• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಕ್ಕ’ ಸಮ್ಮೇಳನ ಮತ್ತು ನಮ್ಮೂರ ರಥೋತ್ಸವ!

By Super
|

‘ಜಾಲತರಂಗ’ ಅಂಕಣದಲ್ಲಿ ಪ್ರಕಟವಾದ ಲೇಖನಗಳ ಬಗ್ಗೆ ಓದುಗರ ಪ್ರತಿಕ್ರಿಯೆ..

ನಮಸ್ಕಾರ ಡಾಕ್ಟರಿಗೆ,

ತಮ್ಮ ಕನ್ನಡ ರಥೋತ್ಸವದ ಬಗೆಗಿನ ಲೇಖನ ಓದಿದೆ. ಮೆಚ್ಚುಗೆ ಆಯಿತು. ಮನಸ್ಸು ಹಗುರವಾಯಿತು. ರಥೋತ್ಸವ ಯಾಕೆಂದು ಯಾರೂ ಪ್ರಶ್ನೆ ಹಾಕುವುದಿಲ್ಲ! ಅದೇ ರೀತಿ ವಿಶ್ವ ಕನ್ನಡ ಸಮ್ಮೇಳನ ಅಮೆರಿಕಾದಲ್ಲಿ ಇದೇರೀತಿ ನಡೆಯಬೇಕು. ಹೊರನಾಡ ಕನ್ನಡಿಗರ ನಡೆನುಡಿಗಳನ್ನು ಕಾಪಾಡಲು ಇದು ಬೇಕೇ ಬೇಕು!

ನಿಮ್ಮ ಸಮ್ಮೇಳನವನ್ನು ನಾವು ಭಾರತದ ಕನ್ನಡಿಗರು ಬಹುವಾಗಿ ಮೆಚ್ಚಿಕೊಂಡಿದ್ದೇವೆ. ಎಲ್ಲವೂ ಅಚ್ಚುಕಟ್ಟು! ಭಾಷಣ ಮತ್ತು ಕೊರೆತಗಳಿಗೆ ಅವಕಾಶವೇ ಇಲ್ಲ. ಪ್ರತಿಯಾಬ್ಬರಿಗೂ ಕೆಲವೇ ನಿಮಿಷಗಳ ಅವಕಾಶ! ಏಕ ಸಮಯದಲ್ಲಿ ಎರಡು ಮೂರು ಕಡೆ ನಡೆಸಿದ ಕಾರ್ಯಕ್ರಮಗಳ ಯೋಜನೆಯಿಂದಾಗಿ ಉತ್ಸವದಲ್ಲಿ ಪಾಲ್ಗೊಂಡ ಕನ್ನಡಿಗರು ತಮಗೆ ಬೇಕಾದುದನ್ನು ನೋಡಿ ಸಂತೋಷ ಪಡುವ ಅವಕಾಶಗಳು ಹೆಚ್ಚಾದುವು! ಯಾರಿಗೂ ಬಲವಂತದ ಮಾಘ ಸ್ನಾನ ಇಲ್ಲ!

ಸಮ್ಮೇಳನವನ್ನು ಇಷ್ತೂ ಚೆನ್ನಾಗಿ ತಾವುಗಳು ಏರ್ಪಡಿಸಿದ್ದಾಗಲೂ, ಕೆಲವು ಕನ್ನಡ ನಾಡಿನಿಂದ ಅಲ್ಲಿಗೆ ಬಂದ ಅತಿಥಿಗಳಿಗೆ ಊಟ ಮತ್ತು ಊರು ಸುತ್ತಾಟವೇ ಪ್ರಿಯವಾದದ್ದು ಒಂದು ವಿಪರ್ಯಾಸ! ಕಾವೇರಿಯ ಮತ್ತು ಅಕ್ಕದ ಅದ್ಭುತ ಸಂಘಟನೆ ಮತ್ತು ನಿಯೋಜನೆಗೆ ನಾವು ತಲೆಗೂಗಲೇ ಬೇಕು. ನಾವು ಇಲ್ಲಿ ಇದ್ದರೂ ತಲೆದೂಗಿದ್ದೇವೆ! ತಮ್ಮ ಪ್ರಯತ್ನಕ್ಕೆ ರಾಜ್ಯ ಪ್ರಶಸ್ತಿ ಕೊಟ್ಟರೆ ಅದು ನಮಗೆಲ್ಲಾ ಹೆಮ್ಮೆಯ ವಿಷಯ ಆಗುತ್ತೆ. ಈ ಬಗ್ಗೆ ಸಮ್ಮೇಳನದಲ್ಲಿ ಪಾಲ್ಗೊಂಡ ಕರ್ನಾಟಕದ ಮಹನೀಯರ ದಂಡು ಉದಾಸೀನ ಮಾಡಿದರೆ ಅದು ನಮಗೆ - ಬಹು ನಾಚಿಕೆಯ ವಿಷಯ ಆಗಿ ಬಿಡುತ್ತೆ!

ರಾಜ್ಯದ ಬೊಕ್ಕಸದ ಹಣ ವಿನಿಯೋಗಿಸಿ ಅಲ್ಲಿಗೆ ಹೋದವರು ಈ ಬಗ್ಗೆ ಶ್ರಮಿಸಲೇ ಬೇಕು! ಇಂತಹ ಅದ್ಭುತ ಸಮ್ಮೇಳನದಲ್ಲಿ ಭಾಗವಹಿಸಿದ ಅವರುಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಲೇ ಬೇಕು! ( ಆದರೆ ಅವರಲ್ಲಿ ಬಹು ಮಂದಿ ಇನ್ನೂ ತಾಯ್ನಾಡಿಗೆ ಮರಳಿಲ್ಲ ! ಹಲವರು ಇನ್ನೂ, ಅಮೆರಿಕಾ ಸುತ್ತುತ್ತಲೇ ಇದ್ದಾರೆ!)

-ಪೆಜತ್ತಾಯ

*

ನಮಸ್ಕಾರ,

ನಿಮ್ಮ ಇಂದಿನ ಲೇಖನ ಓದಿದೆ. ನಿಮ್ಮ ಮಾತೆಲ್ಲಾ ಅಕ್ಷರಶಃ ನಿಜ. ಹಳ್ಳಿ ರಥೋತ್ಸವದ ವರ್ಣನೆಯಂತೂ ಅದ್ಭುತ, ಹಾಗೇ ನಮ್ಮ ಹಳ್ಳಿ ರಥೋತ್ಸವಾನೇ ನೋಡಿದ ಹಾಗೆನಿಸಿತು. ಅದನ್ನು ಸಮ್ಮೇಳನಕ್ಕೆ ಹೋಲಿಸಿ ಎರಡರ ಸಾಮ್ಯವನ್ನು ಮನಮುಟ್ಟುವಂತೆ ತಿಳಿಸಿದ್ದೀರ. ನಿಜ, ಇಂಥ ಸಮ್ಮೇಳನಗಳು ಅವಶ್ಯಕತೆ ಅನ್ನುವುದಕ್ಕಿಂತ, ಹೆಚ್ಚು ಅನಿವಾರ್ಯ. ರಥೋತ್ಸವದಲ್ಲಿ ಏನೂ ಕೆಲಸ ಮಾಡದೇ ಇದ್ದಿದ್ದಕ್ಕಾಗಿ ನಾಚಿಕೆ ಆಗುತ್ತಿದೆ.

ನಿಮ್ಮ ಅನೇಕ ಲೇಖನಗಳೂ ಬಹಳ ಚೆನ್ನಾಗಿರುತ್ತವೆ. ನೀವು ಮನೆ, ಜೀವನ ಪ್ರೀತಿ ಬಗ್ಗೆ ಬರೆದದ್ದು ಇನ್ನೂ ಕಾಡುತ್ತಿದೆ. ಅಭಿನಂದನೆಗಳು.

ಧನ್ಯವಾದಗಳು

-ಪೂರ್ಣಿಮ, ಸುಬ್ಬಣ್ಣ

*

ನಟರಾಜರಿಗೆ ನಮಸ್ಕಾರ

ನಿಮ್ಮ ಲೇಖನದ ಬಗ್ಗೆ ಬರೆದು ಬಹಳ ದಿನಗಳಾಗಿತ್ತು. ಈ ಸಲವಾದರೂ ಪ್ರತಿಕ್ರಿಯೆ ಕಳುಹಿಸಲೇಬೇಕೆಂದು ನಿರ್ಧರಿಸಿದೆ. ತಾವು ಶಿಷ್ಯನಿಗೆ ಕನ್ನಡ ಪದ ಉಪಯೋಗಿಸಿ ಬೈಯದೇ ಇದ್ದದ್ದು ಒಳ್ಳೆಯದಾಯಿತು. ನೀವೇ ಹೇಳಿದಹಾಗೆ ಯಾರು ಯಾವ ಪದಗಳನ್ನು ಉಪಯೋಗಿಸಿದರೆ ಈ ಜನ ಯಾವರೀತಿ ಪ್ರತಿಕ್ರಿಯಿಸುತ್ತಾರೋ ಬಹಳ ಎಚ್ಚರಿಕೆಯಿಂದ ಪದ ಪ್ರಯೋಗಿಸಬೇಕಾಗುತ್ತೆ. ಯಾಕೆಂದರೆ, ನಾವೂ ಸಹ ಅನ್ಯ ಭಾಷೆಯವರು ನಮಗರ್ಥವಾಗದ ಭಾಷೆ ಮಾತನಾಡಿದಾಗ ಏನೊ ಮಾತಾಡ್ಕೋತಾ ಇದ್ದಾನೆ, ನನ್ನ ಬಗ್ಗೆಯೇ ಇರಬಹುದು ಎಂಬ ಸಂಶಯ ನಮಗೆ ಬರುವುದು ಹೇಗೆ ಸಹಜವೋ,ಮತ್ತೊಬ್ಬರಿಗೂ ಅವರಿಗರ್ಥವಾಗದ ಭಾಷೆಯಲ್ಲಿ ನಮ್ಮ ಕೋಪವನ್ನು ತೋರಿಸಿದಾಗ, ಕೆಲವೊಮ್ಮೆ ಸ್ಪೋಟಕವಾಗಬಹುದು.

ಒಂದು ನಿದರ್ಶನವನ್ನು ತಿಳಿಸಳು ಇಚ್ಚಿಸುತ್ತೇನೆ. ನನ್ನ ಸಹೋದ್ಯೋಗಿಯಾಬ್ಬಳು ಊಟದ ವಿರಾಮದವೇಳೆಯಲ್ಲಿ ನಾನು ನಮ್ಮ ಯಜಮಾನರ ಜೊತೆ ನಮ್ಮ ಭಾಷೆಯಲ್ಲಿ ಹರಟುವುದು ಸಹಿಸಲಾರದೆ ಮೇಲಧಿಕಾರಿಗಳಲ್ಲಿ ದೂರಿತ್ತಿದ್ದಳು. ಅವರು ನೀನು ಆಂಗ್ಲಭಾಷೆಯಲ್ಲಿ ಯಾಕೆ ಮಾತಾಡುವುದಿಲ್ಲ ,ನಿನ್ನ ಸಹೋದ್ಯೋಗಿಗಳು ತಪ್ಪು ತಿಳಿಯುತ್ತಿದ್ದಾರೆ ಅಂತ ತಿಳಿಸಿದಳು.

ನನ್ನ ಪ್ರಕಾರ ಅದೊಂದು ನಮ್ಮ ಭದ್ರತೆಗಾಗಿ ಇರುವ ಭಾಷೆ, ನೀನು ನನ್ನನ್ನು ನನ್ನ ಭಾಷೆ ಮಾತನಾಡಲು ಬಿಡುವುದಿಲ್ಲವೆಂದು ದೂರಿದೆ. ಅದಕ್ಕವಳು ನೀನು ಕಚೇರಿಯ ಬೇರೆ ದೂರವಾಣಿ ಉಪಯೋಗಿಸಿ ಮಾತನಾಡು, ಇಲ್ಲೇ ಕೂತು ನಮ್ಮ ಮುಂದೆ ಮಾತನಾಡಬೇಡವೆಂದು ಆದೇಶ ಹೊರಡಿಸಿದಳು. ಸಧ್ಯ ಅಷ್ಟಕ್ಕೇ ಮುಗಿಯಿತಲ್ಲವೆಂದು ದೀರ್ಘ ಉಸಿರಿನೊಡನೆ ಹೊರ ಬಂದೆ. ಕೆಲಸದಿಂದ ತೆಗೆದುಹಾಕಲಿಲ್ಲವಲ್ಲ ನನ್ನ ಪುಣ್ಯ. ನಾನು ಕೆಲಸವನ್ನು ಬಿಡುವಹಾಗೂ ಇರಲಿಲ್ಲ.

ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಇನ್ನು ಈ ಬಿಳಿಯರ ಮಧ್ಯೆ ಹೋರಾಟ ನಡೆಯುತ್ತಲೇ ಇದೆ. ಒಂದು ಮಾತು ಉದ್ವೇಗದಲ್ಲಿ ಆಡುವುದಕ್ಕಿಂತ ಅದನ್ನು ಸ್ವಲ್ಪ ತಡೆದುಕೊಳ್ಳುವುದೇ ವಾಸಿ . ಮೀಸೆಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವ ಕಾಲವಿತ್ತು. ಈಗ ನಡೆಯುತ್ತಿರುವುದು ನೋಡಿದರೆ ಮುಖಲಕ್ಷಣಗಳನ್ನೇ ಬದಲಿಸಿಕೊಳ್ಳುವ ಕಾಲ. ಇನ್ನೂ ಎಫ್‌ ವರ್ಡ್‌, ಬಿಎಸ್‌ ವರ್ಡ್‌ ನಾವು ಭಾರತೀಯರು ಇಲ್ಲಿಯ ಜನ ಬಳಸುವಷ್ಟು ಸುಲಭವಾಗಿ ಬಳಸುವುದಿಲ್ಲವೆಂದು ಇವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ, ನಮ್ಮಿಂದ ಈ ಪದಗಳೂ ಆವೇಶದಲ್ಲಿ ಬಂದರೂ ಸಹ ಜನ ತಿರುಗಿ ಬೀಳುತ್ತಾರೆ.

ಇಂತದ್ದೊಂದು ಅನುಭಾವಿ ಲೇಖನಕ್ಕೆ ಧನ್ಯವಾದಗಳು.

-ಅನುರಾಧ ಅರುಣ್‌, ಇಲಿನಾಯ್‌

*

ಎಂ.ಎಸ್‌.ಎನ್‌ ಅವರಿಗೆ ನಮಸ್ಕಾರ.

ನಿಮ್ಮ ಪುಸ್ತಕ ಮತ್ತು ಪತ್ರ ತಲುಪಿತು. ನಿಮ್ಮ ಸಹಿ ಮತ್ತು ಅಭಿಮಾನದ ಬರಹ ಹೊತ್ತ ಪುಸ್ತಕ ಪಡೆದುಕೊಂಡು ಸಂತೋಷವಾಯಿತು. ‘ಅದುವೇಕನ್ನಡ ’ದಲ್ಲಿ ಓದಿದ್ದರೂ ಪುಸ್ತಕ ರೂಪದಲ್ಲಿರುವ ಲೇಖನಗಳು ಹೊಸದರಂತೆ ಕಾಣಿಸಿತು. ಮತ್ತೊಮ್ಮೆ ಲೇಖನಗಳನ್ನು ಓದುತ್ತಿದ್ದೇನೆ.

‘ಸಂಘ ಸಂಚಾಲಕರ ಸಂಕಷ್ಟಗಳು’ ಲೇಖನದ ಹಾಸ್ಯಮಯ ಶೈಲಿ ಮತ್ತೊಮ್ಮೆ ನಗು ತರಿಸಿತು. (ಅಯ್ಯೋ, ವರ್ಷವರ್ಷವೂ ಅವೇ ಹಳಸಲು ಮುಖಗಳನ್ನು ನೋಡಿ ಬೇಸರವಾಗಿದೆ. ಹಬ್ಬದ ದಿನವೂ ಹಳೆ ಗಂಡನೇ.. ಇತ್ಯಾದಿ ಪಂಚ್‌ ಲೈನುಗಳು :) ಮತ್ತಷ್ಟು ಇಂತಹ ಲೇಖನಗಳು ನಿಮ್ಮಿಂದ ಸಿಗುತ್ತವೆಂಬುದೇ ಸಂತೋಷದ ಸಂಗತಿ.

ನನ್ನ ಚೆಕ್‌ ಕಳಿಸಲು ಪತ್ರದಲ್ಲಿರುವ ವಿಳಾಸ ಸರಿ ಇದೆಯೇ? ದಯವಿಟ್ಟು ತಿಳಿಸಿ.

