ಬೆಂಗಳೂರು ಜನಗಣತಿ: ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯಕ್ಕೆ ಅಡ್ಡಿ- ಮುಂದಾಗಿದ್ದೇನು?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ 2027 ಕಾರ್ಯ ನಡೆಯುತ್ತಿದೆ. ಇದೀಗ ನಿಗದಿಯಂತೆ ಗಣತಿ ಕಾರ್ಯ ನಡೆಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ ಘಟನೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಜನಗಣತಿ 2027 ಕಾರ್ಯ ನಡೆಯುತ್ತಿದೆ. ಯಾರಾದರೂ ಅಧಿಕಾರಿಗಳು ತರಬೇತಿಗೆ, ಗಣತಿ ಕಾರ್ಯಕ್ಕೆ ಗೈರಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಶಿಸ್ತು ಕ್ರಮ ಜರುಗಿಸುವುದಾಗಿ ಈಗಾಗಲೇ ಜಿಬಿಎ ಎಚ್ಚರಿಕೆ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಗಣತಿ ಕಾರ್ಯಕ್ಕೆ ಬಂದರೆ ಮಹಿಳಾ ಸಿಬ್ಬಂದಿಯನ್ನು ಬೈದು ಅವಮಾನಿಸಲಾಗಿದೆ. ಅವರ ಗಣತಿ ಕಾರ್ಯಕ್ಕೆ ಅಡ್ಡಿ ಪಡಿಸಿದ್ದು ಕಳೆದ ವಾರ ಬೆಳಕಿಗೆ ಬಂದಿದೆ.

Census 2027

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 43ರಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ.ನಗರದ ಸುಲ್ತಾನಪಾಳ್ಯ ಮುಖ್ಯ ರಸ್ತೆಯ ಸಮೀಪದಲ್ಲಿರುವ ಪೇರಿ ಮೊನಾರ್ಕ್ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಸಂಬಂಧಿಸಿದ ನಿವಾಸಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

ಜನಗಣತಿ 2027 ಕಾರ್ಯಕ್ಕೆ ಸ್ವಯಂಸೇವಕರ ಆಹ್ವಾನ: ಏ.24ಕ್ಕೆ ನೇರ ಸಂದರ್ಶನ, ಗೌರವ ಧನ ಸೌಲಭ್ಯ
ಜನಗಣತಿ 2027 ಕಾರ್ಯಕ್ಕೆ ಸ್ವಯಂಸೇವಕರ ಆಹ್ವಾನ: ಏ.24ಕ್ಕೆ ನೇರ ಸಂದರ್ಶನ, ಗೌರವ ಧನ ಸೌಲಭ್ಯ

ಈ ಸಂಬಂಧ ಏಪ್ರಿಲ್ 25ರಂದು ಪರಿಶೀಲನೆ ವೇಳೆ ಸರ್ಕಲ್-2 ಮೇಲ್ವಿಚಾರಕರಾದ ಶ್ರೀಮತಿ ರಶ್ಮಿ ಆರ್ ಅವರು ಸ್ಥಳಕ್ಕೆ ಭೇಟಿ ನೀಡಿ ಗಣತಿ ಕಾರ್ಯಕ್ಕೆ ಅಗತ್ಯ ಮಾಹಿತಿಯನ್ನು ಕೇಳಿದ್ದಾರೆ. ಆಗ ಅಪಾರ್ಟ್ಮೆಂಟ್ ನಿವಾಸಿಯು ಸಹಕರಿಸಲು ನಿರಾಕರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಸಿಬ್ಬಂದಿಯೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ವರದಿಯಾಗಿದೆ.

ಪ್ರಕರಣ (FIR) ದಾಖಲು

ಈ ಕುರಿತು ಪಿರ್ಯಾದಿನ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಜನಗಣತಿ ಕಾಯ್ದೆ, 1948ರ ಸೆಕ್ಷನ್ 11(1) ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNS) ಕಲಂ 223 ಮತ್ತು 79 ಅಡಿಯಲ್ಲಿ ಡಾ. ಲೋಕೇಶ್, ಜನಗಣತಿ ಚಾರ್ಜ್ ಅಧಿಕಾರಿಗಳು ಪ್ರಕರಣ (FIR) ದಾಖಲಿಸಿಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಯುಕ್ತರಿಂದ ಖಡಕ್ ಎಚ್ಚರಿಕೆ

ಜನಗಣತಿ ಕಾರ್ಯವು ರಾಷ್ಟ್ರದ ಪ್ರಮುಖ ಕರ್ತವ್ಯವಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಡ್ಡಿಪಡಿಸುವುದು ಕಾನೂನುಬದ್ಧ ಅಪರಾಧವಾಗಿದೆ. ಈ ರೀತಿಯ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಎಚ್ಚರಿಸಿದ್ದಾರೆ.

ಸಾರ್ವಜನಿಕರಲ್ಲಿ ಆಯುಕ್ತರ ಮನವಿ

ಗಣತಿ ಕಾರ್ಯದ ಪ್ರಯುಕ್ತ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ಒದಗಿಸುವುದು ಪ್ರತಿಯೊಬ್ಬರ ಕಾನೂನುಬದ್ಧ ಕರ್ತವ್ಯವಾಗಿದೆ. ಆದ್ದರಿಂದ ನಗರ ನಾಗರಿಕರು ಸರ್ಕಾರಿ ಸಿಬ್ಬಂದಿಗೆ ಸಕರಿಸಬೇಕು. ಅಗತ್ಯ ಮಾಹಿತ ನೀಡುವಂತೆ ಅವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+