• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖಪುಟ

By Staff
|

Vichitraanna !!ಅಪ್ಪಟ ಮನರಂಜನೆಯನ್ನೊದಗಿಸುವ ಉದ್ದೇಶದಿಂದ ವಿಚಿತ್ರಾನ್ನ ಅಂಕಣದಲ್ಲಿ, ‘ಕನ್ನಡ/ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾಲ್ಕಕ್ಷರಗಳ ನಾಮಪದಗಳ ಪಟ್ಟಿ ಕಳಿಸಿ ನಿಮ್ಮ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಒರೆಗೆ ಹಚ್ಚಿನೋಡಿ...’ ಎಂಬ ಪ್ರಕಟಣೆ ಓದಿ ತುಂಬ ಆಸಕ್ತಿಯಿಂದ ವೈವಿಧ್ಯಮಯ ಪಟ್ಟಿಗಳನ್ನು ಕಳಿಸಿದವರ ಉತ್ಸಾಹವನ್ನು ಮೆಚ್ಚಲೇಬೇಕು! (ಪಟ್ಟಿ ಸಿದ್ಧವಾಗುತ್ತಿದೆ, ಕಳಿಸುತ್ತೇವೆ ಎಂದು ಕೆಲವರು ಬರೆದಿದ್ದಾರೆ) ಯಃಕಶ್ಚಿತ್‌ ‘ನಾಲ್ಕಕ್ಷರಗಳ ನಾಮಪದ’ದಂತಹ ಕಾನ್ಸೆಪ್ಟ್‌ ಕೂಡ ಅಭಿಮಾನವನ್ನು ಅದೆಷ್ಟು ಜಾಗೃತಗೊಳಿಸಬಲ್ಲುದೆಂದು ಸ್ವತಃ ಅಂಕಣಕಾರನಿಗೇ ಪರಮಾಶ್ಜರ್ಯವಾಗಿದೆ ಈ ಪ್ರತಿಕ್ರಿಯೆಗಳನ್ನು ನೋಡಿ! ಇಲ್ಲಿ ಒಣ ಪ್ರಶಂಸೆ ಮುಖ್ಯವಲ್ಲ. ಈ ರೀತಿಯ ಉತ್ಸಾಹ, ಮತ್ತು ಭಾಗವಹಿಸುವಿಕೆಯ ಲವಲವಿಕೆ ಓದುಗರಲ್ಲಿದ್ದರೆ ಯಾವ ಬರಹಗಾರನಿಗೂ ಸ್ಫೂರ್ತಿ ಬರುವಂಥದೇ.

*

ಜೋಶಿ ಮಾಸ್ತರರಿಗೆ,
ನೀವು ಕೊಟ್ಟ ಮನೆಗೆಲಸವನ್ನು (ಹೋಮ್‌ವರ್ಕ್‌) ಅವಧಿ ತೀರುವುದರೊಳಗೆ ಒಪ್ಪಿಸುತ್ತಿದ್ದೇನೆ. ಈ ನನ್ನ ನಾಲ್ಕಕ್ಷರದ ನಾಮಬಲದ ಪಟ್ಟಿಗೆ ‘ಕವಿವನ’ ಎಂದು ನಾಲ್ಕಕ್ಷರದ ಶೀರ್ಷಿಕೆ ಕೊಟ್ಟಿದ್ದೇನೆ. ಕನ್ನಡದ ಕವಿಗಳು ಬರೆದ ಕವನಗಳು ತುಂಬಿದ ಕವಿ ಪರಂಪರೆಯ ನಂದನವನವನ್ನು ‘ಕವಿವನ’ ಎಂದೇ ಕರೆಯಬೇಕು ತಾನೆ? ಅಲ್ಲದೇ ಈ ಹೆಸರಲ್ಲಿ ‘ಕವಿ’ ರಚಿಸಿದ ‘ಕವನ’ ತಕ್ಷಣ ಕಣ್ಣಿಗೆ ಕಾಣಿಸುತ್ತದೆ.

ಯಾವುದೇ ವನದಲ್ಲಿ ವಿವಿಧ ಮರಗಿಡಗಳು ವಾಸವಾಗಿರುವುದರಿಂದ, ಈ ಕವಿವನದಲ್ಲೂ ಕೂಡ ವ್ಯೆವಿಧ್ಯವಾದ ಕವನಗಳೂ, ಕವನ ಸಂಕಲನಗಳೂ, ಕಾವ್ಯ ಕೃತಿಗಳೂ, ಹಾಗೂ ಕವನಗಳಿಂದ ಮೂಡಿದ ಕನ್ನಡದ ವಿವಿಧ ಗೀತವರ್ಗಗಳೂ ತುಂಬಿಕೊಂಡಿವೆ.

