126864ms natarajನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg126864ms natarajಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg126864ms natarajಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif126864ms natarajಮೇ 30, 31ರಂದು ನಾಲ್ಕನೇ ವಸಂತ ಸಾಹಿತ್ಯೋತ್ಸವ/nri/article/2009/0105-4th-vasantha-sahityotsava-kaveri.htmlಕನ್ನಡ ಸಾಹಿತ್ಯಾಭಿಮಾನಿಗಳೆ,ಕನ್ನಡ ಸಾಹಿತ್ಯ ರಂಗದ ಪರವಾಗಿ ತಮಗೆಲ್ಲ ಹೊಸ ವರುಷದ ಹಾರ್ದಿಕ ಶುಭಾಶಯಗಳು. ಈ ಮೊದಲೇ ಪ್ರಕಟಿಸಿರುವಂತೆ ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೋತ್ಸವ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಅಮೇರಿಕದ ರಾಜಧಾನಿ ಪ್ರದೇಶದಲ್ಲಿ ಮೇ 2009ರಲ್ಲಿ ನಡೆಯಲಿದೆ. ಸಾಹಿತ್ಯೋತ್ಸವ ನಡೆಯುವುದು ಮೇ 30 ಮತ್ತು 31, 2009ರ ವಾರಾಂತ್ಯದಲ್ಲಿ. ನಡೆಯುವ ಸ್ಥಳ ಮೇರೀಲ್ಯಾಂಡಿನ ರಾಕ್‌ವಿಲ್ 33889http://kannada.oneindia.com/img/2009/01/05-veena-shanteshwar-vaidehi1.jpg126864ms natarajಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg192098srivathsa joshiಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್../column/vichitranna/2007/140807deadly-combination-idly-combination.htmlಜಗತ್ತಿನ ಅತ್ಯಂತ ಒಳ್ಳೆ ಕಾಂಬಿನೇಶನ್ ;ಕಪ್ಪು ಮತ್ತು ಬಿಳುಪು! ಅತಿ ಕೆಟ್ಟ ಕಾಂಬಿನೇಶನ್ ಅಂದ್ರೂನೂ ಕಪ್ಪು ಮತ್ತು ಬಿಳುಪು ಎಂದೇ ಹೇಳಬೇಕಾಗುತ್ತದೆ.ಆ ಮಾತು ಬಿಡಿ, ಲೋಕೋಭಿನ್ನರುಚಿ ಎಂಬಂತೆ ಜಗತ್ತಲ್ಲಿ ಏನೇನೋ ಕಾಂಬಿನೇಶನ್ ಗಳಿವೆ. ಅವು ಒಂದೆರಡಲ್ಲ. * ಶ್ರೀವತ್ಸ ಜೋಶಿ ವ್ಹಾ! ಅದೊಂದು ಅದ್ಭುತವಾದ ಡೆಡ್ಲಿ ಕಾಂಬಿನೇಶನ್!" - ಎಂಬೋ ಉದ್ಗಾರವನ್ನು ನೀವು ವಿವಿಧ 11408http://kannada.oneindia.com/img/2009/10/13-deadly-combination2.jpg192098srivathsa joshiಸತ್ತ ಕವಿತೆಯ ಸುತ್ತ/column/nataraj/2009/0305-about-a-dead-poem-ms-nataraj.htmlವಿ-ಅಂಚೆ, ಎಸ್ಎಮ್ಎಸ್ ವೇಗದ ಯುಗದಲ್ಲಿ ಕೈಯಲ್ಲಿ ಪೆನ್ನು ಹಿಡಿದು ಪತ್ರ ಬರೆಯುವ ಪದ್ಧತಿ ಲಾಗ ಹಾಕಿದೆ. ಶಾರ್ಟ್ ಕಟ್ ಪದಗಳಲಿ ಭಾವನೆಗಳನ್ನಂತೂ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಭಾವಜೀವಿ ಭಾವನಾ ಬರೆದ 'ಇವತ್ತು ಒಂದು ಕವಿತೆ ಸತ್ತಿತು' ಎಂಬ ಪ್ರತಿಮಾಮಯ ಕವಿತೆಯನ್ನು ಸರಣಿ ವಿ-ಅಂಚೆಯ ಮೂಲಕ ಸ್ನೇಹಿತರೊಡನೆ ವಿನಿಮಯ ಮಾಡಿಕೊಳ್ಳಿ. ಕಾಲ ಎಷ್ಟೇ ಮುಂದುವರಿದಿರಲಿ ಪತ್ರ ಬರೆಯುವ 34999http://kannada.oneindia.com/img/2009/03/05-ms-nataraj7.jpg192098srivathsa joshi‘ಕಾವೇರಿ’ಗೆ ಬಂದ ಋತುರಾಜ ವಸಂತ!/nri/article/2009/0410-kaveri-washington-dc-ugadi.htmlಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!* ಶ್ರೀವತ್ಸ ಜೋಶಿ; ವರ್ಜೀನಿಯಾ ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. 35875http://kannada.oneindia.com/img/2009/04/10-kaveri-ugadi1.jpg192098srivathsa joshiಸಾಹಿತ್ಯೋತ್ಸವ : ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು/nri/article/2009/0623-4th-vasanta-sahityotsava-ashtalakshmi.htmlಭಾನುವಾರ ಮಧ್ಯಾಹ್ನ ಊಟದ ನಂತರ ವಸಂತ ಸಾಹಿತ್ಯೋತ್ಸವ ಸಮ್ಮೇಳನಕ್ಕೆ ಕಳೆಕೊಟ್ಟದ್ದು ಚುರುಕು ಮಾತಿನ ಮಹಿಳಾ ಸಮಾವೇಶ. ಕಥೆಗಾರ್ತಿ, ಕವಯಿತ್ರಿ ಶಶಿಕಲಾ ಚಂದ್ರಶೇಖರ್ ಉತ್ಸಾಹದಿಂದ ನಡೆಸಿಕೊಟ್ಟ ಇದರಲ್ಲಿ ಅಮೆರಿಕನ್ನಡತಿಯರಾದ ವಿಮಲಾ ರಾಜಗೋಪಾಲ್, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್, ಮೀರಾ ಪಿ.