ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತರದ ಹುಡುಗಿಯರಿಗೆ ವರ ಸಿಗೋದು ಕಷ್ಟ

By * ಶಾಮಿ
|
Google Oneindia Kannada News

Model Babeliza
ಸಾಮಾನ್ಯವಾಗಿ ಇಂಡಿಯಾದಲ್ಲಿ ಹುಡುಗಿಯರು ನೀವು ಅಂದುಕೊಂಡಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಐದು ಅಡಿ ನಾಕಂಗುಲ ಬೆಳೆದರೆ ಹೆಚ್ಚೆಚ್ಚು. ಅದಕ್ಕಿಂತ ಕಡಿಮೆ ಇದ್ದರೆ ಕುಳ್ಳಿ ಎಂದು ಈಸಿಯಾಗಿ ಕರೆದುಬಿಡುತ್ತಾರೆ. ಹಾಗಂತ ಹೈಹೀಲ್ಡ್ ಚಪ್ಪಲಿ ಹಾಕದೆ ನಡೆಯುವ ಹುಡುಗಿಯರನ್ನು ನಾವು ಕುಳ್ಳಿ ಎಂದು ಕರೆದು, ಬರೆದು, ನಿಮ್ಮಿಂದ ನಿಂದಿಸಿಕೊಳ್ಳುವುದಕ್ಕೆ ಇವತ್ತಂತೂ ಸುತರಾಂ ತಯಾರಿಲ್ಲ. ಯಾಕೆಂದರೆ ಇವತ್ತು ಶುಕ್ರವಾರ. ಕಡೇಪಕ್ಷ ಶುಭಶುಕ್ರವಾರದ ದಿವಸವಾದರೂ ಕೆಟ್ಟ ಮಾತು ಆಡುವುದು, ಕೆಟ್ಟ ಕಾಮೆಂಟ್ ಬರೆಯುವುದನ್ನು ಬಿಟ್ಟರೆ ನಿಮ್ಮ ಹೈಟಿಗೆ ಸೆಟ್ಟಾಗುವ ಹುಡುಗ ಅಥವಾ ಹುಡುಗಿ ಒಂದಲ್ಲ ಒಂದು ದಿನ ಒಲಿಯದೆ ಬಿಡುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೇಲೆ ಆಣೆ.

ಕರ್ನಾಟಕದ ಹುಡ್ಗೀರು ಅಬ್ಬಬ್ಬಾ ಎಂದರೆ 6 ಅಡಿ ಎತ್ತರಕ್ಕೆ ಬೆಳೆದು ನಿಲ್ಲಬಹುದು. ಉದ್ದಕ್ಕೂ ಬೆಳೆದ ಗರ್ಲು ಸ್ಟೂಡೆಂಟುಗಳನ್ನು 'ಅವಳು ತೆಂಗಿನ ಮರ ಕಣೋ, ಇವಳು ಚನ್ನಗಿರಿ ಗಳ ಕಣಮ್ಮಾ' ಎಂದು ಚಿತ್ರದುರ್ಗ ಗವರ್ನಮೆಂಟ್ ಕಾಲೇಜಿನಲ್ಲಿ ನಾವೆಲ್ಲ ಫ್ರೆಂಡ್ಸು ದೂರದಿಂದ ರೇಗಿಸುತ್ತಿದ್ವಿ. ಮನೇಲಿ ಯಾವ ಗೊಬ್ಬರ ಹಾಕಿ ಬೆಳೆಸ್ತಾರೆ ಇವಳ್ನ ಎಂದು ಮೂಗಿನ ಮೇಲೆ ಬೆರಳು ಇಟ್ಕೊತಿದ್ವಿ. ಎತ್ತರದ ಹುಡುಗಿಯಾಗಿದ್ದು ಎಸ್ ಎಸ್ ಎಲ್ ಸಿ ಫೇಲಾಗಿ ಮನೆಯಲ್ಲಿ ಪಾತ್ರೆ ತೊಳೆದುಕೊಂಡು ಬಟ್ಟೆ ಒಗೆದುಕೊಂಡು ಇದ್ದುಬಿಟ್ಟರೆ ಹೊರಜಗತ್ತಿಗೆ ಅಷ್ಟಾಗಿ ಗೊತ್ತಾಗಲ್ಲ. ಆದರೆ, ಕಾಲೇಜು ಮೆಟ್ಟಿಲು ಹತ್ತಿದ ಹುಡುಗಿಯರು ಐದು ಮುಕ್ಕಾಲು ಅಡಿ ತಲುಪಿದರೆ ಸಾಕು, ಆಡುವುದಕ್ಕೆ ಬರತ್ತೋ ಬಿಡತ್ತೋ, ಬ್ಯಾಸ್ಕೆಟ್ ಬಾಲ್ ಅಥವಾ ವಾಲಿಬಾಲ್ ಟೀಮ್ ಗೆ ಆಟೋಮ್ಯಾಟಿಕ್ ಆಗಿ ಸೆಲೆಕ್ಟ್ ಆಗುವುದು ಗ್ಯಾರಂಟಿ.

