210058food cultureರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು/recipe/culture/2008/1216-delicious-amaldar-uppittu.htmlನನ್ನ ಊರು ಹೊಳೆಹೊನ್ನೂರು. ಮೊನ್ನೆ ಕಾಲೇಜು ಕೆಲಸದ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದೆ. ಮೆಜೆಸ್ಟಿಕ್ಕಿನ ಒಂದು ಹೋಟೆಲಿನಲ್ಲಿ ಕೋಣೆ ಹಿಡಿದಿದ್ದೆ. ಶುಕ್ರವಾರ ಮಲ್ಲೇಶ್ವರ 18ನೇ ಕ್ರಾಸಿನಲ್ಲಿ ಕೆಲಸ ಪೂರೈಸಿಕೊಂಡು ರೂಮಿಗೆ ವಾಪಸ್ಸು ಹೊರಟಿದ್ದೆ. ಆಗ ಕಾಲೇಜು ಆಫೀಸಿನಲ್ಲಿರುವ ಒಬ್ಬ ಹಿರಿಯ ಮಿತ್ರರು ರಾತ್ರಿ ಊಟ ಮತ್ತು ಬೀರು ಕುಡಿಯುವುದಕ್ಕೆಂದು ನನ್ನನ್ನು ಹೋಟೆಲಿಗೆ ಕರೆದೊಯ್ದರು. ಬೀರು ಕುಡಿದು ಊಟಕ್ಕೆ ಆರ್ಡರ್ 33480http://kannada.oneindia.com/img/2008/12/uppittu2.jpg210058food cultureಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ/column/bhat/2009/0129-meet-yajnanarayana-founder-mtr-bengaluru.htmlಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ 34361http://kannada.oneindia.com/img/2009/01/29-yn-maiya-kc-reddy.jpg210058food cultureಮದ್ದೂರು ವಡೆಗೆ ಶತಮಾನಂಭವತಿ/recipe/culture/2009/0314-maddur-vade-centenary.htmlಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ವಿಶ್ವಪ್ರಸಿದ್ಧ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ! ಮದ್ದೂರು ವಡೆಯ ಶತಮಾನೋತ್ಸವದ ನಿಮಿತ್ತ ವಡೆ ಮೆಲ್ಲುತ್ತ ಮದ್ದೂರಿನ ಪೌರಾಣಿಕ, ಐತಿಹಾಸಿಕ ಮಹತ್ವ ಸಾರುವ ಕಥೆಯನ್ನು ಮೆಲುಕು ಹಾಕುವಾ.* ವಾಣಿ ರಾಮದಾಸ್, ಸಿಂಗಪುರ ಮದ್ದೂರು ವಡೆ ಸಿಕ್ಕರೆ ತೆಗೊಂಡು ಬಾರೋ 35216http://kannada.oneindia.com/img/2009/03/14-ugra-narasimha-madduru1.jpg210058food cultureಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ/column/shreenidhi/2009/0324-health-is-wealth.html'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆ ಎಲ್ಲರೂ ಕೇಳಿಯೇ ಇರುತ್ತಾರೆ, ಆದರೆ ಆಚರಣೆಗೆ ತರುವವರು ತುಂಬಾ ಕಡಿಮೆ. ಬದಲಾಗುತ್ತಿರುವ ಜೀವನಶೈಲಿ ಕೂಡ ನಮ್ಮ ಆಹಾರವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿಯ ಬಗ್ಗೆ ನಿರ್ಲಕ್ಷ, ತಿಳಿವಳಿಕೆ ಇಲ್ಲದಿರುವುದು ನಮ್ಮ ದೇಹವನ್ನು ರೋಗರುಜಿನಗಳ ಗುಡಾಣವನ್ನಾಗಿ ಮಾಡಿದೆ. ಆರೋಗ್ಯವೇ ಭಾಗ್ಯವೆಂಬುದನ್ನು ನೆನಪಿನಲ್ಲಿಡಿ.