ಆರ್., ಮತ್ತು ಜ್ಯೋತಿ ಮಹಾದೇವ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ವೀಣಾ ಶಾಂತೇಶ್ವರ-ವೈದೇಹಿ ಅವರುಗಳನ್ನೂ ಸೇರಿಸಿ ವೇದಿಕೆಯ ಮೇಲೆ ಎಂಟು 37517http://kannada.oneindia.com/img/2009/06/23-vasanta-sahityotsava6.jpg192098srivathsa joshiಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ/nri/article/2009/0623-4th-vasanta-sahityotsava-kannada-in-computer.htmlಈ ಬಾರಿಯ ವಸಂತ ಸಾಹಿತ್ಯೋತ್ಸವದಲ್ಲಿ ಪ್ರಸ್ತುತಗೊಂಡ ಒಂದು ವಿಶಿಷ್ಟ ಕಾರ್ಯಕ್ರಮವೆಂದರೆ ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ' ಎಂಬ ಒಂದು ಪ್ರಾತ್ಯಕ್ಷಿಕೆ. ಗಣಕಯಂತ್ರದಲ್ಲಿ ಮತ್ತು ಅಂತರಜಾಲದಲ್ಲಿ ಕನ್ನಡ ಲಿಪಿಯನ್ನು ಉಪಯೋಗಿಸಿ ಇಮೇಲ್ ಬರೆಯುವುದು ಹೇಗೆ, ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್‌ಗಳಲ್ಲೂ ಕನ್ನಡದಲ್ಲೇ ಕಡತಗಳನ್ನು ತಯಾರಿಸುವುದು ಹೇಗೆ, ಯುನಿಕೋಡ್ ಕನ್ನಡ ಲಿಪಿ ಎಂದರೇನು, ಅದರ ಪ್ರಯೋಜನಗಳೇನು, ಹರಟೆಕಿಟಕಿ(ಚಾಟಿಂಗ್)ನಲ್ಲೂ ಹೇಗೆ ಕನ್ನಡ 37518http://kannada.oneindia.com/img/2009/06/23-vasanta-sahityotsava4.jpg284030anandram sastriಆದಿಶಂಕರ ಪ್ರಣೀತ ಜೀವನತತ್ತ್ವ/festivals/shivaratri/2009/0223-adi-shankaracharya-philisophy-on-happiness.htmlಉಪಭೋಗವನ್ನೇ ಆನಂದವೆಂದು ಭ್ರಮಿಸಿ ಬಾಳು ವ್ಯರ್ಥ ಮಾಡಿಕೊಳ್ಳುವುದು ಬೇಡ. ಜೀವನಾನಂದದ ಹಿಮಾಲಯವೇರಿದ ಆದಿಶಂಕರರ ನುಡಿಗಳನ್ನು ಮನನ ಮಾಡಿಕೊಳ್ಳೋಣ. ಭಗವದ್ ಗೀತೆಯಲ್ಲಿ ಹೇಳಿದಂತೆ ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗುವ ಸಂಕಲ್ಪವನ್ನೂ ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮಹಾಶಿವರಾತ್ರಿಯ ಸಂದರ್ಭದಲ್ಲಿ ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಜಾಗತೀಕರಣದ ನೆರವಿನಿಂದ 34821http://kannada.oneindia.com/img/2009/02/23-adi-shankaracharya.jpg284030anandram sastriಸತ್ತ ಕವಿತೆಯ ಸುತ್ತ/column/nataraj/2009/0305-about-a-dead-poem-ms-nataraj.htmlವಿ-ಅಂಚೆ, ಎಸ್ಎಮ್ಎಸ್ ವೇಗದ ಯುಗದಲ್ಲಿ ಕೈಯಲ್ಲಿ ಪೆನ್ನು ಹಿಡಿದು ಪತ್ರ ಬರೆಯುವ ಪದ್ಧತಿ ಲಾಗ ಹಾಕಿದೆ. ಶಾರ್ಟ್ ಕಟ್ ಪದಗಳಲಿ ಭಾವನೆಗಳನ್ನಂತೂ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಭಾವಜೀವಿ ಭಾವನಾ ಬರೆದ 'ಇವತ್ತು ಒಂದು ಕವಿತೆ ಸತ್ತಿತು' ಎಂಬ ಪ್ರತಿಮಾಮಯ ಕವಿತೆಯನ್ನು ಸರಣಿ ವಿ-ಅಂಚೆಯ ಮೂಲಕ ಸ್ನೇಹಿತರೊಡನೆ ವಿನಿಮಯ ಮಾಡಿಕೊಳ್ಳಿ. ಕಾಲ ಎಷ್ಟೇ ಮುಂದುವರಿದಿರಲಿ ಪತ್ರ ಬರೆಯುವ 34999http://kannada.oneindia.com/img/2009/03/05-ms-nataraj7.jpg284030anandram sastri'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!/movies/review/2009/03/10-slum-dog-millionaire-review-anandram-sastri.htmlಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರೆಹಮಾನ್ ಮತ್ತಿತರರಿಗೆ ಆಸ್ಕರ್ ಬಂದಿದ್ದು ಸಂತೋಷವೆ. ಆದರೆ, ಆ ಚಿತ್ರ ಅಷ್ಟು ಹೊಗಳಿಕೆಗೆ ಅರ್ಹವೆ? ಖಂಡಿತ ಇಲ್ಲ. ನಮ್ಮ ಭಾರತೀಯ ಚಿತ್ರರಂಗ ಅದಕ್ಕಿಂತಲೂ ಅತ್ಯದ್ಭುತ ಸಾಧನೆ ಮಾಡಿದೆ. ಅಜರಾಮರ ಅನ್ನಿಸುವಂಥ ಸಂಗೀತ ನೀಡಿದವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಒಂದು ಹೆಜ್ಜೆ ಮುಂದೇ ಹೋಗಿ ಸ್ಲಂಡಾಗ್ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುತ್ತಿವೆ. 35136http://kannada.oneindia.com/img/2009/03/10-slum-dog-millionaire1.jpg284030anandram sastriಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpgnews"> ಸತ್ತ ಕವಿತೆಯ ಸುತ್ತ | A poem dead today | MS Nataraj | E-Mail | Poetry - ಸತ್ತ ಕವಿತೆಯ ಸುತ್ತ - Kannada Oneindia

ಸತ್ತ ಕವಿತೆಯ ಸುತ್ತ

Dr. MS Nataraj
ವಿ-ಅಂಚೆ, ಎಸ್ಎಮ್ಎಸ್ ವೇಗದ ಯುಗದಲ್ಲಿ ಕೈಯಲ್ಲಿ ಪೆನ್ನು ಹಿಡಿದು ಪತ್ರ ಬರೆಯುವ ಪದ್ಧತಿ ಲಾಗ ಹಾಕಿದೆ. ಶಾರ್ಟ್ ಕಟ್ ಪದಗಳಲಿ ಭಾವನೆಗಳನ್ನಂತೂ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಭಾವಜೀವಿ ಭಾವನಾ ಬರೆದ 'ಇವತ್ತು ಒಂದು ಕವಿತೆ ಸತ್ತಿತು' ಎಂಬ ಪ್ರತಿಮಾಮಯ ಕವಿತೆಯನ್ನು ಸರಣಿ ವಿ-ಅಂಚೆಯ ಮೂಲಕ ಸ್ನೇಹಿತರೊಡನೆ ವಿನಿಮಯ ಮಾಡಿಕೊಳ್ಳಿ. ಕಾಲ ಎಷ್ಟೇ ಮುಂದುವರಿದಿರಲಿ ಪತ್ರ ಬರೆಯುವ ರೂಢಿಯನ್ನು ಮಾತ್ರ ಬಿಡಬೇಡಿ.

* ಡಾ|| ಮೈ. ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ಹಿಂದೆ, ಒಂದಾನೊಂದು ಕಾಲದಲ್ಲಿ, ಜನ ಒಬ್ಬರಿಗೊಬ್ಬರು ಪತ್ರ ಬರೆಯುತ್ತಿದ್ದರು. ನಾವು ಹುಡುಗರಾಗಿದ್ದಾಗ ಊರಿಗೆ ಹೊರಡುವ ಮುನ್ನ "ತಲುಪಿದ್ದಕ್ಕೆ ಒಂದು ಪೋಸ್ಟ್ ಕಾರ್ಡ್ ಆದರೂ ಬರೆದು ಹಾಕು" ಎಂಬ ಬುದ್ಧಿವಾದದ ಮಾತಿನೊಂದಿಗೆ ಬೀಳ್ಕೊಡುಗೆ ನಡೆಯುತ್ತಿದ್ದುದು ಸಾಮಾನ್ಯ. ಆ ಕಾರ್ಡಿನಲ್ಲೂ ಅಂಥದ್ದೇನೂ ಜಾಗ ಇರುತ್ತಿರಲಿಲ್ಲ. ತಂದೆಯವರಿಗಾದರೆ "ಮೈ ಡಿಯರ್ ಫಾದರ್" ಎಂದು ಇಂಗ್ಲೀಷಿನ ಒಕ್ಕಣೆಯೊಂದಿಗೆ ಶುರು. ತಾಯಿಗಾದರೆ, ಮಾತೋಶ್ರೀಯವರಿಗೆ ಸಾ-ಪೂ-ನ (ಸಾಷ್ಟಾಂಗ-ಪೂರ್ವಕ-ನಮಸ್ಕಾರಗಳು), ಅ.ಈ.ಉ.ಕು.ಸಾಂ." ಎಂಬ ಒಕ್ಕಣೆಯೊಂದಿಗೆ ಶುರು. "ಅದಾಗಿ ಈವರೆಗೆ ಉಭಯ-ಕುಶಲೋಪರಿ-ಸಾಂಪ್ರತ" ಎಂಬುದನ್ನು ಪದಕ್ಕೊಂದೇ ಅಕ್ಷರ ಉಪಯೋಗಿಸಿ ಮೊಟಕು ಗೊಳಿಸಲು ಕಾರಣ, ಕಾರ್ಡಿನಲ್ಲಿದ್ದ ಜಾಗದ ಕೊರತೆಯೇ ಇರಬೇಕು. "ಬಸ್ಸಿನಲ್ಲಿ ಕೂರಲು ಸ್ಥಳ ಸಿಕ್ಕದೇ ಒದ್ದಾಡಿದ್ದು, ಧೂಳು, ಪೆಟ್ರೋಲ್ ಮತ್ತು ಬೀಡಿ-ಸಿಗರೇಟಿನ ವಾಸನೆ ತಡೆಯಲಾರದೇ ಒತ್ತರಿಸಿಕೊಂಡು ಬಂದ ವಾಂತಿ, ದಾರಿಯುದ್ದಕ್ಕೂ ಚಚ್ಚಿದ ಮಳೆ, ಚನ್ನರಾಯಪಟ್ಟಣದ ಬಳಿ ಬಸ್ಸು ಕೆಟ್ಟು ಕೂತದ್ದು, ಮಲ್ಲೇಶ್ವರ ಸೇರುವ ವೇಳೆಗೆ ಸಾಕು ಸಾಕಾಗಿಹೋದದ್ದು," ಇತ್ಯಾದಿ ವಿವರಗಳೊಂದಿಗೆ ತಲುಪಿದ ಸಮಾಚಾರವನ್ನು ಊರಿಗೆ ಮುಟ್ಟಿಸದೇ ಹೋದರೆ "ತಲುಪಿದ್ದಕ್ಕೆ ಒಂದು ಕಾರ್ಡನ್ನಾದರೂ ಬರೆದು ಹಾಕು ಎಂದು ಹೇಳಿದ್ದು ಕಿವಿಗೆ ಬೀಳಲಿಲ್ಲವೇ?" ಎಂಬ ದೂರನ್ನೂ ಅಸಮಾಧಾನವನ್ನೂ ಹೊತ್ತ ಕಾಗದ ಊರಿನಿಂದ ಬರುತ್ತಿತ್ತು. ಅನೇಕ ವಿದ್ಯಾರ್ಥಿ ನಿಲಯಗಳಲ್ಲಾಗಲೀ ಊರಿನ ಮನೆಗಳಲ್ಲಾಗಲೀ ದೂರವಾಣಿಯ ಅನುಕೂಲವಿರಲಿಲ್ಲವಾದ್ದರಿಂದ ಸಂವಹನಕ್ಕೆ ಭಾರತದ ಅಂಚೆ ಇಲಾಖೆಯ ಕಾರ್ಡು ಪರಮ ಸಾಧನವಾಗಿತ್ತು. ಆ ಕಾರ್ಡಿನ ಪ್ರತಿ ಚದುರಂಗುಲವನ್ನೂ ಉಪಯೋಗಿಸಿಕೊಂಡು, ಸಣ್ಣಕ್ಷರದಲ್ಲಿ ಕೊರೆದು, ಅಡ್ಡಡ್ಡಕೆ, ಉದ್ದುದ್ದಕೆ, ವಿಳಾಸ ಬರೆಯುವ ಸ್ಥಳವನ್ನೂ ಅತಿಕ್ರಮಿಸಿ, ಪೈಸೆಗಳ ಸಂಪೂರ್ಣ ಉಪಯೋಗವನ್ನು ನಾವೆಲ್ಲ ಪಡೆಯುತ್ತಿದ್ದೆವು.

