ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನ್‌ಜುರ್ಲಿ ಭೂತ ಹಿಡಿದಷ್ಟು ಪನ್‌?

By Staff
|
Google Oneindia Kannada News

ಪನ್‌ಜುರ್ಲಿ ಭೂತ ಹಿಡಿದಷ್ಟು ಪನ್‌?
ಜೋಶಿ ಅವರ ‘ಪನ್‌’(ಪೆನ್ನಲ್ಲ! )ಪುರಾಣ ನಿಮಗೆ ನೆನಪಿರಬಹುದು. ಅದನ್ನೋದಿದ ಓದುಗ ಪನ್‌-ಡಿತರಿಂದ ಇನ್ನಷ್ಟು ‘ಪನ್‌’ಚಾಮೃತ ಸೇವೆ ನಡೆದಿದೆ. ಒಪ್ಪಿಸಿಕೊಳ್ಳಿ!

ಪನ್‌-ಡಿತರೇ, ನೀವು ಹೀಗೆ ಮಾಡಿದರೆ ಹೇಗೆ ಸ್ವಾಮಿ? ವರ್ಷದ ಆರಂಭದಲ್ಲೆ ‘ಪನ್‌’ಚಾಂಗ ಪಠಣ ಮಾಡಿಸಿ, ‘ಪನ್‌’ಚಾಮೃತದ ಜೊತೆಗೆ ‘ಪನ್‌’ಚಗವ್ಯ ನೀಡಿದ್ದು ಸರಿಯೇ? ಅಹಲ್ಯೆ ಕಲ್ಲಾದ ನಿಮ್ಮ ಕಲ್‌‘ಪನ್‌’ಎ ಅದ್ಭುತ! ‘ರಾಕ್‌’ಇಂಗ್‌ ಅಹಲ್ಯೆಯನ್ನು ರಾಮನ ಸಂಪರ್ಕದಿಂದ ‘ರೋಲ್‌’ ಮಾಡಿಸಿದ ನಿಮ್ಮನ್ನ ಬೆಂಗ್ಳೂರ್‌ ಭಾಷೆಯಲ್ಲಿ ಹೆಳೋದಾದ್ರೆ ‘ಬಿಸ್ಕೀಟ್‌ ಹಾಕೊದ್ರಲ್ಲಿ ನಿಮ್ಮಂತ ‘ಪನ್‌’ಟ ಇನ್ನೊಬ್ರಿಲ್ಲ’.

ಸ್ವರ್ಗದ ಹೆಂಗಳೆಯರ ಅಸೂಯೆಗೆ ಮೇವಿತ್ತಷ್ಟೂ ಹಸುವಡಗದ ನಾರದನಿಗೇ, ತನ್ನ ಹಸುವಿಗೆ ಮೇವಿಡದ ಸಣ್ಣ ಕೇಸಿನಲ್ಲಿ ಸಿಕ್ಕಿಸಿ ಸಂ-ಕಾಟ ಕೊಟ್ಟ ನಿಮ್ಮ ತಲೆಬರಹ ಓದಿ, ನಾರದ ‘ಪನ್‌’ಖಾ ಚಾಲೂ ಮಾಡಿದ್ನೋ ಅಥವಾ ‘ಪನ್‌’ಚೆಯಿಂದ ಮುಖ ಮುಚ್ಚಿಕೊಂಡನೋ? ಹೇಳದಿದ್ದರೆ ಹೇಗೆ ಸ್ವಾಮಿ? ದೇವತೆಗಳಲ್ಲಿ ‘ಪನ್‌’ದ್ಯವಿಟ್ಟು ಫನ್‌ ನೋಡುವ ನಾರಾಯಣ ನಾಮಧಾರಿ ನಾರದನಿಗೇ, ‘ಪನ್‌’ಚ್‌ ಕೊಟ್ಟು ’ಪನ್‌’ಗನಾಮ ಹಾಕಿ, ಪನ್‌-ಚರ್‌ ಮಾಡಿದ್ರೆ ಹೇಗೆ ಸ್ವಾಮಿ?

ಇಷ್ಟೆಲ್ಲ ದೇವತೆಗಳನ್ನು ಖಂ(ಪನ್‌)ಡಿಸಿದ ನೀವು, ಭೂಲೋಕ ಪನ್‌-ಮುಖರಾದ ನಮ್ಮ ಪನ್‌-ಜಾಬದ ಮಿತ್ರರನ್ನು ಮರೆತದ್ದು ಸರಿಯೇ ಸ್ವಾಮಿ? ‘ಗಣ’ಪತಿಗೆ ತಗಣೆಯ ನ್ಯೆವೇದ್ಯ ಇತ್ತು ಕವಿನಾಶಕ ಪಡೆದ ಪನ್‌-ಡಿತೋತ್ತಮರೇ, ಕವಿ-ಪನ್‌-ಗವರ ಪನ್‌-ಚಾಯ್ತಿಯಲ್ಲಿ ನಿಮಗೆ ಪನ್‌-ನೀರಿನ ಸ್ವಾಗತವಲ್ಲದೆ ಇನ್ನೇನು ಸರಿ ಸ್ವಾಮಿ!

ಪ್ರ-ಪನ್‌-ಚದ ಇನ್ನೊಂದು ಭಾಗದಿಂದ,

- ಡಾ. ಮುರಳೀಧರ ಹತ್ವಾರ್‌; ಹೇಸ್ಟಿಂಗ್ಸ್‌, ಈಸ್ಟ್‌ ಸಸೆಕ್ಸ್‌, ಇಂಗ್ಲೆಂಡ್‌

*

ಆತ್ಮೀಯ ಜೋಶಿ,

ಪನ್‌ ಸ್ಪೆಷಲ್‌ ಖುಶಿಕೊಟ್ಟಿತು. ಅದೆಷ್ಟು ಪನ್‌ ಮಾಡಿದ್ದೀರಿ, ಪನ್‌ಜುರ್ಲಿ ದೈವ ಹಿಡಿದವರ ಹಾಗೆ!

- ಎಚ್‌. ಡುಂಡಿರಾಜ್‌; ಬೆಳಗಾವಿ

*

‘ಪನ್‌’ಟರ ‘ಪನ್‌’ಚತಂತ್ರಗಳ ಬಗ್ಗೆ ನನ್ನ ಒಂದೆರಡು ಹುಚ್ಚುತನದ ಮಾತುಗಳು. ಬೇಸರಿಸಬೇಡಿ. ಸುಮ್ನೆ ಹೀಗೆ ಅನ್ನಿಸಿದ್ದನ್ನು ಬರೆದಿರುವೆ. ಎಲ್ಲ ‘ಪನ್‌’ಗಳನ್ನು ‘ಪನ್‌’ನಾ ಹಾಕಿ ಸಮ್‌’ಪನ್‌’ನ (some) ಆಗುವ ಬದಲು ಸಮ್‌‘ಪನ್‌’ನ್ನವಾಗಿದೆ. (sum) ‘ಗನ್‌’ಆಧಿಪನ ಜೊತೆ ಅಯ್ಯ‘ಪನ್‌’, ಕೂಡಾ ‘ಗನ್‌’ಗಾಧರನ ಪುತ್ರನೇ. ನನ್ನ ಆರಾಧ್ಯ ದೈವ ‘ಪನ್‌’ಗನಾಮಧಾರಿಯನ್ನೂ ಉದಾಹರಿಸಬಹುದು ಅಲ್ಲವೇ. ಅಂತೂ ನಿಮ್ಮ ‘ಪನ್‌’ಚಾಮೃತ ಸೇವನೆಯಿಂದ ಮನ ಮುದಗೊಂಡಿತು. ಇದು ಅತಿಶಯೋಕ್ತಿಯಲ್ಲ. ‘ಪನ್‌’ನಗ ಪುಷ್ಪದ ಹಾರ ತುಂಬಾ ಸೊಗಸಾಗಿದೆ. ಪದ್ಯ ಬರೆಯುವ ನಾನು ನಿಮ್ಮೊಂದಿಗೆ ಈ ಬರೆದಾಟದಲ್ಲಿ ‘ಪನ್‌’ದ್ಯ ಕಟ್ಟಲು ಸಾಧ್ಯವಿಲ್ಲ. ಶರಣು ಶರಣು ಅಯ್ಯ‘ಪನ್‌’.

