• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ವೇತಾಭವನದಲೀ..ಹೂವಿಗೆ ಬಣ್ಣತಂದವನೆ..ಒಲವೆ ಮಿಸ್‌ಮಯಾ!

By Staff
|

ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ ಮುಂಗಾರು ಮಳೆ ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚಿತ್ರಾನ್ನ(245).

ಶ್ರೀವತ್ಸ ಜೋಶಿ

Mungaru Male and America President George Bush couples!ರೀ ಪಿಕ್ಚರ್‌ಗೆ ಕರ್‍ಕೊಂಡ್ಹೋಗ್ತೀರಾ?"ಎಂದವಳು ಬೇರಾರೂ ಅಲ್ಲ, ಅಮೆರಿಕ ದೇಶದ ಈಗಿನ ಪ್ರಥಮ ಮಹಿಳೆ ಲಾರಾ ಬುಶ್! ಕೇಳಿದ್ದು ಮತ್ತಾರನ್ನೂ ಅಲ್ಲ, ದೇಶದ ಪ್ರಥಮಪುರುಷನಾದ ಅಂದರೆ ರಾಷ್ಟ್ರಾಧ್ಯಕ್ಷನಾದ ಜಾರ್ಜ್ ಡೂಬ್ಯಾ ಬುಶ್‌ನನ್ನು! ಪ್ರಥಮಪುರುಷನಾದರೂ ಅವನಿಗೆ ಪುರುಷತ್ವವೇ ಇಲ್ಲ ಎಂಬ ಕುಹಕ ಡೆಮೊಕ್ರೇಟ್‌ಪಕ್ಷದವರದು ಮಾತ್ರವಲ್ಲ ಕೆಲವು ರಿಪಬ್ಲಿಕನ್ಸೂ ಹಾಗಂತಾರೆ ಎಂಬ ಗುಮಾನಿಯಿದೆ, ಆ ಮಾತು ಬೇರೆ. ಇರಲಿ, ಊರಿಗೆ ಅರಸನಾದರೂ ತಾಯಿಗೆ ಮಗ ಇದ್ದಂತೆ, ದೇಶಕ್ಕೆ (ಪ್ರಪಂಚಕ್ಕೇ?) ಅಧ್ಯಕ್ಷನಾದರೂ ಲಾರಾಗೆ ಜಾರ್ಜ್‌ಬುಶ್ ಗಂಡನೇ ತಾನೆ?

ಲಾರಾ ಆ ಪ್ರಶ್ನೆಯನ್ನು ಕೇಳಿದ ಸ್ಥಳ ವ್ಹೈಟ್‌ಹೌಸ್‌ನ ವೆರಾಂಡಾ. ಸಮಯ ಮುಸ್ಸಂಜೆ, ದಿನದ ದುಡಿಮೆಯ ದಣಿವಾರಿಸುವ ಹೊತ್ತು. ಅವಳ ಕೈಯಲ್ಲಿ ಆಗ ಇದ್ದದ್ದು ಅವತ್ತಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ.

ವಾಷಿಂಗ್ಟನ್ ಪೋಸ್ಟ್ ಅಂದರೆ ಅಮೆರಿಕದ ಅತಿಪ್ರತಿಷ್ಠಿತ ದಿನಪತ್ರಿಕೆ. ಆದರೆ ಅಮೆರಿಕಾಧ್ಯಕ್ಷನಾಗಿರುವವರಾರೂ ಆ ಪತ್ರಿಕೆನ ಇಷ್ಟಪಡೊಲ್ಲ. ಯಾವಾಗ ಅದು ವಾಟರ್‌ಗೇಟ್ ಹಗರಣದ ಫ್ಲಡ್‌ಗೇಟ್‌ಗಳನ್ನೆಲ್ಲ ತೆರೆದು ಆಗಿನ ಅಧ್ಯಕ್ಷ ನಿಕ್ಸನ್ನನನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತೋ ಅವತ್ತಿಂದ ಅಧ್ಯಕ್ಷಗಾದಿಯಲ್ಲಿರುವವನಿಗೆ ಪೋಸ್ಟ್ ಎಂದರೆ ಘೋಸ್ಟ್‌ಗಿಂತಲೂ ಹೆಚ್ಚು ಭಯ. ಬುಶ್ ಸಹ ಅದಕ್ಕೆ ಹೊರತೇನಲ್ಲ.

ಇರಾಕ್ ಮೇಲೆ ಅಮೆರಿಕದ ದಾಳಿಗಿಂತಲೂ ಕಟುವಾಗಿ ಬುಶ್‌ನ ಸಮರನೀತಿಯನ್ನು ಟೀಕಿಸಿ ದಾಳಿಮಾಡಿ ಬರೆಯುವ ವಾಷಿಂಗ್ಟನ್ ಪೋಸ್ಟ್ ಅಂತಂದ್ರೆ ಬುಶ್ ಪ್ರಕಾರ ಕಾಂಪೋಸ್ಟ್! ಪೇಪರ್ ಹಂಚೋ ಹುಡುಗ ದಿನಾಬೆಳಿಗ್ಗೆ ವಾಷಿಂಗ್ಟನ್ ಪೋಸ್ಟನ್ನು ಶ್ವೇತಭವನದ ಮುಂದಿನ ಗೇಟ್ ಬಳಿ ಬಿಸಾಡಿಹೋಗುತ್ತಾನೆ, ಆಮೇಲೆ ಅದು ಒಳಗೆ ಟೀಪಾಯ್ ಮೇಲೆ ರಾರಾಜಿಸುತ್ತದೆ, ಆದರೂ ಬುಶ್ ನೋಡೋದು/ಓದೋದು ಅದರಲ್ಲಿನ ಕಿಡ್ಸ್ ಪೋಸ್ಟ್ ಸೆಕ್ಷನ್ ಮಾತ್ರ!

ಇಂತಿರುವಾಗ ವಾಷಿಂಗ್ಟನ್ ಪೋಸ್ಟನ್ನು ಕೈಯಲ್ಲಿ ಹಿಡಿದು ನಿಂತಿರುವ ಹೆಂಡತಿಯನ್ನು ಕಂಡರೆ ಬುಶ್‌ಗೆ ಡಬಲ್ ಹೆದರಿಕೆ (ಸೂಪರ್‌ಪವರ್ ಇರುವ ಅಧ್ಯಕ್ಷನಾಗಿದ್ದರೂ)! ಆದರೆ ಪುಣ್ಯಕ್ಕೆ ಅವತ್ತು ಲಾರಾ ತೋರಿಸಿದ್ದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಮೂವೀಸ್ ಲಿಸ್ಟಿಂಗ್ ಇರೋ ಪೇಜು. ಅದರಲ್ಲೂ ಬೆಟ್ಟು ಮಾಡಿ ತೋರಿಸಿ ಗಂಡನ ಗಮನ ಸೆಳೆದದ್ದು ಒಂದು ಪರ್ಟಿಕ್ಯುಲರ್ ಸಿನೆಮಾದ ಹೆಸರು. ತನ್ನ ಗಂಡನಿಗೆ ಬೀಟಿಂಗ್ ಅರೌಂಡ್ ದಿ ಬುಶ್ ಮಾಡಿದ್ರೆ ಇಷ್ಟ ಆಗೋಲ್ಲ ಎಂದು ಗೊತ್ತಿರುವ ಜಾಣೆ ಲಾರಾ, ನೇರವಾಗಿ ವಿಷಯಕ್ಕೆ ಬಂದಿದ್ದಳು.

ಮಂ...ಗ...ರು...ಮೇ...ಲ್" - ಬುಶ್‌ನಿಂದ ಓದಲ್ಪಟ್ಟಿತು ಲಾರಾಳ ಇಂಡೆಕ್ಸ್‌ಫಿಂಗರ್ರು ಪಾಯಿಂಟಿಸುತ್ತಿದ್ದ ಆ ಹೆಸರು. Mungaru Male ಎಂದು ಬೋಲ್ಡ್ ಅಕ್ಷರಗಳಲ್ಲಿದ್ದದ್ದರಿಂದ ಕನ್ನಡಕವಿಲ್ಲದೇ ಓದೋದಕ್ಕಾಯ್ತು. ವ್ಹಿಚ್ ಸ್ಪೀಸಿಸ್ ಆಫ್ ಎನಿಮಲ್ ಇಸ್ ದಿಸ್ ಮಂಗರು? ದಟ್ ಟೂ ಓನ್ಲಿ ಮೇಲ್?" ಬುಶ್ ಪ್ರಶ್ನಿಸಿದ ಮುಗ್ಧಮಾನವನಾಗಿ. Mungaru Female ಅಂತಿದ್ದಿದ್ರೆ ಬುಶ್‌ನಿಗೂ ಸ್ವಲ್ಪ ಆಸಕ್ತಿ ಕೆರಳಿರ್‍ತಿತ್ತೋ ಏನೊ.

ಅಯ್ಯೋ ನನ್ ಕರ್ಮ. ಅದು ಮೇಲ್ ಅಲ್ಲಾರೀ... ಮಲೆ... ಮಳೆ. ಕನಡಾ ಭಾಷೆಯಲ್ಲಿ ಮಳೆ ಎಂದರೆ ರೈನ್."

ಮತ್ತೆ, ಮಂಗರು ಎಂದರೆ? ಅಸ್ಟ್ರೇಲಿಯಾದ ಕಾಂಗರು ಥರನಾ?"

ಇಟ್ಸ್ ನಾಟ್ ಮಂಗರು. ದಟ್ ಯು ಇಸ್ ಪ್ರೊನೌನ್ಸ್ಡ್ ಆಸ್ ಉ. ಸೋ, ಮುಂಗಾರು. ಮೀನಿಂಗ್ ಮಳೆಮಾರುತ."

ಕಳೆದವರ್ಷವಷ್ಟೇ The Rain ಅಂತ ಒಂದು ಇಂಗ್ಲಿಷ್ ಮೂವಿ ನೋಡಿದ್ವಲ್ಲೇನೇ? ಮತ್ಯಾಕೆ ಇನ್ನೊಮ್ಮೆ ರೈನಿನ ಫಿಲ್ಮು? ಅಷ್ಟಕ್ಕೂ ನಿನಗೆಲ್ಲಿಂದ ಬಂತು ಕನಡಾ ಭಾಷೆಯ ಫಿಲಂ ನೋಡೋ ಹುಚ್ಚು?"

ನಿಮಗ್ಗೊತ್ತಿಲ್ಲಾ, ನಾವು ಇಲ್ಲಿಂದ ಈಗ ಕೆಲ್ಸಗಳನ್ನೆಲ್ಲ ಔಟ್‌ಸೋರ್‍ಸ್ ಮಾಡ್ತೀವಲ್ಲಾ ಬ್ಯಾಂಗ್ಲೋರ್‌ಗೆ? ಇದು ಅಲ್ಲಿ ತಯಾರಾಗಿರುವ ಮೂವಿ!"

ಆದರೆ ಆ ನಿನ್ ಬ್ಯಾಂಗ್ಲೋರ್‌ನಲ್ಲಿ ಯಾರೂ ಕನಡಾ ಮಾತಾಡೋದಿಲ್ಲ ಅಂತ ಕೇಳಿದ್ದೆ. ಮತ್ಯಾಕೆ ಕನ್ನಡ ಫಿಲಂ ತಯಾರಿಸ್ತಾರೆ?" - ಬುಶ್ ಸ್ವಲ್ಪ ಭೋಳೇಸ್ವಭಾವದವನೆಂದು ಪ್ರತೀತಿಯಾದರೂ ಇಂಥ ಜನರಲ್‌ನಾಲೆಡ್ಜ್ ಚೆನ್ನಾಗಿ ಅಪ್ಡೇಟ್ ಮಾಡಿಟ್ಟುಕೊಂಡಿದ್ದಾನೆ ಅನ್ನಿಸ್ತು ಲಾರಾಳಿಗೆ.

ಓಹ್ ನೋ! ಬ್ಯಾಂಗ್ಲೋರ್ ಬಿಟ್ರೆ ಆ ಸ್ಟೇಟಲ್ಲಿ ಬೇರೆಲ್ಲ ಕಡೆ ಪೀಪಲ್ ಸ್ಪೀಕ್ ದ್ಯಾಟ್ ಸ್ವೀಟ್ ಲ್ಯಾಂಗ್ವೇಜ್..."

ಬಟ್ ಹೌ ಕಮ್ ನೀನು ಅದರಲ್ಲಿ ಅಷ್ಟು ಇಂಟೆರೆಸ್ಟೆಡ್?"

