ದಟ್ಸ್ ಕನ್ನಡಕ್ಕೆ ಅನುವಾದಕರು ಬೇಕಾಗಿದ್ದಾರೆ

Jobs In Thatskannada
ನಮ್ಮ ಕನ್ನಡ ವೆಬ್ ಸೈಟಿನಲ್ಲಿ ಎರಡು ಹುದ್ದೆಗಳು ಖಾಲಿ ಇವೆ. ಹುದ್ದೆಯ ಹೆಸರು ಅನುವಾದಕರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವ ಕೆಲಸ. ಇಂಗ್ಲಿಷಿನಲ್ಲಿ ಸಿದ್ಧವಿರುವ ಮಾಹಿತಿಗಳನ್ನು ಒಪ್ಪವಾಗಿ ಕನ್ನಡಕ್ಕೆ ಕರೆತರುವ ಕೌಶಲ್ಯ ಯುವ ಅಭ್ಯರ್ಥಿಗಳಿಗೆ ಅಗತ್ಯ.

ಮಾಹಿತಿಗೆ ಇತಿಮಿತಿ, ಎಲ್ಲೆಗಳಿರುವುದಿಲ್ಲ. ಶಿಕ್ಷಣ, ಆರೋಗ್ಯ, ಶೇರು ಮಾರುಕಟ್ಟೆ, ವಿದ್ಯುನ್ಮಾನ ಉಪಕರಣಗಳು, ದತ್ತಿ ಉಪನ್ಯಾಸ, ಅಥವಾ ಉದಾಹರಣೆಗೆ ಹೇಳುವುದಾದರೆ ಪ್ರತಿದಿನ ನಾವು ಬಳಸುವ ಟೂತ್ ಪೇಸ್ಟ್ ನಲ್ಲಿ ಏನೇನಿರುತ್ತದೆ?

ಅದು ನಮ್ಮ ಹಲ್ಲುಗಳನ್ನು ಸ್ವಚ್ಛವಾಗಿಡುವುದಕ್ಕೆ ಹೇಗೆ ಸಹಕರಿಸುತ್ತದೆ ಎಂಬಿತ್ಯಾದಿ ವಿವರಗಳನ್ನು ತಿಳಿಕನ್ನಡದಲ್ಲಿ ಬರೆಯುವ ಜಾಣ್ಮೆ ಇರಬೇಕು. ಇಂಗ್ಲಿಷ್ ಓದುವುದಕ್ಕೆ, ಓದಿದ್ದನ್ನು ಕನ್ನಡದಲ್ಲಿ ಸರಾಗವಾಗಿ ತರ್ಜುಮೆ ಮಾಡುವುದಕ್ಕೆ ಗೊತ್ತಿರಬೇಕು.

ಮಿನಿಮಮ್ ವಿದ್ಯಾರ್ಹತೆ ಯಾವುದೇ ವಿಷಯದಲ್ಲಿ ಪದವಿ. ಈ ಹಿಂದೆ ಇಂಥ ಕೆಲಸಮಾಡಿದ ಅನುಭವ ಕಡ್ಡಾಯವಲ್ಲ. ಅನುಭವ ಇದ್ದರೆ ಒಳ್ಳೆಯದು. ಕಂಪ್ಯೂಟರ್ ಬಳಸಿಕೊಂಡೇ ಕನ್ನಡ ಬರೆಯಬೇಕು.

ನಮ್ಮ ಕಚೇರಿ ಬೆಂಗಳೂರಿನ ಜಯನಗರ ಮೂರನೇ ಬ್ಲಾಕಿನಲ್ಲಿದೆ. ದಿನಾ 8 ಗಂಟೆ, ವಾರಕ್ಕೆ 6 ದಿನ ಕೆಲಸ. ಆಸಕ್ತಿ ಇರುವವರು ತಮ್ಮ ವಿವರಗಳನ್ನು ಇಮೇಲ್ ಮಾಡಿರಿ. ಸಬ್ಜೆಕ್ಟ್ ಲೈನಿನಲ್ಲಿ Application for Translator Job ಎಂದು ಬರೆಯಿರಿ. ವಿಳಾಸ : [email protected]

ಹುದ್ದೆಗಳು ಭರ್ತಿ ಆಗಿವೆ. ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+