಕ ಭಾರತ್ ಬುಲೆಟ್ ರೈಲಿನಲ್ಲಿ ಮೈಲಿಗಲ್ಲು ಸಾಧನೆ ಮಾಡಲಿದ್ದಾರೆ. ದೇಶದ ಇಂಜಿನಿಯರಿಂಗ್ ಮತ್ತೊಂದು ಇತಿಹಾಸ ಬರೆಯಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರು ಹರ್ಷ ವ್ಯಕ್ತಪಡಿದ್ದಾರೆ.













Click it and Unblock the Notifications