ಅದು ಹಳೆಯ ಮಾತಾಯಿತು. ಈಗೆಲ್ಲ, ದಿಢೀರ್ ಸುದ್ದಿಗಳು, ವಿ-ಅಂಚೆ, ಐ. ಎಮ್ ಮುಂತಾಗಿ ಓಡಾಡುತ್ತವೆ. ಅಷ್ಟೇ ಅಲ್ಲ, ಎಲ್ಲರ ಬಳಿಯೂ ಮೊಬೈಲುಗಳು ಇರುವುದರಿಂದ ನೆನಪಾದ ಕೂಡಲೆ, ಮನೋವೇಗದಲ್ಲಿ ಬೇಕಾದವರನ್ನು ಕರೆದು ಮಾತಾಡಿಸಬಹುದು ಅಥವಾ ಸಂದೇಶಗಳನ್ನು ಬಿಡಬಹುದು. ಹದಿಹರೆಯದ ತರುಣ-ತರುಣಿಯರಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಈಗ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅವಕಾಶ ಹೇರಳವಾಗಿವೆಯಷ್ಟೆ. ಭಾವನೆ' ಎಂದ ಕೂಡಲೆ ಒಂದು ಮಿಂಚು ಹೊಳೆಯುತ್ತದೆ. ಭಾವನಾ' ಎಂಬ ತರುಣಿಯೊಬ್ಬಳು ಬರೆದ ಕವಿತೆ ಈ ಲೇಖನಕ್ಕೆ ನಾಂದಿಯಾಗುವ ಸಂಗತಿ! ಎಲ್ಲಿಂದೆಲ್ಲಿಗೆ ಹಾರುತ್ತಿರುವಿರಿ ಸ್ವಾಮೀ' ಎನ್ನಬೇಡಿ. ಈ ವೃತ್ತಾಂತ ಶುರುವಾಗುವುದೂ ವಿ-ಅಂಚೆಗಳ ವಿನಿಮಯದೊಂದಿಗೇನೆ. ಕೇಳಿ, ಹೇಳುತ್ತೇನೆ.

ನನ್ನ ಬರಹಗಾರ ಮಿತ್ರ ಶ್ರೀವತ್ಸ ಜೋಶಿಯಿಂದ ಒಂದು ವಿ-ಅಂಚೆ ಬಂತು. ಅದು ಅವರಿಗೆ ಬಂದ ವಿ-ಅಂಚೆ ಮತ್ತು ಇವರು ಅದಕ್ಕೆ ಪ್ರತಿಯಾಗಿ ಬರೆದ ವಿ-ಅಂಚೆಗಳ ಸರಪಳಿ. ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆಯುವ ಆನಂದರಾಮ ಶಾಸ್ತ್ರಿ, ಜೋಶಿ ಅವರಿಗೂ ನಾಗೇಶ್ ಹೆಗ್ಡೆ ಎಂಬ ಮತ್ತೊಬ್ಬ ಪತ್ರಕರ್ತರಿಗೂ ಕಳುಹಿದ ವಿ-ಅಂಚೆಯಲ್ಲಿ ಒಂದು ಕಿರುಪದ್ಯ ಹೀಗಿತ್ತು:

ಚರಮಗೀತೆ

ಬೆಂಗಳೂರು ಹಬ್ಬದ
ಕ್ಯಾನ್ಸಲ್ ಆದ
ಕವಿಗೋಷ್ಠಿಯಲ್ಲಿ
ಸಭಾಸದರು ಕೇವಲ
ನಾಲ್ವರು ಇದ್ದರಂತೆ,
ಯಾಕೆ?
ಕಾವ್ಯವನ್ನು ಹೊತ್ತುಕೊಂಡುಹೋಗಲಿಕ್ಕೆ!
ಅವರು ಅಲ್ಲಿಗೆ ಬಂದಿದ್ದು
ಹೊತ್ತು ಸಾಗಿಸಲಿಕ್ಕೆ

