• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಶಾಮ್‌

By Staff
|
ಹೂವ ತರುವರ ಮನೆಗೆ ಹುಲ್ಲ ತರುವಾ.. Sampige marada hasirele naduve...
*ಶಾಮ್‌

SK Shama Sundaraಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ನಮ್ಮ ಅಂತರ್‌ಜಾಲ ತಾಣವನ್ನು ಕನ್ನಡ ಬರಹಗಳಿಂದ ಸಮೃದ್ಧಗೊಳಿಸಿದ ಎಲ್ಲ ಲೇಖಕ, ಲೇಖಕಿಯರಿಗೆ ಇಗೋ, ಧನ್ಯವಾದಗಳು.

ಮೇಲೆ ಬೇಯದ, ಕೆಳಗೆ ಸೀಯದ ಹಸಿಹಸಿ ಸುದ್ದಿಗಳಿಂದ ನಮ್ಮ ವೆಬ್‌ಸೈಟ್‌ ಒಣಗಿಹೋಗದಂತೆ ಕಾಪಾಡಿಕೊಂಡು ಬಂದವರು ನೀವು. ಎಲ್ಲಾನ ಇರು, ಎಂಗಾನ ಇರು ಎಂಬ ರಾಗವನ್ನು ಸದಾ ಹಾಡುತ್ತಾ ಕೂರದೆ ‘ನಾನು ಕನ್ನಡಿಗ, ನಾನು ಕನ್ನಡತಿ- ನಾನು ಇರುವುದು ಹೀಗೇ’ ಎಂದು ಯಾವ ಮೋಹವಿಲ್ಲದೆ ಬರೆಯುತ್ತಾ ವಿಶ್ವಕುಟುಂಬಿ ನುಡಿಗಟ್ಟಿಗೆ ಅನ್ವರ್ಥರಾದವರು ನೀವು. ದೈನಂದಿನ ಜಂಜಡಗಳ ನಡುವೆಯೂ ನಿಮ್ಮ ತವರು ಮನೆಯನ್ನು, ತಾಯಿನುಡಿಯನ್ನು ಪ್ರೀತಿಯಿಂದ ನೆನೆಸಿಕೊಂಡವರು ನೀವು. ಅಟ್ಲಾಂಟಿಕ್‌ ಮತ್ತು ಪೆಸಿಫಿಕ್‌ ಸಾಗರದಿಂದ ಬೀಸುವ ಕನ್ನಡದ ಗಾಳಿಗೆ ಎಚ್ಚರಿಕೆಯಿಂದ ಮೈಯಾಡ್ಡಿಕೊಳ್ಳುತ್ತಾ , ಕನ್ನಡದ ಪರಿಚಾರಿಕೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದವರು ನೀವು.

ನಿಮ್ಮ ಕನ್ನಡ ಕಳಕಳಿಗೆ, ಚೈತನ್ಯಪೂರ್ಣ ಬರಹಗಳಿಗೆ, ಮುಖ್ಯವಾಗಿ ನಿಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟ ವಿಶ್ವಾಸಕ್ಕಾಗಿ ನನ್ನ ಮತ್ತು ಇಲ್ಲಿ ನೇಪಥ್ಯದಲ್ಲಿ ಕೆಲಸಮಾಡುವ ನಮ್ಮ ಬಳಗದವರ ಕೃತಜ್ಞತೆಗಳನ್ನು ಹೇಗಾದರೂ ಸೂಚಿಸಲಿ ?May Your Tribe Increase.

