• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿವೋಳ್ : ಪರಂಪರಾಗತ ಗುಣಗಳ ಸಾಂಬಾರು

By * ಶಾಮ್‌
|

ಪರಂಪರಾಗತ ಗುಣಗಳನ್ನು ಮೈಗೂಡಿಸಿಕೊಂಡ ಸಾಂಬಾರ್‌ ಸೇವನೆಯಿಂದ ನಿಮಗೆ ದೊರಕುವ ಪ್ರಯೋಜನಗಳು ಹಲವಾರು. ಪುರುಸೊತ್ತಿದ್ದರೆ ಇವತ್ತು , ಇಲ್ಲದಿದ್ದರೆ ಈ ವಾರಾಂತ್ಯ ನಿವೋಳ್‌ ಮಾಡಿ. ಆಮೇಲೆ ನೋಡಿ !

ನಿವೋಳ್‌. ಇದು ತುಂಬಾ ಹಳೆ ರುಚಿ. ಸಾಮಾನ್ಯವಾಗಿ ಮಂಗಳೂರು, ಗೋವಾ ಕಡೆಯ ಕೊಂಕಣಿ ಮನೆಗಳಲ್ಲಿ ಕಂಡುಬರುವ ವಾರಕ್ಕೆರಡು ಬಾರಿ ಮಾಡುವ ಸಾರು. ಸ್ವಾದಿಷ್ಟ ಮತ್ತು ಆಹಾರ-ಔಷಧೋಪಚಾರಿ. ಬೇಳೆ ಮತ್ತು ತರಕಾರಿಯ ಹಂಗಿಲ್ಲದೆ ಸಾಂಬಾರು ಪದಾರ್ಥಗಳನ್ನು ಮಾತ್ರ ಬಳಸಿ ತಯಾರಿಸುವ ಅರ್ಥಗರ್ಭಿತ ಸಾಂಬಾರು ! ರುಚಿ ಮಾತ್ರವಲ್ಲ . ಅನೇಕ ಪರಂಪರಾಗತ ಗುಣಗಳನ್ನು ಮೈಗೂಡಿಸಿಕೊಂಡ ಈ ಪದಾರ್ಥದ ಸೇವನೆಯಿಂದ ನಿಮಗೆ ದೊರಕುವ ಪ್ರಯೋಜನಗಳು ಹಲವಾರು. ಪುರುಸೊತ್ತಿದ್ದರೆ ಇವತ್ತು , ಇಲ್ಲದಿದ್ದರೆ ಈ ವಾರಾಂತ್ಯ ನಿವೋಳ್‌ ಮಾಡಿ. ಆಮೇಲೆ ನೋಡಿ !

ಪರಿಕರ

ಮೆಂತ್ಯ, ಜೀರಿಗೆ, ಕಾಳು ಮೆಣಸು, ಅರಿಶಿನ ಪುಡಿ, ಸಾಸಿವೆ, ಓಂಕಾಳು (ಅಜ್ವಾನ)..ಪ್ರತಿಯಾಂದೂ ಅರ್ಧ ಚಮಚ.

ಕೊತ್ತಂಬರಿ ಬೀಜ (ದನಿಯ) ಒಂದು ಚಮಚ, ಒಣ ಮೆಣಸಿನಕಾಯಿ 1 ಅಥವಾ 2, ಈರುಳ್ಳಿ 2 , ಬೆಳ್ಳುಳ್ಳಿ 6 ಎಸಳು, ಆಡುವ ಗೋಲಿ ಗಾತ್ರದಷ್ಟು ಹುಣಿಸೆ ಹಣ್ಣು , ಒಣ ಕೊಬ್ಬರಿ ಅರ್ಧ ಬಟ್ಟಲು, ತುಪ್ಪ 2 ಚಮಚ ಸಾಕು.

*ಪರಿಕರಗಳ ಪಟ್ಟಿಯಿಂದ ಒಂದು ಈರುಳ್ಳಿಯನ್ನು ಎತ್ತಿಕೊಂಡು ಗಾಲಿಗಾಲಿಯಾಗಿ ಹೆಚ್ಚಿ ಪ್ರತ್ಯೇಕವಾಗಿಟ್ಟುಕೊಳ್ಳಿ. . ಸಾಲಾಡ್‌ ಥರ ಈರುಳ್ಳಿ ಸ್ಲೈಸ್‌ ಬರಬೇಕು.