ರೀ...ಅದೇನಾದ್ರೂ ಇರ್ಲಿಬಿಡಿ, ಹೋಗೋಣಾರೀ ಕನ್ನಡ ಪಿಕ್ಚರ್‌ಗೆ..."

ಹನೀ, ಪ್ಲೀಸ್ ಹನೀ, ನನ್ನ ತಲೆ ತಿನ್ನಬೇಡ!" - ಯುನಿವರ್ಸಲ್ ಗಂಡೋಕ್ತಿ, ಬುಶ್ ಮಹಾಶಯನಿಂದ ಪ್ರೀತಿಯಪತ್ನಿ ಲಾರಾಳಿಗೆ.

ಹನಿ ಹನಿ ಹನಿ ಹನಿ ರಂಗಿನಧಾರೆ... ಹನಿ ಹನಿ ರಂಗಿನ ಧಾರೆ..." - ಲಾರಾ ಗುನುಗಿದಳು ಡ್ಯಾನ್ಸ್ ಮಾಡುವ ಭಂಗಿಯೊಂದಿಗೆ ಸೊಗಸಾಗಿ ಕುಣಿಯುತ್ತ. ಇನ್ ಫ್ಯಾಕ್ಟ್, ಕುಣಿದು ಕುಣಿದು ಬಾರೆ... ಒಲಿದು ಒಲಿದು ಲಾರೆ... (ಸೀತಾ -> ಸೀತೆ; ಇದ್ದಹಾಗೆ ಲಾರಾ -> ಲಾರೆ)- ಹಾಗೆಂದು ಬುಶ್ ತನ್ನನ್ನು ಕರೆದುತಬ್ಬಿಕೊಳ್ಳಲಿ ಅಂತ ಲಾರೆಗೆ ಅನಿಸುತಿದೆ ಯಾಕೋ ಇಂದು...

ವ್ಹಾಟ್ಸ್ ದ್ಯಾಟ್ ಹನಿ ಹನಿ?"

ಓಹ್ ಅದಾ, ನಮ್ಮ ಲೇಡೀಸ್ ಕ್ಲಬ್ಬಲ್ಲಿ ಒಬ್ರು ಕನ್ನಡದವ್ರು ಇದ್ದಾರೆ, ಇಲ್ಲೇ ಫೆಡರಲ್ ಗವರ್ನ್ಮೆಂಟ್ ಕೆಲ್ಸ ಮಾಡೋರು. ಅವರ ಮನೆಗೆ ಹೋಗಿದ್ದೆ. ಅಲ್ಯಾವ್ದೋ ಉದ್ಯಾ ಟೀವಿ ಅಂತೆ. ಆ ಚಾನೆಲ್‌ನಲ್ಲಿ ಬರ್ತಿತ್ತು ಒಂದು ಅಡ್ವೈರ್ಟೈಸ್‌ಮೆಂಟು! ರಿಲಯನ್ಸ್ ಅಂತ ಸೆಲ್‌ಫೋನ್ ಕಂಪೆನೀದಂತೆ..."

ನೀನ್ಯಾಕೆ ಅವರ್ ಮನೆಗೆ ಹೋಗಿದ್ದೆ?"

ಅದೂ... ಏನಂದ್ರೆ, ಅದು... ಅವರು ನನಗೆ ಬಿಸಿಬೇಳೆಭಾತ್ ಹೇಗ್ಮಾಡೋದು ಅಂತ ಕಲಿಸಿಕೊಡ್ತೇನೆ ಅಂದಿದ್ರು... ಹಾಗೆ ಸ್ವಲ್ಪ ಹೊತ್ತು ಇದ್ದು ಹರಟೆಕೊಚ್ಚಿ ಬಂದೆ. ಅಲ್ಲಿ ಅವರ್‍ಮನೆ ಟಿವಿಯೂ ತನ್ನಷ್ಟಕ್ಕೇ ಅರಚ್ತಾ ಇತ್ತು, ಎಲ್ಲಾ ಕಚಡಾ ಪ್ರೊಗ್ರಾಮ್ಸ್ ಅಂತೆ, ಆದ್ರೂ ಯಾಕೋ‌ಏನೊ ಅದೇ ಚಾನೆಲ್ ಹಾಕ್ಕೊಂಡಿದ್ರಪ್ಪ..."

ಮುಂದೆ ಓದಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X