ವಿಶೇಷವಾಗಿ , ಉತ್ತರ ಅಮೆರಿಕಾ ಸಂಸ್ಥಾನಗಳ ಉದ್ದಗಲಕ್ಕೂ ವೈಚಾರಿಕ ಲೇಖನ ವ್ಯವಸಾಯ ಮಾಡುವವರ ಸಂಖ್ಯೆ ದೊಡ್ಡದಿದೆ. ಲವಲವಿಕೆಯ ಸಾಮಯಮಿಕ ಕವನ ಕಟ್ಟುವವರ ಸಂಖ್ಯೆ ಅಷ್ಟೇ ದೊಡ್ಡದಿದೆ. ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿ ಮಾಡುವವರು ಹಾಗೂ One Hour Photo ಅಂಗಡಿಗೆ ಬೇಕಾದಷ್ಟು ಬಿಜಿನೆಸ್ಸು ಕೊಡುವ ಹವ್ಯಾಸಿ ಛಾಯಾಚಿತ್ರಕಾರರ ಬಳಗಗಳು ನಾನು ಅಂದುಕೊಂಡಿರುವುದಕ್ಕಿಂತ ವಿಶಾಲವಾಗಿದೆ. ಈ ಸಂಗತಿಗಳು ನನ್ನ ಇತ್ತೀಚಿನ ಅಮೆರಿಕಾ ಪ್ರವಾಸದಲ್ಲಿ ವೇದ್ಯವಾಯಿತು. ಅಂದಹಾಗೆ, ನೀವು ಈಗೇನು ಬರೆಯುತ್ತೀದ್ದೀರಿ ?

ಮೈಸೂರು ವಿಶ್ವವಿದ್ಯಾಲಯ ಹೊರತರುತ್ತಿದ್ದ ‘ಪ್ರಬುದ್ಧ ಕರ್ನಾಟಕ’, ಮಾಸ್ತಿಯವರ ‘ಜೀವನ’, ಶಿಕಾರಿಪುರ ಹರಿಹರೇಶ್ವರ ಅವರ ಅಮೆರಿಕನ್ನಡ, ಅನಂತಮೂರ್ತಿಯವರು ಸಂಪಾದಿಸುತ್ತಿದ್ದ ‘ರುಜುವಾತು’, ಅಡಿಗರ ಕೊಡುಗೆ ‘ಸಾಕ್ಷಿ’, ಚಂಪಾರ ನೇವೇದ್ಯ ‘ಸಂಕ್ರಮಣ’.. ಹೀಗೆ ನಮ್ಮ ಡಾಟ್‌ಕಾಂ ಈ ಪ್ರಯತ್ನಗಳ ಸಾಲಿಗೆ ಸೇರುವ ಸಾಹಿತ್ಯಕ್ಕೇ ಮೀಸಲಾದ ಪತ್ರಿಕೆ ಅಲ್ಲ : ಕನ್ನಡತನವನ್ನು ಅಕ್ಷರಗಳಲ್ಲಿ ಉತ್ಸಾಹದಿಂದ ಸೆರೆಹಿಡಿಯುತ್ತಾ ನಮ್ಮೆಲ್ಲರ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಗಳನ್ನು ಎತ್ತಿ ತೋರಿಸುವವರ ಗೂಡು ನಿಮ್ಮ ದಟ್ಸ್‌ಕನ್ನಡ.