ಇದನ್ನೋದಿ ನನ್ನ ನೆನಪಿನ ದೋಣಿ ಮುವ್ವತ್ತು ವರ್ಷಕ್ಕೂ ಹಿಂದಕ್ಕೆ ಹೋಯಿತು. ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ ಮತ್ತು ಡಿಲವೇರ್ ಸಂಸ್ಥಾನಗಳ ಕನ್ನಡಿಗರ ಕೂಟ ತ್ರಿವೇಣಿ'ಯ ಆಶ್ರಯದಲ್ಲಿ ಎರಡನೇ ಈಶಾನ್ಯ ಅಮೇರಿಕಾ ಕನ್ನಡ ಸಮ್ಮೇಳನ ನಡೆದ ಸಂದರ್ಭ. ಇನ್ನೇನು ಕವಿಗೋಷ್ಠಿ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು, ಕಾರ್ಯಕರ್ತರೊಬ್ಬರು ಬಂದು ಉದ್ಘೋಷಿಸಿದರು - "ಸಂಜೆಯ ಭೋಜನದ ವೇಳೆಯಾಗಿದೆ, ಆದಷ್ಟೂ ಬೇಗ ಹೋಗಿ ಊಟ ಮಾಡಿಕೊಂಡು ಬನ್ನಿ, ಊಟದ ನಂತರ ಮಾಸ್ಟರ್ ಹಿರಣ್ಣಯ್ಯನವರಿಂದ ನಾಟಕವಿದೆ. ತಡವಾಗಿ ಹೋದರೆ ಊಟ ಸಿಕ್ಕದೇ ಹೋಗಬಹುದು." ರಂಗದ ಮೇಲೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತರುಣ ಕವಿಗಳು, ಕವಯಿತ್ರಿಯರು ಅತ್ಯಂತ ಉತ್ಸಾಹದಿಂದ ಆಸನಗಳನ್ನು ಅಲಂಕರಿಸಿಕೊಂಡಿದ್ದರು. ಉದ್ಘೋಷಣೆಯ ಫಲಿತಾಂಶ ಏನಾಯಿತು ಎಂದು ವಿವರಿಸುವ ಅಗತ್ಯವಿಲ್ಲ. ನಾನು ಕವನ ಓದುವ ಮುನ್ನ ಸಭೆಯನ್ನುದ್ದೇಶಿಸಿ, "ರಂಗದ ಮೇಲೆ ಆಸೀನರಾಗಿರುವ ಆತ್ಮೀಯ ಕವಿ-ಕವಯಿತ್ರಿಯರೇ, ಇನ್ನೂ ಭೋಜನಕ್ಕೆ ಹೋಗದೇ ಮುಂದಿನ ಸಾಲಿನಲ್ಲಿ ಕುಳಿತಿರುವ ಕಾವ್ಯಾಸಕ್ತರೇ ಮತ್ತು ನೂರಾರು ಖಾಲೀ ಕುರ್ಚಿಗಳೇ---" ಎಂದು ಪ್ರಾರಂಭಿಸಿದೆ. ಮೊದಲ ಸಾಲಿನಲ್ಲಿ ಆಸಕ್ತಿಯಿಂದ ಕುಳಿತಿದ್ದ (ಮುಖ್ಯ ಅತಿಥಿಗಳಾಗಿ ಬಂದಿದ್ದ) ಎಸ್. ಎಲ್. ಭೈರಪ್ಪನವರು ಹಿಂದಿರುಗಿ ನೋಡಿದರು. ಹೌದು, ರಂಗದ ಮೇಲಿದ್ದ ಕವಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಸಭಾಸದರಿದ್ದರು. ಪ್ರಾಯಶಃ, ಇದು ಕವಿಗಳ ದೌರ್ಭಾಗ್ಯವೇ ಇರಬೇಕು. ದೇಶ ಕಾಲ ಯಾವುದಾದರೂ ಜನರ ಪ್ರಯಾರಿಟಿ ಹೆಚ್ಚು ಕಮ್ಮಿ ಒಂದೇ ಇರುತ್ತದೆ. ಊಟವನ್ನು ಮಿಸ್ ಮಾಡಿಕೊಂಡಾದರೂ ಕವಿತೆ ಕೇಳಬೇಕೆಂಬ ತೆವಲಿನವರು ಯಾವ ದೇಶದಲ್ಲೂ, ಯಾವ ಕಾಲದಲ್ಲೂ ಸಿಕ್ಕುವುದಿಲ್ಲ.

ಆನಂದರಾಮ ಶಾಸ್ತ್ರಿಗಳಾದರೋ, ಕೇವಲ' ಸಭಾಸದರ ಬಗ್ಗೆ ಬರೆದಿದ್ದಾರೆಯೇ ಹೊರತು (ಅವರ ಸಾಲು ಎಲ್ಲಿಗೆ ಮುಗಿಯುತ್ತೆ ಗಮನಿಸಿ, ಸಭಾಸದರು ಕೇವಲ) ಕವಿಗಳ ಸಂಖ್ಯೆಯ ಬಗ್ಗೆ ಯಾವ ಬೆಳಕನ್ನೂ ಚೆಲ್ಲಿಲ್ಲ! ಅಂತೂ "ಹೊತ್ತು ಸಾಗಿಸಲಿಕ್ಕೆ" ಅಂದರೆ ಹೊತ್ತು ಕಳೆಯುವುದಕ್ಕೆ ಎಂತಲೂ ಅರ್ಥೈಸಬಹುದಲ್ಲವೇ? ಹೊತ್ತು ಕಳೆಯಲು ಬಂದು ಕ್ಯಾಂಸಲ್ ಆದ ಕವಿತೆಯನ್ನು ಹೊತ್ತು ಸಾಗಿಸಿದರು, ಬಿಡಿ. ಅದಕ್ಕೆ ನಮ್ಮ ಜೋಶಿಯ ಜವಾಬೇನು?

ಹೌದು,

ಅದುವರೆಗೆ ಅವರಿಗೆ ಚಟ' ಆಗಿದ್ದ
ಕಾವ್ಯವ(ಳ)ನ್ನು
ಚಟ್ಟಕ್ಕೇರಿಸಿದ ಕೀರ್ತಿ ಅವರದ್ದು!
(ಆನಂದ)ರಾಮ ನಾಮ ಸತ್ಯ ಹೈ!

