ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಖನಾದದಿಂ ಪುಳಕಗೊಂಡವರು...

By Staff
|
Google Oneindia Kannada News

ಶಂಖದ ಬಗ್ಗೆ ಪುಂಖಾನುಪುಂಖವಾಗಿ ಬರೆದಿರುವ ನಿಮ್ಮ ಲೇಖನವನ್ನೋದಿದೆ. ತುಂಬ ಸೊಗಸಾಗಿ ಮೂಡಿ ಬಂದಿದೆ. ಯಾವುದೇ ಒಂದು ವಸ್ತುವಿನ ಬಗ್ಗೆ ಇಷ್ಟು ನಿರಾಳವಾಗಿ ಅದ್ಹೇಗೆ ನಿಮಗೆ ಬರೆಯಲು ಸಾಧ್ಯವಾಗುತ್ತೊ ನಾ ಕಾಣೆ! ಇಟ್ಸ್‌ ಜಸ್ಟ್‌ ಅಮೇಜಿಂಗ್‌!!

ಈ ಲೇಖನ ಓದಿದಾಗ ನನಗೆ ನಾನು ಚಿಕ್ಕವಳಾಗಿದ್ದಾಗ (ಅಥವಾ ಸಣ್ಣವಳಾಗಿದ್ದಾಗ ? ;-) ಮರಳಲ್ಲಿ ಕಪ್ಪೆ ಚಿಪ್ಪು, ಜೇಡಿ ಮಣ್ಣು, ಚಿಕ್ಕ ಚಿಕ್ಕ ಶಂಖ ಇವನ್ನೆಲ್ಲ ಸಂಗ್ರಹಿಸುತ್ತಿದ್ದುದು ನೆನಪಾಯ್ತು. ಯಾರೇ ಹೊಸ ಮನೆ ಕಟ್ಟುತ್ತಿರಲಿ ಅವರ ಮನೆ ಮುಂದಿನ ಮರಳು ಗುಡ್ಡೆಗೆ ನಾನೂ ನನ್ನ ಫ್ರೆಂಡ್ಸ್‌ ಹಾಜರ್‌... ಕಪ್ಪೆ ಚಿಪ್ಪು-ಶಂಖ ಇತ್ಯಾದಿ ಕಲೆಕ್ಟ್‌ ಮಾಡಲು :-)

ಗಣಿತದ ಫಿಬೊನಾಸಿ ಸೀರಿಸ್‌ಗೂ ಶಂಖಕ್ಕೂ ನೀವು ಕಲ್ಪಿಸಿರುವ ಸಂಬಂಧ ನಿಜಕ್ಕೂ ಅದ್ಭುತ! ನಮ್ಮ ವಿಚಿತ್ರಾನ್ನದ ಖ್ಯಾತಿ ಹೀಗೇ ಫಿಬೊನಾಸಿ ಸೀರಿಸ್‌ ಥರ ಒಂದೊಂದು ಸಂಚಿಕೆಯಲ್ಲೂ ಹೆಚ್ಚುತ್ತ ಹೋಗಲಿ ಎಂದು ಹಾರೈಸುತ್ತ,

ನಿಮ್ಮ ಅಭಿಮಾನಿ,

- ಸಂಧ್ಯಾರಾಣಿ; ಬೆಂಗಳೂರು

*

ನಾನೂ ಶಂಖ ಲೇಖನವನ್ನು ಓದಿದೆ; ಮತ್ತೆ ಶಂಖನಾದದ ಆಡಿಯಾ ಫೈಲ್‌ ಊದಿದೆ! ಕೇಳಿಸ್ತಾ? ಶಂಖನಾದ ಚೆನ್ನಾಗಿದೆ.

- ಲೀನಾ ಪಿ; ಬೆಂಗಳೂರು

*

ಬಹಳ ಚೆನ್ನಾಗಿತ್ತು ಶಂಖದ ಬಗ್ಗೆ ಲೇಖನ. ತುಂಬ ಚೆನ್ನಾಗಿ ವಿಷಯಗಳನ್ನ ಸಂಗ್ರಹಿಸಿ ಕೊಟ್ಟಿದ್ದೀರಿ. ಶಂಖದ ವಿಧಗಳು, ವೈಜ್ಞಾನಿಕ, ಸಾಮಾಜಿಕ, ಪಾರಮಾರ್ಥಿಕ ವಿಶ್ಲೇಷಣೆ ಎಲ್ಲವನ್ನೂ ಟಚ್‌ ಮಾಡಿದೀರ. ಬಹಳ ಸಂತೋಷ ಆಯ್ತು. ಫಿಬೊನಾಸಿ ಸಂಖ್ಯೆಗಳಿಗೂ ಶಂಖಕ್ಕೂ ಇರೊ ಸಂಬಂಧದ ಬಗ್ಗೆ ಗೊತ್ತಿರ್ಲಿಲ್ಲ.

- ಕಾರ್ತಿಕ್‌ ಸಿ ಎಸ್‌; ನ್ಯೂಯಾರ್ಕ್‌

*

ಇವತ್ತಿನ ‘ಶಂಖ ಲೇಖನ’ ಉತ್ತಮ ಮಾಹಿತಿಯಿಂದೊಳಗೊಂಡು ಓದಲು ಸ್ವಾರಸ್ಯಕರವಾಗಿತ್ತು. ಆದರೆ ದುರದೃಷ್ಟದಿಂದ ನನಗೆ ಶಂಖದ ಮೊಳಗನ್ನು ಕೇಳಲು ಸಾಧ್ಯವಾಗಲಿಲ್ಲ (ಗಣಕದಲ್ಲಿ ಆ ಫೈಲ್‌ ಓಪನ್‌ ಆಗಲಿಲ್ಲ). ನಾಳೆ ನನ್ನ ಮಗನ ಸಹಾಯದಿಂದ ಕೇಳಲು ಮತ್ತೆ ಪ್ರಯತ್ನಿಸುವೆ. ಲೇಖನವನ್ನು ಓದಿಯಾದ ಮೇಲೆ ನನಗೆ ‘ಶಂಕು ಸ್ಥಾಪನೆ’ ಶಬ್ದಕ್ಕೂ ಮತ್ತು ‘ಶಂಖ’ಕ್ಕೂ ಇರುವ ಸಂಬಂಧವೇನು ಎಂಬ ಕುತೂಹಲವಾಗಿದ್ದು ತಿಳಿದುಕೊಳ್ಳುವ ಆಸೆಯಿದೆ. ನಿಮಗೆ ಗೊತ್ತಿದ್ದರೆ ತಿಳಿಸುವಿರಾ?

- ವಿದ್ಯಾ ಗದಗ್‌ಕರ್‌; ಡೇಟನ್‌, ಒಹಯಾ

(ಫೌಂಡೇಶನ್‌ ಸ್ಟೋನ್‌ನ ಆಕಾರ ಮೊದಲೆಲ್ಲ ರೇಖಾಗಣಿತದ ‘ಶಂಕು’ವಿನಾಕೃತಿಯದಾಗಿರುತ್ತಿತ್ತೊ ಏನೊ. ಅದರ ಸ್ಥಾಪನೆ - ಶಂಕುಸ್ಥಾಪನೆ ಆಗಿರಬಹುದು. ಪ್ರಜಾವಾಣಿಯ ‘ಇಗೋ ಕನ್ನಡ’ದಲ್ಲಿ ಪ್ರೊ।ಜಿ.ವೆಂಕಟಸುಬ್ಬಯ್ಯನವರನ್ನು ಕೇಳಿ ತಿಳಿಯೋಣ. - ಜೋಶಿ.)

*

ನೀವು ಊದಿರುವ ‘ಶಂಖ’ದ ಧ್ವನಿ ಇಂಪಾಗಿದೆ.

ದಾಸಯ್ಯ, ದೊಂಬರಾಟ, ಕರಡಿ ಕುಣಿಸುವವರು ಎಲ್ಲಿ ಮರೆಯಾದರು ಎಂದು ಯೋಚಿಸಿ ಬರೆಯಬೇಕು ಎಂದಿದ್ದೆ; ಅಷ್ಟರಲ್ಲಿ ನಿಮ್ಮ ದಾಸಯ್ಯನ ಶಂಖ ಪ್ರಕಟವಾಯಿತು.