- ತಳುಕು ಶ್ರೀನಿವಾಸ; ಮುಂಬಯಿ

*

ನಮಸ್ಕಾರ ‘ಪನ್‌’ಡಿತರಿಗೆ. ತುಂಬಾ ದಿನಗಳ ನಂತರ (ಸರಿಯಾಗಿ 20 ವಾರಗಳ ನಂತರ) ನಿಮಗೆ ಪತ್ರಿಸುತ್ತಿದ್ದೇನೆ. ಈ ನಡುವೆ ವಿಚಿತ್ರಾನ್ನ ಹೊಟ್ಟೆ ತುಂಬ ತಿಂದಿದ್ದರೂ ಭಟ್ಟರಿಗೆ ಥ್ಯಾಂಕ್ಸ್‌ ಹೇಳಲು ಆಗದಿದ್ದದ್ದಕ್ಕೆ ಕ್ಷಮೆ ಇರಲಿ. ಈ ವಾರದ ವಿಚಿತ್ರನ್ನ ‘ಪನ್‌’ಟಾಸ್ಟಿಕ್‌ ಆಗಿತ್ತು! ಧನ್ಯವಾದಗಳು.

- ಸನತ್‌ ಕೆ. ಮೈಸೂರು

*

ಚಿತ್ರಾನ್ನಕ್ಕೂ ವಿಚಿತ್ರಾನ್ನಕ್ಕೂ ಇರುವ ವ್ಯತ್ಯಾಸ ‘ಪನ್‌’ ಎಂಬ ವಿಷಯ ಗೊತ್ತಿರಲಿಲ್ಲ. ನೀವೇ ಹೇಳಿದಹಾಗೆ ಸ್ವಲ್ಪ ಡೋಸ್‌ ಹೆಚ್ಚಾಯಿತು ಅಥವಾ ವಿಷಯ ಜೀರ್ಣವಾಗಲು ಸಮಯ ಬೇಕಾಯಿತು ಅನ್ನಿಸ್ತು.

- ಅನುರಾಧಾ ಅರುಣ್‌, ಚಿಕಾಗೋ

*

ಆತ್ಮೀಯ ಜೋಶಿಯವರೇ, ಧನ್ಯವಾದಗಳು. ಈ ವಾರದ ವಿಚಿತ್ರಾನ್ನ ನಿಜವಾಗಿಯೂ ಡೆಲೀಶಿಯಸ್‌ ಆಗಿದೆ. ‘ಪನ್‌’ಚಾಮೃತ ಮತ್ತು ’ಪನ್‌’ಚಭಕ್ಷ್ಯ ಒಟ್ಟಿಗೆ ಭುಜಿಸಿದಂತಾಯ್ತು.

- ಪ್ರಕಾಶ್‌ ಮತ್ತು ವತ್ಸಲಾ; ಆಕ್‌ಲೇಂಡ್‌, ನ್ಯೂಜೀಲ್ಯಾಂಡ್‌

*

ಇವತ್ತಿನ ವಿಚಿತ್ರಾನ್ನವನ್ನು ಓದಿದೆ. ತುಂಬಾ ಚೆನ್ನಾಗಿತ್ತು ವಿಷಯಗಳ ಜೊತೆ ಹಾಸ್ಯವೂ ಬೆರೆತಿತ್ತು. ಈ ಯಾಂತ್ರಿಕ ಬದುಕಿನಲ್ಲಿ ಹೋರಾಟಗಳ ನಡುವೆ ನಗುವುದು ತುಂಬಾ ಕಷ್ಟ. ನೀವು ನಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸಿದ್ದೀರಿ!

