ಎಸ್ಸೆಂಎಸ್ಸ್ ಜೋಕುಗಳ ರಸಮಲೈ

Real time SMS
ಮೊಬೈಲ್ ಫೋನು ಹೃದಯಕ್ಕಿಂತ ಪ್ರಮುಖವಾದ ಆರ್ ಗನ್. ಶ್ವಾಸಕೋಶಕ್ಕಿಂತ ಹೆಚ್ಚು ಉಪಯುಕ್ತವಾದ ಬಲೂನು. ಇವು ಎಷ್ಟು ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ ಎಂದರೆ ರಕ್ತ ಇದರೊಳಗೇ ಹೋಗಿ ಶುದ್ಧಿ ಆಗಿ ಹೊರಬರಬೇಕು. ಪ್ರೀತಿ, ಗೆಳೆತನ, ಬಿಜಿನೆಸ್ಸು, ಸ್ಟಡೀಸುಗಳ ಉಚ್ವಾಸ ಮತ್ತು ನಿಚ್ವಾಸ ಈ ಮೂಲಕವೇ ಆಗಬೇಕು. ಇನ್ನೂ ಅನೇಕಾರು ಅಪಾಯಿಂಟುಮೆಂಟುಗಳು ಮತ್ತು ಡಿಸಪಾಯಿಂಟ್ ಮೆಂಟುಗಳು ಎರಡೂನೂವೆ ಇಲ್ಲೇ ಜನ್ಮ ಎತ್ತಿ, ಅಲ್ಲೇ ಡಿಲೀಟ್ ಆಗಬೇಕು.

ಪುರಾಣಗಳಲ್ಲಿ ಒಂದೊಂದು ದೇವರ ಬಳಿ ಒಂದೊಂದು ಹೊಸ ಆಯುಧ ಇದ್ದಂಗೆ ಈಗಿನ ಕಾಲದಲ್ಲಿ ಮನುಷ್ಯ ದೇವರ ಬಳಿ ಮೊಬೈಲ್ ಅಂಬೋ ಯಾವುದೋ ಒಂದು ಕಂಪನಿಯ ಆಯುಧ ಸದಾ ಇರುತ್ತದೆ! ಈ ಅಸ್ತ್ರದ ಬಳಕೆಯು, ಮಾತಾಡುವುದಕ್ಕೆ ಕೇಳುವುದಕ್ಕೆ ಎಷ್ಟು ಉಪಯುಕ್ತವೋ ಅದೇ ಬಗೆಯಲ್ಲಿ ಮತ್ತೊಂದು ಕೆಲಸಕ್ಕೂ ಅತ್ಯಂತ ಪ್ರಯೋಜನಕಾರಿ. ಮತ್ತಿನ್ನೇನು ಎಸೆಮೆಸ್ ಕಳಿಸೋಕೆ ಮತ್ತು ಸ್ವೀಕರಿಸೋಕೆ!

ದಟ್ಸ್ ಕನ್ನಡ ಸರ್ವರ್ ಮೂಲಕ ಇವತ್ತು ನಿಮ್ಮ ಮೊಬೈಲ್ ಫೋನುಗಳಿಗೆ ಆಯ್ದ ಕೆಲವು ಮೆಸೇಜುಗಳನ್ನು ಕಳಿಸುತ್ತಿದ್ದೇನೆ. ತಾವು ಇದಕ್ಕೆ ರಿಪ್ಲೈ ಮಾಡುತ್ತೀರೆಂಬ ನಿಷ್ಕಳಂಕ ಭರವಸೆ ಇದೆ. ನಾಟ್ ರೀಚಬಲ್ ಆಗಿದ್ರೆ ಅಂಡರ್ ಸ್ಟಾಂಡಬಲ್, ಸ್ವಿಚ್ ಆಫ್ ಆಗಿದ್ರೆ ಡೌಟ್ ಫುಲ್, ಓದಿ ಸುಮ್ಮನಾದರೆ ನಾಟ್ ಅಕ್ಸೆಪ್ಟಬಲ್!