ಎನ್ನುತ್ತಾ ಇವರು ಮಡಕೆಯಲ್ಲಿ ಬೆಂಕಿ ಹಿಡಿದು ಎಲ್ಲರಿಗಿಂತ ಮುಂದೆ ನಡೆದೇಬಿಟ್ಟರು. "ಯೆಟ್ಟೂ ಜೋಶಿ"

ಈಗ ಬರುತ್ತಾಳೆ ನಮ್ಮ ಭಾವನಾ! ಜೋಶಿ ಯಾವುದೋ ಬ್ಲಾಗಿನಲ್ಲಿ ತಮ್ಮ ಕಣ್ಣಿಗೆ ಬಿದ್ದ ಭಾವನಾ ಕಪೂರ್ ಎಬುವಳ "ಎ ಫೊಯೆಮ್ ಡೈಡ್ ಟುಡೆ" (ಇವತ್ತೊಂದು ಕವಿತೆ ಸತ್ತಿತು) ಎಂಬ ಕವನವನ್ನು ಜಾಲಾಡಿ ತೆಗೆಯುತ್ತಾರೆ, ತಮ್ಮ ಇಬ್ಬರು ಮಿತ್ರರಿಗೂ ರವಾನಿಸುತ್ತಾರೆ. ಈ ಭಾವನಾ ಎಂಬಾಕೆ ಪ್ರಾಯಶಃ ಹಲವಾರು ಪತ್ರಿಕಾ ಸಂಪಾದಕರ ಕತ್ತರೀ ಪ್ರಯೋಗಕ್ಕೆ ಒಳಗಾದವಳಿರಬೇಕು. ಏಕೆಂದರೆ, ಅವಳ ಪ್ರಕಾರ ಕೇವಲ ಛಂದಸ್ಸು, ಪ್ರಾಸ ಇತ್ಯಾದಿಗಳ ಚರ್ವಿತಚರ್ವಣದಲ್ಲಿ ಸಿಕ್ಕುಬಿದ್ದ ವಿಮರ್ಶಕರು, ತರುಣ ಕವಿಗಳ ನವ್ಯಕಾವ್ಯವನ್ನು ಮೆಚ್ಚುವ ಬದಲು ಖಂಡಿಸಿ ತುಂಡರಿಸುವ ಕ್ರೌರ್ಯದಿಂದ ಕವಿಗಳ ಸೃಜನಶೀಲತೆಯನ್ನು ಕೊಲೆಗೈಯ್ಯುತ್ತಾರೆ. ಹೀಗಾಗಿ, ಇವಳ ಕವಿತೆಯ ನಾಯಕಿ ತನ್ನ ಪ್ರತಿಮೆಗಳ ಭಾರವನ್ನು ತಡೆಯಲಾರದೇ ಎಂಪೈರ್ ಸ್ಟೇಟ್ ಬಿಲ್ಡಿಂಗಿನಿಂದ ಪ್ರಾಣ ಕಳೆದುಕೊಳ್ಳಲು ನೆಗೆದರೂ, ಅವಳು ನಿಜವಾಗಿ ಸಾವನ್ನಪ್ಪುವುದು ಆಟಾಪ್ಸಿ (ಶವಪರೀಕ್ಷೆ)ಯ ಸಮಯದಲ್ಲಿ!

ಇಷ್ಟೆಲ್ಲಾ ಹೇಳಿದಮೇಲೆ ಭಾವನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಈ ಲೇಖನವನ್ನು ಮುಗಿಸಲಾಗುವುದೇ? ಇಗೋ ಇಂಗ್ಲೀಷಿನಲ್ಲಿದ್ದ ಕವನವನ್ನು ನಿಮಗಾಗಿ ಕನ್ನಡಿಸಿದ್ದೇನೆ, ಓದಿ.

ಇವತ್ತು ಒಂದು ಕವಿತೆ ಸತ್ತಿತು

ಎಲೆ ಎಲೆ ವೈದ್ಯನೇ
ಕೇಳಯ್ಯ ಕೂತು
ಇಂದು ಸತ್ತಿಹ ಕವಿತೆಯ
ಕೊನೆಯ ಮಾತು

ಎಂಪೈರ್ ಸ್ಟೇಟ್ ಸೌಧದ
ತುದಿಯಿಂದ ನೆಗೆದಾಗ ಅವಳು
ತುಂಬಿ ತುಳುಕುತ್ತಿತ್ತು
ಪ್ರತಿಮೆಗಳ ಬಸಿರು
ಕಿವಿಗೆ ಕೇಳುತ್ತಿತ್ತು
ಉಪಮೆಗಳ ಉಸಿರು
ಪತನವೆಂದರೆ ಆವೇಗ
ಇಳಿಯುವಾಗಿನ ವೇಗ
ಗುರುತ್ವ ಹೊಡಿಸಿದ ಲಾಗ
ವೇಗೋತ್ಕರ್ಷವ ಗುಣಿಸಿ
ಲೆಕ್ಕ ಹಾಕಿದರೆ
9.8 ಮೀಟರುಗಳ ಮುಟ್ಟಿತಾಗ
ಕ್ಷಣ-ಕ್ಷಣಕೂ ವಿಯೋಗ!