ಆಯ್ತು, ಯೂನಿವರ್ಸಿಟಿ ಬ್ಯಾಸ್ಕೆಟ್ ಬಾಲ್ ಟೀಮಿನಲ್ಲಿ ಸ್ಥಾನಪಡೆದು ಪಾರಿತೋಷಕ ಗೆದ್ದಳು ಎಂದು ಭಾವಿಸೋಣ. ಮುಂದೇನು? ನಮ್ಮ ಸಮಾಜದಲ್ಲಿ ಉದ್ದಂಡಿ ಹುಡುಗಿಯರಿಗೆ ಗಂಡು ಸಿಗುವುದು ತುಂಬಾನೇ ಕಷ್ಟ. ಹುಡುಗನಿಗಿಂತ ಹುಡುಗಿ ಸ್ವಲ್ಪವಾದರೂ ಕುಳ್ಳಗಿರಬೇಕು ಎಂದು ಗಂಡಿನಕಡೆಯವರೂ ಬಯಸುತ್ತಾರೆ, ಹೆಣ್ಣಿನ ಕಡೆಯವರೂ ಬಯಸುತ್ತಾರೆ. ಆದರೆ, ಆರಡಿ ಎತ್ತರ ಬೆಳೆದು ನಿಂತ ಮಗಳಿಗೆ ಕನಿಷ್ಠ ಆರಡಿ ಎರಡು ಸೆಂಟಿಮೀಟರ್ ಎತ್ತರ ಇರುವ ಗಂಡನ್ನು ಹುಡುಕುವ ಕಷ್ಟ ಹೆತ್ತವರಿಗೆ ಎದುರಾಗುತ್ತದೆ. ಯಾಕೆಂದರೆ ನಮ್ಮಲ್ಲಿ ವರಸಾಮ್ಯ ಅನ್ನೋ ಒಂದು ಇಷ್ಯೂ ಬಂದು ವಕ್ಕರಿಸಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಈ ಪ್ರಾಬ್ಲಂ ಅಂಥಾ ದೊಡ್ಡ ಇಷ್ಯೂ ಆಗುವುದಿಲ್ಲ. ಗರ್ಲುಗಳು ಸರಾಸರಿ ಕರ್ನಾಟಕದ ಹುಡುಗಿಯರಿಗಿಂತ ಹೆಚ್ಚು ಎತ್ತರಕ್ಕಿರುತ್ತಾರೆ. ಇದಕ್ಕೆ ಜೀನ್ಸು ಪಾನ್ಸು ಕಾರಣಗಳಿರತ್ವೆ. ಅದ್ಯಾಕೆ ಹಾಗೆ ಎಂದು ಹೇಳೋದಕ್ಕೆ ನಮಗೆ ಅಷ್ಟು ತಿಳಿವಳಿಕೆ ಇಲ್ಲ. ಏನೋ ಉದ್ದಕಿದಾಳೆ ಅಂದ್ಕೊಂಡು ಕತ್ತೆತ್ತಿ ನೋಡಿ ಸುಮ್ಮನಾಗುವುದಷ್ಟೆ ನಮ್ಮ ಕೆಲಸ. ಕೆಲವು ಬಾರಿ ಹಾಗೆ ಸುಮ್ಮನೆ ಇರಕ್ಕಾಗಲ್ಲ. ಯಾಕೆಂದರೆ, ಅಮೆರಿಕಾದಲ್ಲಿ ಒಬ್ಬ ಹುಡುಗಿ ಇದಾಳೆ. ಅವಳ ಹೆಸರು ಬೆಬಿಲೀಜಾ ಅಂತ.