* ಸಿಗಬೇಕು ಅಂತ ಲವ್ ಮಾಡೋದು ಡೀಪ್ ಲವ್, ಸಿಗ್ತಾರೆ ಅಂತ ಗೊತ್ತಿದ್ರು ಮಾಡೋದು ಸ್ಟ್ರಾಂಗ್ ಲವ್, ಸಿಗಲ್ಲ ಅಂತ ಗೊತ್ತಿದ್ರು ಮಾಡೋದು ರಿಯಲ್ ಲವ್. ask for the impossible.

* ನಿನಗೇನೂ ಇಷ್ಟ ಅಂದೇ, ಐಸ್ಕ್ರೀಮ್ ಅಂದ್ಲು, ಗಡ್ ಬಡ್ ಕೊಡಿಸಿ ಬಿಲ್ ಕೊಟ್ಟೆ. ಅದೇ ರೀತಿ ನಿಮಗೇನು ಇಷ್ಟ ಅಂದ್ಲು, ಹಣ್ಣು ಅಂದೆ;ಚಳ್ಳೆಹಣ್ಣು ತಿನ್ನಿಸಿ ಕಾಣದಂತೆ ಮಾಯವಾದಳು.

* ಹುಡುಗ: ಐ ಲವ್ ಯು ; ಹುಡುಗಿ:ನಿನ್ನ ಸಂಬಳ ಎಷ್ಟು? ಹುಡ್ಗ; ಮೂರುಸಾವಿರ, ಹುಡುಗಿ; ಛಿ
ಅಷ್ಟೇನಾ...ಅದು ನನ್ನ ಸೋಪಿಗು ಸಾಲಲ್ಲ. ಹುಡ್ಗ :ಥೂ ! ನೀನು ಅಷ್ಟು ಗಲೀಜಾ? ಎಷ್ಟು ತಿಂಗಳಾಯ್ತು ಸ್ನಾನ ಮಾಡಿ ?

* ನಾನು ಅವಳ ಮನೆಗೆ ಹೂ ತೆಗೆದುಕೊಂಡು ಹೋದೆ ಪ್ರೇಮ ನಿವೇದಿಸುವುದಕ್ಕೆ. ಅವಳಮ್ಮ ಬಾಗಿಲು ತೆಗೆದರು. ನಾನು ಹೆದರಿ, ಆಂಟಿ ಬಿಜೆಪಿಗೆ ನಿಮ್ಮ ಓಟು ಪ್ಲೀಸ್ !

* ಗ್ಯಾಸ್ ಒಲೆ ಮೇಲೆ ಹೆಂಚು ಒಂದು ಕಡೆ, ಕುಕ್ಕರು ಮತ್ತೊಂದು ಕಡೆ ಇತ್ತು. ಹೆಂಚು:ಏಯ್ ನನ್ನ ಮದ್ವೇಯಾಗ್ತೀಯಾ? ಕುಕ್ಕರ್: ಛಿ !ಇಲ್ಲ ನೀನು ಬ್ಲಾಕ್. ಹೆಂಚು: ಮತ್ತೆ ನನ್ನನ್ನ ನೋಡಿದ ತಕ್ಷಣ ಅದ್ಯಾಕೆ ಅಷ್ಟೊಂದು ವಿಷಲ್ ಹೊಡಿತೀಯ??

* ಉತ್ತಮ ಟೀಚರ್ ಸಾನಿಯಾ ಮಿರ್ಜ ಸ್ಕರ್ಟ್ ನಂತೆ. ಅವರು ಪೂರ್ತಿ ಸಿಲಬಸ್ ಕವರ್ ಮಾಡಲ್ಲ ಆದರೆ ಇಂಪಾರ್ಟೆಂಟ್ ಪೋರ್ಷನ್ ಮರೀದೆ ಕವರ್ ಮಾಡಿರ್ತಾರೆ.