ಬಿದ್ದಾಗ ಕವಿತೆ
ಆಗಬಹುದಿತ್ತು ಪುಡಿಪುಡಿ
ಅಕ್ಷರಗಳೆಲ್ಲ ಹಿಡಿ ಹಿಡಿ
ನೋಡಬಹುದಿತ್ತು ಅವಳು
ಮೆನ್‌ಹ್ಯಾಟನ್ನಿನ ಗಲ್ಲಿ-ಗಲ್ಲಿ
ಎಲ್ಲೆಲ್ಲೋ ಚದುರಿ ಚೆಲ್ಲಾಪಿಲ್ಲಿ

ಆದರೆ, ಕವಿತೆ ಎಂದರೆ
ಗಾಜಿನ ಗೋಪುರವಲ್ಲ
ಅದಕ್ಕೇ ಅವಳು ಬಿದ್ದಾಗ ಯಾವ
ಸದ್ದು ಗದ್ದಲವೂ ಇರಲಿಲ್ಲ
ಹಾರುವ ಧೂಳಿರಲಿಲ್ಲ
ಸೋರುವ ನೆತ್ತರೂ ಇರಲಿಲ್ಲ

ಒಳ್ಳೆಯ ಕವಿತೆ ಎಂದರೆ
ಅಗ್ಗದ ಪ್ಲ್ಯಾಸ್ಟಿಕ್ಕಿನಂತೆ
ಅವಿನಾಶಿಯಂತೆ!
ಆದರೆ, ಹೆಣವ ಕುಯ್ಯುವ ವೈದ್ಯ,
ನೀನಾದರೋ ಕವಿತೆಗಳಿಗೆ
ಕತ್ತರೀಸೇವೆ ಮಾಡುತ್ತ
ಸಾರ್ಥಕ್ಯ ಹೊಂದುತಿರುವೆ
ಮುದ್ದೆಯಾದ ಮಾಂಸದ ನಡುವೆ
ಪುಡಿಯಾಗದೇ ಉಳಿದ
ಮೂಳೆಗಳ ಹೆಕ್ಕಿ
ಒಂದೊಂದೇ ಸಾಲನ್ನು
ಬೆತ್ತಲು ಮಾಡಿ
ಒಂದೊಂದೇ ಶಬ್ದವನ್ನು
ನಿಶ್ಶಬ್ದಗೊಳಿಸುತ್ತ
ತುಂಡರಿಸುವುದನ್ನು ಬಿಟ್ಟರೆ
ಮತ್ತೇನು ಬಲ್ಲೆ ನೀನು?

ಕೇಳಯ್ಯ ವೈದ್ಯ,
ಸತ್ತ ಕವಿತೆಯ ಕೊನೆಯ ಮಾತು
ಎತ್ತರದಿಂದ ಬಿದ್ದಾಗ
ಸಾಯುವುದಿಲ್ಲ ಕವಿತೆ
ಸಾವ ತರುವುದು
ಶವಪರೀಕ್ಷೆ!

(ಭಾವನಾ ಕಪೂರ್, ಡಿಸೆಂಬರ್ 2003)

ಅದಕ್ಕೆ ಷರಾ ಬರೆದವರು ನಾಗೇಶ ಹೆಗ್ಡೆ : "ಪದ್ಯ ಲಘುವಾಗಿದ್ದಿದ್ದರೆ ಈ ತಂಟೆ ಇರುತ್ತಿರಲಿಲ್ಲ, ಅರ್ಥಾತ್, ಎಷ್ಟು ಎತ್ತರದಿಂದ ಬಿದ್ದರೂ ಸಾಯುವ ಚಿಂತೆಯಿರುವುದಿಲ್ಲ. ಆದರೆ ಭಾವನೆಗಳಿಂದ ಬಸವಳಿದು ಸ್ವಲ್ಪ ತೂಕ ಹೆಚ್ಚಾದರೆ, ನೆಲದ ಮೇಲಿರುವ ಸಾಮಾನ್ಯರ ಕೈಗೂ ಸಿಕ್ಕಿಬಿಡುತ್ತೆ, ಕವಿತೆ." ಸುತ್ತೋಲೆಗಳ ಮೂಲಕ ಮತ್ತೆ ಮತ್ತೆ ನಿಮ್ಮ ಸುತ್ತ ಸತ್ತ ಕವಿತೆ ಸುತ್ತಿದರೆ, ಅದಕ್ಕೆ ಜೋಶಿಯವರಾಗಲೀ, ಆನಂದ ರಾಮ ಶಾಸ್ತ್ರಿಗಳಾಗಲೀ, ನಾಗೇಶ ಹೆಗ್ಡೆಯವರಾಗಲೀ, ಅಥವಾ ನಾನಾಗಲೀ ಹೊಣೆಯಲ್ಲ! ಒಂದು ವೇಳೆ ನೀವು ಇತರರಿಗೆ ಕಳಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+