ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಮರಿಯಾಂದಿಗೆ ಮಾತಾಡಿದ್ದು ಮೇಡಂ ಅಲ್ಲ !

By Staff
|
Google Oneindia Kannada News

ವಿಚಿತ್ರಾನ್ನ ಅಂಕಣದ ವ್ಯಾಖ್ಯೆಯಲ್ಲಿ(ಡೆಫಿನಿಷನ್‌) ಓದುಗರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು. ಅದಕ್ಕಾಗಿಯೇ ಓದುಗರಿಂದ ಬರುವ ಎಲ್ಲ ರೀತಿಯ ಪ್ರತಿಕ್ರಿಯೆಗಳಿಗೂ ಬೆಲೆ ಕೊಟ್ಟು ಅವನ್ನೂ ಆಗಾಗ ಇಲ್ಲಿ ಪ್ರಕಟಿಸುವ ಉದ್ದೇಶ. ನಾಲ್ಕಕ್ಷರಗಳ ನಾಮಪದಗಳ ಪಟ್ಟಿಗಳಂತೂ ಇನ್ನೂ ಬರುತ್ತಲೇ ಇವೆ. ಜತೆಯಲ್ಲೇ ಕಳೆದವಾರದ 'ನಾಯಿಮರಿ" ಪದ್ಯದ ಅನುವಾದ ತುಂಬ ಮಂದಿಯ ಮನರಂಜನೆಗೆ, ಮನ-ಮಂಥನಕ್ಕೆ ಕಾರಣವಾಗಿದೆ. ಈ ಥರದ ಇಂಟರಾಕ್ಷನ್‌ನಿಂದ ಪ್ರೋತ್ಸಾಹಿಸುವ, ಅಂಕಣವನ್ನು ತಿದ್ದಿ ತೀಡಿ ಅಂದಗೊಳಿಸುವ ಓದುಗ ಸ್ನೇಹಿತರೆಲ್ಲರಿಗೂ ವಿಶೇಷ ಧನ್ಯವಾದಗಳು.

- ಶ್ರೀವತ್ಸ ಜೋಶಿ


ನಮಸ್ತೇ,

ಈ ಬಾರಿಯ ವಿಚಿತ್ರಾನ್ನ ನಿಜವಾಗಿಯೂ ಚಿಂದಿ-ಚಿತ್ರಾನ್ನ! 'ಕೊಯ್ಜುಮಿ ಮತ್ತು ವಾಜಪೇಯಿ ಗೆಳೆಯರು...." ವಾರ್ತಾಲಾಪವಂತೂ ತುಂಬ ಇಷ್ಟವಾಯಿತು.

- ಜನಾರ್ಧನ ಸ್ವಾಮಿ; ಕ್ಯಾಲಿಫೋರ್ನಿಯಾ.


ಹಾಯ್‌,

ನಾಯಿಮರಿ ಪದ್ಯದ ಇಂಗ್ಲೀಷ್‌ ಅನುವಾದ ತುಂಬ ಚೆನ್ನಾಗಿದೆ!

- ದಿವಾಕರ್‌ ಫಡ್ಕೆ; ಸೈಂಟ್‌ ಲೂಯಿಸ್‌.


ನಮಸ್ಕಾರ ಜೋಶಿಯವರಿಗೆ.