ನಮ್ಮ ವೆಬ್‌ಸೈಟು ಕೇವಲ ಸಾಹಿತ್ಯಿಕ ಪತ್ರಿಕೆ ಅಲ್ಲ ಎಂದು ಹೇಳುವುದಕ್ಕೆ ಕಾರಣಗಳಿವೆ. ನಮ್ಮಲ್ಲಿ ಪ್ರಕಟವಾಗಿರುವ, ಆಗುವ ಎಲ್ಲ ಬರಹಗಳನ್ನು ವಿಮರ್ಶಕನ ಮಾನದಂಡದಿಂದ ನೋಡುವುದು ತಪ್ಪಾಗುತ್ತದೆ. ಏಕೆಂದರೆ, ನಮ್ಮದು ಸಮಸ್ತ ಕನ್ನಡಿಗರ ಕನ್ನಡ ಪ್ರೇಮಕ್ಕೆ, ಅಭಿಲಾಷೆಗಳಿಗೆ ಕನ್ನಡಿಯಾಗುವ ಸೈಬರ್‌ ವೇದಿಕೆ ! ಇಲ್ಲಿ ಸಂಶೋಧಕರಿದ್ದಾರೆ, ಪಂಡಿತರಿದ್ದಾರೆ, ಪಾಮರರಿದ್ದಾರೆ, ಉತ್ಸಾಹಿಗಳಿದ್ದಾರೆ. ಉಪಾಧ್ಯಾಯರಿದ್ದಾರೆ, ಇಂಜಿನಿಯರುಗಳಿದ್ದಾರೆ, ವೈದ್ಯರಿದ್ದಾರೆ, ಗೃಹಿಣಿಯರಿದ್ದಾರೆ, ವಿದ್ಯಾರ್ಥಿಗಳಿದ್ದಾರೆ ಮತ್ತು ನನ್ನನ್ನು ಕುತೂಹಲಗೊಳಿಸುವ ಮಕ್ಕಳಿದ್ದಾರೆ. ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರ ಪಾಲೂ ಇರಬೇಕು, ಹಾಗಿರಲಿ ಎನ್ನುವ ಭಾವನೆಯಿಂದ ಬರಹಗಳನ್ನು ಪ್ರಕಟಿಸುವ ಆಯ್ಕೆ-ಆದ್ಯತೆ ಮುಕ್ತವಾಗಿದೆ. ಸುದ್ದಿಗಳು ಹೇಗೂ ಬಂದೇಬರುತ್ತವೆ. ನಮ್ಮ ವೇದಿಕೆಯಲ್ಲಿ ಅದಕ್ಕೆ ಸ್ಥಾನವಿದೆ. ಆದರೆ, ವೈಯಕ್ತಿಕ ನಿಂದನೆಗಳಿಗೆ ಗುಡ್‌ಬೈ ಹೇಳುವ ಪರಿಪಾಠವಿದೆ.

ಭಾಷೆಯನ್ನು ಸುಲಭ ಸುಸೂತ್ರಗೊಳಿಸುವುದು, ತಿದ್ದುವುದು, ತೀಡುವುದು ಮತ್ತು ಬರಹ ಫೀಚರ್‌ ಸ್ವರೂಪದಲ್ಲಿದ್ದರೆ ಅದಕ್ಕೊಂದಿಷ್ಟು ಪೋಷಕಾಂಶಗಳನ್ನು ಸ್ಪ್ರಿಂಕಲ್‌ ಮಾಡುವುದಕ್ಕೇ ನಮ್ಮಲ್ಲಿ ಜನ ಇದ್ದಾರೆ. ಇವೆಲ್ಲದರ ಪ್ರತಿಫಲವೆಂದರೆ ಅಂತರ್‌ಜಾಲದಲ್ಲಿ ಚಾರಣಿಗರು ಓದಲೇ ಬೇಕಾದ ಸಾಕಷ್ಟು ಬರಹಗಳು ನಮ್ಮ ವೆಬ್‌ನ ಉಗ್ರಾಣದಲ್ಲಿವೆ. ಬೆಳಗಾಗುತ್ತಲೆ ಅಥವಾ ಲಂಚ್‌ ಟೈಂನಲ್ಲಿ ಅಥವಾ ರಾತ್ರಿ ಊಟದ ನಂತರ ತಪ್ಪದೆ ನಮ್ಮ ವೆಬ್‌ ಪುಟಗಳನ್ನು ಓದುತ್ತಾ ಬಂದವರಿಗೆ ಇದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.

ಏನಿಲ್ಲವೆಂದರೂ ದಿನವೊಂದಕ್ಕೆ ಕನಿಷ್ಟ ಎಂಟು-ಹತ್ತು ಲೇಖನವೋ, ಕವನವೋ, ನುಡಿಚಿತ್ರಗಳೋ, ಕಾರ್ಯಕ್ರಮ ಮುನ್ನೋಟಗಳೋ ನನ್ನ ಇ-ಬುಟ್ಟಿಗೆ ಬಂದು ಬೀಳುತ್ತದೆ. ನಿಮ್ಮ ಬರಹ ತಲುಪಿದೆ-ಥ್ಯಾಂಕ್ಸ್‌ ಎಂಬ ಉತ್ತರವನ್ನು ಸಾಮಾನ್ಯ 24 ಗಂಟೆಗಳ ಒಳಗೆ ಕೊಡುತ್ತೇನೆ. ಕ್ರಮೇಣ.. ಅವೆಲ್ಲವನ್ನೂ ಒಪ್ಪ-ಓರಣ ಮಾಡಿ, ಡಾಟ್‌ಕಾಂ ಆದ್ಯತೆಗಳನ್ನು ಗಮನದಲ್ಲಿರಿಸಿ ಸಾವಕಾಶ ಪ್ರಕಟಿಸಲಾಗುತ್ತದೆ. ನಮಗೆ ನಿಮ್ಮ ಕಡೆಯಿಂದ ಬರುತ್ತಿರುವ ಸಾಮಗ್ರಿಗಳನ್ನು ಮೂರು ತೆರನಾಗಿ ವಿಂಗಡಿಸಬಹುದು.

