• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಎಂಥ ವೇಷವಯ್ಯಾ...? (ರಸಪ್ರಶ್ನೆ)

By Staff
|


ಕನ್ನಡ ಜಾಣ-ಜಾಣೆಯರಿಗೆ ರಾಜ್ಯೋತ್ಸವದ ಶುಭಾಶಯಗಳು. ರಾಜ್ಯೋತ್ಸವದ ಸುವರ್ಣ ಕರ್ನಾಟಕಕ್ಕೆ ಮೆರಗು ನೀಡುವ ಕ್ವಿಜ್‌ ನಿಮಗಾಗಿ ಕಾಯುತ್ತಿದೆ. ನ. 10ರೊಳಗಾಗಿ ಉತ್ತರ ಕಳುಹಿಸಿ, 25ಡಾಲರ್‌ ಮೊತ್ತದ ಬಹುಮಾನ ನಿಮ್ಮದಾಗಿಸಿಕೊಳ್ಳಿ.

  • ಶ್ರೀವತ್ಸ ಜೋಶಿ
ಮತ್ತೊಮ್ಮೆ ವಿಚಿತ್ರಾನ್ನದಲ್ಲಿ ರಸಪ್ರಶ್ನೆ ಸ್ಪರ್ಧೆ! ಇದು ಬಹುಜನರ ಬೇಡಿಕೆಯ ಮೇಲೆ ಎಂದರೂ ತಪ್ಪಲ್ಲ. ಈ ಸ್ಪರ್ಧೆಗೆ ಸಂದರ್ಭ ಏನು? ಇವತ್ತಿನ (ಅಕ್ಟೋಬರ್‌ 31) ಹ್ಯಾಲೊವಿನ್‌ ಡೇ ಮತ್ತು ನಾಳೆಯ (ನವೆಂಬರ್‌ 1) ಕನ್ನಡ ರಾಜ್ಯೋತ್ಸವ - ಈ ಎರಡೂ ಸಂಭ್ರಮಗಳಿಗೆ ಒಪ್ಪುವಂತಹ ಕ್ವಿಜ್‌ ಆಗಿ ಇದನ್ನು ರೂಪಿಸಬಹುದೇ?

ಹ್ಯಾಲೊವಿನ್‌ನ ಮಜಾ ಇರೋದೇ ಅತಿಭಯಾನಕವೆನಿಸುವ ವೇಷ (ಕಾಸ್ಟ್ಯೂಮ್ಸ್‌) ಹಾಕಿಕೊಂಡು ಮುಸ್ಸಂಜೆಯಲ್ಲಿ ಮನೆಮನೆಗಳಿಗೆ ಹೋಗಿ ಟ್ರಿಕ್‌-ಒರ್‌-ಟ್ರೀಟ್‌ ಎಂದು ಹೆದರಿಸಿ ಕ್ಯಾಂಡಿಭಿಕ್ಷೆ ಸಂಗ್ರಹಿಸುವುದರಲ್ಲಿ. ಅಂದರೆ ‘ವೇಷ ಹಾಕುವುದು’ ಹ್ಯಾಲೊವಿನ್‌ ಆಚರಣೆಯ ಅವಿಭಾಜ್ಯ ಅಂಗ.