ಬೆಬಿಲಿಜ ಫ್ಯಾಷನ್ ಮಾಡೆಲ್ ಆಗಿ ಕೆಲಸ ಮಾಡುವಳು. ತುಂಬಾ ಫೇಮಸ್ಸು. ಈಚೆಗೆ ಆಸ್ಟ್ರೇಲಿಯಾಗೆ ಹೋಗಿ ಭಾರಿ ಸುದ್ದಿ ಮಾಡಿದ್ದಾಳೆ. ಮ್ಯಾಗಜೀನ್ ಜೂ ವೀಕ್ಲಿ ಎಂಬ ಗಂಡು ಮಾಡೆಲುಗಳ ಮ್ಯಾಗಜೀನ್ ಗೆ ಪೋಸು ಕೊಟ್ಟು 'ನನ್ನ ನೀನು ಗೆಲ್ಲಲಾರೆ, ತಿಳಿದೂ ತಿಳಿದೂ ಛಲವೇತಕೇ'ಎಂದು ಗಂಡು ಮಾಡೆಲುಗಳಿಗೆ ಸೆಡ್ಡು ಹೊಡೆದಿದ್ದಾಳೆ. ಲಿಂಗಬೇಧ ಮಾಡದೆ ಕೈಗೊಳ್ಳಲಾದ ಒಂದು ಸಮೀಕ್ಷೆ ಪ್ರಕಾರ ಬೆಬಿಲೀಜ ಇವತ್ತು ಜಗತ್ತಿನ ಅತ್ಯಂತ ಎತ್ತರದ ಮಾಡೆಲ್ ಎಂಬ ಪಟ್ಟ ಅಲಂಕರಿಸಿ ಟಾಪ್ ಆಫ್ ದ ವರ್ಲ್ಡಿ ನಲ್ಲಿ ನಿಂತು ನಮ್ಮನ್ನೆಲ್ಲ ಬಗ್ಗಿ ನೋಡುತ್ತಿದ್ದಾಳೆ.

ಅದೆಲ್ಲ ಸರಿ, ಪುಣ್ಯಾತ್ಗಿತ್ತಿ ಅಮೆರಿಕಾದಲ್ಲಿ ಹುಟ್ಟಿದ್ದು ಯಾವುದೋ ಜನ್ಮದ ಪುಣ್ಯ. ಆಕಸ್ಮಾತ್ ಶಿಕಾರಿಪುರದಲ್ಲೋ ಅಥವಾ ಹೊಳೆನರಸೀಪುರದಲ್ಲೋ ಹುಟ್ಟಿದ್ದರೆ ಅವರ ಅಪ್ಪ ಅಮ್ಮಂಗೆ ವರ ಹುಡುಕುವುದು ಕಷ್ಟ ಆಗಿ ಕಡೆಗೆ ಅವಳನ್ನು ಒಂದು ತೆಂಗಿನಮರಕ್ಕೋ ಅಥವಾ ಅಡಿಕೆ ಮರಕ್ಕೋ ಕೊಟ್ಟು ಮದುವೆ ಮಾಡಬೇಕಾಗುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X