* ಶ್ರೀನಿಧಿ 35468http://kannada.oneindia.com/img/2009/03/24-fruits1.jpg210058food cultureಯೋಗ್ಯ ರಾಗಿ ಭೋಗ್ಯ ಮ್ಯಾಗಿ!/recipe/culture/2009/0706-raagi-gone-maggi-has-come-dum-dum-dum.htmlಚೈನೀಸ್ ಆಹಾರ ತಿನ್ನುವುದಕ್ಕೆ ನಾವೀಗ ಚೈನೀಸ್ ಹೋಟೆಲುಗಳಿಗೆ ನುಗ್ಗುವ ಅಗತ್ಯವಿಲ್ಲ. ಯೋಗ್ಯ ರಾಗಿಯನ್ನು ಒದ್ದೋಡಿಸಿ ನಾಲ್ಕು ಹೊತ್ತು ಮ್ಯಾಗಿ ಮಾಡಿ ತಿನ್ನುವ ಪದ್ದತಿ ನಮ್ಮ ಮನೆಗಳಿಗೆ ಕಾಲಿಟ್ಟಿದೆ.* ಗೋಪಾಲ್ ಕುಲಕರ್ಣಿ, ಬೆಂಗಳೂರು"ಒಂದು ಬಾರಿ ಉಣ್ಣುವವನು ಯೋಗಿ. ಎರಡು ಬಾರಿ ಉಣ್ಣುವವನು ಭೋಗಿ. ಮೂರು ಬಾರಿ ಉಣ್ಣುವವನು ರೋಗಿ. ನಾಲ್ಕು ಬಾರಿ ಉಣ್ಣುವವನನ್ನು ಹೊತ್ಕೊಂಡು ಹೋಗಿ." ಎಂಬ ಉಕ್ತಿ 37803http://kannada.oneindia.com/img/2009/07/06-gopal-kulkarni1.jpg389487lifestyleಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ/column/shreenidhi/2009/0324-health-is-wealth.html'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆ ಎಲ್ಲರೂ ಕೇಳಿಯೇ ಇರುತ್ತಾರೆ, ಆದರೆ ಆಚರಣೆಗೆ ತರುವವರು ತುಂಬಾ ಕಡಿಮೆ. ಬದಲಾಗುತ್ತಿರುವ ಜೀವನಶೈಲಿ ಕೂಡ ನಮ್ಮ ಆಹಾರವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿಯ ಬಗ್ಗೆ ನಿರ್ಲಕ್ಷ, ತಿಳಿವಳಿಕೆ ಇಲ್ಲದಿರುವುದು ನಮ್ಮ ದೇಹವನ್ನು ರೋಗರುಜಿನಗಳ ಗುಡಾಣವನ್ನಾಗಿ ಮಾಡಿದೆ. ಆರೋಗ್ಯವೇ ಭಾಗ್ಯವೆಂಬುದನ್ನು ನೆನಪಿನಲ್ಲಿಡಿ.* ಶ್ರೀನಿಧಿ 35468http://kannada.oneindia.com/img/2009/03/24-fruits1.jpg389487lifestyleನನ್ನ ಮೆಚ್ಚಿನ ನಾಯಿ 'ಚೋ೦ಕ್ರ'/mixed-bag/lifestyle/2009/0623-my-pet-dog-chonkra-by-rajani-bhat.htmlಸುಮಾರು ಇಪ್ಪತ್ತು ವರುಷಗಳ ಹಿ೦ದಿನ ನೆನಪು. ಆಗಿನ್ನು ನಾನು ಮೂರರಲ್ಲಿ ಕಲಿಯುತ್ತಿದ್ದೆ. ಮನೆಯಿ೦ದ ನಾಲ್ಕು ಮೈಲಿ ದೂರದಲ್ಲಿ ನಮ್ಮಪ್ಪನ ಅ೦ಗಡಿಯೊ೦ದಿದ್ದಿತ್ತು. ಅದು ಸರಕಾರಿ ಪ್ರಾಥಮಿಕ ಹಾಗು ಪ್ರೌಢಶಾಲೆಗಳ ಪಕ್ಕದಲ್ಲೇ ಇತ್ತು. ಮಧ್ಯಾಹ್ನ ಹೊತ್ತು ಎಷ್ಟೋ ಮಕ್ಕಳು ಅಲ್ಲಿಗೆ ಬ೦ದು ಚಾಕಲೇಟ್ ಇಲ್ಲವೆ ಪೆಪ್ಪರುಮಿ೦ಟ್ ಗಳನ್ನು ತೆಗೆದು ಹೋಗುತ್ತಿದ್ದರು. ಖರೀದಿಸುವವರಲ್ಲಿ ಕೆಲವರು ಹಣ ಕೊಡದೆ ಜಾಗ ಖಾಲಿ ಮಾಡುತ್ತಿದ್ದುದೂ 37533http://kannada.oneindia.com/img/2009/06/23-dog-chonkra1.jpg389487lifestyleನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg389487lifestyleಅಮೇರಿಕಾದ ಸ್ವಾರಸ್ಯಗಳು! (ಭಾಗ-1)/nri/article/2009/0922-american-lifestyle-and-swarasyagalu-part1.htmlಭಾರತದಿಂದ ಅಮೆರಿಕಾಕ್ಕೆ ಮೊದಲ ಬಾರಿ ಹೋದವರಿಗೆ ಅಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಅಲ್ಲಿನವರ (ಅಮೆರಿಕದಲ್ಲಿಯೇ ನೆಲೆನಿಂತ ಭಾರತೀಯರೂ ಸೇರಿ) ಜೀವನಕ್ರಮ, ರೀತಿರಿವಾಜು ಎಲ್ಲ ವಿಭಿನ್ನ. ಹೊಂದಿಕೊಳ್ಳುವವರೆಗೆ ಒಬ್ಬೊಬ್ಬರಿಗೂ ಒಂದೊಂದು ರೀತಿ ವಿಶಿಷ್ಟ ಅನುಭವ ಆಗುತ್ತಲೇ ಇರುತ್ತದೆ. ಅಮೆರಿಕಾ ಮಾತ್ರವಲ್ಲ ಬೇರೆ ದೇಶಗಳಿಗೆ ಹೋದರೂ ವಿಭಿನ್ನ ಅನುಭವಗಳಿಗೆ, ಸ್ವಾರಸ್ಯಕರ ಘಟನೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಅಮೆರಿಕಾದಲ್ಲಿ ಘಟಿಸಿದ ಸ್ವಾರಸ್ಯಕರ 39313http://kannada.oneindia.com/img/2009/09/22-venkatesh-dodmane2.jpg389487lifestyleಅಮೇರಿಕಾದ ಸ್ವಾರಸ್ಯಗಳು! (ಭಾಗ-2)/nri/article/2009/0929-american-lifestyle-and-swarasyagalu-part2.htmlಈ ಲೋಕವೇ ಒಂದು ವಿಚಿತ್ರ. ನಾವೇನು ಅಂದ್ರೊಂಡಿರ್ತೀವೋ ಅದು ಹಾಗಿರುವುದಿಲ್ಲ. ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಎನ್ನುವ ಗುರು ಶಿಷ್ಯರು ಚಿತ್ರದ ಹಾಡು ಕೇಳಿರಬೇಕಲ್ಲ? ಹಾಗೆಯೇ! ಪ್ರತಿಯೊಬ್ಬರಿಂದಲೂ ಪ್ರತಿಯೊಂದು ವಿಷಯದಿಂದಲೂ ಕಲಿಯುವುದು ಇದ್ದೇ ಇರುತ್ತದೆ. ಭೂಮಿ ಗುಂಡಗಿದೆಯಲ್ಲವೆ? ವೆಂಕಟೇಶ್ ದೊಡ್ಮನೆಯವರು ಉಣಬಡಿಸಿದ್ದ ದೊಡ್ಡಣ್ಣನ ಮನೆಯ ವಿಸ್ಮಯಗಳ ಮುಂದುವರಿದ ಭಾಗದಲ್ಲಿ ಈ ವಿಷಯ ಮನದಟ್ಟಾಗುತ್ತದೆ. ಮೊದಲ ಭಾಗದಲ್ಲಿ ಅನೇಕರು 39413http://kannada.oneindia.com/img/2009/09/29-venkatesh-dodmane1.jpg110501kaaduharateಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg110501kaaduharateಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif110501kaaduharateನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg110501kaaduharateಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg110501kaaduharateಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gifnews"> ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ | Health is wealth | Food culture | Eat to live | Kaaduharate - ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ - Kannada Oneindia

ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ

Health is wealth
'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆ ಎಲ್ಲರೂ ಕೇಳಿಯೇ ಇರುತ್ತಾರೆ, ಆದರೆ ಆಚರಣೆಗೆ ತರುವವರು ತುಂಬಾ ಕಡಿಮೆ. ಬದಲಾಗುತ್ತಿರುವ ಜೀವನಶೈಲಿ ಕೂಡ ನಮ್ಮ ಆಹಾರವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿಯ ಬಗ್ಗೆ ನಿರ್ಲಕ್ಷ, ತಿಳಿವಳಿಕೆ ಇಲ್ಲದಿರುವುದು ನಮ್ಮ ದೇಹವನ್ನು ರೋಗರುಜಿನಗಳ ಗುಡಾಣವನ್ನಾಗಿ ಮಾಡಿದೆ. ಆರೋಗ್ಯವೇ ಭಾಗ್ಯವೆಂಬುದನ್ನು ನೆನಪಿನಲ್ಲಿಡಿ.

* ಶ್ರೀನಿಧಿ ಡಿಎಸ್

ನಿತ್ಯ ನಾವು ಸೇವಿಸುವ ಆಹಾರ, ಭಿನ್ನ ಭಿನ್ನ. ಪ್ರತಿ ಆಹಾರಕ್ಕೆ ಅದರದೇ ಆದ ರುಚಿ. ನಮ್ಮ ಆಹಾರದಲ್ಲಿ ಒಟ್ಟ ಆರು ಬಗೆಯ ರಸಗಳ ಬಳಕೆಯಾಗುತ್ತದೆ. ಸಿಹಿ, ಈ ಆರು ರಸಗಳಲ್ಲೊಂದು. ಸಿಹಿಯನ್ನು ಇಷ್ಟಪಡದವರು ಬಲು ಕಡಿಮೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಿಹಿಯೆಂದರೆ ಎಲ್ಲರೂ ಖುಷಿಯಿಂದ ತಿನ್ನುವವರೇ. ಸಿಹಿ, ನಮ್ಮ ಆಹಾರದಲ್ಲಿ ಬಳಸುವ ಮೊದಲ ಪ್ರಮುಖ ರಸ.

ನಮ್ಮ ಅಡುಗೆಗಳಿಗೆ ರುಚಿ ತಂದುಕೊಡುವಲ್ಲಿ ಮತ್ತೊಂದು ಮುಖ್ಯ ಪಾತ್ರ ಹುಳಿಯದು. ಹುಣಸೇ ಹಣ್ಣು, ನಿಂಬೆ ಹಣ್ಣುಗಳ ರೂಪದಲ್ಲಿ ಲಭ್ಯವಿರುವ ಹುಳಿಯನ್ನು ಭಾರತೀಯ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹುಳಿಯ ಅಂಶ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ದೇಹದ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುವುದು, ಬಾಯಾರಿಕೆ ದೂರ ಮಾಡುವುದು, ದೇಹದಲ್ಲಿನ ಖನಿಜಾಂಶಗಳನ್ನು ಹಿಡಿದಿಟ್ಟುಕೊಳ್ಳುವುದು, ಜೀವಕೋಶಗಳನ್ನು ಬೆಳೆಸುವುದು - ಇವೆಲ್ಲ ಆಹಾರದಲ್ಲಿ ಹುಳಿಯ ಸೇವನೆಯ ಉಪಯೋಗಗಳಾಗಿವೆ.