ನಿಮ್ಮ ಬರಹಗಳು ತುಂಬ ಚೆನ್ನಾಗಿರುತ್ತವೆ. ಕನ್ನಡದ ಬಗ್ಗೆ ನಿಮ್ಮ ಆಸಕ್ತಿಯನ್ನೂ ಮೆಚ್ಚುತ್ತೇನೆ. ಇದು ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ. ನಾಯಿಮರಿ ಪದ್ಯದ ಇಂಗ್ಲೀಷ್‌ ಅನುವಾದದಲ್ಲಿ ಕೊನೆಯ ಪಂಕ್ತಿಯೇನೋ ಓದಲು ರಮ್ಯವಾಗಿದೆ. ಆದರೆ, ಮೂಲ ಪದ್ಯದಲ್ಲಿ ನಾಯಿಮರಿ ಮಾತಾಡುತ್ತಿದ್ದುದು ಒಬ್ಬ ಪುಟ್ಟ ಹುಡುಗನೊಂದಿಗೆ ಅಲ್ಲವೆ? ನಮ್ಮ ಪಾಠಪುಸ್ತಕದಲ್ಲಿ ಒಬ್ಬ ಹುಡುಗ ಮತ್ತು ನಾಯಿಮರಿಯ ಚಿತ್ರ ಇದ್ದದ್ದು ನನಗೀಗಲೂ ನೆನಪಿದೆ. ಹಾಗಾಗಿ, ಒಬ್ಬ ಮೇಡಂ ಅಥವಾ ಹೆಂಗಸಿನ ಜತೆ ನಾಯಿಮರಿ ಸಂಭಾಷಿಸುವಂತೆ ಅನುವಾದಿಸಿದ್ದಕ್ಕಿಂತ ಪುಟ್ಟ ಹುಡುಗನೊಂದಿಗೆ ನಾಯಿಮರಿಯ ಮಾತು ಇನ್ನೂ ಆಕರ್ಷಕವಾಗಿರುತ್ತಿತ್ತಲ್ಲವೇ? ಅದಲ್ಲದೇ ಈ ಪದ್ಯ ಮಕ್ಕಳ ಕವಿತೆ. ನೀವೇನಂತೀರಾ?

ಇಂತೀ ಒಬ್ಬ ಕನ್ನಡತಿ,

- ಉಷಾರಾಣಿ; ಹೈದರಾಬಾದ್‌


ಅನುಭೂತಿ, ಅನುವಾದಗಳ ಬಗ್ಗೆ ಬರಹ ಚೆನ್ನಾಗಿ ಮೂಡಿಬಂದಿದೆ. ಮುಖ್ಯವಾಗಿ ಸಂಸ್ಕೃತ ಅನುವಾದ ನನ್ನ ಗಮನ ಸೆಳೆಯಿತು. 'ಖಾದ್ಯಮಾವಶ್ಯಮ್‌"" ಗೆ ಬದಲು ""ಖಾದ್ಯಮವಷ್ಯಮ್‌"" ಎಂದಿರಬೇಕಿತ್ತು. ಕ್ಷಮಿಸಿ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ ಅಲ್ಲ ನನ್ನದು, ಆದರೂ 'ಪರ್ಫೆಕ್ಷನ್‌"ಗೆ ಅನುವಾಗಲಿ ಎಂದು ಬರೆದೆ. ಹಾಗೆಯೇ, 'ಭೋ ನಾಥ ತವ ಗೃಹಮ್‌ ಪಾಲಯಾಮಿ"" ಎಂದು ಸರಿಯಾದ ಭಾಷಾಂತರ. ನಿಮ್ಮ ಬರಹದಲ್ಲಿ ಒಳ್ಳೆಯ ಶೈಲಿಯಿದೆ; ಹಾಸ್ಯವನ್ನೂ ಕರಗತಮಾಡಿಕೊಂಡಂತಿದೆ. ಹೀಗೇ ಬರೆಯುತ್ತಿರಿ. ನಾವು ಓದುತ್ತೇವೆ.