ಓದುಗರಿಗೆ ಒಂದು ಮುನ್ಸೂಚನೆಯೆಂದರೆ ಈ ಪಟ್ಟಿಯಲ್ಲಿರುವ ಕವನಗಳು ಯಾವುದೇ ಒಂದು ಕ್ರಮದಲ್ಲಿಲ್ಲ. ನನ್ನ ನೆನಪಿಗೆ ಬಂದಂತೆ ಮತ್ತು ಹುಡುಕಾಡಿದಾಗ ಸಿಕ್ಕಿದಂತೆ ಕವನಗಳನ್ನು ಈ ಪಟ್ಟಿಗೆ ಸೇರಿಸಿದ್ದೇನೆ. ಹಾಗೆಯೇ ‘ಕವಿವನ’ದ ಕವನ ಶೀರ್ಷಿಕೆಗಳು ನಾಲ್ಕಕ್ಷರಕ್ಕೇ ಸೀಮಿತವಾಗಿರುವುದರಿಂದ, ಕನ್ನಡದ ಬಹಳಷ್ಟು ಜನಪ್ರಿಯ ಕವನಗಳನ್ನು ಕೈಬಿಡಬೇಕಾಗಿರುದು ಸಹಜವೇ. ಅಲ್ಲದೇ ಈ ನಾಮಬಲದ ಪ್ರಯೋಗ ಒಂದು ಪ್ರಯತ್ನವೇ ಹೊರತು, ಸಂಶೋಧನಾತ್ಮಕವಾಗಿ ಎಲ್ಲಾ ಕಾಲದ ಎಲ್ಲಾ ಕನ್ನಡ ಕವಿಗಳ ಕವನಗಳನ್ನೂ ಪರಿಗಣಿಸಿಲ್ಲ. ಆದ್ದರಿಂದ ಹಲವು ಕವನಗಳು ಇಲ್ಲಿಗೆ ಸೇರಿಸಲು ಅರ್ಹವಾದರೂ ಅವುಗಳನ್ನು ಉಲ್ಲೇಖಿಸದೇ ಇರಬಹುದು. ಕ್ಷಮಿಸಿ. ಈಗ ಈ ’ಕವಿವನ’ದಲ್ಲಿ ಕಾಲಿಡೋಣವೇ...

‘ಕವಿವನ’
ಐರಾವತ (ಕುಮಾರವ್ಯಾಸ)
ಪಂಚತಂತ್ರ (ದುರ್ಗಸಿಂಹ)
ಗದಾಯುದ್ಧ (ರನ್ನ)
ಗೀತೆಗಳು (ಬಿಎಂಶ್ರೀ)
ಬಿಡಿಮುತ್ತು (ತೀನಂಶ್ರೀ)

ನಿತ್ಯೋತ್ಸವ, ಕುರಿಗಳು, ಉಡುಗೊರೆ (ನಿಸಾರ್‌ ಅಹಮದ್‌)
ಒಳತೋಟಿ, ಭೂಮಿಗೀತ, ಭೂಮಿತಾಯಿ, ವರ್ಧಮಾನ (ಅಡಿಗ)
ಜೇನಾಗುವ (ಕುವೆಂಪು)
ನಾದಲೀಲೆ, ನಾಕುತಂತಿ, ಸಖೀಗೀತ (ಬೇಂದ್ರೆ)
ನಿಮ್ಮಂತೆಯೇ, ಮಾತುಮಾಟ (ರಾಮಚಂದ್ರ ಶರ್ಮ)
ಮಂಕುತಿಮ್ಮ, ಇಂದ್ರವಜ್ರ (ಡಿವಿಜಿ)
ಗಿಳಿವಿಂಡು (ಗೋವಿಂದ ಪೈ)
ನವರಾತ್ರಿ (ಮಾಸ್ತಿ)
ಸಿಂಧೂರಶ್ಮಿ, ದ್ಯಾವಪೃಥ್ವಿ (ಗೋಕಾಕ)
ಸಾಮಗಾನ (ಶಿವರುದ್ರಪ್ಪ)
ಸಂಜೆಹಾಡು, ಗೃಹಲಕ್ಷ್ಮಿ, ಶಿಲಾಲತೆ, ದಮಯಂತಿ, ಪತ್ರಗುಚ್ಛ, ಉಪವನ
(ನರಸಿಂಹಸ್ವಾಮಿ)
ತಲೆಮಾರು (ಲಂಕೇಶ್‌)
ಜಲಪಾತ (ಸಿದ್ದಯ್ಯ ಪುರಾಣಿಕ)
ಹೊಂಬೆಳಕು, ಜೀವಧ್ವನಿ, ಹಕ್ಕಿಪುಚ್ಛ, ಭಾವಜೀವಿ, ದೀಪದಾರಿ (ಕಣವಿ)
ಜಯಗೀತ (ಜಯದೇವಿ)
ಇನ್ನೊಂದು ಪಟ್ಟಿ, ಕಲೆಗೆ ಸಂಬಂಧಪಟ್ಟದ್ದು :
ಚಿತ್ರಗೀತೆ, ರಂಗಗೀತೆ, ನವ್ಯಗೀತೆ, ಭಕ್ತಿಗೀತೆ, ಭಾವಗೀತೆ, ಜಾನಪದ, ಯಕ್ಷಗಾನ, ನೀತಿಕಾವ್ಯ, ದೂತಕಾವ್ಯ, ಚಂಪೂಕಾವ್ಯ