- ವಾಣಿ ಭಟ್‌; ಮಿಷಿಗನ್‌

*

ಪನ್‌ಗಳ ಮಳೆಯಲ್ಲಿ ಇಂದು ಬೆಳಿಗ್ಗೆಯೇ ತೋಯ್ದಿದ್ದೆ. ಪ್ರತಿಕ್ರಿಯಿಸಲಾಗಿರಲಿಲ್ಲ.

ಮನ ಸೂರೆಗೊಂಡ ಪನ್‌ ಅಂದರೆ ಅಮ್ಮಣೆ (ಅಪ್ಪಣೆ ಅಲ್ಲ) :-) ನಿಮ್ಮಿಂದಲೆ ಒಮ್ಮೆ ತಿಳಿದಿದ್ದ ಅಹಲ್ಯೆಯ Rock and Roll ಕಥೆಯನ್ನು ರಸವತ್ತಾಗಿ ಓದುವ ಭಾಗ್ಯ ಮತ್ತೊಮ್ಮೆ ದೊರಕಿದಂತಾಯಿತು. ಗತಪ್ರತ್ಯಾಗತಕ್ಕೆ ಕೊಂಡಿಸಿದ್ದ (ಲಿಂಕಿಸಿದ) ಲೇಖನವನ್ನು ಕೂಡ ಓದಿದೆ. ಅಬ್ಬಬ್ಬಾ ಎನ್ನುವಷ್ಟು ಇದೆ ಗತಪ್ರತ್ಯಾಗತಗಳ ಸಂಗ್ರಹ.

ಸುಬ್ಬು (ನಿಮ್ಮ ಮನೆಗೆ ಬಂದಿದ್ದ ‘ಪ್ರೀತ್ಸೋದ್‌ ತಪ್ಪಾ’ ಸುಬ್ಬು ಅಲ್ಲ, ಲಾರ್ಡ್‌ ಸುಬ್ರಮಣ್ಯಸ್ವಾಮಿ) ಮತ್ತು ಗಣೇಶ ಲೋಕವನ್ನು ಯಾರು ಮೊದಲು ಸುತ್ತಿ ಬರುತ್ತಾರೆ ಎಂಬ ಆಟ ಆಡಿದುದನ್ನು ಹೀಗೆ ಹೇಳಬಹುದಲ್ಲವೆ?

ಸುಬ್ಬು ಸಬ್ವೇ, ಫ್ರೀವೇ ಎಲ್ಲಾ ಸುತ್ತಿ ಲೋಕ ಪ್ರದಕ್ಷಿಣೆ ಹಾಕಿ ಬರುವ ಹೊತ್ತಿಗೆ ಗನ್‌ಪತಿಯು ಗೌರಿ ಗನ್‌ಗಾಧರನನ್ನು ರೌಂಡ್‌ ಹೊಡೆದು ಸುಬ್ಬುಗೆ ಪನ್‌ಗನಾಮ ಹಾಕಿದ್ದನು.

