*ಎಸ್ಕೆ.ಶಾಮಸುಂದರ
| ಗೆದ್ದವರಿಗೆ ಅಭಿನಂದನೆ, ಭಾಗವಹಿಸಿದವರಿಗೆಲ್ಲ ಧನ್ಯವಾದ | ![]() |
ಬೆಂಗಳೂರಿನ ಸಪ್ನ ಬುಕ್ ಹೌಸ್ ಸಹಯೋಗದಲ್ಲಿ ನಮ್ಮ ಅಂತರ್‌ಜಾಲ ಪತ್ರಿಕೆ ಏರ್ಪಡಿಸಿದ್ದ ‘ಜಾಗತಿಕ ಕವನ ಸ್ಪರ್ಧೆ ’ಯ ಫಲಿತಾಂಶಗಳನ್ನು ಇದೀಗ ಪ್ರಕಟಿಸಲಾಗಿದೆ. ಪುರಸ್ಕಾರ ವಿಜೇತ ಕವಿಗಳಿಗೆ ನಮ್ಮ ತಂಡದ ಶುಭಾಶಯಗಳು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೂ ಧನ್ಯವಾದಗಳು. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂದು ನಂಬಿದ ನಮ್ಮ ಕವಿ ಮಿತ್ರರನೇಕರಿಗೆ ವಿಶೇಷ ಧನ್ಯವಾದಗಳು.
ಅನುಕ್ರಮವಾಗಿ ಮೊದಲ ಮೂರು ಪುರಸ್ಕಾರಗಳಿಗೆ ಪಾತ್ರರಾದ ಉತ್ತರ ಕ್ಯಾಲಿಫೋರ್ನಿಯಾದ ಸುಪ್ತದೀಪ್ತಿ, ಮಡಿಕೇರಿಯ ನಾಗೇಶ್ ಕಾಲೂರು ಹಾಗೂ ಮಹಾಲಿಂಗಪುರದ ವಿಭಾ ತಿರಕಪಡಿ ಅವರುಗಳಿಗೆ ಶುಭಾಶಯ ಕೋರುವ ಪತ್ರಗಳನ್ನು ನೇರವಾಗಿ ರವಾನಿಸಲಾಗಿದೆ. ವಿಜೇತರು ಅಥವಾ ಅವರ ಪ್ರತಿನಿಧಿಗಳು ನಮ್ಮ ಕಚೇರಿಯಿಂದ ಪತ್ರ ಸ್ವೀಕರಿಸಿ ಸಪ್ನ ಬುಕ್ ಹೌಸ್ ಮಳಿಗೆಯಲ್ಲಿ ಬಹುಮಾನ ಪಡೆಯಬಹುದು.
ಮೂರು ಬಹುಮಾನಿತ ಕವನ, ತೀರ್ಪುಗಾರರು ಮೆಚ್ಚಿದ ಒಂಬತ್ತು ಕವಿಗಳು, ಕವಿ, ವಿಮರ್ಶಕ, ತೀರ್ಪುಗಾರ ಡಾ. ಸುಮತೀಂದ್ರ ನಾಡಿಗರ ಒಂದು ಕವನ ಮತ್ತು ಅವರು ಲೇಖನಿಸಿದ ಸ್ಪರ್ಧೆಯ ಸಿಂಹಾವಲೋಕನ, ಬಹುಮಾನಿತ ಕವನಗಳ ಒಳನೋಟ.. ಮುಂತಾದ ವಿವರಗಳಿಗಾಗಿ ಕವನ ಸ್ಪರ್ಧೆಯ ಫಲಿತಾಂಶ ಪುಟ ನೋಡಿ.
*
ಅಪಹೃತ ನಾಗಪ್ಪ ಅವರ ದಾರುಣ ಹತ್ಯೆಗೆ ಸಂಬಂಧಿಸಿದ ಸುದ್ದಿ ಚೂರುಗಳು ಮತ್ತು ಇಡೀ ಪ್ರಕರಣದ ಒಳಸುಳಿಗಳನ್ನು ಚಿತ್ರಿಸುವ ವಿಶ್ಲೇಷಣಾತ್ಮಕ ಲೇಖನಗಳನ್ನು ‘ವೀರಪ್ಪನ್ ಶಿಕಾರಿ’ ಅಂಕಣದಲ್ಲಿ ಪ್ರಕಟಿಸಿದ್ದೇವೆ. ಆ ಎಲ್ಲ ಬರಹಗಳನ್ನು ನೀವು ಓದುತ್ತಾ ಹೋದಂತೆ ಕರ್ನಾಟಕದ ಇವತ್ತಿನ ಚಿತ್ರ ತೆರೆದುಕೊಳ್ಳುತ್ತದೆ.
ನಾಗಪ್ಪ ಅವರ ಸಾವಿನ ಸುತ್ತ ಒಂದು ಪ್ರದಕ್ಷಿಣೆ ಹಾಕಿದ ನನಗೆ ಕೊನೆಗೆ ಅನ್ನಿಸಿದ್ದು ಇಷ್ಟು :
Public memory is short, soon we will forget the death of Nagappa like how we have forgotten the gruesome murder of 100 plus citizens of Karnataka in the past. All of them laid slain by a beast called Veerappan.
ನಾಗಪ್ಪ ಅವರ ಮರಣದೊಂದಿಗೆ ಕರ್ನಾಟಕ ಸರಕಾರಕ್ಕೆ ಒಂದು ತಲೆನೋವು ಕಳೆಯಿತು. ಶ್ರೀಮತಿ ಪರಿಮಳ ನಾಗಪ್ಪ ಅವರ ಸೌಭಾಗ್ಯ ಕಾಡಿನಲ್ಲಿ ಚೀರಿ ಮರೆಯಾಯಿತು. ಅವರ ಬರಿ ಹಣೆಯಲ್ಲಿ ನಮ್ಮ ವ್ಯವಸ್ಥೆಯ ಎಲ್ಲ ದೋಷಗಳು ಕಾಣಿಸಿಕೊಂಡವು. ದುಖಃತಪ್ತ ನಾಗಪ್ಪ ಅವರ ಕುಟುಂಬಕ್ಕೆ ‘ ಕೆಂಡ ಸಂಪಿಗೆ ’ ಮುಖಾಂತರ ಸಂವೇದನಾಶೀಲ ಕನ್ನಡಿಗರ ಸಂತಾಪಗಳು.
|













Click it and Unblock the Notifications