 • ಬರಹ ತತ್ರಾಂಶದಲ್ಲಿ ಇ-ಮೇಲ್‌ ಅಟಾಚ್‌ಮೆಂಟ್‌ ಮೂಲಕ ಮೂಡಿಬರುವ ಬರಹಗಳು.
 • ಇಂಗ್ಲೀಷ್‌ನಲ್ಲಿ ಬರುವ ಫ್ಲೈಯರ್‌ ಅಥವಾ ಪ್ರಬಂಧ.
 • ಕಾರ್ಯಕ್ರಮದ ಚಿತ್ರಗಳು JPG ಮೂಲಕ.
 • ಸಾಮಯಮಿಕ ಬರಹಗಳಾದರೆ ಬೇಗ. ಸಮಯದ ಒತ್ತಡಗಳಿಂದ ಮುಕ್ತವಾದ, ಬಿಡುವಾಗಿ ಕುಳಿತು ಓದಬಹುದಾದ ಬರಹಗಳಾದರೆ ಸಾವಕಾಶ. ಕಾರ್ಯಕ್ರಮ ಸೂಚಿ, ಅಂದರೆ ಎಲ್ಲೆಲ್ಲಿ ಏನು ನಡೆಯುತ್ತದೆ ಎಂಬ ಮಾಹಿತಿ ಕೊಡುವ Flyer ಗಳ ಪ್ರಕಟಣೆಗೆ ಕಾರ್ಯಕ್ರಮ ನಡೆಯುವ ವಾರ, ದಿನಾಂಕವೇ ಆಧಾರ. ಇನ್ನು ಕಾರ್ಯಕ್ರಮದ ವರದಿ-ಚಿತ್ರ ಪ್ರಕಟಿಸುವುದಕ್ಕೆ ಮೂರ್ನಾಲ್ಕು ದಿವಸ ನನಗೆ ಅವಕಾಶ.

  ಬರಹ ತತ್ರಾಂಶದಲ್ಲಿ ಕನ್ನಡವನ್ನು ವೇಗವಾಗಿ ಕೀ ಮಾಡುವುದರಲ್ಲಿ ಪರಿಣತರಾದ , ನಮಗಾಗಿಯೇ ಬರೆಯುವ ಬರಹಗಾರ ಯಾ ಬರಹಗಾರ್ತಿಯರ ದೊಡ್ಡ ಪಟ್ಟಿಯೇ ಇದೆ. ಅವರೆಲ್ಲರ ಸಂಕ್ಷಿಪ್ತ ಪರಿಚಯವನ್ನು ಕ್ರಮೇಣ ಮಾಡಿಕೊಡುತ್ತೇನೆ. ಇನ್ನು ನಿಧಾನವಾಗಿ ಒಂದೊಂದೇ ಅಕ್ಷರಗಳನ್ನು ಜೋಡಿಸುತ್ತಾ ಇದೀಗ ತಾನೇ ಕನ್ನಡ ಟೈಪ್‌ ಮಾಡುವುದಕ್ಕೆ ಕಲಿಯಲು ಆರಂಭಿಸಿರುವವರಿದ್ದಾರೆ. ಕಂಪ್ಯೂಟರ್‌ನಲ್ಲಿ ಕನ್ನಡ ಅಂದರೆ ಏನೇನೂ ಗೊತ್ತಿಲ್ಲದ ಒಂದು ಸಮೂಹವೂ ನನ್ನ ಕಣ್ಣೆದುರಿಗಿದೆ. ಅವರಿಗೆಲ್ಲ ನಾನು ಇವತ್ತು ಕೇಳಿಕೊಳ್ಳುವುದು ಒಂದೇ:

  www.baraha.com ವೆಬ್‌ ವಿಳಾಸವನ್ನು ನಿಮFavourite list ನಲ್ಲಿ ಮಾರ್ಕ್‌ ಮಾಡಿಟ್ಟುಕೊಳ್ಳಿ. ಕನ್ನಡ ಫಾಂಟ್‌ ಅನ್ನು ಇಳಿದು ಬಾ ತಾಯೆ ಎಂದು ಬರಮಾಡಿಕೊಳ್ಳಿ. ಕನ್ನಡ ಬರೆಯುವ ಸಂತೋಷ ನಿಮ್ಮದಾಗಲಿ. ನೀವು ಏನೆಲ್ಲ ಬರೆಯಬಹುದು ?

  • ಕಣ್ಣಿಗೆ ಕಂಡದ್ದು, ಮನಸ್ಸಿಗೆ ಹೊಳೆದದ್ದು -

  - ನಿಮ್ಮ ಕಂದನ ನಗು, ಬೆಳವಣಿಗೆ
  - ನನ್ನ ಅಡುಗೆ, ನನ್ನವರಿಗೆ ಚೆಂದ
  - ನೆಂಟರು ಬಂದರು ದಾರಿಬಿಡಿ
  - ನಿರುದ್ಯೋಗ ಪರ್ವ
  - ಇವತ್ತಿನ ಕರ್ನಾಟಕ ನನಗೆ ಹೇಗೆ ಕಾಣಿಸುತ್ತಿದೆ
  - ಭಾರತ ಪ್ರವಾಸದ ಅನುಭವಗಳು
  • ಮಕ್ಕಳನ್ನು ಬೆಳೆಸುವ ಶ್ರದ್ಧೆ ಮತ್ತು ಸವಾಲು
  • ಬೆಳೆದ ಮಕ್ಕಳಿಂದ ಮುಕ್ತವಾಗಿಬಿಡುವ ‘ ಬಿಡುಗಡೆಯ ಬೇಡಿ ’
  • ನಿಮ್ಮ ಸ್ಟೇಟ್‌ನ ಕನ್ನಡ ಚಟುವಟಿಕೆ
  • ತೊಂದರೆಗಳು ಇದ್ದದ್ದೇ ಆದರೂ ವಿದೇಶದಲ್ಲಿ ಕನ್ನಡವನ್ನು ಜನಾನುರಾಗಿ ಮಾಡುವುದು ಹೇಗೆ ?
  • ನಾನು ನನ್ನ ಮಕ್ಕಳಿಗೆ ಕನ್ನಡ ಕಲಿಸಿದೆ- ಒಂದು ಪ್ರಬಂಧ
  • ಸ್ವಯಂ ಘೋಷಿತ ನಾಯಕರಿಂದ ಕನ್ನಡವನ್ನು ಪಾರುಮಾಡುವುದು ಹೇಗೆ ?

  ಬರಹಗಾರರು ತಮ್ಮ ಪೂರ್ಣ ಹೆಸರು, ಊರು, ರಾಜ್ಯ, ದೇಶ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಬಯಸಿದಲ್ಲಿ ಹೆಸರಿನ ಗೌಪ್ಯತೆಯನ್ನು ಕಾಪಾಡಲಾಗುವುದು. ನಿಮ್ಮ ಇತ್ತೀಚಿನ ಭಾವಚಿತ್ರ ( ಮನೆ-ಮಂದಿ ಸಮೇತ) ಲಗತ್ತಿಸಿದರೆ ಚೆನ್ನ.

  Thank you for choosing Thatskannada.com

  shami.sk@greynium.com

  ಕೆಂಡ ಸಂಪಿಗೆಯ ಮೊದಲ ದಳ

  ಸುದೀರ್ಘ ಮಾತುಕತೆಯ ಮೊದಲ ಅಧ್ಯಾಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more