ಹೌದು ನಾವು ಹೆಂಗಸರೇ ಹೀಗೆ!


‘ಎಲ್ಲಾ ಹೆಂಗಸರಿಂದ.. ಎಲ್ಲಾ ಹೆಂಗಸರಿಗಾಗಿ.. ಎಲ್ಲಾ ಹೆಂಗಸರಿಗೋಸ್ಕರ’ ಈ ಲವಲವಿಕೆಯ ಹೊಸ ಅಂಕಣ ಶುಭಾರಂಭ! ಗಗನ ಸಖಿಯ ಈ ಬರಹಗಳಲ್ಲಿ ನೀವುಗಳಿದ್ದೀರಿ.. ನಿಮ್ಮ ಭಾವನೆ, ಕನಸು, ಕಳವಳ, ಉತ್ಸಾಹ ಎಲ್ಲವೂ ಇದೆ. ಅಂಕಣದ ಹೆಸರು ; ಹೆಂಗಸರಿಗೆ ಮಾತ್ರ! ಹೆಂಗಸರಲ್ಲದವರು ಇಲ್ಲಿಗೆ ಬಂದರೆ ನಮ್ಮದೇನೂ ಅಭ್ಯಂತರವಿಲ್ಲ! ಯಾವುದಕ್ಕೂ ನಿಮ್ಮಾಕೆಯ ಪರ್ಮೀಶನ್‌ ಪಡೆಯಿರಿ! ಇನ್ನು ನೀವುಂಟು, ನಿಮ್ಮ ಗಗನ ಸಖಿಯುಂಟು.

Welcome to Cozy Corner, Women Onlyಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮದಲ್ಲಿ ಪಾಠ, ರಸಪ್ರಶ್ನೆಗಳು ಬರುತ್ತಿದ್ದ ದಿನಗಳವು. ನನ್ನ ಅಮ್ಮ ಪ್ರತಿ ದಿನವೂ ಸಂಜೆ ಏಳು ಘಂಟೆಗೆ ಪುಸ್ತಕ ಪೆನ್ನು ಹಿಡಿದು ಟ್ರ್ಯಾನ್‌ಸಿಸ್ಟರ್‌ಅನ್ನು ಕಿವಿಗಂಟಿಸಿ ಕೂಡುತ್ತಿದ್ದಳು. ಪಾಠದ ನಂತರ ಪ್ರಶ್ನೆಗಳಿಗೆ ಕಾರ್ಡಿನಲ್ಲಿ ಉತ್ತರ ಬರೆದು ಮಾರನೆದಿನ ನಾನು ಸ್ಕೂಲ್‌ಗೆ ಹೋಗುವಾಗ ಪೋಸ್ಟ್‌ ಮಾಡಲು ಕೊಡುತ್ತಿದ್ದಳು.

ಒನ್‌ ಫ‚ೈನ್‌ ಡೇ, ಅಮ್ಮನಿಗೆ ಮೊದಲ ಬಹುಮಾನ ಬಂದಿದೆ, ಯಾವುದೋ ತರಬೇತಿಗಾಗಿ ಹದಿನೈದು ದಿನಗಳು ಫಿಲಿಪೈನ್ಸ್‌ಗೆ ಕರೆದುಕೂಂಡು ಹೋಗುವುದಾಗಿ ರೇಡಿಯೋನಲ್ಲಿ ಅನೌನ್ಸ್‌ ಮಾಡಿದರು. ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ! ಒಂದೆರಡು ದಿನ ಏನೋ ಸಡಗರ. . . ನಾನು ಶಾಲೆಯಲ್ಲಿ ಎಲ್ಲರಿಗೂ ನಮ್ಮಮ್ಮ ಫಿಲಿಪೈನ್ಸ್‌ಗೆ ಹೋಗ್ತಾಳೆ ಅಂತ ಮ್ಯಾಪ್ನಲ್ಲಿ (ಭೂಪಟ) ತೋರಿಸಿದ್ದೇ ತೋರಿಸಿದ್ದು!

ಅದೇ ತರಹ ಇನ್ನೊಂದು ಫ‚ೈನ್‌ ಡೆ, ನನ್ನ ಅಕ್ಕ ಎಸ್‌.ಎಸ್‌.ಎಲ್‌.ಸಿ ಓದುತ್ತಿರುವುದರಿಂದ ವಿದೇಶಕ್ಕೆ ಹೋಗೊಲ್ಲ ಅಂತ ಅಮ್ಮ ಡಿಕ್ಲೇರ್‌ ಮಾಡಿಬಿಟ್ಟಳು! ನನಗೆ ಅದೂ ಒಂದು ರೀತಿಯ ಸಡಗರವೇ ಆಗಿತ್ತು. . . . ಹೀಗೊಂದು ಘಟನೆಯಾಗಿ ಕಾಲ ಕಾದಿದೆ. . . ಮಾಗಿದೆ. . . ನಾನೀಗ ಅಮ್ಮನಾಗಿದ್ದೇನೆ.

ಕಳೆದ ವಾರ ಬ್ಯಾಂಕಿಗೆ ಹೋದಾಗ ವರ್ಗಾವಣೆಗೆ ಹೆದರಿ ನಾಲಕ್ಕು ಬಾರಿ ಪ್ರಮೋಷನ್‌ ನಿರಾಕರಿಸಿದ್ದ ಚಂದ್ರಿಕಾ ಸಿಕ್ಕಿದ್ದರು. ಅವರ ಯಜಮಾನರಿಗೆ ರೂರ್ಕಿ ಯೂನಿವರ್ಸಿಟಿಯಲ್ಲಿ ಗೆಸ್ಟ್‌ ಲೆಕ್ಚರರ್‌ ಆಗಿ ಆಮಂತ್ರಿಸಿರುವುದನ್ನು, ವಿದೇಶಿ ಕಾಲೇಜುಗಳಲ್ಲಿ ಉಪನ್ಯಾಸ ನೀಡಿ ಬಂದ ಅವರ ಗಂಡನ ಬಗ್ಗೆ ಹೆಮ್ಮೆಯಿಂದ ಬೀಗುತ್ತಿದ್ದರು. ಯಾಕೋ ಗೊತ್ತಿಲ್ಲ ‘ಅಮ್ಮ-ಫಿಲಿಪೈನ್ಸ್‌’ ಇಬ್ಬರೂ ನೆನಪಾದರು! ನನ್ನ ಸಂಸಾರ ಕಥೆ-ಕಾರ್ಪಣ್ಯಗಳ ಮಧ್ಯೆ, ಅವರಿಬ್ಬರೂ ನೆನಪಿಗಿಂತ ಹೆಚ್ಚೇನೂ ಆಗದೆ ಸುಮ್ಮನಾದರು !

ಇವತ್ತು ಬೆಳಗ್ಗೆ ಸಾರಿಕ ಫೋನ್‌ ಮಾಡಿದ್ದಳು. ಸೌತ್‌ ಆಫಿ‚್ರಕದಲ್ಲಿ ನಡೆಯುವ ಸೆಮಿನಾರ್‌ನಲ್ಲಿ ಹೆಂಗಸರ ಸ್ಥಿತಿ-ಗತಿಗಳ ಬಗ್ಗೆ ಪೇಪರ್‌ ಪ್ರೆಸೆಂಟ್‌ ಮಾಡಲು ಅವಕಾಶ ಬಂದಿದೆ ಅಂತ ಎಕ್ಸೈಟ್‌ಆಗಿ ಹೇಳ್ಕೊಂಡ್ಲು. ನನಗೆ ತಕ್ಷಣ ಅವಳಿಗೂ ಎಸ್‌.ಎಸ್‌.ಎಲ್‌.ಸಿ ಓದುತ್ತಿರುವ ಮಗಳಿರೋದು ನೆನಪಾಗಿ ‘ಅಯ್ಯೋ ಹೋಗಕ್ಕೆಹೇಗೆ ಅಗುತ್ತೆ, ಪಾಪ ಒಳ್ಳೆ ಅವಕಾಶ ಮಿಸ್‌ ಆಗ್ತಿದೆ’ ಅಂತ ನಾನೇ ಲೊಚಗುಟ್ಟಿದೆ. ‘ಅದೇನು ತೊಂದ್ರೆ ಇಲ್ಲ ಮಗಳು ಈಗ ದೊಡ್ಡವಳಾಗಿದ್ದಾಳೆ. ಸ್ವಲ್ಪ ಅಡುಗೇನೂ ಮಾಡ್ತಾಳೆ ಚೆನ್ನಾಗೂ ಓದ್ತಾಳೆ ಆದರೆ ಅವಳಪ್ಪನಿಗೆ ನಾನು ಹೋಗೋದು ಸರಿಹೋಗ್ತಿಲ್ಲ. . . .ಐ ಮೀನ್‌ ಇಷ್ಟ ಇಲ್ಲ. ಆದ್ರೆ ಮನೆ ಗುಟ್ಟು ಎಲ್ಲ್ರಿಗೂ ಹೇಳಕ್ಕಾಗತ್ತಾ ಸೋ, ಮಗಳಿಗೆ ಓದಿಸಬೇಕು ಅನ್ನೋ ನೆವ ಹೇಳೇ ನಾನು ಸೆಮಿನಾರ್ಗೆ ಬರೋಲ್ಲಾ ಅಂದೆ ’ ಎಂದಳು ಸಾರಿಕ. ನಮ್ಮಿಬ್ಬರ ಹರಟೆ ಕೊಂಚ ಮುಂದೆ ಸಾಗಿ ಮುಗಿಯಿತು.

ಅರೆ, ಇದನ್ನೆಲ್ಲ ನಿಮ್ಮ್ಹತ್ರ ಯಾಕೆ ಹೇಳ್ತಿದ್ದೀನಿ? ಯಾಕೆ ಗೊತ್ತಾ. . . ಈಚಿಚೆಗೆ ನನಗೆ ಡಿಸೆಕ್ಟ್‌ ಮಾಡೋ ಬುದ್ಧಿ ಜಾಸ್ತಿಯಾಗ್ಬಿಟ್ಟಿದೆ. ಯಾವುದನ್ನೂ ನೇರವಾಗಿ ತೊಗೋಳಕ್ಕೇ ಆಗ್ತಿಲ್ಲ. ಮನಸ್ಸಿನ ಜಾಡಿಯಲ್ಲಿ ಭಾವನೆಗಳ ಕಡಗೋಲು ತನ್ನ ಕೆಲಸ ಮಾಡ್ತಾನೆ ಇರುತ್ತೆ. ಮಾತಿನಲ್ಲಿ ಅದನ್ನು ಹೇಳ್ಕೊಳ್ದೆ ಹೋದ್ರೆ ತಲೆ ಸಿಡಿದು ಹೋಗತ್ತೆ ಅನ್ನಿಸುತ್ತೆ. ಆದ್ರೆ ಯಾರ್‌ಹತ್ರ ಹೇಳ್ಕೊಳ್ಳಲಿ? ‘ ಸಂಸಾರ ಗುಟ್ಟು ವ್ಯಾಧಿ ರಟ್ಟು ’ ಅಂತ ಬೆಳ್‌ಕೊಂಡ್‌ ಬಂದ್ಬಿಟ್ಟಿದ್ದೀನಲ್ಲ. ನನ್ನ ಗುಟ್ಟುಗಳನ್ನು ಗುಟ್ಟಾಗಿ ಕೇಳಿಸ್ಕೊಳ್ಳೋಕೆ, ಮನಸ್ಸಿನ ದ್ವಂದ್ವಗಳನ್ನು ಹಂಚಿಕೊಳ್ಳೋಕೆ ನಿಮಗಿಂತ ಬೆಸ್ಟ್‌ ಫ‚ೆ್ರಂಡ್‌ ಇನ್ನ್ಯಾರು ಸಿಕ್ಕ್ತಾರೆ ಅನ್ನಿಸಿತು. ಅದಕ್ಕಾಗಿ ಈ ಮನೋ ವ್ಯಾಪಾರ ವಿನಿಮಯ ನಿಮ್ಮ್ಹತ್ರ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+