ಆದರೆ ‘ವೇಷ ಹಾಕುವುದು’ ನಮ್ಮ ಕನ್ನಡ ಸಂಸ್ಕೃತಿಯಲ್ಲೂ, ನಮ್ಮಲ್ಲಿನ ಧಾರ್ಮಿಕ ಸಾಂಪ್ರದಾಯಿಕ ಆಚರಣೆಗಳಲ್ಲೂ ಬೇಕಾದಷ್ಟು ಇದೆ! ಉದಾಹರಣೆಗೆ ಹ್ಯಾಲೊವಿನ್‌ನಂತೆಯೇ ಶಿವರಾತ್ರಿಯಂದು ವಿಧವಿಧದ ವೇಷ ಧರಿಸಿ ರಾತ್ರಿಯಿಡೀ ಜಾಗರಣೆಗಾಗಿ ಮನೆಮನೆಗೆ ಹೋಗಿ ಕಿತಾಪತಿ ನಡೆಸುವ ಪರಿಪಾಟ ನಮ್ಮೂರಲ್ಲಿದೆ. ಕನ್ನಡನಾಡಿನ ಉದ್ದಗಲಕ್ಕೂ ವಿವಿಧ ಜನಾಂಗಗಳ ಹಬ್ಬಗಳು, ಆಚರಣೆಗಳು, ಜನಪದ ರೂಢಿಗಳು, ಕಲಾಪ್ರಕಾರಗಳನ್ನು ಅವಲೋಕಿಸಿದರೆ ‘ವೇಷ ಹಾಕುವುದು’ ನಮ್ಮಲ್ಲಿ ಪಾಶ್ಚಾತ್ಯರಂತೆ ವರ್ಷಕ್ಕೊಮ್ಮೆ ಹ್ಯಾಲೊವಿನ್‌ ವೇಳೆ ಮಾತ್ರವಲ್ಲ; ವರ್ಷದುದ್ದಕ್ಕೂ ವಿವಿಧ ಸಂದರ್ಭಗಳಲ್ಲಿ, ಸನ್ನಿವೇಶಗಳಲ್ಲಿ ನಾವು ‘ವೇಷ ಹಾಕುತ್ತೇವೆ’!

ಬಹುರೂಪಿಗಳ ಬೀದಿನಾಟಕಗಳು, ಸೋಮನ ಕುಣಿತ, ಸುಗ್ಗಿಯ ಕುಣಿತದಂತಹ ಕುಣಿತಗಳು, ಭೂತಾರಾಧನೆಯ ವಿವಿಧ ರೂಪಗಳು, ಬೆಂಗಳೂರಿನ ಕರಗದಿಂದ ಹಿಡಿದು ದಕ್ಷಿಣಕನ್ನಡದ ಕರಂಗೋಲುವರೆಗೆ, ಕೊಡಗಿನ ಕೊಂಬಾಟದಿಂದ ಹಿಡಿದು ಉತ್ತರಕರ್ನಾಟಕದ ಕರಡಿಮಜಲ್‌ವರೆಗೆ... ಪಟ್ಟಿ ಮಾಡುತ್ತ ಹೋದರೆ ಕರ್ನಾಟಕ ಸಂಸ್ಕೃತಿಯಲ್ಲಿ ವೇಷಗಳಿಗೇನೂ ಕೊರತೆಯಿಲ್ಲ.

ಹಾಗಾಗಿ, ಕರ್ನಾಟಕ ಸಂಸ್ಕೃತಿಯಿಂದ ‘ವೇಷ ಹಾಕುವ’ ಕೆಲ ತುಣುಕುಗಳನ್ನಾಯ್ದು ಒಂದು ಸಚಿತ್ರಪ್ರಶ್ನಾವಳಿಯನ್ನು ರೂಪಿಸಿದರೆ ಅದು ರಾಜ್ಯೋತ್ಸವ ಸುವರ್ಣ ಸಂಭ್ರಮಕ್ಕೆ ಹೇಳಿ ಮಾಡಿಸಿದಂತಾಗುತ್ತದೆ, ಮತ್ತು ಅಂತಹ ಕ್ವಿಜ್‌ ಇವತ್ತಿನ ವಿಚಿತ್ರಾನ್ನ ಸಂಚಿಕೆಯಾಗುತ್ತದೆ! ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರಿನಲ್ಲಿ ‘ಜನಪದ ಜಾತ್ರೆ’ಗಳನ್ನು ನಡೆಸುತ್ತದಾದರೆ ನಾವೂ ವಿಚಿತ್ರಾನ್ನ ರಸಪ್ರಶ್ನಾವಳಿಯ ರೂಪದಲ್ಲಿ ಕರ್ನಾಟಕ ಜನಪದ ಜಾತ್ರೆಯನ್ನು ಅಂತರ್ಜಾಲದಲ್ಲೇ ಆಚರಿಸಬಹುದಲ್ಲ!?

ರಸಪ್ರಶ್ನೆ ಸ್ಪರ್ಧೆಯ ಅಖಾಡಕ್ಕೆ ಧುಮುಕುವ ಮುನ್ನ ಸ್ಪರ್ಧೆಯ ಕೆಲವು ಸೂಚನೆಗಳನ್ನು, ನಿಯಮಗಳನ್ನು ಗಮನಿಸಿ.

