ಕನ್ನಡ ಅನುವಾದ : ಸ್ಪರ್ಧೆಯಲ್ಲದ ಸ್ಪರ್ಧೆ

Success Breeds Success (courtesy : wikipedia)
ಕಳೆದ ಒಂದು ವಾರದಿಂದ 2009-2010ನೇ ಸಾಲಿನ ಶೈಕ್ಷಣಿಕ ವರ್ಷದ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಏಪ್ರಿಲ್ 1ರಿಂದ ಆರಂಭವಾಗಿರುವ ಪರೀಕ್ಷೆಗಳು ಏಪ್ರಿಲ್ 9ನೇ ತಾರೀಕಿನವರೆಗೆ ಇರುತ್ತವೆ. ನಾಳೆ ಗುರುವಾರ 8ರಂದು First Language ಕನ್ನಡ ಪೇಪರ್. ಪರೀಕ್ಷೆಯ ಸಮಯ 10.30ರಿಂದ 1.30. ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದುಕೊಂಡು ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿ ವೃಂದಕ್ಕೆ ಮತ್ತು ಅವರ ಪೋಷಕರಿಗೆ ದಟ್ಸ್ ಕನ್ನಡ ವತಿಯಿಂದ ಹಾರ್ದಿಕ ಶುಭಾಶಯ.

ಕನ್ನಡ ವಿದ್ಯಾರ್ಥಿಯ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ಪ್ರಮುಖ ಘಟ್ಟ. ಕನ್ನಡದಲ್ಲಿ ಮಾತನಾಡುವುದಕ್ಕೆ ಮತ್ತು ಬರೆಯುವುದಕ್ಕೆ ವಿದಾಯ ಹೇಳುವ ಕಾಲಘಟ್ಟವೂ ಹೌದು! ಹೇಗೆಂದರೆ, ಪರೀಕ್ಷೆಗಳು ಮುಗಿಯುತ್ತಿದ್ದಂತೆ ಫಲಿತಾಂಶ ಬರುವುದಕ್ಕೆ ಮುನ್ನವೇ ಯಾವ good ಕಾಲೇಜಿಗೆ ಸೇರಲಿ ಎನ್ನುವ anxiety. ವಿಜ್ಞಾನ, ಕಲೆ, ವಾಣಿಜ್ಯ ಅಥವಾ ಬೇರೆಯಾವುದಾದರೂ ಹೊಸ ಕೋರ್ಸುಗಳನ್ನು ತೆಗೆದುಕೊಳ್ಳುವುದೋ ಎಂಬ ಜಿಜ್ಞಾಸೆ. ಹ್ಯಾಟ್ ಬೂಟ್ ಅಂತ ಮನೆಯಲ್ಲಿ ನಿತ್ಯ ಅದೇ ಚರ್ಚೆ. ಈ ಗಲಾಟೆಯಲ್ಲಿ ಪಿಯೂಸಿಯಲ್ಲಿ ಕನ್ನಡ ಮೀಡಿಯಂ ಆರಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯೋಚನೆ, ಮಾತುಕತೆಗಳು ನಗರದ ಮನೆಗಳಲ್ಲಿ ಆರಂಭವನ್ನೇ ಕಾಣುವುದಿಲ್ಲ.

ಪಿಯೂಸಿಯಲ್ಲಿ ಕನ್ನಡ ಮೀಡಿಯಂ ತೆಗೆದುಕೊಂಡು ಕಲಾ ವಿಭಾಗಕ್ಕೆ ಸೇರಿಕೊಂಡು ಭಾಷೆಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿ ಮುಂದೆ ಕನ್ನಡ ಬಿಎ, ಎಂಎ, ಪಿಎಚ್ ಡಿ ಮಾಡಬೇಕೆಂಬ ಕನಸು ಕಾಣುವ ವಿದ್ಯಾರ್ಥಿಗಳ ಸಂಖ್ಯೆ negligible. ಪಿಯೂಸಿಯಲ್ಲಿ ಕಷ್ಟಪಟ್ಟು ಕನ್ನಡ ಪೇಪರ್ ಬರೆದರಾಯಿತು. ಫೇಲ್ ಆಗದಿದ್ದರೆ ಪುಣ್ಯ. ಆದರೆ ಇತರ ಸಬ್ ಜೆಕ್ಟುಗಳು ಅಷ್ಟು ಸಲೀಸಲ್ಲ. ಸೈನ್ಸ್ ಮ್ಯಾಥ್ಸ್ ಬಯಾಲಜಿಯಲ್ಲಿ ಭರ್ಜರಿ ಅಂಕಗಳನ್ನು ಗಳಿಸಿ ಕೆರಿಯರ್ ಓರಿಯಂಟೆಡ್ ಎಜುಕೇಷನ್ನಿನ ದಿಕ್ಕಿನಲ್ಲಿ ನಡೆಮುಂದೆ ನಡೆಮುಂದೆ ಎಂದು ಸಾಗುವ ಅವಸರ.

ಮಕ್ಕಳ ಕಣ್ಣು ಮತ್ತು ತಂದೆತಾಯಿಯರ ಮನಸ್ಸು ಇಂಜಿನಿಯಿಂಗ್, ಮೆಡಿಕಲ್, ಡೆಂಟಲ್, ಎಂಬಿಎ, ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಅಲೆಯುವುದರಿಂದ ಕನ್ನಡ ಪೇಪರ್, ಕನ್ನಡ ಮೀಡಿಯಂ ವಿಚಾರ ಮಾತಾಡುವುದಕ್ಕೆ ಯಾರಿಗೂ time ಇರುವುದಿಲ್ಲ. ಹೈಯರ್ ಸ್ಟಡೀಸ್ ಮಾಡುವವರಿಗಂತೂ ಕನ್ನಡದಲ್ಲಿ ಬರೆಯಲೇಬೇಕಾದ necessity ಇಲ್ಲದಿರುವದರಿಂದ ಪಿಯೂ ಆದರೆ ಮುಗೀತು. ಅಲ್ಲಿಗೆ ಕನ್ನಡ ಅಕ್ಷರ ಒಡನಾಟಕ್ಕೆ ಗುಡ್ ಬೈ. ಇದು ಕರ್ನಾಟಕ.