ವಿಧಾನ :

ಪರಿಕರದ ಮೂಲ ಪಟ್ಟಿಯಲ್ಲಿರುವ ಎಲ್ಲ ಪದಾರ್ಥಗಳನ್ನು (ಒಂದು ಈರುಳ್ಳಿ ಹಾಗೂ ತುಪ್ಪ ಬಿಟ್ಟು ) ಮಿಕ್ಸಿಗೆ ಹಸಿಹಸಿಯಾಗಿ ಹಾಕಬೇಕು. ಮೊದಲೇ ನೀರು ಹಾಕಬಾರದು. ಮಿಕ್ಸಿ ಉಪಯೋಗಿಸಬೇಕಾದಾಗ ನೀವು ನೆನಪಿಟ್ಟುಕೊಳ್ಳಲೇ ಬೇಕಾದ ಸಂಗತಿಯೆಂದರೆ ಸಾವಧಾನ. ಕೆಲಸಕ್ಕೆ ಹೋಗುವ ಅವಸರದಲ್ಲಿ ಹೆಂಗಸರು ಸಾಮಾನ್ಯವಾಗಿ ಮಿಕ್ಸಿಯನ್ನು ಒಮ್ಮೆಗೇ ಟಾಪ್‌ಗೇರ್‌ಗೆ ಹಾಕಿ ಓಡಿಸುತ್ತಾರೆ. ನೀವು ಹಾಗೆ ಮಾಡಬಾರದು. ಎಲ್ಲ ಪದಾರ್ಥಗಳನ್ನು ಮಿಕ್ಸಿಯಾಳಗೆ ತುಂಬಿ ಮೊದಲು Inchಗೆ ಹಾಕಿ ನಿಧಾನವಾಗಿ ಅರೆಯಬೇಕು. ಕ್ರಮೇಣ ಮೊದಲನೇ ಗೇರ್‌ ನಂತರ 2ನೇ ಗೇರ್‌ ಕೊನೆಗೆ ಥರ್ಡ್‌ ಗೇರ್‌ಗೆ ಹಾಕಿಕೊಳ್ಳುತ್ತಾ ರುಬ್ಬುತ್ತಿರಬೇಕು. ರುಬ್ಬುವುದೂ ಒಂದು ಕಲೆ. ಸಾಂಬಾರು ಪದಾರ್ಥಗಳೆಲ್ಲ ಪುಡಿಪುಡಿಯಾಗಿ ನುಣ್ಣಗಾಗುವ ಹೊತ್ತಿಗೆ ಸ್ವಲ್ಪ ನೀರು ಬೆರೆಸಿ ಮತ್ತೆ ಗಾಡಿ ಓಡಿಸಬೇಕು. ಒಟ್ಟಿನಲ್ಲಿ ಎಲ್ಲ ಪದಾರ್ಥಗಳು ನುಣ್ಣಗೆ ಕಲೆತು ಚಟ್ನಿಯ ರೂಪಕ್ಕೆ ಬರಬೇಕು. ಆಯಿತಾ ?

ಪ್ಯಾನ್‌ ಗ್ಯಾಸ್‌ ಮೇಲೇರಲಿ. ಎರಡು ಚಮಚ ತುಪ್ಪ ಹಾಕಿ ಕಾದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿದ್ದ ಈರುಳ್ಳಿ ಸ್ಲೈಸು ಬೆರೆಸಿ ಬಾಡಿಸಿಕೊಳ್ಳಿ. ಈರುಳ್ಳಿ ಕೆಂಪಾದನಂತರ ರುಬ್ಬಿಕೊಂಡ ಪದಾರ್ಥವನ್ನು ಪ್ಯಾನ್‌ಗೆ ಸುರಿದು ಹದವಾಗಲು ಬಿಡಿ. ಒಂದು ಅಳತೆಗೆ ಕುದ್ದಾದ ಮೇಲೆ ಎರಡು ಲೋಟ ಬಿಸಿ ನೀರು ಹಾಕಿ, ಕಣ್ಣಳತೆಯಲ್ಲಿ ಉಪ್ಪು ಬೆರೆಸಿ ಮತ್ತೆ ಕುದಿಯಲು ಬಿಡಿ. ಆಗಾಗ ವುಡನ್‌ ಸೌಟಿಗೆ ಕೆಲಸ ಕೊಡುತ್ತಿರಿ. ಮನೆಯಲ್ಲಿ ಪುನರ್‌ಪುಳಿ ಅಂದರೆ ಕೋಕಂ ಇದ್ದರೆ ಈ ಹಂತದಲ್ಲಿ ಅರ್ಧ ತೊಳೆ ಹಾಕಿದರೆ ನಡೆಯುತ್ತದೆ.