ರಸಪ್ರಶ್ನೆ ಈ ಬಾರಿ ಏಕೋ ಇಲ್ಲವಲ್ಲಾ? ಸರಿ, ನಾನೇ ನಿಮಗೆ ಕೇಳಿಬಿಡುತ್ತೇನೆ. (ಇದೇನಪ್ಪಾ, ‘ಸೂರ್ಯಂಗೇ ಟಾರ್ಚಾ’ ತರಾ... ಪನ್ನರಸಂಗೇ(ಪನ್ನರಸ = ಪನ್‌ + ಅರಸ) ಪನ್ನರಸಪರ್ಶ್ನೇನಾ(ಪನ್ನರಸಪ್ರಶ್ನೆ = ಪನ್‌ + ರಸಪ್ರಶ್ನೆ) ಅಂದುಕೊಂಡಾರು ಮಂದಿ) ಮೇಲಿನ ಸುಬ್ಬು-ಗನ್‌ಪತಿ ಕಥೆಯ ವೈಶಿಷ್ಟ್ಯತೆ ಏನು ಹೇಳಿ? ಇದನ್ನು ‘ಬಿಸ್ಕೇಟಾಯಣ’ ವಿಚಿತ್ರಾನ್ನಕ್ಕೂ ಹಾಕಬಹುದು, ಈ ವಾರದ ‘ದೇವತೆಗಳಿಗೆ-ಪನ್‌ಚಾಭಿಷೇಕ’ ವಿಚಿತ್ರಾನ್ನಕ್ಕೂ ಹಾಕಬಹುದು. ಬಹುಶ: ಗನ್‌ಪತಿಯು ಸುಬ್ಬುಗೆ ಹಾಕಿದ ಬಿಸ್ಕೇಟ್‌ ಅತ್ಯಂತ ಪುರಾತನವಾದುದಿರಬೇಕು.

- ಮನೋಹರ್‌ ಕೆ ಎನ್‌; ಕ್ಯಾನ್ಸಸ್‌

*

ಡಿಯರ್‌ ಮಿಸ್ಟರ್‌ ಜೋಶಿ, ನಿಮ್ಮನ್ನು ಅಭಿನವ ಪನ್‌ಪ ಎಂದು ಬಿರುದಿಸಿ ಗೌರವಿಸಲಾಗಿದೆ!

ಎಲ್ಲರೂ ಪನ್‌ಚಾಕ್ಷರಿ ಗವಾಯಿಗಳೆ! ಮಾಡಿದ್ದೆಲ್ಲ ಪನ್‌ಚಕಜ್ಜಾಯವೇ... ಈ ಪನ್‌ಚ ಭೂತಗಳಿಗೆ ನಮಸ್ಕಾರ!

- ಪನ್‌ಜರ ಪಕ್ಷಿ! ; ಬೆಂಗಳೂರು

*

ವಿಚಿತ್ರಾನ್ನದ ಪನ್‌ ಭರಿತ ಟಿಫನ್‌ ಫನ್‌ಫುಲ್ಲಾಗಿತ್ತು! ಬರುವ ವಾರದ ವಿಚಿತ್ರಾನ್ನದ ನಿರೀಕ್ಷೆಯಲ್ಲಿ,

- ಉಪೇಂದ್ರ ಚಿಪಳೂಣಕರ್‌; ಬೆಂಗಳೂರು

*

ನಿಮ್ಮ ‘ಪನ್‌’ ಗಳ ವಿಚಿತ್ರಾನ್ನ ಚೆನ್ನಾಗಿದೆ. ನೀವು ಇದರಲ್ಲಿ ‘ಪನ್‌’ಡಿತರು ಎಂಬುದರಲ್ಲಿ ಎರಡು ಮಾತಿಲ್ಲ!

- ಕೆ.ವಿ.ರಾಮಪ್ರಸಾದ್‌; ಕ್ಯಾಲಿಫೊರ್ನಿಯಾ

*

ಪನ್‌ ವಿಶೇಷಾಂಕ ಚೆನ್ನಾಗಿದೆ. ‘ಅಹಲ್ಯೆಯ ರಾಕ್‌ ಏಂಡ್‌ ರೋಲ್‌...’ ತುಂಬ ಸಕ್ಕತ್ತಾಗಿದೆ!

