• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆತ್ತಲೆ ಜಗತ್ತು ಅಂಕಣಕಾರ ಪ್ರತಾಪ್ ಸಿಂಹ

By Staff
|

Pratap Simha ಬಿಸಿ ರಕ್ತ ಮತ್ತು ಸಮಚಿತ್ತದ ಬರಹಗಾರ ಪ್ರತಾಪ್ ಸಿಂಹ ಅವರ ಅಂಕಣ "ಬೆತ್ತಲೆ ಜಗತ್ತು" ನಮ್ಮ ವಾಹಿನಿಯಲ್ಲಿ ಆರಂಭವಾಗಿದೆ. ಡಾ. ಎಂ.ಎಸ್. ನಟರಾಜ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್ , ತ್ರಿವೇಣಿ ಶ್ರೀನಿವಾಸ ರಾವ್, ಪ್ರೊ. ಜೀವಿ, ಶ್ರೀವತ್ಸ ಜೋಶಿ ಅವರ ಪಂಕ್ತಿಗೆ ಸೇರುತ್ತಿರುವ ಪ್ರತಾಪ್ ಅವರಿಗೆ ಸ್ವಾಗತ.

ಸಮಕಾಲೀನ ಆಗುಹೋಗುಗಳನ್ನು ವೈಚಾರಿಕತೆ ಒರೆಗೆ ಉಜ್ಜುವುದು ಪ್ರತಾಪ್ ಅವರ ಬರಹಗಳ ವೈಶಿಷ್ಟ್ಯ. ನಿಖರತೆ ಮತ್ತು ದಿಟ್ಟ ಬರವಣಿಗೆಗೆ ಹೆಸರಾದ ಅವರು ಓರ್ವ ಪತ್ರಕರ್ತರಾಗಿ ಸಾರ್ವಜನಿಕ ಅಭಿಪ್ರಾಯಗಳಿಗೆ ಎರಕ ಹೊಯ್ಯುತ್ತಾರೆ. ಬರಹಗಾರರಾಗಿ ನಿರ್ದಿಷ್ಟ ಚಿಂತನೆ ಮತ್ತು ಸ್ಪಷ್ಟ ಅಭಿಪ್ರಾಯಗಳನ್ನು ತಾಳುತ್ತಾರೆ. ಅದು ಅವರ ವೈಖರಿ ಮತ್ತು ಜಾಯಮಾನ. ಪತ್ರಿಕೋದ್ಯಮ ವ್ಯಾಸಂಗ ಮಾಡಿದವರು ಪತ್ರಕರ್ತರಾಗಿ ವೃತ್ತಿಪರರಾಗುವುದು ನಮ್ಮ ನಾಡಿನಲ್ಲಿ ಇನ್ನೂ ಸಾಬೀತಾಗಿಲ್ಲ. ಇದಕ್ಕೆ ನಾವು ಕಾಣುವ ಕೆಲವು ಅಪವಾದಗಳಲ್ಲಿ ಪ್ರತಾಪ್ ಅವರೂ ಒಬ್ಬರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಅವರು ವಿಜಯ ಕರ್ನಾಟಕ ಪತ್ರಿಕೆ ಆರಂಭವಾದಂದಿನಿಂದ ಅಲ್ಲಿನ ಸಂಪಾದಕೀಯ ವಿಭಾಗದಲ್ಲಿ ಮುಖ್ಯ ಉಪ-ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಏಳು ವರ್ಷಗಳಿಂದ ಅವರ ಸಾಪ್ತಾಹಿಕ ಅಂಕಣ "ಬೆತ್ತಲೆ ಜಗತ್ತು" ಪ್ರಕಟವಾಗುತ್ತಿದೆ. ವಯಸ್ಸಿನಲ್ಲಿ ಇತರೆಲ್ಲ ಕನ್ನಡ ಅಂಕಣಕಾರರಿಗಿಂತ ಕಿರಿಯರು ಮತ್ತು ವಿಜಯ ಕರ್ನಾಟಕ ಅಂಕಣ ಬರಹಗಾರರಲ್ಲಿ ಉಳಿದೆಲ್ಲರಿಗಿಂತ ಸೀನಿಯರ್ ಎಂಬ ಅಂಶವೂ ಅವರ ಇವತ್ತಿನ ಬಯೋಡೇಟದೊಳಗೆ ಕಾಣುತ್ತದೆ.

ಆಧುನಿಕ ಭಾರತ ಅನೇಕ ಆಷಾಢಭೂತಿಗಳಿಗೆ ಅನ್ನ ನೀರು ಕೊಟ್ಟಿದೆ. ಆ ಕಸುವುಂಡು ಬೆಳೆದ ಮನಸ್ಸುಗಳು ಸಹಜವಾಗಿಯೇ ಡಾಂಭಿಕತೆ ಮತ್ತು ವಿತಂಡವಾದವನ್ನು ಪೋಷಿಸಿಕೊಂಡು ಬರುತ್ತಿವೆ. ಈ ವಿದ್ಯಮಾನಕ್ಕೆ ಇತ್ತೀಚಿನ ನಿದರ್ಶನ ಗುರುವಿನ ಮಿಂಚಿನ ಶಿಷ್ಟುಡು, ತಮಿಳ್ ಇನ ತಲೈವರ್ ಎಂ. ಕರಣಾನಿಧಿಯವರು ಎತ್ತಿರುವ ರಾಮನ ಅಸ್ಥಿತ್ವದ ಪ್ರಶ್ನೆ.

ರಾಮನಿದ್ದಾನೋ ಇಲ್ಲವೋ ಎನ್ನುವ ಸಂವಾದವನ್ನು ಬದಿಗಿಟ್ಟು ಕಲೈಂಗರ್ ಕರುಣಾನಿಧಿಯವರ ವೈಚಾರಿಕತೆಯ ಬುನಾದಿಯನ್ನು, ತಮಿಳುತಲೆಗಳ ಪಾರಂಪರಿಕ ಪದರಗಳನ್ನು ಬಿಡಿಸಿನೋಡುವ ಪ್ರಯತ್ನ ಪ್ರತಾಪ್ ಸಿಂಹ ಅವರ ಮೊದಲ ಲೇಖನದ ವಸ್ತು ಮತ್ತು ವಿನ್ಯಾಸ. "ರಾಮನೇ ಇರಲಿಲ್ಲ ಅನ್ನುವುದಾದರೆ ಮುರುಗ ಎಲ್ಲಿಂದ ಬಂದ?" ಲೇಖನದ ಮೂಲಕ ಅವರ ಬೆತ್ತಲೆ ಜಗತ್ತು ಜಗದ್ವ್ಯಾಪಿ ಆಗುತ್ತಿದೆ- ಸಂಪಾದಕ.

ಬೆತ್ತಲೆ ಜಗತ್ತಿನ ಲೇಖನಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more