- ರಾಘವೇಂದ್ರ ಹೆಬ್ಬಳಲು; ಸನ್ನಿವೇಲ್‌, ಕ್ಯಾಲಿಫೋರ್ನಿಯಾ ಆತ್ಮೀಯ ಜೋಶಿ,

ನಿಮ್ಮ ಬರಹ ಚೆನ್ನಾಗಿದೆ. ಹೀಗೇ ಬರೆದು ವಿಚಿತ್ರಾನ್ನವನ್ನು ಕನ್ನಡಿಗರಿಗೆಲ್ಲ ಬಡಿಸುತ್ತಿರಿ. ನಾನೂ ಅದನ್ನು ತಿಂದು ಗಟ್ಟಿಯಾಗಿ ಇಲ್ಲಿ ಶಿವ-ವಿಷ್ಣು ದೇವಸ್ಥಾನದ ಅಡುಗೆಮನೆಯಲ್ಲಿ, ಭಕ್ತಾದಿಗಳಿಗೆ ಪ್ರಸಾದರೂಪದಲ್ಲಿ ಚಿತ್ರಾನ್ನ, ಪುಳಿಯಾಗರೆ ತಯಾರಿಸುತ್ತೇನೆ. ನಮ್ಮ ಬಿಸಿಬೇಳೆಭಾತ್‌ ರುಚಿ ನೋಡಲು ನೀವೂ ಒಮ್ಮೆ ಬನ್ನಿ!

-'ಕಾವೇರಿ""ಕೃಷ್ಣಮೂರ್ತಿ; ವಾಷಿಂಗ್ಟನ್‌ ಡೀ.ಸಿ.


ಜೋಶಿ,

ನಿಮ್ಮ ಬರವಣಿಗೆ ಬಹಳ ಚೆನ್ನಾಗಿದೆ.

ವಂದನೆಗಳೊಂದಿಗೆ, ಕನ್ನಡಪ್ರೇಮಿ.

ಶ್ರೀಧರ ಸತ್ಯ; ಎಸ್ಸೆಲ್ಕೆ ಸಾಫ್ಟ್‌ವೇರ್‌, ಬೆಂಗಳೂರು.


ಹಲೋ,

ರಾಜರತ್ನಂ ಅವರ ಕವಿತೆಯನ್ನು ಸಂಸ್ಕೃತ ಮತ್ತು ಇಂಗ್ಲೀಷ್‌ಗೆ ಅನುವಾದ ಮಾಡಿದ ವಿಚಿತ್ರಾನ್ನದ ತುತ್ತು "ಫೆಂಟಾಸ್ಟಿಕ್‌" ಆಗಿತ್ತು!

- ಗಿರೀಶ್‌ ಕೆ. ಎ; ಊರು?


ಜೋಶಿಯವರೇ,

'ಯೂ ಆರ್‌ ರಿಯಲೀ ಕ್ಯಾಟ್‌"ಸ್‌ ವ್ಹಿಸ್ಕರ್ಸ್‌..." ದಯವಿಟ್ಟು ಇದನ್ನು ಅನುವಾದ ಮಾಡಲು ಹೋಗಬೇಡಿ:) ಆಮೇಲೆ, 'ಜೋಶಿಯವರೇ ನೀವು ನಿಜಕ್ಕೂ ಬೆಕ್ಕಿನ ಮೀಸೆ..."" ಎಂದಾಗಿ ನಿಮಗೆ ನನ್ನ ಮೇಲೆ ಕೋಪವೇ ಬಂದೀತು! ಇದು ನನ್ನ ಪ್ರಶಂಸೆಯ ಇಂಗ್ಲೀಷ್‌ ಪರಿ ಅಷ್ಟೇ! ನಾನು ಹೇಳುವುದೆಂದರೆ, ಈ ವಾರದ ನಿಮ್ಮ ಅಂಕಣ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತಂದಿತು! 'ರೋಲಿಂಗ್‌ ಆನ್‌ ಮೈ ಚೈರ್‌..." ಅನ್ನುತ್ತಾರಲ್ಲಾ ಹಾಗೆ. ನಾಯಿಮರಿ ಪದ್ಯದ ಅನುವಾದವನ್ನೋದುವಾಗಂತೂ ನನ್ನ ಪಕ್ಕದ ಕ್ಯೂಬಿಕಲ್‌ನವರೆಲ್ಲ ನನ್ನ ಹತ್ತಿರಕ್ಕೆ ಬಂದು ಇದೇ 'ನಾಯಿ"ತಪ್ಪಾ ಇವಳಿಗೆ... ಎಂದು ಆಶ್ಚರ್ಯಪಟ್ಟರು... ಅಷ್ಟೂ ನಗಾಡಿದೆ! ವಿಚಿತ್ರಾನ್ನ ನಿಜಕ್ಕೂ 'ಯಮ್ಮಿ ಯಮ್ಮಿ" ಯಾಗಿದೆ ಈ ಸಲ. 'ಬರಹ" ಲಿಪಿಯನ್ನುಪಯೋಗಿಸಿ ಬರೆಯಬೇಕಿತ್ತು ನಾನು, ಆದರೆ ಏನು ಮಾಡಲಿ ಸೋಮಾರಿತನ. ಅದಕ್ಕೆ ಬಂದ ತಕ್ಷಣ ಬಂದ ಹಾಗೆ ಎಲ್ಲ ಭಾವನೆಗಳ ಪದಗಳಿಗೆ ಇಳಿಸಬೇಕೆಂದು ಒಂದು ಕ್ಷಣವೂ ತಡ ಮಾಡದೆ ಬರೆಯುತ್ತಿದ್ದೇನೆ. ಹೀಗೇ ಮುಂದುವರೆಯಲಿ ನಿಮ್ಮ ನಳಪಾಕ!