- ವಾಣಿ ರಾಮದಾಸ್‌; ಸಿಂಗಾಪುರ್‌

*

ಶಂಖದ ಬಗ್ಗೆ ನಿಮ್ಮ ಲೇಖನ ಓದಿದೆ, ಚೆನ್ನಾಗಿದೆ. ಶಂಖದ ರಚನೆಯ ಹಿಂದಿರುವ ಗಣಿತ ತಿಳಿದಿರಲಿಲ್ಲ. ತುಂಬಾ ಇನ್ಫಾರ್ಮೇಟಿವ್‌ ಆಗಿತ್ತು. ನಮ್ಮೂರ ದಾಸಯ್ಯ ಶಂಖ ಊದಿದಾಗ ಅದರಲ್ಲಿ ಬರುವ ಶಬ್ದ ಮಂತ್ರಮುಗ್ಧಗೊಳಿಸುತ್ತಿತ್ತು. ಅದನ್ನು ಊದುವುದೂ ಒಂದು ಕಲೆ ಅನ್ಸುತ್ತೆ! ನಮ್ಮಮ್ಮ ಕನ್ಯಾಕುಮಾರಿಯಿಂದ ತಂದಿರೊ ಶಂಖ ನಾನು ಊದಿದ್ರೆ ‘ಓಂ’ ಶಬ್ದ ಬರ್ತಾ ಇರ್ಲಿಲ್ಲ ! ಆದ್ರೆ ನನ್ನಣ್ಣ ಊದಿದ್ರೆ ಬರ್ತಾ ಇತ್ತು!

- ರಾಧಿಕಾ ಎಂ ಜಿ; ಪುಣೆ

(ಹೆಂಗಸರು ಶಂಖವನ್ನೂದಬಾರದು ಎಂದು ಕೆಲವು ಕಡೆ ಮೂಢ(?)ನಂಬಿಕೆಯಿದೆ. ಆದರೆ ಬಂಗಾಳದಲ್ಲಿ ಹೆಂಗಸರೇ ಜಾಸ್ತಿ ಶಂಖವನ್ನೂದುವುದು ಎಂದೂ ಕೇಳಿದ್ದೇನೆ. - ಜೋಶಿ.)

*

ದಟ್ಸ್‌ ಕನ್ನಡದಲ್ಲಿ ನಿಮ್ಮ ಲೇಖನ ಓದಿದೆ. ಒಂದು ಅನುಮಾನ. ನನಗೆ ಗೊತ್ತಿದ್ದಂತೆ ಶ್ರೀಕೃಷ್ಣ ತನ್ನ ಗುರು ಸಾಂದೀಪನಿಯಲ್ಲಿ ವಿದ್ಯಾಭ್ಯಾಸ ಮುಗಿಸುತ್ತಾನೆ. ಗುರುದಕ್ಷಿಣೆ ಏನು ಕೊಡಲಿ ಎಂದು ಕೇಳಿದಾಗ ಸಾಂದೀಪನಿ ತನಗೇನೂ ಬೇಡ. ನನ್ನ ಪತ್ನಿ ಅರ್ಥಾತ್‌ ಗುರುಪತ್ನಿಗೆ ಏನಾದರೂ ಬೇಕೇನೋ ಕೇಳು ಎನ್ನುತ್ತಾನೆ (ಬಹುಶಃ ಗುರುವಿನ ಪತ್ನಿ ಪುತ್ರಿ/ಪುತ್ರರನ್ನು ಸಂತೋಷಪಡಿಸಿ ಡಿಗ್ರಿ ಪಡೆದುಕೊಳ್ಳುವ ವಿಧಾನ ಆಗಿನಿಂದಲೇ ಚಾಲ್ತಿಯಲ್ಲಿದ್ದಿರಬೇಕು. ನಿಸಾರ್‌ ಅಹಮದರ ‘ನಗ್ತೀರಾ ನನ್‌ಹಿಂದೆ, ಸುಮ್ನೆ ಸಿಗಲಿಲ್ಲ ಹೆಸರ ಹಿಂದಿನ ಡಿಗ್ರಿ’ ಕವನ ಓದಿದ್ದೀರಿ ತಾನೆ?). ಸಾಂದೀಪನಿಯ ಮಗ ಉದ್ಧವನನ್ನು ಒಬ್ಬ ರಾಕ್ಷಸ ಕದ್ದುಕೊಂಡು ಹೋಗಿ ಸಮುದ್ರದ ಒಳಗೆ ಅಡಗಿಸಿರುತ್ತಾನೆ. ಆ ಮಗನನ್ನು ತಂದು ಕೊಡು ಎಂದು ಗುರುಪತ್ನಿ ಕೇಳುತ್ತಾಳೆ. ಕೃಷ್ಣ ಸಾಗರದಾಳಕ್ಕೆ ಇಳಿಯುತ್ತಾನೆ. ಅಲ್ಲಿ ಆತನಿಗೆ ಎದುರಾಗುವ ರಾಕ್ಷಸನ ಹೆಸರು ಪಂಚಜನ. ಆತನನ್ನು ಕೊಂದು ಉದ್ಧವನನ್ನು ಬಿಡಿಸಿಕೊಂಡು ಬರುತ್ತಾನೆ. ಆ ರಾಕ್ಷಸನ ಕೈಯಲ್ಲಿದ್ದುದರಿಂದ ಆ ಶಂಖಕ್ಕೆ ಪಾಂಚಜನ್ಯ ಎಂಬ ಹೆಸರು ಬಂತು. ರಾಕ್ಷಸನನ್ನು ಕೊಂದುದರಿಂದ ಆತನ ಶಂಖವೂ ಕೃಷ್ಣನದಾಯಿತು. ಈ ಕತೆ ನಿಮಗೆ ಗೊತ್ತಿತ್ತೇ?