ನಿಮ್ಮ ಗಮನಕ್ಕೆ :

* ಈ ಅಡುಗೆಯನ್ನು ನಾನ್‌ ಸ್ಟಿಕಿ ಪ್ಯಾನ್‌ನಲ್ಲೇ ಮಾಡುವುದುತ್ತಮ. ನಿವೋಳ್‌ ಚೆನ್ನಾಗಿ ಕುದ್ದು ಹದಗೊಳ್ಳಬೇಕಾದ್ದರಿಂದ ಪಾತ್ರೆಗೆ ಅಂಟಿಕೊಳ್ಳುವುದು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ. ಅಡುಗೆಯೂ ಸಹ ತಾವರೆ ಎಲೆಯ ಮೇಲಿನ ನೀರಿನಂತಿರಬೇಕು.

* ಬಿಸಿಬಿಸಿ ಸಣ್ಣಕ್ಕಿ ಅನ್ನದೊಂದಿಗೆ ಕಲಸಿ ಸ್ವೀಕರಿಸಬೇಕು.

* ಚಳಿ, ಮಳೆ, ಹಿಮಗಾಲವಾದರೆ ಕಿಟಕಿ ಬಾಗಿಲುಗಳನ್ನೆಲ್ಲ ಹಾಕಿ ನಿವೋಳನ್ನು ಸೂಪ್‌ ಮಾದರಿಯಲ್ಲಿ ಬೌಲ್‌ಗೆ ತುಂಬಿಕೊಂಡು ಟೀವಿ ನೋಡುತ್ತಾ ಹೀರಿಕೊಳ್ಳಬಹುದು.

ಪ್ರಯೋಜನಗಳು :

* ದ್ವಿದಳ ಧಾನ್ಯಗಳ ಮರ್ಜಿಗೆ ಸಿಲುಕಿದ ಸಾರು, ಹುಳಿಯಿಂದ ಒಂದು ದಿನ ಫ್ರೀಡಂ.

* ಸ್ವಾದಿಷ್ಟ ಊಟ, ಪೌಷ್ಟಿಕ ಆಹಾರ.

* ವಾತ, ಶೀತ, ಕಫಕ್ಕೆ ಮದ್ದು.

* ಮೊಲೆ ಉಣಿಸುವ ತಾಯಂದಿರಲ್ಲಿ ಹಾಲು ವೃದ್ಧಿ.

* ನಮಗೆ ನಿಮಗೆ ಒಳ್ಳೆ ಸಾರು.

* ಗರ್ಭಿಣಿಯರ ಬಯಕೆ ತಣಿಸುವ ಐಟಂ.

* ವಿಶೇಷವಾಗಿ ಬಾಣಂತಿಯರ ಶೀತವನ್ನು ಮೂಲೆಗುಂಪಾಗಿಸುವ ಟಾನಿಕ್‌.

* ಹಾಗೂ ಸೊಂಟ ಭದ್ರಗೊಳ್ಳುವುದಕ್ಕೆ ರಾಮಬಾಣ ( ಎಂದು ಪ್ರತೀತಿ ).

* ತಿಂದು ಉಳಿದ ನಿವೋಳನ್ನು ರೆಫ್ರಿಜಿರೇಟರ್‌ನಲ್ಲಿ ಇಟ್ಟು ಮತ್ತೆ ಮೈಕ್ರೋ ಓವನ್‌ನಲ್ಲಿ ಬಿಸಿ ಮಾಡಿ ಉಣಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kendasampige : Nivol : A Spice Rasam. Indian spice rich sambar, tasty and healthy food for all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more