- ಚಿದಾನಂದ ರಂಗಸ್ವಾಮಿ, NASA- ಹ್ಯೂಸ್ಟನ್‌ (ಟೆಕ್ಸಾಸ್‌)

*

ಕನ್ನಡದ ಮೊದಲಕ್ಷರ ‘ಅ’ದಿಂದ ಆರಂಭವಾಗುವ, ನಾಲ್ಕಕ್ಷರಗಳ ಕೆಲವು ಹೆಸರುಗಳು ನನಗೆ ಹೊಳೆದುವು. ಇಲ್ಲಿ ಬರೆದಿದ್ದೇನೆ: ಅಭ್ಯುಧಯ್‌, ಅಭಿಮಾನ್‌, ಅರವಿಂದ್‌, ಅಂಬರೀಶ್‌, ಅಭಿಷೇಕ್‌, ಅಭಿಲಾಶ್‌, ಅಭಿಮನ್ಯು, ಅಭಿನಯ, ಅವಿನಾಶ್‌, ಅರುಂಧತಿ, ಅಮರೇಂದ್ರ, ಅಭಿನವ್‌, ಅಭಿಜಿತ್‌, ಅನಸೂಯ, ಅನುರೂಪ್‌, ಅನುರಾಧಾ, ಅನುರಾಗ್‌, ಅನುಪಮಾ, ಅನುಭವ್‌, ಅವಲೋಕ್‌.

- ಕವಿತಾ ಪ್ರಕಾಶ್‌, ಇನ್ಫೋಸಿಸ್‌-ಬೆಂಗಳೂರು.

*

ನಮಸ್ಕಾರ ಜೋಶಿಯವರಿಗೆ,
ವಿಚಿತ್ರಾನ್ನ ಬಲು ರುಚಿಕರವಾಗಿದೆ.
ನನ್ನ ಅಭಿಪ್ರಾಯದಂತೆ ಕನ್ನಡದಲ್ಲಿ 99% ನಾಲ್ಕಕ್ಷರ ಪದಗಳು ಒಳ್ಳೆಯವೇ ಆಗಿವೆ. ಅದಕ್ಕೇ, ’ಸು’ದಿಂದ ಆರಂಭವಾಗುವ (‘ಸು’ ವಿಶೇಷಣ ಒಳ್ಳೆಯದಕ್ಕೇ ತಾನೆ?) ಪಟ್ಟಿಯನ್ನು ಕಳಿಸುತ್ತಿದ್ದೇನೆ. ಸುಮಧುರ, ಸುಕೋಮಲ, ಸುನಯನ, ಸುಕುಮಾರಿ, ಸುರಚನ, ಸುಲಿಖಿತ, ಸುಚರಿತ, ಸುಖಕರ, ಸುರತರು, ಸುಮಲತಾ.

- ದತ್ತಪ್ಪನ್‌.

*

ವಿಚಿತ್ರಾನ್ನದ ಚಿಕ್ಕ ಚೊಕ್ಕ ಬರಹಗಳು ಚೆನ್ನಾಗಿ ಬರುತ್ತಿವೆ. ನಾಲ್ಕಕ್ಷರಗಳ ನಾಮಬಲದ ಬಗ್ಗೆ ಓದಿದ ಕೂಡಲೇ ನಾನೂ ಪಟ್ಟಿ ಮಾಡಲಾರಂಭಿಸಿದೆ. ಇಲ್ಲಿದೆ:

ಸಮಯಕ್ಕೆ ಸಂಬಂಧಿಸಿದುದು - ರವಿವಾರ, ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ, ಅಮಾವಾಸ್ಯೆ, ಭಾಧ್ರಪದ, ಮೃಗಶಿರ, ಮಳೆಗಾಲ, ಚಳಿಗಾಲ .
ಕವಿಗಳು/ಸಾಹಿತ್ಯ
ಬಸವಣ್ಣ (ವಚನ)
ಹರಳಯ್ಯ (ವಚನ)
ಮಾಚಿದೇವ (ಮಡಿವಾಳ ಮಾಚಿದೇವ) (ವಚನ)

ಕೇಶಿರಾಜ (ಶಬ್ದಮಣಿ ದರ್ಪಣ)
ದತ್ತಾತ್ರೇಯ (ದ.ರಾ.ಬೇಂದ್ರೆ)
ಹಳಕಟ್ಟಿ (ಪ.ಗು.ಹಳಕಟ್ಟಿ) (ವಚನ ಸಾಹಿತ್ಯದ ಪಿತಾಮಹ)
ರಾಘವಾಂಕ
ಹರಿಹರ
ಸಣಕಲ್ಲ (ಈಶ್ವರ ಸಣಕಲ್ಲ) (ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ)
ಅಹಮದ (ನಿಸ್ಸಾರ್‌ ಅಹಮದ)
ಕೃಷ್ಣಶರ್ಮ (ಬೆಟಗೇರಿ ಕೃಷ್ಣಶರ್ಮ)
ಮನೋರಮೆ (ಮುದ್ದಣ್ಣ ಮತ್ತು ಮನೋರಮೆ)
ಇತರೆ- ಜನಪದ, ಬೃಂದಾವನ, ಬಹಮನಿ, ಹೆಬ್ಬಾಗಿಲು, ದೂರವಾಣಿ, ವೀಳ್ಯದೆಲೆ, ದೀಪಾವಳಿ, ನವರಾತ್ರಿ, ದೀಪೋತ್ಸವ, ನವರತ್ನ, ನರಸಿಂಹ.

ಉದ್ಯೋಗ -
ಅಧ್ಯಾಪಕ, ಹಾವಾಡಿಗ, ಕಂಡಕ್ಟರ್‌, ಚಾರಣಿಗ ಮಾಡುವವ

ಸಿನೆಮಾ-
ಅಂಬರೀಷ, ಸುಮಲತಾ, ದ್ವಾರಕೀಶ, ರಮ್ಯಕೃಷ್ಣ, ಕಣಗಾಲ (ಪುಟ್ಟಣ್ಣ), ಸುಹಾಸಿನಿ, ಲೀಲಾವತಿ, ರಾಘವೇಂದ್ರ (ರಾಘವೇಂದ್ರ ರಾಜಕುಮಾರ), ಹಂಸಲೇಖ , ರಾಮಚಂದ್ರ (ಛಾಯಗ್ರಾಹಕ), ಕೃಷ್ಣಮೂರ್ತಿ (ಹುಣಸೂರು ಕೃಷ್ಣಮೂರ್ತಿ)

ಊರುಗಳು -
ಕೊಂಡಗೂಳಿ, ಗುಲಬರ್ಗ, ಗಾಜನೂರು, ಕಲಕೇರಿ, ಇಂಗಳಗಿ, ತಾಳಿಕೋಟೆ, ಶಹಾಪುರ, ಸುರಪುರ, ಯೆಲಬುರ್ಗ, ಧರ್ಮಸ್ಥಳ, ಲಕ್ಷ್ಮೇಶ್ವರ, ಚಿತ್ತಾಪುರ, ಯಾದಗಿರ, ನಾಗಠಾಣ, ಶಿರಶ್ಯಾಡ, ಮೊರಟಗಿ, ಜೆರಟಗಿ, ಹಿರಿಯೂರು, ಹಳೆಬೀಡು, ಮೂಡಬಿದ್ರಿ, ಬೆಳ್ತಂಗಡಿ ...

- ವೈ. ಜೆ. ಪಾಟೀಲ್‌

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more