ದಟ್ಸ್ ಕನ್ನಡ ಹೂವಿನಂಗಡಿ 24/7

ಇದು ಹೂವಿನಾ ಲೋಕವೇ... ಇಲ್ಲಿ ಗೆಳತಿಯರಿಲ್ಲವೆ... ಹೇಗೆ ನಾ ಹಾಡಲಿ... ಹೇಳಿ ಹೂಗಳೆ...
ಇದು ಕನಸುಗಾರ ರವಿಚಂದ್ರನ್ ಅಭಿನಯದ 'ನಾನು ನನ್ನ ಹೆಂಡ್ತಿ' ಚಿತ್ರದ ಮನೋಜ್ಞ ಗೀತೆ. ಹೃದಯವನ್ನು ಮೃದುವಾಗಿ ಕಲಕುವ ಹಾಡುಗಳಂತೆ ಮನಕ್ಕೆ ಮುದ ನೀಡುವ ಸುಂದರವಾದ ಹೂವುಗಳಿಗೆ ಮನಸೋಲದವರಿಲ್ಲ. ಹೂವು ಸೌಂದರ್ಯ, ಪ್ರೀತಿ, ಪ್ರೇಮ, ಗೆಳೆತನ, ಒಳ್ಳೆಯತನಕ್ಕೆ ಸಂಕೇತ. ಹೂವನ್ನು ಬೇಡವೆನ್ನದ ದೇವರು ಇಲ್ಲವೇ ಇಲ್ಲ. ಇನ್ನು, ಮೆಚ್ಚಿದ ಗೆಳತಿಗೆ 'ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ' ಅಂತ ಹೇಳಿದರೆ ಆಕೆಯ ಮನದಲ್ಲಿ ಉಲ್ಲಾಸದ ಹೂಮಳೆ.
ಮಲ್ಲಿಗೆ, ಸಂಪಿಗೆ, ಕೆಂಡಸಂಪಿಗೆ, ಜಾಜಿ, ಡೇರೆ, ಡೇಲಿಯಾ, ಕನಕಾಂಬರ, ಲಿಲ್ಲಿ, ಡೈಸಿ, ಸೇವಂತಿಗೆ... ಹೂವುಗಳ ಹೆಸರು ಹೇಳುತ್ತಿದ್ದಂತೆ ಮನವೂ ಅರಳುತ್ತಾ ಹೋಗುತ್ತದೆ. ಪೂಜೆಯಿಂದ ಹಿಡಿದು ಯಾವುದೇ ಶುಭ ಸಮಾರಂಭವಿರಲಿ, ಅಲ್ಲಿ ಹೂವುಗಳದ್ದೇ ರಾಜ್ಯಭಾರ. ಮದುವೆಯಿರಲಿ, ಹುಟ್ಟುಹಬ್ಬವಿರಲಿ, ಯಾರಾದರೂ ಫಾರಿನ್ನಿಗೆ ಹೋಗುತ್ತಿರಲಿ, ಅಲ್ಲಿಂದ ಮರಳುತ್ತಿರಲಿ ಒಂದು ಕೈಕುಲುಕಿ ಅಂದವಾಗಿ ಅರಳಿದ ಹೂಗಳ ಗುಚ್ಛ ನೀಡಿದರೆ ಮನಸು ಸಂತಸದ ಬುಗ್ಗೆಯಾಗಿರುತ್ತದೆ.
ಈಗಂತೂ ಇಂಟರ್ನೆಟ್ ಜಮಾನಾ. ಉತ್ತಮವಾದ, ತಾಜಾತಾಜಾ ಹೂಗುಚ್ಛಗಳು ಕೈಗೆಟಕುವ ದರಗಳಲ್ಲಿ ಎಲ್ಲಿ ಸಿಗುತ್ತದೆಂದು ಗಲ್ಲಿಗಲ್ಲಿಗೆ ಹೋಗಿ ಹುಡುಕುವ ಅಗತ್ಯವೇ ಇಲ್ಲ. ಇದಕ್ಕಾಗಿಯೇ ದಟ್ಸ್ ಕನ್ನಡ ತಾಣದ ಮದರ್ ಪೋರ್ಟಲ್ ಒನ್ ಇಂಡಿಯಾ ಸುಂದರ ಹೂವುಗಳ ಲಾಲ್ ಬಾಗ್ ಬಾಗಿಲನ್ನು ನೆಟ್ಟಿಗರಿಗಾಗಿ ತೆರೆದಿದೆ.
ಪ್ರೀತಿ ನಿವೇದಿಸಬೇಕಾ? ಪ್ರೀತಿಪಾತ್ರರಿಗೆ ಶುಭ ಹಾರೈಸಬೇಕಾ? ಪ್ರಿಯತಮೆಗೆ ಅಥವಾ ಪ್ರಿಯತಮನಿಗೆ ನಿಮ್ಮ ಮನದಾಳದ ಪ್ರೇಮವನ್ನು ನಿವೇದಿಸಿಕೊಳ್ಳಬೇಕಾ? ಚಾಕಲೇಟು ಅಥವಾ ಪುಟಾಣಿ ಉಡುಗೊರೆಯೊಂದಿಗೆ ಹೂಗುಚ್ಛ ನೀಡಿ ವಿಶ್ ಮಾಡಬೇಕಾ? ಇಲ್ಲಿವೆ ತರಹೇವಾರಿ, ಅಂದವಾಗಿ ಅಲಂಕರಿಸಿದ, ಸುಗಂಧ ಪರಿಮಳ ಬೀರುವ ಬಣ್ಣಬಣ್ಣದ ಹೂವುಗಳ ಸುಂದರ ಲೋಕ.
ಬನ್ನಿ, ನಿಮಗೊಪ್ಪುವ ಹೂವಿನ ಬೊಕೆ ರವಾನೆಗೆ ಆದೇಶ ನೀಡಿ.












Click it and Unblock the Notifications