ಹ್ಞಾಂ, ಹೇಳಲು ಮರೆತೆ. ನಿಮ್ಮ ಲೇಖನ ತುಂಬ ಚೆನ್ನಾಗಿದೆ. ಹಲವು ಮಾಹಿತಿಗಳು, ಉದಾ. ಫಿಬನೋಸಿ ಸೀರಿಸ್‌ ಬಗ್ಗೆ, ತಿಳಿದೆವು. ನಾವು ಕಂಪ್ಯೂಟರ್‌ ಪ್ರೋಗ್ರಾಮ್ಮಿಂಗ್‌ ಮಾಡುವಾಗೆಲ್ಲ ಈ ಸೀರೀಸ್‌ ಮಾಡಿದ್ದೆವು.

- ಡಾ। ಯು ಬಿ ಪವನಜ; ಬೆಂಗಳೂರು

*

‘ಶಂಖ’ ದ ಮಾಹಿತಿಯಿಂದ ಕೂಡಿದ್ದ ಈ ಬಾರಿಯ ವಿಚಿತ್ರಾನ್ನ ‘ಶಂಕೆ’ ಇಲ್ಲದೆ ಇಷ್ಟವಾಯಿತು. ಆದರೆ ಬಲಮುರಿ - ಶಂಖದ ಬಗ್ಗೆ ಮಾಹಿತಿ (ವಿಷ್ಣು ಶಿವನನ್ನು ಕುರಿತು ತಪಸ್ಸು ಮಾಡಿದ್ದು) ಯಾವ ಪುರಾಣದಲ್ಲಿದೆ ಎಂದು ತಿಳಿಯಲಿಲ್ಲ.

ಶಂಖದ ಬಗ್ಗೆ ಇರುವ ಒಂದು ಪ್ರಸಿದ್ಧ ಸುಭಾಷಿತವನ್ನು ಇದರಲ್ಲಿ ಸೇರಿಸಿರುತ್ತೀರಾ ಎಂದು ಅಂದುಕೊಂಡಿದ್ದೆ. ಸುಭಾಷಿತ ನೆನಪಿಲ್ಲ, ಅದರ ಅರ್ಥ ಹೀಗಿದೆ, ನಿಮಗೆ ಗೊತ್ತಿದ್ದರೆ ತಿಳಿಸಿ - ‘ಶಂಖದ ತಂದೆ ಮುತ್ತು, ರತ್ನಗಳ ಆಗರವಾದ ಸಮುದ್ರರಾಜ, ಸಹೋದರಿ ಐಶ್ವರ್ಯ ದೇವತೆ ಲಕ್ಷ್ಮಿ. ಆದರೂ ಮನೆ ಮನೆ ತಿರುಗಿ ಭಿಕ್ಷೆಗಾಗಿ ಬೊಬ್ಬಿರಿಯುವುದು ಶಂಖದ ಹಣೆಬರಹ’- ವಿಧಿಲಿಖಿತವನ್ನು ಯಾರೂ ತಪ್ಪಿಸರು ಎಂಬುದು ಇದರ ಭಾವ.

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

(ಆ ಸುಭಾಷಿತ ಹೀಗಿದೆ: ಪಿತಾ ರತ್ನಾಕರೋ ಯಸ್ಯ ಲಕ್ಷ್ಮೀ ಯಸ್ಯ ಸಹೋದರೀ । ಶಂಖೋ ರೋದಿತಿ ಭಿಕ್ಷಾರ್ಥಂ ಫಲಂ ಭಾಗ್ಯಾನುಸಾರತಃ ।। - ಜೋಶಿ.)

*

ಪ್ರತಿ ಸಲದ ಹಾಗೇ, ಈ ಸಲದ ವಿಚಿತ್ರಾನ್ನ ರುಚಿಯಾಗಿದೆ. ಶಂಖ ನಾದ ಜೋರಾಗಿದೆ. ನಾಳೆಯಿಂದ ನಮ್ಮನೇಲಿ ಪೂಜೆ ಸಮಯದಲ್ಲಿ ನೀವು ತೋರಿಸಿರುವ ಆಡಿಯೋಫೈಲ್‌ನಿಂದ ಶಂಖ-ಜಾಗಟೆಗಳ ಸದ್ದು ಮೊಳ-ಗ-ಲಿದೆ!!

- ಸುಬ್ರಹ್ಮಣ್ಯ ನಾಗಲಾಪುರ; ಫಿಲಡೆಲ್ಫಿಯಾ

*

ನಿಮ್ಮ ವಿಚಿತ್ರಾನ್ನ - ಶಂಖದ ಮೇಲೆ ಬರೆದ ಲೇಖನ ಚೆನ್ನಾಗಿದೆ. ಧನ್ಯವಾದಗಳು. ನನ್ನ ಒಂದು ಸಣ್ಣ ಅನಿಸಿಕೆ. ‘ಶಂಕರ’ ಹೆಸರಿನ ಜಿಜ್ಞಾಸೆ. ಸೌಮ್ಯರೂಪಿಯೂ, ಮಂಗಳಕರನೂ ಆದ ಶಿವನನ್ನು ಶಂಕರನೆನ್ನುವರು, ಅದೇ ಶಂಖ ಊದಿದ್ದರೆ ಅಥವ ಹಿಡಿದಿದ್ದರೆ ಆಗ ‘ಶಂಖರ’ ಎನ್ನುತ್ತಿದ್ದರಲ್ಲವೇ!? ಹೀಗೆ ಬರೆದೆನೆಂದು ಅನ್ಯಥಾ ಭಾವಿಸುವುದಿಲ್ಲವೆಂದು ತಿಳಿದಿದ್ದೇನೆ.

ತಮ್ಮ ಅಭಿಮಾನಿ,

- ಶಾಂತಾ ಮೂರ್ತಿ; ಸಿಯಾಟಲ್‌

*

ಶಂಖದ ಬಗೆಗಿನ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಮಗೆ ಇನ್ನಷ್ಟು ಇಂಥ ಲೇಖನಗಳನ್ನು ಒದಗಿಸಿ. ಓದಿ ಆನಂದಿಸುತ್ತೇವೆ.

- ಮನೋಜ್‌ ಆರ್‌; ಊರು?

*

ನೀವು ಬರೆದ ‘ಶಂಖ’ ಲೇಖನ ಅತ್ಯುತ್ತಮ ಮೌಲಿಕ ಲೇಖನಗಳಲ್ಲೊಂದು. ಎಷ್ಟೊಂದು ಮಾಹಿತಿ! ಎಲ್ಲಿಂದ ಸಂಗ್ರಹಿಸಿದಿರಿ? ಅಂದಹಾಗೆ ಬಲಮುರಿ ಶಂಖ ನಮ್ಮ ಮನೆಯಲ್ಲೂ ಒಂದು ಇದೆ. ನಮ್ಮ ಮಗನ ಮದುವೆ ರಿಸೆಪ್ಷನ್‌ನಲ್ಲಿ ಯಾರೋ ಉಡುಗೊರೆ ಕೊಟ್ಟಿರೋದು. ಅದು ಸುಮಾರು ಸಿಪ್ಪೆ-ತೆಗೆಯದ-ತೆಂಗಿನಕಾಯಿಯಷ್ಟು ದೊ-ಡ್ಡದಿದೆ. ಆವಾಗಾವಾಗ ಅದನ್ನು ನಮ್ಮನೆಯಲ್ಲಿ ಊದುವುದೂ ಉಂಟು!

ನಿಮ್ಮ ಲೇಖನ ಕೃಷಿ ಹೀಗೇ ಮುಂದುವರೆಯಲಿ.

- ಡಾ। ಸಿದ್ಧಲಿಂಗಯ್ಯ; ಮೇರಿಲ್ಯಾಂಡ್‌

(ಮನೆಗೆ ದೂರವಾಣಿ ಕರೆ ಮಾಡಿ, ಲೇಖನ ಓದಿದೆ, ಚೆನ್ನಾಗಿದೆ ಎಂದು ಮೆಚ್ಚುಗೆಯ, ಪ್ರೋತ್ಸಾಹದ ಮಾತಾಡಿದ್ದಕ್ಕೆ ತುಂಬ ಧನ್ಯವಾದಗಳು ಸಿದ್ಧಲಿಂಗಯ್ಯನವರಿಗೆ. - ಜೋಶಿ.)

*

ಲೇಖನ ಬಹಳ ಚೆನ್ನಾಗಿ ಬಂದಿದೆ, ತುಂಬಾ ಧನ್ಯವಾದಗಳು. ಶಂಖನಾದವನ್ನು ಕೇಳಿ ಕಿವಿಗಳು ಧನ್ಯವಾದವು ಮತ್ತು ಶಂಖದ ಬಗ್ಗೆ ಸವಿವರವಾದ ಮಾಹಿತಿಯನ್ನು ಓದಿ ಮನ ಪುಳಕಗೊಂಡಿತು.

ಧನ್ಯವಾದಗಳೊಂದಿಗೆ,

- ಚಂದ್ರು; ಜರ್ಮನಿ

*

Thank you for your article on Shankha. It was delightful and enlightining. Although I was aware of some information about the Conch shell, you put them together (all thoughts) made it divine and heavenly!

- Siddarame Gowda; Florida

*

Enjoyed your wonderful/resounding essay on Shankha. Everyone of your essays, with its wealth of interesting information, is a learning experience for me. I think,every week you bring together Kannadigas from around the world for a feast of Vichitranna. It reminds me of the Choo Baana (Prajavani--Ramachandra Rao,YNK et al.) and Sheshappas Kidi patrike, nearly 50 years ago. These two news papers used to create a similar buzz and connected the citizens of the old Mysore State. They used to be the talk of the town, every week, just like your Vichitranna. Every Monday the two news papers used to be Sold out.. The late great Chief Minister Kengal Hanumanthaih was a favorite subject/target in both papers. Amazingly, you address varied topics and subjects and each of them so beautifully. To this I say thank you. I blow my shankha in your honor. The sound coming out of my shankha says "Vichitranna Daataa Sukhie Bhava."

- G.S.Satya; San Jose, CA

P.S: I hope we will have a chance to meet you in Orlando, Fl, in September.

*

This is my second mail. I am sorry as I count not reply you earlier. Actually I hail from Andhra Pradesh(spent most of my time at Nellore and Hyderabad) and residing now at Adelaide for the last 10 years. As I am of Madhwa origin, I know Kannada also.

Regarding 89th issue of Vichitranna, I liked it and got more information about counch. I wish to say that in Telugu, it is called Sankham or Sankhamu - not Sanku as stated.

- Prasad Kovalam; Adelaide, Australia

[Thank you, Sri Prasad, for informing the right word for shankha in Telugu. - SJ]

*

I read Ur article about Shankha(counch). Its really informative. Actually I was searching for information on Shankha because in my sons college they had one essay competition arranged. So I was collecting information in library, although I am a librarian in C-DAC I dont have General books (only Technical books we have). My son (Adithya-studying in 1st year PUC) asked me to search the internet. Thats how I got your article. It helped me a lot and you know what, he got prize also! I thought of writing and sharing this with you!

Thanks for your hardwork. Keep it up.

- Jalaja Ravishankar; Bangalore

[Entire vichitraanna baLaga congratulates your son Aditya for his winning the prize in essay contest! - SJ]

*

Shankha-jaagate mp3 audio file was blown in my PC now! Good write up.

- Padmanabha B Kakathkar; Pune

*

Your article made a very interesting reading. From where did you collect all the information. It is a rare example of a scientific article with literary flavour. Good job, keep it up. I did not follow one para about golden mean and number 1.618. The reason is that I do not have much grooming in science or Maths. (Though my guru Bendre was a master of both.)

With love and regards,

- Dr.G.V.Kulkarni; Mumbai


ತನ್ನೊ ಶಂಖಃ ಪ್ರಚೋದಯಾತ್‌...


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X