ಇನ್ನೊಂದು ಮುಖ್ಯ ರುಚಿ, ಉಪ್ಪು. ಜಗತ್ತಿನ ಬೇರಾವುದೇ ಅಡುಗೆ ಪದಾರ್ಥವನ್ನು ಉಪ್ಪಿನ ಜೊತೆ ಹೋಲಿಸಲಾಗದು. ಉಪ್ಪು ಮತ್ತು ಉಪ್ಪಿನಿಂದ ತಯಾರಿಸಲ್ಪಟ್ಟ ಉಪ ಉತ್ಪನ್ನಗಳು ನಮ್ಮ ದೇಹದ ಜೀವಕೋಶಗಳಲ್ಲಿನ ನೀರಿನ ಅಂಶದ ಸಮತೋಲನಕ್ಕೆ ಸಹಕರಿಸುತ್ತವೆ. ಅಲ್ಲದೇ ದೇಹದಲ್ಲಿರುವ ಖನಿಜಾಂಶಗಳ ಸಮರ್ಪಕ ನಿರ್ವಹಣೆಯಲ್ಲಿ ಉಪ್ಪಿನ ಪಾತ್ರ ಮಹತ್ವದ್ದು. ಚರ್ಮದ ಮತ್ತು ದೇಹದ ಮೂಳೆಗಳ ಆರೋಗ್ಯವಂತ ಬೆಳವಣಿಗೆಯಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

ಆಹಾರಕ್ಕೊಂದು ಅನನ್ಯ ಸ್ವಾದ ಬರುವಂತೆ ಸಹಕರಿಸುವುದು ಖಾರವೆಂಬ ರಸ. ಖಾರದ ಪದಾರ್ಥಗಳು ದೇಹದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಇವುಗಳು ಜೀರ್ಣಕಾರಿ ಅಲ್ಲದೇ ದೇಹದ ಮಾಂಸಖಂಡಗಳ ಚೈತನ್ಯ ನೀಡುವ ಕೆಲಸವನ್ನೂ ಮಾಡುತ್ತದೆ.

ಅಧರಕ್ಕೆ ಕಹಿಯಾಗಿದ್ದು ಉದರಕ್ಕೆ ಸಿಹಿ ಅನ್ನೋ ಮಾತಿದೆ. ಆರು ರಸಗಳಲ್ಲಿ ಒಂದಾದ ಕಹಿ ಎನ್ನುವುದು ಒಂದು ಪ್ರಮುಖ ರಸಗಳಲ್ಲೊಂದು. ಯಾವುದೇ ಔಷಧ ಅಥವಾ ಮಾತ್ರೆಯಾದರೂ ಸಾಧಾರಣವಾಗಿ ಕಹಿರುಚಿ ಹೊಂದಿರುತ್ತದೆ. ನಮ್ಮ ದೇಹಕ್ಕೆ ಹೊರಗಿನಿಂದ ಪೂರೈಕೆಯಾಗುವ ಕಹಿಯ ಅಂಶ, ಸೊಪ್ಪು ತರಕಾರಿಗಳ ಮೂಲಕ ಸಿಗುತ್ತದೆ.

ನಾವು ಸೇವಿಸುವ ಆಹಾರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದು ಒಗರಿನ ಅಥವಾ ಕಟು ಎಂಬ ರಸ. ಕಾಲಿ ಫ್ಲವರ್ ನಂತಹ ತರಕಾರಿಗಳಲ್ಲಿ, ಅರಸಿನ ಮೊದಲಾದ ಗಿಡಮೂಲಿಕೆಗಳಲ್ಲಿ ಒಗರಿನ ಅಂಶ ಕಂಡುಬರುತ್ತದೆ. ಒಗರು ದೇಹದಲ್ಲಿನ ನೀರಿನ ಮಟ್ಟ ಕಾಪಾಡುತ್ತದೆ ಅಲ್ಲದೇ ಹೆಚ್ಚಾದ ಕೊಬ್ಬನ್ನು ಒಣಗಿಸುವ ಕೆಲಸವನ್ನೂ ಮಾಡುತ್ತದೆ.

ಈ ಎಲ್ಲ ರಸಗಳನ್ನು ಸೇರಿಸಿಕೊಂಡಿರುವ ಊಟತಿಂಡಿಗಳು ಮನುಷ್ಯನ ನಿತ್ಯ ಸಹಚರಿಗಳು. ಇವುಗಳ ಮೂಲಕ ಮನುಷ್ಯ ಬೆಳೆಯುತ್ತಾನೆ, ಇವುಗಳ ಮೂಲಕವೇ ಆತನ ಸ್ವಭಾವವನ್ನೂ ಕಂಡುಹಿಡಿಯಬಹುದು ಕೂಡ. ಆದರೆ ಇಂದು ಬದುಕಿಗೆ ವೇಗ ಬಂದುಬಿಟ್ಟಿದೆ. ಎಲ್ಲರೂ ಅಕ್ಷರಸ್ಥರಾಗುತ್ತಿದ್ದಾರೆ, ಹೆಚ್ಚು ಹೆಚ್ಚು ವಿಷಯಗಳನ್ನು ಅರಿತುಕೊಂಡು ಪ್ರಜ್ಞಾವಂತರಾಗುತ್ತಿದ್ದಾರೆ. ಆದರೆ, ಈ ಪ್ರಜ್ಞಾವಂತಿಕೆ ಎನ್ನುವುದು ಕೆಲವೇ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುತ್ತಿದೆ. ನಮ್ಮ ಜೀವನದ ಹಲವು ಮುಖ್ಯ ವಿಚಾರಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಬಿಟ್ಟಿದ್ದೇವೆ. ಆಹಾರವೂ ಅವುಗಳಲ್ಲಿ ಸೇರಿದೆ.

ಆಹಾರದ ದುರ್ಬಳಕೆಯಂತೂ ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಾಗಿದೆ. ಹಣವಿರುವ ಪ್ರತಿಯೊಬ್ಬನಿಗೂ ಆಹಾರ ಒಂದು ಸಮಸ್ಯೆಯೇ ಅಲ್ಲ. ಹಾಗಾಗಿಯೇ ಅದರ ಕಡೆಗೊಂದು ಪ್ರೀತಿ ಯಾರಿಗೂ ಇಲ್ಲ. ಜಗತ್ತಿನ ಎಷ್ಟೋ ರಾಷ್ಟ್ರಗಳಲ್ಲಿ ದುಡ್ಡು ಕೊಟ್ಟರೂ ಸರಿಯಾದ ಆಹಾರ ಸಿಗದಷ್ಟು ಕ್ಷಾಮದ ಪರಿಸ್ಥಿತಿ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ತಿಳಿದಿದ್ದರೂ ತಮ್ಮ ಪಾಲಿಗೆ ಆ ಪರಿಸ್ಥಿತಿ ಬರಲಾರದು ಅನ್ನುವ ಅತಿಯಾದ ಆತ್ಮವಿಶ್ವಾಸ ಇದ್ದರೂ ಇರಬಹುದು.

ದೊಡ್ಡ ದೊಡ್ಡ ನಗರಗಳಲ್ಲಿ ದಿನನಿತ್ಯ ಬಳಸಲ್ಪಡುವ ಆಹಾರ ಮತ್ತು ಚೆಲ್ಲಲ್ಪಡುವ ಆಹಾರದ ಪ್ರಮಾಣ ಹೆಚ್ಚೂ ಕಡಿಮೆ ಒಂದೇ ಅಂದರೆ ತಪ್ಪಾಗಲಾರದು. ಹೋಟೇಲುಗಳು, ಮದುವೆಯ ಛತ್ರಗಳಲ್ಲಿ ದಿನನಿತ್ಯ ಲೆಕ್ಕ ಹಾಕಲಾರದಷ್ಟು ಆಹಾರ ಚೆಲ್ಲಲ್ಪಡುತ್ತಿದೆ. ಅದ್ದೂರಿತನ ಮತ್ತು ಪ್ರತಿಷ್ಠೆಯ ಹೆಸರಿನಲ್ಲಿ ಅನವಶ್ಯಕವಾಗಿ ಉಣ್ಣುವ ಅನ್ನವನ್ನು ಎಸೆಯುತ್ತಿದ್ದಾರೆ.