- ಜಯಶ್ರೀ ಎಚ್‌. ಆರ್‌; ಊರು?


ಪ್ರಿಯ ಜೋಶಿ,

ನಿಮ್ಮ ವಿಚಿತ್ರಾನ್ನ ತುಂಬ ವಿಭಿನ್ನವೂ ರುಚಿಕರವೂ ಅಗಿದೆ. ಇದು ಓದುಗರ ಗಮನ ಸೆಳೆಯುತ್ತದೆ. ಇದರ ರುಚಿ ಇನ್ನೂ ಹೆಚ್ಚಾಗಲಿ ಎಂದು ಹಾರೈಸುವೆ. ನಾಲ್ಕಕ್ಷರ ನಮಪದಗಳ ಪಟ್ಟಿ ಕಳಿಸುತ್ತಿದ್ದೇನೆ. 'ಬರಹ"ಲಿಪಿಗೆ ನಾನಿನ್ನೂ ಹೊಸಬಳು. ಸೋ, ಇಂಗ್ಲೀಷಲ್ಲಿ ಇದೆ.

ಕವಿಗಳು (ಸಂಸ್ಕೃತ, ಕನ್ನಡ): ಕಾಳಿದಾಸ, ಬಾಣಭಟ್ಟ, ಭರ್ತೃಹರಿ, ನೃಪತುಂಗ, ಹರಿಹರ, ರಾಘವಾಂಕ.

ಪ್ರವಾಸಿಸ್ಥಳಗಳು: ಹಳೇಬೀಡು, ತಲಕಾಡು, ಬಂಡೀಪುರ, ಮಡಿಕೇರಿ, ನಂದಿಬೆಟ್ಟ, ಹೊರನಾಡು, ಧರ್ಮಸ್ಥಳ, ಮೇಲುಕೋಟೆ.

ರಾಮಾಯಣ (ಹೆಸರೇ ನಾಲ್ಕಕ್ಷರ!)ದಲ್ಲಿ ಪಾತ್ರಗಳು: ಭಗೀರಥ, ದಶರಥ, ರಾಮಚಂದ್ರ, ಹನುಮಂತ, ಜಾಂಬವಂತ, ವಿಭೀಷಣ, ವಿಶ್ವಾಮಿತ್ರ, ಕುಂಭಕರ್ಣ, ಶೂರ್ಪನಖಿ, ಮಂಡೋದರಿ, ಮೇಘನಾದ.

ರಾಜಾ ಹರಿಶ್ಚಂದ್ರನ ಕಥೆಯಲ್ಲಿ ಎಲ್ಲ ಮುಖ್ಯ ಪಾತ್ರಗಳು: ಹರಿಶ್ಚಂದ್ರ, ಚಂದ್ರಮತಿ, ಲೋಹಿತಾಕ್ಷ, ವಿಶ್ವಾಮಿತ್ರ, ನಕ್ಷತ್ರಿಕ

ಗಣೇಶ ನಾಮಾವಳಿ: ಏಕದಂತ, ಲಂಬೋದರ, ವಿನಾಯಕ, ಗಜಾನನ, ಗಣಪತಿ, ಫಾಲಚಂದ್ರ, ಧೂಮ್ರಕೇತು.

ಹೂವುಗಳು: ಸೇವಂತಿಗೆ, ಕರವೀರ, ದಾಸವಾಳ, ಸದಾಪುಷ್ಪ.

- ಫಣಿಶ್ರೀ; ಸಿಲ್ವರ್‌ಸ್ಪ್ರಿಂಗ್‌, ಮೇರಿಲ್ಯಾಂಡ್‌


ಜೋಶಿಯವರೇ,

ನಿಮ್ಮ ವಿಚಿತ್ರಾನ್ನದ ಸೊಗಸು ಏನು ಹೇಳಲಿ ? ಒಬ್ಬ ಇಂಜನಿಯರ್‌ ಆಗಿದ್ದು ನೀವು ಈ ತರಹ ಆಸಕ್ತಿಯಿಂದ ಸಾಹಿತ್ಯರಚನೆ ಮಾಡುವುದನ್ನು ನೋಡಿ ನಾನು ಬೆರಗಾದೆ. ಅಷ್ಟು ಮಾತ್ರವಲ್ಲ, ಓದುಗರೂ ಭಾಗವಹಿಸುವಂತೆ ನೋಡುವ ನಿಮ್ಮ ಜಾಣ್ಮೆ ಮೆಚ್ಚುಗೆಯಾಯಿತು. ನಾಲ್ಕಕ್ಷರಗಳ ಊರುಗಳ ದೊಡ್ಡ ಪಟ್ಟಿಯಾಂದನ್ನು (ಕರ್ನಾಟಕದ 263 ಊರುಗಳ ಹೆಸರುಗಳಿವೆ) ಇದರೊಂದಿಗೆ ಕಳಿಸುತ್ತಿದ್ದೇನೆ. ಇದರಂತೆಯೇ, ಕಾವ್ಯಗಳ, ದೇವರನಾಮಗಳ ಇತ್ಯಾದಿ ಪಟ್ಟಿ ಮಾಡಿಕಳಿಸಲೇ? ಇನ್ನೊಂದು ವಿಷಯ. ನಿಮ್ಮ 'ಅಮೆರಿಕ ಕೈಪಿಡಿ" ಇಂಗ್ಲೀಷ್‌ ವೆಬ್‌ಸೈಟ್‌ ನನಗೆ ಬಹಳ ಇಷ್ಟವಾಯಿತು. ಕ್ಯಾಲಿಫೋರ್ನಿಯಾದ 'ಬೇ ಏರಿಯಾ"ಕ್ಕೆ ಕಳೆದ ಆರು ತಿಂಗಳ ಹಿಂದೆ ಬಂದಿಳಿದ ನಾನು 'ಬೇ ಏರಿಯಾ ಅನುಭವಗಳು" ಎಂಬ ಒಂದು ಪುಸ್ತಕ ಬರೆಯುತ್ತಿದ್ದೇನೆ. ಅದಕ್ಕೆ ನಿಮ್ಮ ವೆಬ್‌ಸೈಟ್‌ನಿಂದ ಕೆಲವು ಮಾಹಿತಿಗಳನ್ನು ಪಡೆಯಲು ಅನುಮತಿ ಇದೆಯೇ?

- ವೈ ಹನುಮಂತ ಸೆಟ್ಟಿ; ಕ್ಯಾಲಿಫೋರ್ನಿಯಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X