ದಂಪತಿಗಳ ಪ್ರಣಯ ಸೀಮೆಯಲಿ ರತಿ, ಮದನ ವಿಹಾರ ಗಾನ
ಮುಳುಗು ಸೂರ್ಯಕಾಂತಿ ತಂಗಾಳಿಯೊಡಗೂಡಿ ತಂಪಾಗಿ ಹಾಡಿತು ಯುಗಳಗೀತೆ. ಅಂಗಳದ ಮರುಗ, ಕೀಳುವ ಕೈಗಳಿಗೆ ಸಿಗದೆ, ಮರದ ಕೊಂಬೆಗಳ ಕೊನೆಗಳಲಿ ಅರಳಿ ಉಳಿದ ಸಂಪಿಗೆ, ಯಾರ ಮನೆ ತೋಟದ ಸೇವಂತಿಗೆಯೋ ಗಮಲಿನ ಅಮಲಿನ ಶೃಂಗಾರದ ವೃಂದಗಾನ ಮಾಡಿ ಸ್ವಾಗತಿಸಿದವು ಇರುಳ.
ಅದು ಶ್ರಾವಣದ ಮೊದಲ ರಾತ್ರಿ. ವಿರಹ ಮಾಸದಲಿ ಅಗಲಿದ್ದ ದಂಪತಿಗಳ ಮಿಲನದ ರಾತ್ರಿ. ಒಲಿದ ಜೀವಗಳ ಮನದಲ್ಲಿ ಸಂಲಗ್ನ ರತಿ ಮದನ ನರ್ತನ ಕೇಳಿ.
ಅಪ್ಪುಗೆಗೆ ಅಪ್ಪುಗೆ, ಮುತ್ತಿಗೆ ಮುತ್ತು, ಆಲಿಂಗನಕೆ ಆಲಿಂಗನ, ಬಿಸಿಯುಸಿರಿಗೆ ಬಿಸಿಯುಸಿರು, ಮೈ ಬೆವರಿಸೆನೆಂದು ಸುಳಿದು ಬಂದ ತಂಗಾಳಿಗೆ ಸೋಲು. ಕಚಗುಳಿಯಿಟ್ಟು ಕುಲುಕಿಸಬೇಡ. ನಲುಗೀತು ಮುಡಿದ ಕನಕಾಂಬರ, ಉದುರಿ ಬಾಡೀತು ನಿತ್ಯಮಲ್ಲಿಗೆ ಎನುತಲಿದ್ದರು ಕೋಣೆಯ ಮಂದಕಾಂತಿ ಕೇಳಿಸಿಕೊಳ್ಳದು ಕಿವಿ.

ಅದು ಎಂತಹ ಮೋಹವೋ, ಎಂಥ ಅಮಲೋ ಕಾಣೆ. ಥಟ್ಟನೆ ಆವರಿಸಿದ ಮೈಮರೆವು. ಓರೆ ನೋಟದ ಕೆಣಕು, ಕರೆವ ತುಟಿ ಕೆಂಪು. ಬಳಿ ಸಾರೆ ಪರಚುವ ಹೆದರಿಕೆ ತರುವ ಉಗುರಿನ ಮೊನಚು. ಅದನ್ನೂ ಮೀರಿ ಸೆಳೆವ ಗೋರಂಟಿ ರಂಗು. ಕಾಡಿಗೆ ಕತ್ತಲಲ್ಲಿ ಹೊಳೆವ ಬಟ್ಟಲಗಣ್ಣ ಮಿಟುಕು ಕರೆ. ಗಗನ ನಡುವಿನ ನಿತ್ಯಪುಷ್ಪ ಹೊಮ್ಮಿಸುವ ಕಾಂತಿ. ರತಿ ಕಾತರದಲ್ಲಿ ಹಣೆ ಮೇಲೆ ನಿಂತ ಹನಿ ಮುತ್ತುಗಳ ಸಾಲು.
ಮೊದಲು ಹೂಬಾಣ ಹೂಡಿ ಕಾಡಿದ ಮದನ ಮನ ಹೊಕ್ಕು ಹಾಡಿದಾಗ ರತಿಗಾನ, ಮೈ ವೀಣೆಯಲಿ ಕಂಪನ. ಜೇನ ತುಟಿಗೆ ದುಂಬಿ ಚುಂಬನ.
ಹರಿದರೆ ತಡವೆಂದು ನುಗ್ಗಿ, ಧುಮುಕಿ, ಉಕ್ಕಿ ಪ್ರವಾಹವಾದ ಸುಖನದಿ. 'ಹಾ! .....' ಎಷ್ಟೊ ದಿನಗಳ ತನುಮನದ ತಾಪ ಪ್ರವಾಹದಲಿ ಕೊಚ್ಚಿ ಕೊಚ್ಚಿ ಕೊಚ್ಚಿ ಹೋದಾಗ ಬೆವರ ಹನಿಮುತ್ತುಗಳು ಬಾನಲ್ಲಿ ಚುಕ್ಕಿಗಳಾಗಿ ಕಂಡವು.
ಮಂಚದಲಿ ಚಂದ್ರರಶ್ಮಿ ಸೋಕಿದ ನೈದಿಲೆ. ದಣಿದು ಎದೆಯ ಮೇಲೆ ತಲೆಯಿಟ್ಟ ಕೃಷ್ಣನ ಕಿವಿಯಲ್ಲಿ ಏನೋ ಪಿಸುಗುಟ್ಟಿ ನಗುವಳು ಸತ್ಯಭಾಮೆ.
ಕೃಷ್ಣ ಹೇಳುವ, "ಸತ್ಯಾ, ಹಣೆಯ ಸಿಂಗರಿಸಿರುವ ಸಾಲು ಮುತ್ತುಗಳ ಮುಂಗುರುಳು ಒಡೆಯುವ ಮೊದಲು ಆರಿಸಿಕೊಳ್ಳಬೇಕು ನಾನು. ಆದರೆ ಹೇಗೆಂದು ತಿಳಿಯದು. ಹೇಳು ನೀನು. ಅನುರಾಗದ ಸುಖದ ಶ್ರುತಿಯಲ್ಲಿ ಹೇಳಿದಳು ಸತ್ಯಭಾಮೆ, "ನಿನ್ನ ತುಟಿಗಳಿಗೆ ಹೇಳಿಬಿಡು."
ವಸಂತನ ಅಪ್ಪುಗೆಯಲ್ಲಿ ಶಕುಂತಲೆ, ಅವಳ ತೆಕ್ಕೆಯಲ್ಲಿ ವಸಂತ. ಕೂಡಿ ಹಾಡಿದ ಮೋಹನರಾಗಕ್ಕೆ ರಾತ್ರಿರಾಣಿ ಅರಳಿ ಪರಿಮಳಿಸಿದಳು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications