ಅದೇ ಭೂಮಿ, ಅದೇ ಆಕಾಶ, ನೀರು ,ಗಾಳಿ, ಆದರೂ ಮರದಿಂದ ಮರಕ್ಕೆ ಬದಲಾಗುತ್ತದೆ ಬೇರು!!

ಸ್ಯಾಮ್ಯುಯೆಲ್ ನನಗೆ ಸಿಕ್ಕಿದ್ದು ಸ್ಪ್ಯಾನಿಷ್ ಲರ್ನಿಂಗ್ ಸೆಂಟರ್ ನಲ್ಲಿ , ಬಾರ್ಸಿಲೋನಾ ಗೆ ವರ್ಕ್ ವೀಸಾ , ಕೆಲಸ ಎರಡೂ ಪಡೆದೆ ಬಂದಿದ್ದೆ ಆದರೆ ಸ್ಪ್ಯಾನಿಷ್ ಭಾಷೆ ಮಾತ್ರ ಗೊತ್ತಿರಲಿಲ್ಲ . ಸರಿ ನನ್ನ ಕಂಪನಿ 20 ಘಂಟೆಗಳ ಕ್ರಾಶ್ ಕೋರ್ಸ್ ಸೇರಿಕೋ ಮಿಕ್ಕದ್ದು ದಿನ ಕಳೆದಂತೆ ಕಲಿಯುತ್ತಿಯಾ ಎಂದು ತರಗತಿಗೆ ಸೇರಿಸಿದರು . ಜೀವನದ ಮೊದಲ 23ವರ್ಷ ಪಕ್ಕದ ಊರು ನೋಡದ ನನಗೆ ಒಮ್ಮೆಲೆ ಟೈಮ್ ಜೋನ್ ಬದಲಾದ ಅನುಭವ , ಎಲ್ಲಾ ಬಿಳಿಯರು ಸೇಮ್ ! ವ್ಯತ್ಯಾಸವೇ ತಿಳಿಯದು .

ಬಿಯರ್ , ಸಿಗರೇಟು ಸೇವಿಸದವರೆ ಪರಮ ಪಾಪಿಗಳು ಬಾರ್ಸಿಲೋನಾ ದಲ್ಲಿ , ಹೆಣ್ಣು ಗಂಡೆಂಬ ಬೇಧವಿಲ್ಲದೆ ಸೇವನೆ ಅಭಾದಿತ . ಸ್ಯಾಮ್ಯುಯೆಲ್ ಆಪ್ತ ನಾಗಿದ್ದು ಆತ ನನ್ನಂತೆ ಇದ್ದ ಎನ್ನುವ ಕಾರಣದಿಂದ .ನೋಡಲು ಉಳಿದ ಬಿಳಿಯರಂತೆ ಕಂಡರೂ ಆತನಲ್ಲಿ ಇದ್ದದ್ದು ಯಾವುದೇ ವ್ಯಸನಗಳ ದಾಸನಾಗದ ಮಗುವಿನ ಆತ್ಮ . ನೀನು ಭಾರತೀಯ ಅಲ್ಲವೇ ? ಆತ ನನಗೆ ಕೇಳಿದ ಮೊದಲ ಪ್ರಶ್ನೆ . ಹೌದು ಎಂದೊಡನೆ , ಗಣಪತಿ , ವಿಷ್ಣು , ಶಿವ ಎಂದು ದೇವರುಗಳ ಹೆಸರೇಳಿ , ನಿಮ್ಮ ಕಲ್ಚರ್ ನನಗಿಷ್ಟ ಎಂದ . ನನಗೆ ಆಶ್ಚರ್ಯ ಆಗಿತ್ತು , ತೋರ್ಪಡಿಸಿ ಕೊಳ್ಳಲಿಲ್ಲ .

ನೀನು ಯಾವ ವರ್ಗ ? ನಿಮ್ಮಲ್ಲಿ ನಾಲ್ಕು ವರ್ಗ ಇದೆ ಅಲ್ಲವೇ ? ಅಂದಾಗ ಮಾತ್ರ ಆಶ್ಚರ್ಯ ತೋರ್ಪಡಿಸಿಕೊಳ್ಳಲು ಇರದೆ ಆಗಲಿಲ್ಲ .ಅವನು ಅಷ್ಟಕ್ಕೆ ನಿಲ್ಲುವ ಯಾವ ಸೂಚನೆ ತೋರದೆ ನಮ್ಮ ಜಾತಿ ಪದ್ದತಿಯ ಬಗ್ಗೆ ಕೂಡ ಮಾತನಾಡಲು ಶುರು ಮಾಡಿದ. ನಿಮ್ಮಲ್ಲಿರುವ ಜಾತಿ ಪದ್ಧತಿ ಆಧಾರಿತ ಶ್ರೇಣೀಕೃತ ಸಮಾಜ ಖಂಡಿತ ತಪ್ಪಲ್ಲ . ನೀವು ಅದರ ಆಧಾರದ ಮೇಲೆ ಸಾವಿರಾರುವ ವರ್ಷ ಜೀವನ ನಡೆಸಿಕೊಂಡು ಬಂದ ಇತಿಹಾಸ ನಿಮ್ಮ ಪಾಲಿಗಿದೆ.

Barcelona Memories Coloumn By Rangaswamy Mookanahalli Part 17

ಆದರೆ, ಬ್ರಿಟಿಷರು ಡಿವೈಡ್ ಅಂಡ್ ರೂಲ್ ಎನ್ನುವ ನೀತಿಯಲ್ಲಿ ನಂಬಿಕೆ ಇಟ್ಟುವರು. ನಿಮ್ಮ ಸಮಾಜ ಇಂದು ಹಾಳಾಗಿರಲು ಅದೇ ಕಾರಣ. ಎಲ್ಲಿಯವರೆಗೆ ನಿಮ್ಮಲ್ಲಿ ಬೇರೆ ಬೇರೆ ಜಾತಿ ಮತ್ತು ವೃತ್ತಿಗಳ ಮೇಲೆ ನಂಬಿಕೆ ಮತ್ತು ವಿಶ್ವಾಸವಿತ್ತು , ಎಲ್ಲಿಯವರೆಗೆ ನನ್ನದು ಹೆಚ್ಚು , ಅವರದು ಕಡಿಮೆ ಎನ್ನುವ ಭಾವನೆ ಇರಲಿಲ್ಲವೋ ಅಲ್ಲಿಯವರೆಗೆ ನಿಮ್ಮ ಸಮಾಜ ಚನ್ನಾಗೇ ಇತ್ತು . ಇವತ್ತಿಗೂ ನೀವು ನಿಮ್ಮ ಹಳೆಯ ನಂಬಿಕೆಗಳೊಂದಿಗೆ ಎಲ್ಲರಿಗೂ ಒಂದಷ್ಟು ಹೊಂದಾವಣಿಕೆಗೆ ಜಾಗ ನೀಡಿದರೆ ನಿಮ್ಮ ದೇಶ ಮತ್ತೆ ಮರಳಿ ತನ್ನ ವೈಭವವನ್ನ ಗಳಿಸಬಹದು ಎಂದನಾತ.

ನಾನು" ಅಮಿಶ್ " ಪಂಗಡಕ್ಕೆ ಸೇರಿದವನು . ಆದರೆ ನಾನು ಮರಳಿ ನನ್ನ ಪಂಗಡಕ್ಕೆ ಹೋಗಲಾಗದು , ನನ್ನ ಅಪ್ಪ ,ಅಮ್ಮ , ತಮ್ಮನ ನೋಡಲು ಕೂಡ ಆಗದು ಎಂದಾಗ ಇನ್ನಷ್ಟು ಆಶ್ಚರ್ಯ . ಅಮಿಶ್ ಎನ್ನುವ ಪದ ಕೇಳಿದ್ದೆ ಅಂದು !! ಹೌದೆ ? ಏಕೆ ? ಸಹಜವಾಗಿ ಪ್ರಶ್ನಿಸಿದ್ದೆ . ಅವನ ಉತ್ತರ ನನಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಡುತ್ತದೆ ಎನ್ನುವ ಅರಿವು ಆಗ ಇರಲಿಲ್ಲ . ಅವರ ರೀತಿ ರಿವಾಜು ತಿಳಿಯುವ ಕುತೂಹಲ ಒಂದೆಡೆ , ಎರಡು ಸಾವಿರ ಇಸವಿಯಲ್ಲೂ ಅಮೇರಿಕಾದಲ್ಲಿ ಹೀಗೂ ಉಂಟಾ ? ಎನ್ನುವ ಅನುಮಾನ ಇನ್ನೊಂದೆಡೆ ! ಸ್ಯಾಮ್ಯುಯೆಲ್ ಹೇಳಿದ್ದು ಕೆಳಗಿನ ಸಾಲುಗಳಾಗಿವೆ .

ಅಮಿಶ್ ಎನ್ನುವುದು ಉತ್ತರ ಅಮೇರಿಕಾ ದಲ್ಲಿ ವಾಸವಿರುವ ಒಂದು ಜನಾಂಗ , ಇಂದಿಗೆ ಎರಡೂವರೆ ಲಕ್ಷ ಆಸುಪಾಸು ಜನಸಂಖ್ಯೆ ,ಜಾಕೋಬ್ ಅಮ್ಮಾನ್ 17ನೇ ಶತಮಾನದ ಸ್ವಿಸ್ ಪ್ರಜೆ , ಇತ ಬ್ಯಾಪ್ಟಿಸಂ ಮಕ್ಕಳು ಹುಟ್ಟಿದ ತಕ್ಷಣ ಮಾಡುವುದರ ವಿರುದ್ದ ಇದ್ದ , ಹೀಗಾಗಿ ಅಮೀಶ್ ಜನತೆ ಬ್ಯಾಪ್ಟಿಸಂ ಗೆ ಒಳ ಪಡುವುದು 15 ರಿಂದ 25ರ ಒಳಗೆ , ಇದು ಆಗದೆ ಮುದುವೆ ಆಗಲು ಸಾಧ್ಯವಿಲ್ಲ , ಅಮೀಶ್ ಪಂಗಡ ಜಾಕೋಬ್ ಅಮ್ಮಾನ್ ನ ತತ್ವ ಪಾಲಿಸುತ್ತಾ ಬಂದಿದೆ .

ಹ್ಯಾಟ್ ಹೇಗೆ ಧರಿಸಬೇಕು ಎನ್ನುವ ಕ್ಷುಲಕ ಕಾರಣಕ್ಕೆ ಕಿತ್ತಾಡಿ ಉಪ ಪಂಗಡ ಕಟ್ಟಿ ಕೊಳ್ಳುವ ಜನ , ಹೀಗಾಗಿ ಹಲವು ಹತ್ತು ಉಪ ಪಂಗಡಗಳು ಇವೆ . ಹಲವು ಕಟ್ಟು ಪಾಡುಗಳು ಸಹ್ಯ ಅನಿಸುತ್ತವೆ ಕೆಲವು ತೀರಾ ಕಂದಾಚಾರ , ಉಸಿರುಗಟ್ಟಿಸುತ್ತವೆ ಹೀಗಾಗಿ ದಿನೆ ದಿನೆ ಅಮಿಶ್ ಪಂಗಡದ ಕಂದಾಚಾರ ವಿರೋಧಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ , ಏನಿದು ಅಂತಹ ಕಟ್ಟುಪಾಡು ? ಯಾವುದೇ ಟೆಕ್ನೋಲೋಜಿ ಬಳಸುವಂತಿಲ್ಲ , ಫೋನ್ , ಮೊಬೈಲ್ , ಟಿವಿ , ವಾಶಿಂಗ್ ಮಷೀನ್ , ಎಲೆಕ್ಟ್ರಿಸಿಟಿ ಇಲ್ಲಿ ವ್ಯರ್ಜ್ಯ !

ಮಕ್ಕಳು ಮನೆಯ ಮುಂದಿನ ಜಾಗದಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಾರೆ , ವೀಡಿಯೊ ಗೇಮ್ ಇನ್ನಿತರೆ ತಂತ್ರಾಂಶ ಸಂಬಂದಿ ಆಟಿಕೆಗಳು ಉಪಯೋಗಿಸುವಂತಿಲ್ಲ , ಮನೆಯವರ ಎಲ್ಲಾ ಬಟ್ಟೆ ಒಗೆಯುವುದು ಹೆಂಗಸರ ಕೆಲಸ , ಹೆಣ್ಣು ಮಗು ತಾಯಿಯ ಮನೆಗೆಲಸದಲ್ಲಿ ಸಹಾಯ ಮಾಡಬಹುದು , ಹುಡುಗ ತಂದೆಯ ಕಾರ್ಯದಲ್ಲಿ ಕೈಜೋಡಿಸುತ್ತಾನೆ . ಸಾರಿಗೆಗೆ ಕುದುರೆ ಬಂಡಿ ಇಂದಿಗೂ , ಕಾರು , ಬಸ್ ಇತರೆ ಸಾರಿಗೆ ಮಾಧ್ಯಮಗಳನ್ನು ಬಳಸುವಂತಿಲ್ಲ . ಈ ಕಾರಣಕ್ಕೆ ಇರಬಹುದು ಅಮಿಶ್ ಉತ್ತರ ಅಮೇರಿಕಾ ಬಿಟ್ಟು ಹೆಚ್ಚು ಹಬ್ಬಿಲ್ಲ , ತಮ್ಮ ದಿನ ನಿತ್ಯದ ಕೆಲಸಗಳಿಗೆ ನೆಡೆದು ಹೋಗುವುದು ಇವರ ಪರಿಪಾಟ .

ಮದುವೆ ತಮ್ಮ ಅಮಿಶ್ ಜನಾಂಗದಲ್ಲಿನ ಹುಡುಗ ಹುಡುಗಿ ಯೊಂದಿಗೆ ಮಾತ್ರ , ಅಮಿಶ್ ಪಂಗಡದ ಹುಡುಗ/ಹುಡುಗಿ ಇತರೆ (ಅಮಿಶ್ ಪಂಗಡದವರ ಪ್ರಕಾರ ನಂಬಿಕೆ ಇಲ್ಲದವರು ,( ನಾನ್ ಬಿಲಿವೆರ್ಸ್ ) ) ಜನಾಂಗದ ಹುಡುಗ /ಹುಡುಗಿಯ ಪ್ರೀತಿಸುವುದು , ಮದುವೆ ಆಗುವುದು ನಿಶಿದ್ದ , ಒಂದು ಪಕ್ಷ ಹಾಗೇನಾದರೂ ಕಟ್ಟಳೆ ಮೀರಿ ಮದುವೆ ಆದರೆ ಮನೀಶ್ ಪಂಗಡ ದಿಂದ ಬಹಿಷ್ಕಾರ ಹಾಕುತ್ತಾರೆ , ಹಾಗೆ ಬಹಿಷ್ಕರಿಸಲ್ಪಟ್ಟ ಹುಡುಗ/ಹುಡುಗಿ ತನ್ನ ಹೆತ್ತವರ , ಸ್ನೇಹಿತರ , ಬಂಧು ಗಳ ಮತ್ತೆ ನೋಡುವ , ಮಾತನಾಡುವ ಅವಕಾಶ ವಂಚಿತರಾಗುತ್ತಾರೆ , ನನ್ನ ಮಿತ್ರ ಸ್ಯಾಮ್ಯುಯೆಲ್ ಈ ಕಟ್ಟಳೆಯ ಹೊಡೆತಕ್ಕೆ ಸಿಕ್ಕ ಬಲಿ !

ನೂರಾರು ವರ್ಷದಿಂದ ರಕ್ತ ಬದಲಾಗದೆ ಅಲ್ಲೇ ಮದುವೆ ಅದುದರ ಪಲ ಜೆನಿಟಿಕ್ ಮುಟೈಶನ್ ಇನ್ನಿತರ ತೊಂದರೆಗಳು ಇಲ್ಲಿ ಹೇರಳ , ಮಗು ಹುಟ್ಟುವಾಗ ಸಾಯುವ ಪ್ರಮಾಣ ಇಂದಿಗೂ ಹೆಚ್ಚು , ಇದೆಲ್ಲಾ ಬಲ್ಲ ಸ್ಯಾಮ್ಯುಯೆಲ್ ಇಂತಹ ಕಟ್ಟುಪಾಡುಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿದಾಗ , ಗುಟ್ಟಾಗಿ ತನ್ನ ಬೆಂಬಲ ಸೂಚಿಸಿದ್ದು ಅವನ ತಾಯಿ . ಹೊಸದಾಗಿ ಮದುವೆ ಆದ ಜೋಡಿಯಲ್ಲಿ ಪ್ರೀತಿ ಬೆಳೆಯಲಿ ಎನ್ನುವ ಸಲುವಾಗಿ ತಿಂಗಳು ಗಟ್ಟಲೆ ಒಟ್ಟಾಗಿ ಮಲಗಲು ಬಿಡುತ್ತಾರೆ .

ಸಂಭೋಗ ನಿಷಿದ್ದ , ಇಬ್ಬರಲ್ಲಿ ಪ್ರೀತಿ ಬೆಳೆದ ನಂತರವೇ ಪ್ರಸ್ಥ , ಹಿಂದೆ ಹಾಸಿಗೆಯಲ್ಲಿ ಕಟ್ಟಿ ಹಾಕುತ್ತಿದ್ದರಂತೆ ! ಇಂದು ಸ್ವಲ್ಪ ಬದಲಾಗಿ ಎರಡು ಮಂಚದ ನಡುವೆ ಮರದ ಸಣ್ಣ ಗೋಡೆ ನಿರ್ಮಿಸುತ್ತಾರೆ . ಬೈಬಲ್ ನಿಂದ ಆಯ್ದು ಮಾಡಿದ ಕಾನೂನು ಕಟ್ಟಳೆ ಯಾರು ಮೀರುವಂತಿಲ್ಲ , ಸಾಮಾನ್ಯವಾಗಿ ಚರ್ಚ್ ನ ಪಾದ್ರಿ ಯಾವುದು ಸರಿ , ಯಾವುದು ಸಲ್ಲ ಎನ್ನುವುದನ್ನು ನಿರ್ಧರಿಸುತ್ತಾನೆ , ಮುಕ್ಕಾಲು ಪಾಲು ಅವನ ನಿರ್ಧಾರವೇ ಕೊನೆ .

ಮನೆ ಕಟ್ಟುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಕೂಡಿ ಮಾಡುತ್ತಾರೆ , ಹೊರಗಿನ ಯಾರ ಸಹಾಯ ಬಯಸುವುದಿಲ್ಲ , ಹುಚ್ಚುತನ ಹೆಚ್ಚಿರುವ ನಂಬಿಕೆ ಇಲ್ಲದವರ ಸಹಾಯ ಪಡೆಯುವುದು ನಿಷಿದ್ದ , ತಮ್ಮ ನಿಲುವ ಬೆಂಬಲಿಸಲು ಬೈಬಲ್ ನಲ್ಲಿನ ಒಂದು ವಾಕ್ಯ "Be not unequally yoked with unbelievers. For what do righteousness and wickedness have in common? Or what fellowship can light have with darkness?" (II Corinthians 6:14). ಹೇಳಿ ತನ್ನ ಜನರ ಅಂಕೆಯಲ್ಲಿ ಇಟ್ಟಿದೆ .

ಕೈ ಮಗ್ಗದಿಂದ ತಯಾರಾದ ಬಟ್ಟೆ ಮಾತ್ರವೆ ಉಪಯೋಗಿಸಬಹುದು , ಟೈ , ಬೆಲ್ಟ್ , ಗ್ಲೋವೆಸ್ ತೊಡುವಂತಿಲ್ಲ ! ಸಾಮಾನ್ಯವಾಗಿ ಕಪ್ಪು ಬಣ್ಣ ಇಷ್ಟಪಡುತ್ತಾರೆ . ತಮ್ಮ ನಿಯಮ ಸರಳ , ಸಹಜಕ್ಕೆ ಅನುಗುಣವಾಗಿ ಸರಳಾದ ಬಟ್ಟೆ ಇಷ್ಟ ಪಡುತ್ತಾರೆ . ಹಲವು ಉಪ ಪಂಗಡ ಗುಂಡಿ ಕೂಡ ಉಪಯೋಗಿಸುವುದಿಲ್ಲ , ಮೆಜೋರಿಟಿ , ಶರ್ಟ್ನಲ್ಲಿ ಗುಂಡಿ ಬಳಸುತ್ತಾರೆ , ಪ್ಯಾಂಟ್ ಕೂಡ ಗುಂಡಿ , ಜೀಪ್ಪು ಬಳಸುವಂತಿಲ್ಲ .

ಮದುವೆ ಆದ ಗಂಡಸು ಗಡ್ಡ ಬಿಡಬೇಕು, ಆದರೆ ಮೀಸೆ ಬಿಡುವಂತಿಲ್ಲ . ಇಂತಹ ಸಣ್ಣ ಪುಟ್ಟ ವಿಷಯಗಳಲ್ಲಿ ಬಿನ್ನ ಮತ ಬಂದು ಅದು ಹೊಡೆದಾಟಕ್ಕೆ ತಿರುಗಿದ ಸನ್ನಿವೇಶಗಳು ಹಲವು . ಹೆಣ್ಣು ತನ್ನ ತಲೆ ಕೊದಲು ಕತ್ತರಿಸುವ ಹಾಗಿಲ್ಲ , ಗಂಡಸು ತನ್ನ ಗಡ್ಡ ಕತ್ತರಿಸುವ ಹಾಗಿಲ್ಲ , ಜೀವನ ಪರ್ಯಂತ ಇದು ಅನ್ವಯಿಸುತ್ತೆ . ಕಿರಿ ಕಿರಿ ಎನ್ನುವಷ್ಟು ಉದ್ದದ ಗಡ್ಡ , ತಲೆ ಕೂದಲು ಕತ್ತರಿಸಿದನ್ನೇ ದೊಡ್ಡ ವಿಷಯ ಮಾಡಿ ಹೊಡೆದಾಟ ಆಗಿವೆ .

2013ರಲ್ಲಿ ಅಮಿಶ್ ಪಂಗಡದ ನಾಯಕ ಸ್ಯಾಮ್ಯುಯೆಲ್ ಮುಲ್ಲೇಟ್ (Samuel Mullet ) ಗಡ್ಡ ಕತ್ತರಿಸಿದ ಬೇರೊಂದು ಅಮಿಶ್ ಪಂಗಡದ ಜನರನ್ನು ಹೊಡೆಯುವಂತೆ ತನ್ನ ಅನುಯಾಯಿಗಳ ಉದ್ರೆಕಿಸದ ಅಪಾದನೆ ಮೇಲೆ 15ವರ್ಷ ಜೈಲು ಶಿಕ್ಷೆಗೆ ಗುರಿಯಗಿದ್ದಾನೆ ! ಯಾವುದೇ ಅಂಗಡಿ ಇಂದ ಆಹಾರ ಕೊಳ್ಳುವ ಹಾಗಿಲ್ಲ , ತಮ್ಮ ಆಹಾರ ತಾವೇ ಬೆಳೆಯುತ್ತಾರೆ , ಕುರಿ , ಕೋಳಿ ಸಾಕುತ್ತಾರೆ . ಫ್ರಿಡ್ಜ್ ಇಲ್ಲದ ಕಾರಣ ಫ್ರೆಶ್ ಹಣ್ಣು ತರಕಾರಿ ಸೇವಿಸುತ್ತಾರೆ , ಉತ್ತಮ ಆಹಾರ ಕ್ರಮ ಹೊಂದಿರುವುದರಿಂದ ಅನೇಕ ರೋಗಗಳಿಂದ ಇವರು ಮುಕ್ತ .

ಈ ನಡುವೆ ತೀರಾ ಬೆಳೆಯಲು ಸಾಧ್ಯವಿಲ್ಲದ ವಸ್ತುಗಳ ಅಂಗಡಿಯಲ್ಲಿ ಕೊಳ್ಳಲು ಚರ್ಚು ಅನುಮತಿ ನೀಡಿದೆ. ಶಿಕ್ಷಣಕ್ಕೆ ಮಹತ್ವ ಕೊಡುವ ಅಮೀಶ್ ಪಂಗಡ ತಮ್ಮದೇ ಸ್ಕೂಲ್ ಅಥವಾ ಚರ್ಚ್ ನಲ್ಲಿ ಮಕ್ಕಳ ಓದಲು ಕಳಿಸುತ್ತಾರೆ , ಹದಿನೈದರ ನಂತರ ಓದುವುದು ಬಿಡುವುದು ಮಕ್ಕಳ ಇಚ್ಚೆ . 8 ರಿಂದ 20 ಸಂಖ್ಯೆಯ ಒಂದು ಕುಟುಂಬ ತೀರಾ ಸಾಮಾನ್ಯ , ಅಂದರೆ ಅಮಿಶ್ ಜೋಡಿ 7 ರಿಂದ 8 ಮಕ್ಕಳನ್ನು ಮಾಡಿ ಕೊಳ್ಳುತ್ತಾರೆ .

ಗೆಳೆಯ ಸ್ಯಾಮ್ಯುಯೆಲ್ ನ ಅಪ್ಪ ಇಲ್ಲಿನ ಬದುಕಿಗೆ ಇತಿಶ್ರೀ ಹಾಡಿ ಹೋಗಿದ್ದಾರೆ. ಆದರೂ ಇಂದಿಗೂ 2021ರಲ್ಲೂ ತನ್ನ ತಾಯಿಯ ನೋಡಲು ಕದ್ದುಮುಚ್ಚಿ ಹೋಗಬೇಕಾಗಿದೆ ಎನ್ನುವಾಗ ಅವನಲ್ಲಿ ಇದ್ದ ನೋವು ಕಣ್ಣೀರಾಗಿ ಪರಿವರ್ತನೆಯಾಗಿತ್ತು. ಅಮಿಶ್ ಯುವಕರು/ಯುವತಿಯರು ಆಧುನಿಕತೆಯ ವ್ಯಾಮೋಹಕ್ಕೆ ಸೆಳೆತಕ್ಕೆ ಸಿಕ್ಕು ತಮ್ಮ ರೀತಿ ನೀತಿ ಎಲ್ಲಾ ತೊರೆದು ಮುಕ್ತವಾಗಿ ತಮ್ಮನ್ನು ಹೋರ ಪ್ರಪಂಚಕ್ಕೆ ತೆರೆದು ಕೊಳ್ಳುತ್ತಿದ್ದಾರೆ ಎಲ್ಲಾ ಜನಾಂಗ , ಧರ್ಮ , ವ್ಯಕ್ತಿ ಬದಲಾದಂತೆ ಅಮೀಶ್ ಕೂಡ ಬದಲಾಗುತ್ತ ಸಾಗುತ್ತಿದ್ದಾರೆ .

ಆದರೂ ನಮ್ಮ ಜನಾಂಗ ಕ್ರಮಿಸುವ ದಾರಿ ಇನ್ನೂ ಬಹಳಷ್ಟಿದೆ ಎಂದು ಸ್ಯಾಮ್ಯುಯೆಲ್ ನಿಟ್ಟಿಸುರು ಬಿಟ್ಟದ್ದು ಹೊರಗಿನ ಎಲ್ಲಾ ಶಬ್ದಗಳ ಮೀರಿ ಹೃದಯವನ್ನ ಹೊಕ್ಕಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+