ಹಾಲುಜೇನು : ಸಂಗಾತಿ ಜೋತಿಷ್ಯ ಭವಿಷ್ಯ

ಮದುವೆ ಕೇವಲ ಗಂಡು ಹೆಣ್ಣಿನ ಕೂಡುವಿಕೆಗೆ ಸಮಾಜ ಒತ್ತುವ ಮುದ್ರೆಯೆಂದು ಭಾವಿಸಿದರೆ ನೀವು ಕೆಟ್ಟಿರಿ. ಅದು ಅಷ್ಟು ಸರಳ ಹಾಗೂ ತಮಾಷೆಯ ಸಂಗತಿಯೇನಲ್ಲ. ಪತಿ-ಪತ್ನಿ ಪ್ರತಿಯೊಂದು ಚಿಕ್ಕ ವಿಷಯದಲ್ಲೂ ಒಂದಾಗಿ ಒಬ್ಬರ ಜೊತೆ ಮತ್ತೊಬ್ಬರು ಬೆರೆತು ಸುಖವಾಗಿ, ಮರ್ಯಾದೆಯಾಗಿ ಬದುಕುವ ಆಣೆಪ್ರಮಾಣ ಮಾಡುತ್ತಾರೆ ಸರ್ವರ ಮುಂದೆ. ಪ್ರತಿಯೊಬ್ಬರೂ ತಮ್ಮ ವೈವಾಹಿಕ ಬದುಕು ಸುಂದರವಾಗಿರಲಿ ಎನ್ನುವ ಕನಸು ಕಾಣುತ್ತಾರೆ. ತಮ್ಮ ಸಂತಾನದ ಶ್ರೋಯೋಭಿವೃದ್ದಿಗಳೂ ಉತ್ತಮವಾಗಿರಲಿ ಎನ್ನುವ ಆಶಯ ಪ್ರತಿಯೊಂದು ದಂಪತಿಗಳಲ್ಲಿ ಮನೆ ಮಾಡಿರುತ್ತದೆ.
ಆದರೆ ಇಂದಿನ ಲೈಫ್ ಸ್ಟೈಲ್ ನಲ್ಲಿ ಕೆಲವು ಸಂಗತಿಗಳಿಗೆ ಖೋತಾ ಆಗಿದೆ. ಇಲ್ಲಿ ಯಾರ ಮೇಲೂ ಗೂಬೆ ಕೂರಿಸುವ ಪ್ರಯತ್ನವಿಲ್ಲ. ಆದರೆ ಸಾಕಷ್ಟು ಸರ್ತಿ ಸಣ್ಣಪುಟ್ಟ ಕಾಂಪ್ರೋಮೈಸ್ ನಿಂದ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳು ಕರಗಿಹೋಗುವುದೂ ಉಂಟು. ಅತ್ತೆ-ಸೊಸೆ ಗಲಾಟೆ, ಗಂಡ ಹೆಂಡಿರ ಜಗಳ.. ಅನೇಕ ಸಮಸ್ಯೆಗಳು ಪದೇಪದೇ ಆಗುವುದಕ್ಕೆ ಜಾತಕಗಳು ಹೊಂದದೆ ಇರುವುದೇ ಮುಖ್ಯ ಕಾರಣ ಆಗಿರುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ನೀವು ನಂಬಿದರೆ ನಂಬಿ, ಬಿಟ್ಟರೆ ಮುಂದೆ ಓದಬೇಡಿ.
![]() | |
| ಗ್ರಹಗತಿಗಳು ಆಡಿಸಿದಂತೆ ಆಡುವ ಬೊಂಬೆಗಳು ನಾವು. | |
![]() | |
ನಮ್ಮ ಹನ್ನೆರಡು ಗ್ರಹಗಳಿಗೆ ಹನ್ನೆರಡು ರಾಶಿಗಳು. ಮೇಷದಿಂದ ಮೀನ ರಾಶಿಯ ತನಕ. ಆದರೆ ಒಂದೊಂದು ರಾಶಿಗೂ ಅದರದೇ ಆದ ಗುಣಾವಗುಣಗಳು ಇದ್ದೆ ಇವೆ..! ರಾಶಿಗಳೂ ನಮ್ಮ ಹಾಗೆ. ನಾವು ರಾಶಿಯ ಹಾಗೆ. ಸೂರ್ಯ ಈ ರಾಶಿಗಳ ಅಧಿಪತಿ. ಇದು ಕೇವಲ ದಂಪತಿಗಳಿಗೆ ಮಾತ್ರವಲ್ಲ ಭಾವಿ ದಂಪತಿಗಳಿಗೆ, ಮದುವೆ ಆಗಬೇಕೆಂದು ಸನ್ನದ್ಧರಾಗಿ ಇರುವವರಿಗೆ, ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ಆಸಕ್ತಿ ಇರುವವರಿಗೂ ಸಹ ಉಪಯುಕ್ತವಾದ ಭವಿಷ್ಯವಲ್ಲದ ಭವಿಷ್ಯ..!
ಇಲ್ಲಿ ನಾವು ಕೊಟ್ಟಿರುವ ಮಾಹಿತಿಯ ಉದ್ದೇಶ ಬದುಕನ್ನು ಸುಂದರವಾಗಿಟ್ಟುಕೊಳ್ಳಿ ಎನ್ನುವುದೇ ಆಗಿದೆ. ಈ ಮಾಲಿಕೆಯಲ್ಲಿ ಅಡಕವಾಗಿರುವ ಸಂಗತಿಗಳು ನಿಮಗೊಂದು ಸರಳ ಮಾಹಿತಿ ನೀಡುವುದು ಆಗಿದೆಯೇ ವಿನಃ ಇದೇ ಪರಿಪೂರ್ಣವೆಂದು ದಟ್ಸ್ ಕನ್ನಡ ಓದುಗ ವೃಂದ ಭಾವಿಸುವ ಅಗತ್ಯವಿಲ್ಲ. ರಾಶಿಗಳ ಗುಣ ಹಾಗೂ ಹಾಲು ಜೇನಿನಂತೆ ನೀವು ಮತ್ತು ಅವರು, ಅವರ ಮತ್ತು ನೀವು ಒಂದಾಗುವ ಹೊಂದಾಣಿಕೆ ಜೋತಿಷ್ಯ ರಸಾಯಯನ ಶಾಸ್ತ್ರದ ಬಗೆಗೆ ಸಂಬಂಧಪಟ್ಟ ಮಾಹಿತಿ ಸದ್ಯದಲ್ಲೇ ಆರಂಭ, ನಿರೀಕ್ಷಿಸಿ.
ಒಂದ್ನಿಮಿಷ : ಹಾಲುಜೇನು ಸಂಗಾತಿ ಜ್ಯೋತಿಷ್ಯ ಭವಿಷ್ಯವನ್ನು ತಿಳಿಯುವ ಮುನ್ನ ರಾಶಿಗಳ ಗುಣಸ್ವಭಾವಗಳನ್ನು ಅರಿಯುವುದು ಅಗತ್ಯ. ಸಂಗಾತಿ ಜ್ಯೋತಿಷ್ಯ ಮಾಲಿಕೆ ಆರಂಭಕ್ಕೆ ಮುನ್ನ ನಿಮ್ಮ ರಾಶಿಯ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಇದು ಮೇಷದಿಂದ ಆರಂಭ. ತಾರೀಖು 20 ಮೇ 2010.














Click it and Unblock the Notifications