* ಪ್ರಶ್ನಾವಳಿಯಲ್ಲಿ ಒಟ್ಟು 16 ಪ್ರಶ್ನೆಗಳಿವೆ. ಮೊದಲ ಹದಿನೈದು ಪ್ರಶ್ನೆಗಳ ಉತ್ತರಗಳು ಮಾತ್ರ ಪರಿಗಣನೆಯಾಗುತ್ತವೆ. 16ನೆಯದು ಕೇವಲ ಮನರಂಜನೆಗಾಗಿ ಇರುವ ಪ್ರಶ್ನೆ. ಪ್ರತಿಯಾಂದು ಪ್ರಶ್ನೆಯ ಜತೆಗಿರುವ ಚಿತ್ರವು ಉತ್ತರದ ಸುಳಿವಿನಂತೆ ನೆರವಾಗುತ್ತದೆ. ಅಷ್ಟೇ ಅಲ್ಲದೆ ಒಂದರಿಂದ-ಹತ್ತರವರೆಗಿನ ಉತ್ತರಗಳು ತಲಾ ನಾಲ್ಕಕ್ಷರಗಳ ಪದಗಳು ಮತ್ತು ಹನ್ನೊಂದರಿಂದ ಹದಿನಾರರವರೆಗಿನ ಉತ್ತರಗಳು ತಲಾ ಐದಕ್ಷರ ಎಂಬ ಅಂಶದಿಂದಾಗಿ ಉತ್ತರ ಹುಡುಕುವ ನಿಮ್ಮ ಕೆಲಸ ಇನ್ನೂ ಸರಳವಾಗುತ್ತದೆ.

* ನಿಮ್ಮ ಉತ್ತರಗಳನ್ನು ಬರಹ ಅಥವಾ ನುಡಿ ಫ‚ಾಂಟುಗಳನ್ನು ಉಪಯೋಗಿಸಿ ಬರೆದು ಕಳಿಸಿದರೆ ಉತ್ತಮ. ಅದು ನಿಮಗೆ ತೀರಾ ಕಷ್ಟ ಎಂದಾದರೆ ಮಾತ್ರ ಕಂಗ್ಲೀಷ್‌, ಇಂಗ್ಲೀಷ್‌ ಸಹ ಓಕೆ.

* ಉತ್ತರಗಳೊಂದಿಗೆ ನಿಮ್ಮ ಹೆಸರು, ಮತ್ತು ಈಗ ನೀವು ವಾಸವಾಗಿರುವ ಊರು (ದೇಶ)- ವಿವರಗಳು ಅಗತ್ಯ.

* ಎಲ್ಲ 15 ಉತ್ತರಗಳನ್ನೂ ಸರಿಯಾಗಿ ಬರೆದವರ ಪಟ್ಟಿ ಮಾಡಿ ಅದರಿಂದ ಲಾಟರಿ ಮೂಲಕ ಒಬ್ಬ ವಿಜೇತರ ಆಯ್ಕೆ.

* ಬಹುಮಾನ : 25 ಅಮೆರಿಕನ್‌ ಡಾಲರ್‌ ಮೊತ್ತದ ‘ಟಾರ್ಗೆಟ್‌’ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ ಗಿಫ‚್‌್ಟಕಾರ್ಡ್‌. ಅಮೆರಿಕೇತರ ಪ್ರದೇಶದ ಸ್ಪ-ರ್ಧಿಗಳಾರಾದರೂ ವಿಜೇತರಾದರೆ ಆಗ ಭಾರತೀಯ ಕರೆನ್ಸಿಯಲ್ಲಿ ತತ್ಸಮಾನ ಮೊತ್ತದ ಗಿಫ‚್‌್ಟ ವೋಚರ್‌ ಬಹುಮಾನ.

* ಪ್ರಾಯೋಜಕರು: ಅನಾಮಧೇಯರಾಗಿ ಉಳಿಯಬಯಸಿದ ಒಬ್ಬ ಸಹೃದಯಿ ಕನ್ನಡಿಗ.

* ಉತ್ತರಗಳು ತಲುಪಲು ಕೊನೆಯ ದಿನಾಂಕ: ನವೆಂಬರ್‌ 10, 2006. ವಿಳಾಸ: srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more