ನಮ್ಮ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ತಮಗೆ ಬೇಕಾದ, ಜಾಣ್ಮೆ ಹೆಚ್ಚು ಇರುವ ವಿಷಯಗಳನ್ನು ಆಯ್ದುಕೊಂಡು ವ್ಯಾಸಂಗ ಮುಂದುವರೆಸುತ್ತಾರೆಂಬ ಆಶಯ ನಮಗೂ ಇದೆ. ಈ ಶಿಕ್ಷಣ, ಉದ್ಯೋಗದ ಜಂಜಾಟಗಳ ನಡುವೆ ದೈನಂದಿನ ಬದುಕಿನಲ್ಲಿ ಕನ್ನಡ ಬಳಕೆಗೆ ಅವಕಾಶ ಕಲ್ಪಿಸಿಕೊಳ್ಳಬೇಕಾಗಿರುವುದು ವಿದ್ಯಾರ್ಥಿಗಳ mother tongue ಮೇಲಿನ ಪ್ರೀತಿಯನ್ನು ಅವಲಂಬಿಸಿದೆ. ಹರುಕು ಮುರುಕು ಮಾತನಾಡುವುದರಿಂದ ಕನ್ನಡ ಭಾಷೆಯ ಮೇಲಿನ ಪ್ರಭುತ್ವ, ಉಚ್ಛಾರ ಶುದ್ಧಿ, ಬರವಣಿಗೆ ಶೈಲಿಗಳು ಮೂಡಿಬಾರವು. ಆಗಾಗ ಕನ್ನಡದಲ್ಲಿ ನಾಲಕ್ಕ್ಷಕ್ಷರ ಬರೆಯುವ ಹವ್ಯಾಸ ಇದ್ದರೆ continuity ಇರತ್ತೆ. ಕನ್ನಡ ಭಾಷೆ ರಕ್ತದೊಳಗೆ ಹೋಗತ್ತೆ!

ಬರೆಯುವುದೆಂದರೆ ಯುಆರ್ ಅನಂತಮೂರ್ತಿ, ಎಸ್ಎಲ್ ಭೈರಪ್ಪ, ಜಯಂತ್ ಕಾಯ್ಕಿಣಿ, ಜೋಗಿ, ಕುಣಿಗಲ್ ನಾಗಭೂಷಣ ಅವರಥರವೇ ಬರೆಯಬೇಕೆಂಬ ಹುಚ್ಚು ಕಲ್ಪನೆಗಳು ಬೇಡ. ನಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಈ notionsಗಳನ್ನು ಬೆಳೆಸಿಕೊಂಡಾರೆಂಬ ಭೀತಿ ನಮಗಿದೆ. ಅಪ್ಪ ಅಮ್ಮನಿಗೆ ಜಸ್ಟ್ ಒನ್ ಲೆಟರ್ ಇನ್ ಕನ್ನಡದಲ್ಲಿ (ಬರಹ, ಯೂನಿಕೋಡ್, ನುಡಿ) ಬರೆಯುವ ಆಸಕ್ತಿ ಉಳಿಸಿಕೊಂಡರೆ ಅಷ್ಟು ಸಾಕು.

ನಮ್ಮ ಯುವ ಜನಾಂಗಕ್ಕೆ ಕನ್ನಡದಲ್ಲಿ ಬರೆಯುವ ಒಂದು exercise ಕೊಡುವುದೆಂದು ಇಷ್ಟಪಟ್ಟಿದ್ದೇನೆ. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಲು ಇಚ್ಛಿಸುವವರಿಗೆ ಸ್ವಾಗತ. ಇಲ್ಲಿ ಯಾವುದೇ ಬಹುಮಾನಗಳಿಲ್ಲ, ಪ್ರಶಸ್ತಿಗಳಿಲ್ಲ. ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ಯೋಚಿಸುವದರ ಮೂಲಕ ಮೂಲದಲ್ಲಿರುವ ಭಾವವನ್ನು ಕನ್ನಡಕ್ಕೆ ತರುವ ಕೆಲಸವನ್ನು ಈ ಬೇಸಿಗೆ ರಜಾ ದಿವಸಗಳಲ್ಲಿ ಮಾಡುವಿರೆಂಬ ಅಪೇಕ್ಷೆ ನಮ್ಮದು. ಇದರಿಂದ ನಿಮಗೆ ಒಳ್ಳೆಯದೇ ಆಗತ್ತೆ.

ಮುಂದಿನ ಪುಟದಲ್ಲಿ ಕೊಟ್ಟಿರುವ ಒಂದು Success Breeds Successಯನ್ನು ಕನ್ನಡಕ್ಕೆ ಅನುವಾದ ಮಾಡಿ ನಮ್ಮ ವಿಳಾಸಕ್ಕೆ ಕಳಿಸಿಕೊಡಿ. ಒಪ್ಪವಾಗಿರುವ ಒಂದೆರಡು ಅನುವಾದಿತ ಬರಹಗಳನ್ನು ನಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು. Happy translating.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+