ಇಂದು "ಗೆಟ್ ಟುಗೆದರ್" ಹೆಸರಲ್ಲಿ ಸೇರುವ ಸ್ನೇಹಿತರು, ಬಂಧು ಬಳಗ ಎಲ್ಲ ತಮ್ಮ ದೇಹಕ್ಕೆ ಒಗ್ಗುತ್ತದೆಯೋ ಇಲ್ಲವೋ ಎಂಬ ವಿಚಾರ ಮಾಡದೇ, ಪಾಶ್ಚಾತ್ಯ ಸಂಸ್ಕೃತಿಯ ಅಥವಾ ತಮ್ಮ ದೇಹಕ್ಕೆ ಸೇರದ ಆಹಾರಗಳನ್ನು ಸೇವಿಸುವ ಅಪಾಯಕಾರೀ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರತಿಷ್ಠೆಯ ಸೋಗು.

ಹೇಗು ಹೇಗೋ ಆಹಾರವನ್ನು ಸೇವನೆ ಮಾಡುತ್ತಿರುವುದರಿಂದ ಇಂದಿನ ಜನಾಂಗ ಹೊಸದೊಂದು ಭೀತಿಯಿಂದ ನರಳುತ್ತಿದೆ. ತಮಗೆ ಆಹಾರ ಸಂಬಂಧೀ ಕಾಯಿಲೆಗಳು ಬರಬಹುದು, ಬೊಜ್ಜಿನ ತೊಂದರೆ ಉಂಟಾಗಬಹುದು ಎಂಬೆಲ್ಲ ಹೆದರಿಕೆಯಿಂದ ಬಳಲುತ್ತಿದೆ. ಜನ ತಮಗೆ ತಾವೇ ಕಡಿವಾಣ ಹಾಕಿಕೊಳ್ಳಲೂ ಹೊರಡುತ್ತಿದ್ದಾರೆ. ಸ್ವಯಂ ವೈದ್ಯ ಮಾಡಿಕೊಳ್ಳುವ ನೂತನ ಪ್ರವೃತ್ತಿ ಆರಂಭವಾಗಿದೆ. ಒಮ್ಮಿದೊಂಮ್ಮೆಗೇ ತಮ್ಮ ಆಹಾರ ಕ್ರಮವನ್ನು ಬದಲು ಮಾಡುವುದು, ಸಮೃದ್ಧ ಆಹಾರ ಸೇವಿಸುವುದರ ಬದಲು ಮಿತ ಆಹಾರವನ್ನು ತೆಗೆದುಕೊಳ್ಳಲು ಶುರು ಮಾಡುವುದೇ ಮೊದಲಾದ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಇದು ಬಹಳ ತಪ್ಪು ಎನ್ನುತ್ತಾರೆ ವೈದ್ಯರು.

ಯಾರು ಏನೇ ಅಂದರೂ ನಿಮ್ಮ ಆಹಾರ ಸೇವನೆಯ ಕ್ರಮವನ್ನು, ಬದಲಿಸಲು ಹೋಗದಿರಿ. ಪ್ರತಿ ವ್ಯಕ್ತಿಯ, ಕುಟುಂಬದ ಆಹಾರ ಮತ್ತೊಬ್ಬರದ್ದಕ್ಕಿಂತ ಭಿನ್ನವಾಗಿಯೇ ಇರುತ್ತದೆ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಒಂದೊಂದು ಜನಾಂಗದ, ಪ್ರದೇಶದ ಆಹಾರ ಭಿನ್ನವಾಗಿದ್ದರೂ, ಅವುಗಳು ಬಹುಕಾಲ ಉರುಳಿದರೂ ಹಾಗೆಯೇ ಇದ್ದು ಸಮಯದ ಜೊತೆಗಿನ ಹೋರಾಟದಲ್ಲಿ ಗೆದ್ದು ಬಂದವು. ಅದರೆ ಯಾರಿಗಿದು ನೆನಪಿದೆ ಹೇಳಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+