- ಸಂಜಯ ರಾವ್‌; ವರ್ಜೀನಿಯಾ

*

ನಿಮ್ಮ ಇಂದಿನ ಅಂಕಣ ಓದಿದೆ. ಯಥಾಪ್ರಕಾರ, ಮುಂದಕ್ಕೆ ಯೋಚಿಸಲು ಪ್ರೇರೇಪಿಸಿತು. ನಾರದನ ದನದ ರೋದನ: ಅವನ ದನ ಗೂಳಿಯಾಗಿದ್ದು ಅದು ಹಸುವನ್ನು ನೋಡಿದ್ದಿದ್ದರೆ ನಾರದನ ದನದ ನದನ ಆಗಬಹುದು. ಇಲ್ಲಿ ಸಾಲಾಗಿ ನಾಲ್ಕು ದನ ಆಗುತ್ತದೆ.

ಹಾಗೆಯೇ --ನಂದನಂದ, ‘ನಂದಾ? ನಂದಾದೀಪ?’ ಎಂದು ನಂದ ಹೇಳಿದ್ದನ್ನು ಇನ್ನೊಬ್ಬರಿಗೆ ಹೇಳಬಹುದು.

ಇತರ ಇದೇ ರೀತಿಯವು -ಶಿವನವನ ವನಚಾರಿ.

ಶಿವ ವಿಷ್ಣುಗಳವರವರ ವರ ವರನಿಗೆ ಕೊಟ್ಟು ಮಾಯವಾದರು. ಅದೇ ಪದ ಬೇಡ, ಬರಿ ನಕಾರ, ದಕಾರಗಳನ್ನು ಬಳಸಿ ಏನು ಮಾಡಬಹುದು ಎಂದು ನೋಡಿದರೆ, ನಂದನಂದನನಂದ, ‘ನಂದನಂದಿನಿ! ನಂದ, ನಿಂದ? ನಂದನ ನಂದದ ನಂದಾದೀಪ?’

- ಕೃಷ್ಣಪ್ರಿಯ; ಕ್ಯಾಲಿಫೋರ್ನಿಯಾ

*

punಜೆ ಮಂಗೇಶ ರಾಯರೂ, ಬಿ. ಆರ್‌. punತುಲು ಅವರೂ, ಸಿಖ್‌ punಥ ವನ್ನು ಅಭ್ಯಾಸ ಮಾಡಲು punಜಾಬಿಗೆ ಹೋಗಿದ್ದರೋ ಇಲ್ಲವೋ ನಾಕಾಣೆ. ಸದ್ಗುಣ ಸಂpunನೆಯಾದ ನಮ್ಮ ಪಕ್ಕದ ಮನೆ punಕಜಾ ಮಾತ್ರ ತನ್ನ ಗಂಡನ ಜತೆ ಉತ್ತರ ಭಾರತದ ಯಾತ್ರೆಗೆ ಹೊರಟಳು. punಚಾಂಗ ನೋಡಿಸಿ ಹೊರಡುವ ದಿನ ಗೊತ್ತು ಮಾಡಿದಳು. ದಾರಿಗೆ ಇರಲಿ ಅಂತ punಛೇರು ಕಾರದ ಅವಲಕ್ಕಿ ಕಟ್ಟಿಕೊಂಡಳು. ಗಂಡ ಕೂಡ punಚೆ, ಜುಬ್ಬಾ ಇಟ್ಟುಕೊಂಡ. ಬಾಯಲ್ಲಿ punಚಾಕ್ಷರೀ ಮಂತ್ರವನ್ನು ಪಠಿಸುತ್ತಾ ದೇವರ ದರ್ಶನ ಮಾಡಿದಳು. ಭಗವಂತನ ಪಾದ punಕೇರುಹಗಳಿಗೆ ನಮಸ್ಕಾರ ಮಾಡುವಾಗಲೂ ಈ punಡಾಗಳ ಕಾಟ ತಪ್ಪಲಿಲ್ಲವಲ್ಲಾ ಎನ್ನುತ್ತಾ ಹೋಟೆಲ್‌ ರೂಮಿಗೆ ಬಂದಳು. ಸೆಕೆ ತುಂಬಾ ಇತ್ತು. punಖಾ ಆನ್‌ ಮಾಡಿದಳು. ತಂಪಾದ ಜೂಸ್‌ಗೆ ಎಷ್ಟು ಅಂದ್ರೆ, ಅಂಗಡಿಯವನು ‘punದ್ರಾ ರುಪಿಯಾ’ ಎಂದ. ಜೂಸ್‌ ಕುಡಿದು, ಕ್ಯಾಸೆಟ್‌ನಲ್ಲಿ punತುವರಾಳಿ ರಾಗ ಕೇಳುತ್ತಾ ನಿದ್ದೆ ಮಾಡಿದಳು.