ವಂದನೆಗಳೊಂದಿಗೆ,

-ತ್ರಿವೇಣಿ

*

ಆತ್ಮೀಯ ನಟರಾಜ್‌,

ನಿಮ್ಮ ‘ಜಾಲತರ0ಗ’ ತಲುಪಿತು. ಇವತ್ತೇ ಸ್ವಲ್ಪ ಸಮಯ ಸಿಕ್ಕಿದ್ದು ನನಗೆ. ಪುಟ ತಿರುಗಿಸುತ್ತ ತಿರುಗಿಸುತ್ತ ನನಗೇ ತಿಳಿಯದ0ತೆ ಇಡೀ ಪುಸ್ತಕವನ್ನೇ ಮಗುಚಿ ಹಾಕಿಬಿಟ್ಟೆ, ಅನೇಕ ಲೇಖನಗಳನ್ನು ಈ ಹಿ0ದೆಯೇ ಓದಿದ್ದರಿ0ದ. ನೀವಾಗಿ ಈ ವಿಷಯವನ್ನು ಎತ್ತಿ ನನಗೆ ಪುಸ್ತಕ ಕಳುಹಿಸಿದ್ದಕ್ಕೆ ವ0ದನೆಗಳು.

ನಾನು ಹಿ0ದೆಯೇ ಹೇಳಿದ0ತೆ, ಕ್ಲುಪ್ತ ಪದಗಳನ್ನು ಚುನಾಯಿಸುವುದರಲ್ಲಿ, ಅವುಗಳ ಜೊಡಣೆಯ ಜಾಣ್ಮೆಯಲ್ಲಿ, ಹೊಸ ಪದಗಳನ್ನು ಸೃಷ್ಟಿಸಿಕೊಳ್ಳುವುದರಲ್ಲಿ

ನಿಮ್ಮ ಮಾಟ ಅನನ್ಯ. ವಸ್ತು-ವಿಷಯಗಳ ವೈವಿಧ್ಯತೆಯ ದೃಷ್ಟಿಯಿ0ದ ನೋಡಿದರೂ ಇದೊ0ದು ವಿಶಿಷ್ಟವಾದ ಪುಸ್ತಕ.

ಅಭಿನ0ದನೆಗಳು!

ಸ್ನೇಹದಲ್ಲಿ,

-ಜಯ್‌

*

Nataraja avarige namaskaara,

I retrieved the article entitled "Americadalli Kannada Rathotsva" from Thatskannada, and enjoyed reading it very much. I think you have addressed the questions such as why a Kannada festival in the first place, why on such a grand scale, and who benefits from them etc., very well. I doubt whether those who would posed the questions would do so back in Karnataka where such a festival is pue routine and is taken for granted. It is conceivable that the questioners cannot understand that while we have uprooted ourselves from our ancestral home we continue to have an abiding interest in it and will do our best to continue the culture and traditions of our dear Karnataka. At no time has our "americanization threatened this strong bond.

Your article provides the historical perspective behind our commitment to WKC 2006, and belies the suggestion that it may be all fun and games. In such a vast enterprise such as WKC 2006 it is unavoidable that there may be some with a personal agenda, but the real effort is to be seen in the sweat, toil and even tears of the hundreds of the volunteers who sacrificed everything during several months to plan and execute it in exemplary fashion, and even more importantly with no expectations of a reward or recognition - an aspect which you have touched upon very well. Thanks for taking the time to write such a fine piece. I hope all Kaveri members would have read it.

Thanks also for asking Joshi to compile and present the various write ups about WKC 2006. He is in the best person to undertake this task, and hopefully can find the time for it. It will be great reading for our swayamsevakas who contributed so much.

- K.Krishna

*

Hello Nataraj,

Interesting article on kannada convention. Interesting article on kannada convention. The following is my reaction:

You have taken a lot a trouble trying to equate kannada sammelana to the car festivals of India. How about equal time for differences? One major difference being, after the car festival the organizers will not look for any state awards for organizing it. Also probably there will not be any criticisms as to the shortcomings in organizing the car festival.

If my interpretation is correct, the visiting journalists raised many questions but seems to have missed many other important ones. It is the privilege of the "Amerikannadigas" to spend their money on what ever they think is fit.

The journalists should have asked, is it right for the Karnataka Government to have spent so much money sending a large contingent of artists, plus ministers and officials, and also provide $25,000 for an overseas kannada activity? That too in a year when the state is suffering from a famine to such an extent that the chief minister thought it was not appropriate to attend the event. The air fare itself should have cost more then $50,000. How much relief could have been given to the poor farmers in Karnataka!!

I wonder how much NRI foreign investment is going to Karnataka as a result of the business forum held during the convention?

- Vijayalakshmi Gowda

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Feedback to Jalataranga, a weekly column on kannada.oneindia.com, by M.S. Nataraj in potomic, Washington

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more