* ಪ್ರೀತಿ, ಮದುವೆಗೆ ಇರುವ ವ್ಯತ್ಯಾಸ : ಪ್ರೀತಿ ಕೆರೆಯಲ್ಲಿ ಈಜಿದಂತೆ, ಒಂದು ರೌಂಡ್ ಆದ ತಕ್ಷಣ ಎದ್ದು ಬರಬಹುದು, ಆದರೆ ಮದುವೆ ಸಮುದ್ರದಲ್ಲಿ ಈಜಿದಂತೆ!

* ಸೆಕ್ಸ್ ಮತ್ತು ಅಯೋಡೆಕ್ಸ್ ಗೂ ಇರುವ ಸಿಮಿಲಾರಿಟಿ ? ...ಉಹ್ ಆಹ್ ಔಚ್ .!

* ಲವ್ ಹಾಗೂ ಅರೇಂಜ್ಡ್ ಮದುವೆಯಲ್ಲಿರುವ ವ್ಯತಾಸ ಏನು? ಲವ್ ಮ್ಯಾರೇಜ್ನಲ್ಲಿ ನಾವು ನಮ್ಮ ಗರ್ಲ್ ಫ್ರೆಂಡನ್ನೇ ಮದುವೆ ಆಗ್ತೀವಿ, ಆದರೆ ಅರೇಂಜ್ಡ್ ಮ್ಯಾರೆಜ್ನಲ್ಲಿ ಬೇರೆಯವರ ಗರ್ಲ್ ಫ್ರೆಂಡನ್ನು ಮದುವೆ ಆಗ್ತೀವಿ.

* ಹುಡ್ಗ: ನಿನ್ನ ಹೆಸರೇನು? ಹುಡುಗಿ: ಎಲ್ಲರು ನನ್ನನ್ನು ಅಕ್ಕ ಅಂತ ಕರೀತಾರೆ. ಹುಡ್ಗ : ವಾವ್!ಎಂಥ ಆಶ್ಚರ್ಯ ಎಲ್ಲರು ನನ್ನನ್ನು ಭಾವ ಅಂತಲೇ ಕೂಗೋದು!

* ಸಾಯೋದಕ್ಕೆ ಬೇಕಾದಷ್ಟು ಚಾನೆಲ್ಲುಗಳಿವೆ. ಟಿಪ್ಪೂ ಡ್ರಾಪಿನಿಂದ ಧುಮುಕಬಹುದು, ಮೆಟಾಸಿಡ್ ಗಟಗಟಾಂತ ಕುಡಿಯಬಹುದು, ಫ್ಯಾನಿಗೆ ನೇಣು ಹಾಕಿಕೊಳ್ಳಬಹುದು, ಚಕ್ರತೀರ್ಥದಲ್ಲಿ ಮುಳುಗಬಹುದು. ಇಷ್ಟೆಲ್ಲ ಸದವಕಾಶಗಳಿದ್ದರೂ ಅದ್ಯಾಕೆ ಹುಡುಗರು ಹುಡುಗೀರ ಹಿಂದೆ ಬಿದ್ದು ಸಾಯ್ತಾರೆ ?

* ಈ ಎಸ್ ಎಂ ಎಸ್ ಓದಿದರೆ ಬಕ್ರ, ಓದದೆ ಇದ್ರೆ ಲೂಸ್, ಸೇವ್ ಮಾಡಿದ್ರೆ ಗುಗ್ಗು, ಡಿಲೀಟ್ ಮಾಡಿದ್ರೆ ಗೂಬೆ, ನಕ್ಕರೆ ಮೆಂಟಲ್, ಕೋಪ ಮಾಡಿಕೊಂಡರೆ ಕೋತಿ, ವಾಪಸ್ ಕಳುಹಿಸಿದರೆ ಚಿಂಪಾಂಜಿ, ಫಾರ್ವರ್ಡ್ ಮಾಡಿದ್ರೆ ದಿಲ್ ದಾರ್ ! ಈಗ ಹೇಳು ನೀನ್ಯಾರು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+