- ಪ್ರೊ। ಟಿ. ಮಹಾದೇವ್‌ ರಾವ್‌; ಬ್ರೂಕ್‌ಪೊರ್ಟ್‌, ನ್ಯೂಯಾರ್ಕ್‌

*

ಇನ್ನೂ ಒಂದಿಷ್ಟು ಪನ್‌ಗಳು.

ಪಂಚಾಮೃತ = ಪನ್‌ ಚಾ ಅಮೃತ

ಪಂಚೆ = ಪನ್‌, ಛೆ! = ಪನ್ನಾರು

ಪಂಥ = ಪನ್‌ ಥಾ (ಅಬ್‌ ತೋ ನಹೀ)

ಪಂಜರ = ಪನ್‌ಗಳನ್ನು ಕೇಳಿ ಕೇಳಿ ನೆರೆಕೂದಲಾಗಿರುವ ಸ್ಥಿತಿ

ಪಾದಿಪಂಚ = ಅರ್ಧ ಪನ್‌ ಕೂಡ (ಪಾದಿಪಂಚ ಎನ್ನುವುದು ಕಾದಿನವ, ಟಾದಿನವ, ಪಾದಿಪಂಚ, ಯಾದ್ಯಷ್ಟ ಎಂಬ ಸೂತ್ರಗಳಲ್ಲಿ ಒಂದು)

ಪಂದ್ಯಾನ = ಪನ್‌ಗಳ ಬಗ್ಗೆ ಯೋಚನೆ ಮಾಡುತ್ತಿರುವವನಿಗೆ ಮಹಾಪ್ರಾಣದರಿವಿಲ್ಲದವ ಹೇಳುವುದು (ಉದಾ: ನಿನಗೇಕೋ ಯಾವಾಗ್ಲೂ ಪನ್‌ ದ್ಯಾನ?

ಪಂಚಮಿ = ಪನ್‌ಗಳನ್ನು ಇಷ್ಟಪಡುವ ಸ್ವಭಾವ (ಪುನ್‌ ಚುಮ್ಮ್ಯ್‌)

- ಎಚ್‌.ಕೆ. ರಾಮಪ್ರಿಯನ್‌; ಮೇರಿಲ್ಯಾಂಡ್‌

*

This episode was one of the best in the series- hats-off !! When I was in mangalore (Doing my undergrad), we had a small group who were also interested in pun and shabda nishpatthi.. but that was largely restricted to kannada as we all were from kannada medium schools (upto 10th class) and also because we had a strange keeLarime" about our own english. anyway, we used to organize tom-dick-and-harry (making one member of the team to spell/pronounce words/clusters by actions etc) compition and mimes using kannada puns. I remember one of them, "pun-jaabi pun-ditariMda pan-ganama haakisikoMDa la-pan-ga"!

- Raghuveer KR; Morgontown, West Virginia

*

The shlOka "AkASAt patitam tOyam..." if pronounced by a tamilian, you have said, sa becomes cha therefore...chA garam. Correct. Also they pronounce cha for sha... in which case the shloka might become too embarassing to be written here! I think you have purposefully left this one!!!

- Krishnananda V (Kitty); Bangalore

*

This vichitranna episode is really funny. Thanks for mentioning Sirsi Maarikamba temple, it is closer to home in my native, Uttara Kannada.

- Usha Bhat; Florida

*

Youve written a nice article about pun special. I read it just now. Really nice with a lot of humor. Keep it up!

- Jayashree; Bangalore


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X